ದೊಡ್ಡ ಬ್ರೇಕ್ ನಂತರ ರ್ಯಾಂಪ್ ವಾಕ್ ಮಾಡಿದ ಪರಿಣಿತಿ. ವಿಕ್ರಂ ಕೆಲವಸನ್ನು ಕೊಂಡಾಡಿದ ನಟಿ...
ಹಿಂದಿ ಚಿತ್ರರಂಗದಲ್ಲಿ (Bollywood) ಸಿಂಪಲ್ ನಟಿ ಪರಿಣಿತಿ ಚೋಪ್ರಾ (Parineeti Chopra) ಕೆಲವು ದಿನಗಳ ಹಿಂದೆ ಮುಂಬೈನಲ್ಲಿ (Mumbai) ವಿಕ್ರಮ್ ಫಡ್ನಿಸ್ ಫ್ಯಾಷನ್ ವೀಕ್ ರಾಂಪ್‌ನಲ್ಲಿ ಶೋ ಟಾಪರ್ ಆಗಿ ವಾಕ್ ಮಾಡಿದ್ದಾರೆ. ಸಿನಿಮಾಗಳಿಗಿಂತ ಮಾಡಲಿಂಗ್ ಮತ್ತು ಜಾಹೀರಾತಿನಲ್ಲಿ ಕಾಣಿಸಿಕೊಂಡು ಬ್ಯುಸಿಯಾಗಿರುವ ಪರಿಣಿತಿ ಹಲವು ವರ್ಷಗಳ ನಂತರ ಮಾಸ್ಕ್ ಇಲ್ಲದೆ ಜನರ ನಡುವೆ ಓಡಾಡುವುದಕ್ಕೆ ಹೇಗೆ ಫೀಲ್ ಆಗುತ್ತದೆ ಎಂದು ಹೇಳಿಕೊಂಡಿದ್ದಾರೆ.
'ತುಂಬಾ ತಿಂಗಳುಗಳ ನಂತರ ಶೋ ಮಾಡುತ್ತಿರುವುದಕ್ಕೆ ನನ್ನ ಹೊಟ್ಟೆಯಲ್ಲಿ ಚಿಟ್ಟೆಗಳಿತ್ತು. ಮಾಸ್ಕ್ (Mask) ಇಲ್ಲದೆ ನಮ್ಮ ಸುತ್ತ ಜನರು ಓಡಾಡುವುದನ್ನು ನೋಡಿ ಅಭ್ಯಾಸವಿಲ್ಲ. ಮತ್ತೆ ramp ವಾಕ್ ಮಾಡುತ್ತಿರುವುದಕ್ಕೆ ಮನೆಯಲ್ಲಿದ್ದೀನಿ ಅನಿಸುತ್ತಿದೆ. ನಾನು ವಿದೇಶ ಪ್ರಯಾಣದಲ್ಲಿ ಬ್ಯುಸಿಯಾಗಿದ್ದೆ ನಿನ್ನೆ ಭಾರತಕ್ಕೆ ಬಂದೆ ಕೇವಲ 24 ಗಂಟೆಗಳಲ್ಲಿ ಡಿಸೈನರ್ ವಿಕ್ರಂ ನನ್ನ ವಸ್ತ್ರ ವಿನ್ಯಾಸ ಮಾಡಿದ್ದಾರೆ ಫಿಟ್ಟಿಂಗ್ ಕೂಡ ಮಾಡಿ ಶೋ ಮುಗಿಸಿದೆವು. ಸಮಯ ಹೇಗೆ ಕಳೆಯಿತ್ತು ಎಂದೇ ಗೊತ್ತಾಗುತ್ತಿಲ್ಲ'ಎಂದು ಪರಿಣಿತಿ ಚೋಪ್ರಾ ಇಟೈಮ್ಸ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಡಿಸೈನರ್ ಬಗ್ಗೆ:
'ಈಗ ಧರಿಸಿರುವ ಬಟ್ಟೆಯಲ್ಲಿ ನಾನು ಗ್ಲಾಮರಸ್ ಆಗಿ ಮಾತ್ರವಲ್ಲ ಕಂಫರ್ಟ್ (Comfort) ಆಗಿ ಕೂಡ ಇದ್ದೀನಿ. ಬಟ್ಟೆ ಕಂಫರ್ಟ್ ಅಗಿಲ್ಲ ಅಂದ್ರೆ ಮುಖದಲ್ಲಿ ಕಾಣಿಸುತ್ತದೆ.ಆದರೆ ವಿಕ್ರಂ ಡಿಸೈನ್ ಮಾಡಿರುವ ಉಡುಪು ಧರಿಸಿದ ತಕ್ಷಣ ಎಲ್ಲವೂ ಪರ್ಫೆಕ್ಟ್ ಆಗಿತ್ತು. ಸಣ್ಣ ಚಡ್ಡಿ ಧಿರಿಸಿ ವಾಕ್ ಮಾಡಿದೆ ಹೇಗಿರುತ್ತದೆ ಹೇಳಿ? ಇದಕ್ಕಿಂದ ಕಂಫರ್ಟ್ ಮತ್ತೊಂದಿಲ್ಲ. ಬಣ್ಣ ಅದ್ಭುತವಾಗಿದೆ ಹೀಗಾಗಿ ಈ ಬಟ್ಟೆನ ಮನೆಗೆ ತೆಗೆದುಕೊಂಡು ಹೋಗುತ್ತೀನಿ' ಎಂದು ಪರಿಣಿತಿ ಹೇಳಿದ್ದಾರೆ.
'ಆರಂಭದಲ್ಲಿ ಆತಂಕವಿತ್ತು ಏಕೆಂದರೆ ವಿಕ್ರಂ ಅವರ ಬಳಿ ತುಂಬಾ ಕಲೆಕ್ಷನ್‌ಗಳಿದೆ ಆದರೆ ನನ್ನ ದೃಷ್ಠಿಯಲ್ಲಿ ಅವರ ಕೊಟ್ಟ ಬಟ್ಟೆ ಧರಿಸಿ ವಾಕ್ ಮಾಡಬೇಕು. ಆದರೆ ಕೆಲವೊಮ್ಮೆ ಅದು ನಮಗೆ ಸೂಟ್ ಆಗುವುದಿಲ್ಲ ಕಂಫರ್ಟ್ ಇರುವುದಿಲ್ಲ ಈ ರೀತಿ ಇಂದು ನಡೆದರೆ ನಾನು ವಿಕ್ರಂಗೆ ಅವಮಾನ ಮಾಡಿದ ಹಾಗೆ ಆಗುತ್ತದೆ. ನಾನು ಸಣ್ಣದಾಗಿ ಯೋಚನೆ ಮಾಡುತ್ತಿರಬಹುದು ಆದರೆ ಅದು ಸತ್ಯ ಅಲ್ವಾ'
ಪರಿಣಿತಿ ಫಿಟ್ನೆಸ್:
'ರ್ಯಾಂಪ್ ಮಾಡುವ ದಿನ ನಾನು ಆಹಾರದ ಬಗ್ಗೆ ಕಾಳಜಿ ವಹಿಸುತ್ತೀನಿ. ಆದರೆ ಇವತ್ತು ತುಂಬಾ ತಿಂದಿದ್ದೀನಿ. ಎನರ್ಜಿ ಬೇಕು ಅಂತ ಪರಾಟ ತಿಂದೆ. ಕಂಫರ್ಟ್ ಮತ್ತು ಎನರ್ಜಿ ಇದ್ದರೆ ರ್ಯಾಂಪ್ ಮಾಡಲು ಸುಲಭ. ನಾನು ಹಲವು ತಿಂಗಳಿನಿಂದ ಫಿಟ್ನೆಸ್ ಬಗ್ಗೆ ಕಾಳಜಿ ಸಹಿಸುತ್ತಿರುವೆ ಜನರು ಅದನ್ನು ಗಮನಿಸುತ್ತಿದ್ದಾರೆ ಒಳ್ಳೆಯ ಫೀಡ್ ಬ್ಯಾಕ್ ಕೊಟ್ಟಾಗ ಖುಷಿಯಾಗುತ್ತದೆ'
ಪರಿಣಿತಿ ಸ್ಟೈಲಿಂಗ್:
'0 ಯಿಂದ 100ಗೆ ಇದೆ ನನ್ನ ಫ್ಯಾಷನ್ ಜರ್ನಿ. ಸಿನಿ ಜರ್ನಿ ಶುರು ಮಾಡಿದಾಗ ಫ್ಯಾಷನ್ ಬಗ್ಗೆ ಯಾವ ಐಡಿಯಾನೂ ಇರಲಿಲ್ಲ. ಬಟ್ಟೆಗಳಿಗೆ ಪ್ರಾಮುಖ್ಯತೆ ಇಲ್ಲದ ವಾತಾವರಣದಲ್ಲಿ ಬೆಳೆದವಳು ನಾನು, ಫಿಟ್ನೆಸ್ ಮತ್ತು ಫೋಟೋಶೂಟ್ ವರೆಗೂ ಒಂದೆ ಧರಿಸುತ್ತಿದ್ದೆ. ಫ್ಯಾಷನ್ ಅಂದ್ರೆ ನನಗೇನು ಅಲ್ಲ. ನನ್ನ ಬಳಿ ಮೂರು ಟೀ-ಶರ್ಟ್‌ಗಳಿತ್ತು ಅಷ್ಟೆ ಅದನ್ನೇ ಪದೇ ಪದೇ ಧರಿಸುತ್ತಿದ್ದೆ. ವೃತ್ತಿ ಜೀವನದಲ್ಲಿ ಫೋಟೋಶೂಟ್ ಆರಂಭಿಸಿದಾಗ ಬಟ್ಟೆ ಹೆಚ್ಚಿಗೆ ಖರೀದಿ ಮಾಡಿದೆ. ಫೇಮಸ್ ಆದ ಮೇಲೆ ಜನರು ಗಮನಿಸುವುದಕ್ಕೆ ಶುರು ಮಾಡುತ್ತಾರೆ. ಒಂದು ಸಮಯದಲ್ಲಿ ನಾನು ತುಂಬಾ ದಪ್ಪ ಇದೆ ಆಗ ಧರಿಸಲು ಯಾವ ಬಟ್ಟೆನೂ ಇರಲಿಲ್ಲ. ಇದೆಲ್ಲಾ 10 -15 ವರ್ಷಗಳ ಹಿಂದೆ. ದೇಶ ಬದಲಾಗುತ್ತಿದೆ ಹೀಗಾಗು ನಾನು ಬದಲಾಗುತ್ತಿರುವೆ. ಇಂದು ನನಗೆ ಯಾವುದು ಸೂಟ್ ಆಗುತ್ತೆ ಯಾವ ರೀತಿ ಶಾಪಿಂಗ್ ಮಾಡಬೇಕು ಎಂದು ತಿಳಿದುಕೊಂಡಿರುವೆ. ನನ್ನ ಪರ್ಸನಲ್ ಡಿಸೈನರ್‌ಗಳನ್ನು ನಂಬಿ ಕೆಲಸ ಮಾಡುತ್ತೀನಿ. ಸೋಷಿಯಲ್ ಮೀಡಿಯಾನ ನಂಬಬೇಡಿ. ಪ್ರತಿಯೊಬ್ಬರ ದೇಹ ಬೇರೆ ಬೇರೆ ರೀತಿ ಇರುತ್ತದೆ ಟ್ರೆಂಡ್ ಏನೇ ಇರಲಿ ನಿಮಗೆ ಸೂಟ್ ಆಗುವುದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಿ' ಎಂದು ಪರಿಣಿತಿ ಮಾತನಾಡಿದ್ದಾರೆ.