
ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಹಿಂದಿ ಚಿತ್ರರಂಗದಲ್ಲಿ ಖ್ಯಾತಿ ಪಡೆದಿರುವ ನಟ ಮನೋಜ್ ಬಾಜಪೇಯಿ ಈವರೆಗೆ ಮೂರು ಬಾರಿ ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸಿನಿಮಾ ಮಾತ್ರವಲ್ಲದೇ ವೆಬ್ ಸರಣಿಯಲ್ಲೂ ವೀಕ್ಷಕರ ಮನಸ್ಸಿಗೆ ಹತ್ತಿರುವಾಗಿರುವ ಮನೋಜ್ ತಮ್ಮ ಸಿನಿ ಜರ್ನಿ ಬಗ್ಗೆ ತಮ್ಮ ನಾಚಿಕೆ ಸ್ವಭಾವದ ಬಗ್ಗೆ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಆಗಸ್ಟ್ 6ರಂದು ಮನೋಜ್ ನಟನೆಯ 'ಡಯಲ್ 100' ಸಿನಿಮಾ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ಮನೋಜ್ ಶಿಷ್ಯೆ ಸಾಕ್ಷಿ ತನ್ವಾರ್ ಸಹ ನಟಿಸಿದ್ದಾರೆ. ಸಾಕ್ಷಿ ಬೆಳದು ಬಂದ ಹಾದಿ ಬಗ್ಗೆ ಮಾತನಾಡುತ್ತಾ ಅವರ ಕಾಲೇಜಿನ ಶೌಚಾಲಯದಲ್ಲಿ ಸಿಲುಕಿಕೊಂಡ ಘಟನೆ ವಿವರಿಸಿದ್ದಾರೆ, ನನಗೆ ಗೊತ್ತಿತ್ತು ಸಾಕ್ಷಿ ತನ್ವಾರ್‌ಗೆ ಪ್ರತಿಭೆ ಇದೆ. ಏನಾದರೂ ಸಾಧಿಸಿಯೇ ಸಾಧಿಸುತ್ತಾಳೆಂದು. ನಾನು ಸಾಕ್ಷಿಯೊಂದಿಗೆ ಸತತ ಸಂಪರ್ಕದಲ್ಲಿದ್ದೆ. ಆಕೆಯ ಬೆಳವಣಿಗೆ ಗಮನಿಸುತ್ತಿದ್ದೆ. ಆಕೆಯ ನಟನೆಯನ್ನು ನಾನು ಮೆಚ್ಚಿಕೊಳ್ಳುತ್ತೇನೆ,' ಎಂದು ಮನೋಜ್ ಹೇಳಿದ್ದಾರೆ.
ಸಾಕ್ಷಿ ದೆಹಲಿಯ ಲೇಡಿ ಶ್ರೀರಾಮ್ ಕಾಲೇಜ್‌ನಲ್ಲಿ ಕಲಿಯುತ್ತಿದ್ದಾಗ, ಮನೋಜ್ ಬಾಜಪೇಯಿ ಆ ಕಾಲೇಜಿನ ಕೆಲವು ಯುವತಿಯರಿಗೆ ನಟನೆ ತರಬೇತಿ ನೀಡುತ್ತಿದ್ದರು. ಅಲ್ಲಿ ಸಾಕ್ಷಿ ಸಹ ತರಬೇತಿ ಪಡೆಯುತ್ತಿದ್ದರು. 'ಅದು ಯುವತಿಯರ ಕಾಲೇಜ್. ನನ್ನ ಬಳಿ ನಟನೆ ಕಲಿಯುತ್ತಿದ್ದ ಯುವತಿಯರಿಗೆ ತರಗತಿ ಮುಗಿದ ಬಳಿಕ ಗೇಟ್ ಬಳಿ ಬರುವಂತೆ ಹೇಳಿರುತ್ತಿದ್ದೆ. ಅವರು ಬರುವುದು ತಡವಾದರೆ ಕಾಲೇಜಿನ ಒಳಕ್ಕೆ ಹೋಗುತ್ತಿರಲಿಲ್ಲ ಬದಲಿಗೆ ಅಲ್ಲಿಯೇ ರಸ್ತೆಯಲ್ಲಿ ಓಡಾಡಿ ಕಾಲ ಕಳೆಯುತ್ತಿದ್ದೆ. ನನಗೆ ಯುವತಿಯರ ಬಳಿ ಮಾತನಾಡುವುದಕ್ಕೆ ಬಹಳ ಮುಜುಗರ ತರುತ್ತಿತತ್ತು. ನಾನು ಸಂಕೋಚದ ಸ್ವಭಾವದವನಾಗಿದ್ದೆ. ಒಂದು ದಿನ ಅನಿವಾರ್ಯ ಕಾರಣದಿಂದ ಕಾಲೇಜಿನ ಒಳಗೆ ಹೋದೆ. ಶೌಚಾಲಯ ಬಳಸಲೇ ಬೇಕಾದ ಪರಿಸ್ಥಿತಿ. ಹಾಗಾಗಿ ಯುವತಿಯರ ಶೌಚಾಲಯಕ್ಕೆ ಹೋದೆ. ನಾನು ಅಲ್ಲಿರುವಾಗಲೇ ಕೆಲವು ಯುವತಿಯರು ಒಳಗೆ ಬಂದರು. ಕೊಡಲೇ ನಾನು ಶೌಚಾಲಯದ ಒಳಗೆ ಅವಿತುಕೊಂಡು ಒಳಗಿನಿಂದ ಲಾಕ್ ಹಾಕಿಕೊಂಡು ಬಿಟ್ಟೆ. ಅವರು ಹೋಗುವವರೆಗೂ ನಾನು ಹೊರಗೆ ಬರಲಿಲ್ಲ. ಎಲ್ಲಿ ನಾನು ಹೀಗೆ ಸಿಕ್ಕಿಹಾಕಿಕೊಂಡು ಬಿಡುತ್ತೇನೋ ಎಂದು ಭಯಪಟ್ಟಿದ್ದೆ,' ಎಂದು ಮನೋಜ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.