ಗಾಯಕ ಸಿಧು ಮೂಸೇವಾಲಾ ಹತ್ಯೆ, ಡೆಹ್ರಾಡೂನ್‌ನಲ್ಲಿ 5 ಶಂಕಿತ ಹತ್ಯೆಕೋರರು ವಶಕ್ಕೆ!

* ಪಂಜಾಬ್‌ ಗಾಯಕ ಸಿಧು ಮೂಸೇವಾಲಾ ಹತ್ಯೆ ಪ್ರಕರಣದ 5 ಶಂಕಿತ ಆರೋಪಿ

* ಉತ್ತರಾಖಂಡದ ಡೆಹ್ರೂಡೂನ್‌ನಲ್ಲಿ ಸೋಮವಾರ ವಶಕ್ಕೆ

* ಪಂಜಾಬ್‌ ಹಾಗೂ ಉತ್ತರಾಖಂಡ ಪೊಲೀಸರ ಜಂಟಿ ಕಾರ್ಯಾಚರಣೆ

Sidhu Moose Wala murder: Six suspects detained in Dehradun pod

ಚಂಡೀಗಢ(ಮೇ.31): ಪಂಜಾಬ್‌ ಗಾಯಕ ಸಿಧು ಮೂಸೇವಾಲಾ ಹತ್ಯೆ ಪ್ರಕರಣದ 5 ಶಂಕಿತ ಆರೋಪಿಗಳನ್ನು ಉತ್ತರಾಖಂಡದ ಡೆಹ್ರೂಡೂನ್‌ನಲ್ಲಿ ಸೋಮವಾರ ವಶಕ್ಕೆ ಪಡೆದಿದ್ದಾರೆ. ಹತ್ಯೆ ಮಾಡಿದ ಬಳಿಕ ಈ ಆರೋಪಿಗಳು ಹೇಮಕುಂಡ ಸಾಹಿಬ್‌ಗೆ ತೀರ್ಥಯಾತ್ರೆಗೆ ಹೊರಟ ಯಾತ್ರಾರ್ಥಿಗಳೊಂದಿಗೆ ಸೇರಿಕೊಂಡಿದ್ದ ಎನ್ನಲಾಗಿದೆ. ಪಂಜಾಬ್‌ ಹಾಗೂ ಉತ್ತರಾಖಂಡ ಪೊಲೀಸರು ಜಂಟಿ ಕಾರ್ಯಾಚರಣೆಯನ್ನು ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ದೆಹಲಿ ತಿಹಾರ್‌ ಜೈಲಲ್ಲೇ ಹತ್ಯೆಗೆ ಸ್ಕೆಚ್‌?

ನವದೆಹಲಿ: ಕುಖ್ಯಾತ ಗ್ಯಾಂಗಸ್ಟರ್‌ ಲಾವ್‌ರೆನ್ಸ್‌ ಬಿಷ್ಣೋಯ್‌ ತಂಡ ಹಾಗೂ ಕೆನಡಾ ಮೂಲದ ದರೋಡೆಕೋರ ಗೋಲ್ಡಿ ಬ್ರಾರ್‌ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ ಎಂದು ಪಂಜಾಬ್‌ ಪೊಲೀಸರು ಭಾನುವಾರ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ತಿಹಾರ್‌ ಜೈಲಿನಲ್ಲಿ ಬಂಧಿಯಾಗಿರುವ ಬಿಷ್ಣೋಯ್‌ಯ ಕೊಠಡಿಯನ್ನು ಪೊಲೀಸರು ತಪಾಸಣೆಗೆ ಒಳಪಡಿಸಿದ್ದಾರೆæ. ಜೈಲಿನ ಕೋಣೆಗಳಲ್ಲಿ ನಿರ್ಬಂಧಿತ ಕೆಲವು ಸಾಮಗ್ರಿಗಳು ತನಿಖೆಯ ವೇಳೆಗೆ ಪತ್ತೆಯಾಗಿವೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ತಂದೆಯ ಕಣ್ಣೆದುರೇ ಸಿಧು ಹತ್ಯೆ

ಚಂಡೀಗಢ: ಪಂಜಾಬ್‌ ಸರ್ಕಾರ ಸಿಧು ಭದ್ರತೆಯನ್ನು ಹಿಂಪಡೆದ ಬೆನ್ನಲ್ಲೇ ದರೋಡೆಕೋರರಿಂದ ಸುಲಿಗೆ ಕರೆಗಳು, ಜೀವ ಬೆದರಿಕೆ ಬರುತ್ತಿದ್ದ ಕಾರಣದಿಂದಾಗಿ ಪುತ್ರನ ಸುರಕ್ಷತೆಗೆ ಮೂಸೆವಾಲಾ ಕಾರಿನ ಹಿಂದೆಯೇ ಅವರ ತಂದೆ ಭದ್ರತಾ ಸಿಬ್ಬಂದಿಯೊಂದಿಗೆ ಬುಲೆಟ್‌ ಪ್ರೂಫ್‌ ಕಾರಿನಲ್ಲಿ ತೆರಳಿದ್ದರು. ಹೀಗಾಗಿ ದುಷ್ಕರ್ಮಿಗಳು ತಮ್ಮ ಪುತ್ರನನ್ನು ಗುಂಡಿನ ದಾಳಿ ನಡೆಸಿದ ದೃಶ್ಯವನ್ನು ಅವರ ತಂದೆ ಅಸಹಾಯಕಾರಿ ನೋಡುವಂತಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಧು ಮೇಲೆ 30 ಬಾರಿ ಗುಂಡಿನ ದಾಳಿ!

ಚಂಡೀಗಢ: ಸಿಧು ಮೂಸೆವಾಲಾನನ್ನು ಸುಮಾರು 8 ರಿಂದ 10 ದಾಳಿಕೋರರು ಸುತ್ತುವರೆದು ಸುಮಾರು 30 ಬಾರಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. 30 ಸುತ್ತು ಗುಂಡಿನ ಸುರಿಮಳೆ ಗೈದ ಬಳಿಕವೂ ಸಿಧು ಮೃತಪಟ್ಟಿದ್ದಾರೆ ಎಂಬುವುದನ್ನು ದಾಳಿಕೋರರು ಪರೀಕ್ಷಿಸಿ ಖಚಿತ ಪಡಿಸಿಕೊಂಡಿದ್ದಾರೆ. ಹತ್ಯೆಗಾಗಿ ಎಎನ್‌ 94 ರಷ್ಯನ್‌ ರೈಫಲ್‌ ಬಳಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ನಡುವೆ ಮೂಸೆವಾಲಾ ಹತ್ಯೆಯ ತನಿಖೆಗಾಗಿ ಹಾಲಿ ಹೈಕೋರ್ಚ್‌ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ಆಯೋಗ ಸ್ಥಾಪಿಸುವುದಾಗಿ ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಸೋಮವಾರ ಘೋಷಿಸಿದ್ದಾರೆ.

Latest Videos
Follow Us:
Download App:
  • android
  • ios