ಬಾಲಿವುಡ್ ನಟಿ ಕಿಯಾರ ಅಡ್ವಾಣಿ ಪ್ರೇಮಿಗಳ ದಿನದ ಪ್ರಯುಕ್ತ ಸಂಬಂಧಗಳು ಹೇಗಿರಬೇಕೆಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಮದುವೆಗೂ ಮುನ್ನ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದೂ ತಪ್ಪಿಲ್ಲವೆಂದಿರುವುದು ಮಡಿವಂತ ಭಾರತೀಯರ ಕಣ್ಣನ್ನು ಕೆಂಪಾಗಿಸಿದೆ.
'ಲಸ್ಟ್ ಸ್ಟೋರಿಸ್' ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಹೊಸ ಸಂಚಲನ ಸೃಷ್ಟಿಸಿದವರು ನಟಿ ಕಿಯಾರಾ ಅಡ್ವಾಣಿ. ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ನಟ- ನಟಿಯರು ಏನ್ ಮಾಡಿದ್ದಾರೆ ಅನ್ನೋ ಕುತೂಹಲ ಸಹಜ. ಈ ವೇಳೆ ಸಂದರ್ಶನವೊಂದರಲ್ಲಿ ಕಿಯಾರ ಕೊಟ್ಟ ಹೇಳಿಕೆ ಸೋಪಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಲೈಂಗಿಕತೆ ಬಗ್ಗೆ ಸಿಕ್ಕಾಪಟ್ಟೆ ಮಡಿವಂತಿಕೆ ಪ್ರದರ್ಶಿಸೋ ಭಾರತೀಯರಿಗೆ ಇದನ್ನು ಅರಗಿಸಿಕೊಳ್ಳುವುದು ತುಂಬಾ ಕಷ್ಟವಾಗುತ್ತಿದೆ.
'ನಾನೇಕೆ ಹಸ್ತಮೈಥುನ ದೃಶ್ಯದಲ್ಲಿ ಕಾಣಿಸಿಕೊಂಡೆ' ಕಿಯಾರಾ ಬೋಲ್ಡ್ ಉತ್ತರ
ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕಿಯಾರ ಮದುವೆಗೂ ಮುನ್ನ ರಿಲೇಷನ್ ಶಿಪ್ ಹೇಗಿರಬೇಕೆಂದು ಮುಕ್ತವಾಗಿ ಮಾತನಾಡಿದ್ದಾರೆ. ಹೌದು! 'ಮದುವೆಗೂ ಮುನ್ನ ಹುಡುಗನ ಜೊತೆ ಸೆಕ್ಸ್ ಮಾಡುವುದರಲ್ಲಿ ನನಗೆ ಯಾವುದೇ ಅಭ್ಯಂತರವೂ ಇಲ್ಲ. ಆದರೆ ಅವನು ನನ್ನನ್ನೇ ಮದುವೆ ಆಗುತ್ತಾನೆ ಎಂಬ ಗ್ಯಾರಂಟಿ ಇರ್ಬೆಕು ಅಷ್ಟೆ. ಇಬ್ಬರ ಮನಸ್ಸು ಶುದ್ಧವಾಗಿದ್ದು, ಮುಂದೆ ನಾವು ಮದುವೆ ಆಗುತ್ತೇವೆ ಎಂಬ ನಂಬಿಕೆ ಇದ್ದರೆ ನಾನು ರೆಡಿ' ಎಂಬ ಬೋಲ್ಡ್ ಸ್ಟೇಟ್‌ಮೆಂಟ್ ಕೊಟ್ಟಿದ್ದಾರೆ.
ಇನ್ನು ಪ್ರೀತಿಯಲ್ಲಿದ್ದಾಗ? ಎಂಬ ಪ್ರಶ್ನೆಗೆ 'ಲವ್ವಲ್ಲಿ ಹುಡುಗನೇ ಮೊದಲು ರೋಮ್ಯಾನ್ಸ್ ಶುರುಮಾಡಬೇಕು. ಅದಕ್ಕೆ ಹುಡುಗಿ ಸರಿಯಾಗಿ ರಿಯಾಕ್ಟ್ ಮಾಡಬೇಕು. ಪಾಪ ಹುಡುಗರೇ ಯಾಕೆ ಸುಖಾ ಸುಮ್ಮನೆ ಕಷ್ಟ ಪಡಬೇಕು?' ಎಂದು ಪರುಷರ ಬ್ಯಾಟಿಂಗ್ ಮಾಡಿದಂತೆಯೇ ಉತ್ತರ ನೀಡಿದ್ದಾರೆ.
ಕಿಯಾರಾ ಅದ್ವಾನಿ ಫಿಟ್ ನೆಸ್ ಸೀಕ್ರೆಟ್
'ಸಂಬಂಧದಲ್ಲಿ ಸಣ್ಣ ಪುಟ್ಟ ಗೆಸ್ಚರ್ ಇರ್ಬೇಕು. ಡೇಟ್ ನೈಟ್ ಹೋಗುವುದು, ಸರ್ಪ್ರೈಸ್ ವಿಸಿಟ್ ಮಾಡುವುದು ಅಥವಾ Unexpected ಗಿಫ್ಟ್ಸ್ ಕೊಡುವುದು. ಇವೆಲ್ಲಾ ಲವ್ ಸ್ಪಾರ್ಕಲ್‌ನಲ್ಲಿ ಇರುತ್ತದೆ. ಅಷ್ಟೇ ಅಲ್ಲದೆ ಒಬ್ಬರು ಜಗಳ ಮಾಡಿ ಮಲ್ಕೊಳಲ್ಲೇಬಾರದು,' ಎನ್ನುವ ಮೂಲಕ ಸುಖ ದಾಂಪತ್ಯ ಅಥವಾ ಸುಖ ಸಾಂಗತ್ಯದ ಗುಟ್ಟೇನು ಎಂಬುದನ್ನು ಹೇಳಿದ್ದಾರೆ.
ಫೆಬ್ರವರಿ 14ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ