ಕೋಲ್ಕತಾ(ಮೇ.31): ಖ್ಯಾತ ಬಾಲಿವುಡ್ ಗಾಯಕ ಕೃಷ್ಣಕುಮಾರ್ ಕುನ್ನತ್(ಕೆಕೆ) ವೇದಿಕೆಯಲ್ಲೇ ಕುಸಿದು ಬಿದ್ದ ನಿಧನರಾಗಿದ್ದಾರೆ. ಕೋಲ್ಕತಾದಲ್ಲಿ ನಜ್ರುಲ್ ಮಂಜ್‌ನಲ್ಲಿ ಆಯೋಜಿಸಿದ್ದ ಕಾನ್ಸರ್ಟ್‌ನಲ್ಲಿ ಪಾಲ್ಗೊಂಡ ಕೆಕೆ ಎಂದಿನಂತೆ ಅಭಿಮಾನಿಗಳನ್ನು ಸಂಗೀತದ ಅಮಲಿನಲ್ಲಿ ತೇಲಿಸಿದ್ದಾರೆ. ಕಾರ್ಯಕ್ರಮ ಮುಗಿಸಿ ಹೊಟೆಲ್ ಸೇರಿಕೊಂಡ ಬೆನ್ನಲ್ಲೇ ತೀವ್ರ ಆಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆ ದಾಖಲಿಸಿದರು ಪ್ರಯೋಜನವಾಗಿಲ್ಲ.
ಕೋಲ್ಕತಾದಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮಕ್ಕಾಗಿ ಕೆಕೆ ತಂಡ ಮೇ.30ಕ್ಕೆ ನಗರದಲ್ಲಿ ಬೀಡುಬಿಟ್ಟಿತ್ತು. ಸಂಗೀತ ಕಾರ್ಯಕ್ರಮದ ಕುರಿತು ಕೆಕೆ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸಂತಸ ಹಂಚಿಕೊಂಡಿದ್ದರು. ಕೆಕೆ ಸಂಗೀತ ಕಾರ್ಯಕ್ರಮಕ್ಕೆ ಕಿಕ್ಕಿರಿದು ಜನ ತುಂಬಿದ್ದರು. ಅತ್ಯುತ್ತಮ ಮ್ಯೂಸಿಕ್ ಪರ್ಫಾಮೆನ್ಸ್ ಬಳಿಕ ಕೆಕೆ ತಂಡ ನೇರವಾಗಿ ಹೊಟೆಲ್‌ಗೆ ತೆರಳಿದೆ. ಹೊಟೆಲ್‌ನಲ್ಲಿ ಅಸ್ವಸ್ಥರಾದ ಕೆಕೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಅನಾರೋಗ್ಯ: ಖ್ಯಾತ ಹಿನ್ನೆಲೆ ಗಾಯಕಿ ಸಂಗೀತಾ ಸಚಿತ್ ನಿಧನ
ಕುಸಿದ ಕೆಕೆಗೆ ತಕ್ಷಣ ವೈದ್ಯಕೀಯ ನೆರವು ನೀಡಲಾಯಿತು. ಅಷ್ಟೇ ವೇಗದಲ್ಲಿ ನಗರದ CMRI ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲೇ ಕೆಕೆ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಕೋಲ್ಕತಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 1 ಗಂಟಗಳ ಕಾಲ ಕೆಕೆ ಹಾಡಿದ್ದರು. ಹಾಡು ನೃತ್ಯದ ಮೂಲಕ ಕಾರ್ಯಕ್ರಮದಲ್ಲಿ ನೆರೆದಿದ್ದವರನ್ನು ರಂಜಿಸಿದ್ದರು. ತಮ್ಮ ಎಲೆಕ್ಟ್ರಿಕ್ ಪರ್ಫಾಮೆನ್ಸ್ ಮೂಲಕ ಪ್ರೇಕ್ಷಕರಲ್ಲಿ ಹೊಸ ಸಂಚಲನ ಮೂಡಿಸಿದ್ದರು. ಕಾರ್ಯಕ್ರಮ ಮುಗಿಸಿ ಹೊಟೆಲ್‌ಗೆ ಆಗಮಿಸಿದ ಕೆಕೆ ತೀವ್ರ ಆಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ.
ಕೆಕೆ ನಿಧನ ತೀವ್ರ ಆಘಾತ ತಂದಿದೆ. ಬಾಲಿವುಡ್ ದಿಗ್ಗಜರು, ಸೆಲೆಬ್ರೆಟಿಗಳು, ಖ್ಯಾತ ಗಾಯಕರು ಕೆಕೆ ನಿಧನಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ. ಇದನ್ನು ನಂಬಲು ಸಾಧ್ಯವಿಲ್ಲ. ಕೆಕೆ ಹಾಡುಗಳನ್ನು ಕೇಳಿ ಬೆಳೆದಿದ್ದೇವೆ. ಕೆಕೆ ಇನ್ನಿಲ್ಲ ಎಂಬುದು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹಲವರು ಟ್ವೀಟ್ ಮಾಡಿದ್ದಾರೆ.
ಕೃಷ್ಣಕುಮಾರ್ ಕುನ್ನತ್ ಕೆಕೆ ಎಂದೇ ಜನಪ್ರೀಯರಾಗಿದ್ದಾರೆ. 1999ರಲ್ಲಿ ಕೆಕೆ ಮೊದಲ ಆಲ್ಬಮ್ ಹಾಡು ಬಿಡುಗಡೆ ಮಾಡಿದ್ದರು. ಪಾಲ್ ಎಂಬ ಆಲ್ಬ ಹಾಡು ಸೂಪರ್ ಹಿಟ್ ಆಗಿತ್ತು. ಆಲ್ಬಮ್ ಮೂಲಕ ಜನಪ್ರಿಯತೆ ಪಡೆದುಕೊಂಡ ಕೆಕೆಗೆ ಬಾಲಿವುಡ್ ಭರ್ಜರಿ ಆಫರ್ ನೀಡಿತ್ತು. ಹೀಗಾಗಿ ಆಲ್ಬಮ್ ಹಾಡುಗಳಿಗಿಂತ ಬಳಿಕ ಬಾಲಿವುಡ್ ಪ್ಲೇ ಬ್ಯಾಕ್ ಸಿಂಗರ್ ಆಗಿ ಮಿಂಚಿದರು.
ಗಾಯಕ ಸಿಧು ಮೂಸೇವಾಲಾ ಹತ್ಯೆ, ಡೆಹ್ರಾಡೂನ್‌ನಲ್ಲಿ 5 ಶಂಕಿತ ಹತ್ಯೆಕೋರರು ವಶಕ್ಕೆ!
ತದಪ್ ತಡಪ್ (ಹಮ್ ದಿಲ್ ದೇ ಚುಕೆ ಸನಮ್, 1999), ದಸ್ ಬಹಾನೆ (ದಸ್, 2005), ತೂನೆ ಮಾರಿ ಎಂಟ್ರಿಯಾನ್ (ಗುಂಡಯ್, 2014) ಸೇರಿದಂತೆ ಹಲವು ಹಾಡುಗಳು ಸೂಪರ್ ಹಿಟ್ ಆಗಿವೆ. ದೆಹಲಿಯಲ್ಲಿ ಹುಟ್ಟಿದ ಕೆಕೆ, ಮ್ಯಾಜಿಕಲ್ ಪರ್ಫಾಮೆನ್ಸ್ ಮೂಲಕವೇ ಜನರಿಗೆ ಹೆಚ್ಚು ಆಪ್ತರರಾಗಿದ್ದಾರೆ.
ಕೋಲ್ಕತಾದ ಕಾರ್ಯಕ್ರಮದ ಕುರಿತು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಸಂತಸ ಹಂಚಿಕೊಂಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಕೆಕೆ ನಿಧನರಾಗಿದ್ದಾರೆ. ತಮ್ಮ ಸಂಗೀತ ಕಾರ್ಯಕ್ರಮದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಕೆಕೆ ಅಭಿಮಾನಿಗಳ ಜೊತೆ ನಿಕಟ ಸಂಪರ್ಕದಲ್ಲಿರುತ್ತಿದ್ದರು.