
ಖಾನ್ ಕುಟುಂಬದಲ್ಲಿ ಯಾರಾದರೂ ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ಅತ್ತ ಪುತ್ರಿ ಸಾರಾ ಅಲಿ ಖಾನ್ ಮತ್ತು ಅಮೃತ ಸಿಂಗ್ ಕಾಶಿ ವಿಶ್ವನಾಥ ಮಂದಿರದಲ್ಲಿ ಕಾಣಿಸಿಕೊಂಡರೆ, ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಮನೆಯಲ್ಲಿ ಪುಸ್ತಕ ಹಿಡಿದು ಕೂತಿದ್ದಾರೆ.
ಹೌದು! ಇತ್ತೀಚಿಗೆ ಇನ್‌ಸ್ಟಾಗ್ರಾಂಗೆ ಕಾಲಿಟ್ಟ ಕರೀನಾ ಕಪೂರ್ ಹೆಚ್ಚಿನ ಸಮಯವನ್ನು ಸಾಮಾಜಿಕ ಜಾಲತಾಣಕ್ಕೂ ಮೀಸಲಿಡುತ್ತಿದ್ದಾರೆ ಎನಿಸುತ್ತದೆ. ದೈನಂದಿನ ಚಟುವಟಿಕೆಗಳನ್ನು ಅಪ್‌ಡೇಟ್ ಮಾಡುತ್ತಲೇ ಇರುತ್ತಾರೆ.
ಪುತ್ರಿ ಸಾರಾ ಜೊತೆ ನಟಿಸುವುದಕ್ಕೆ ಸೈಫ್ ರೆಡಿ! ಹಾಗಾದ್ರೆ ಕಂಡೀಶನ್ ಹಾಕಿದ್ಯಾಕೆ?
ಕೊರೋನಾ ವೈರಸ್ ಭೀತಿ ಹೆಚ್ಚಾದ ಕಾರಣ ಚಿತ್ರೀಕರಣವನ್ನು ರದ್ದು ಮಾಡಲಾಗಿದೆ. ಮನೆಯಲ್ಲೇ ರೆಸ್ಟ್ ಮಾಡುತ್ತಿರುವ ಸ್ಟಾರ್‌ಗಳು ಹೇಗೆಲ್ಲಾ ಸಮಯ ಕಳೆಯುತ್ತಿದ್ದಾರೆ ಎಂದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.
ಈ ನಡುವೆ ಕರೀನಾ ಕಪೂರ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸೈಫ್ ಕ್ಯಾಂಡಲ್ ಲೈಟ್‌ನಲ್ಲಿ ಪುಸ್ತಕ ಓದುತ್ತಿರುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. 'ಒಂದು ವಾರದವರೆಗೆ ಸೈಫ್ 'ಬುಕ್ಡ್', ನಾನು ಇನ್‌ಸ್ಟಾಗ್ರಾಂ ಬಳಸುವೆ..' ಎಂದು ಬರೆದುಕೊಂಡಿದ್ದಾರೆ. ಹೌದು! ಸಾಕಷ್ಟು ಸಂದರ್ಶನದಲ್ಲಿ ಸೈಫ್ ಚಿತ್ರರಂಗಕ್ಕೆ ಕಾಲಿಡಲು ಮುಖ್ಯ ಸ್ಪೂರ್ತಿಯೇ ಪುಸ್ತಕಗಳೆಂದು ಹೇಳಿಕೊಂಡಿದ್ದಾರೆ. ಶೂಟಿಂಗ್ ನಡುವೆ ಹಾಗೂ ಪ್ರಯಾಣಿಸುವಾಗ ಸೈಫ್ ಪುಸ್ತಕಗಳನ್ನು ಓದಲು ಬಯಸುತ್ತಾರಂತೆ.
ನಮ್ಮ ಡಿವೋರ್ಸ್ ವಿಷ್ಯ ಮಕ್ಕಳಲ್ಲಿ ಹೇಳಿದ್ದು ಇನ್ನೂ ಕಾಡುತ್ತಿದೆ: ಸೈಫ್
ಒಟ್ಟಿನಲ್ಲಿ ಸದಾ ಬಿಡುವಿರದ ಕೆಲಸದಲ್ಲಿ ಬ್ಯುಸಿಯಾಗುವ ಈ ನಟರಿಗೂ ಇದೀಗ ಕುಟುಂಬದೊಂದಿಗೆ ಸಮಯ ಕಳೆಯಲು, ತಮ್ಮನ್ನು ತಾವು ಅರಿಯಲು ಕೊರೋನಾ ವೈರಸ್ ಬಿಡುವು ಮಾಡಿಕೊಟ್ಟಂತೆ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.