
ಇದರೊಂದಿಗೆ ಮತ್ತೊಂದು ವಿಚಾರವನ್ನೂ ಅವರೀಗ ಹಂಚಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಅಮ್ಮನನ್ನೇ ಮೀರಿಸಿದ್ದಾರೆ ಮಗ ತೈಮೂರ್
ಅದು 90ರ ದಶಕದಲ್ಲಿ ಮಿಂಚಿದ್ದ ಅಕ್ಕ ಕರೀಷ್ಮಾ ಕಪೂರ್ ಕೆಲ ಕಾಲ ಚಿತ್ರರಂಗದಿಂದ ದೂರವಾಗಿದ್ದರು. ಇದೀಗ ಮತ್ತೆ ನಟನೆಗೆ ವಾಪಸ್ ಆಗಿದ್ದಾರೆ. ಈ ವೇಳೆಯಲ್ಲಿ ಅಕ್ಕನ ಜೊತೆಗೆ ಸೇರಿ ಸಿನಿಮಾ ಮಾಡುವ ಬಯಕೆಯನ್ನು ಕರೀನಾ ಹೊಂದಿದ್ದಾರೆ. ಸಾಮಾನ್ಯವಾಗಿ ಒಂದೇ ಕುಟುಂಬದ ನಟರಿಗೆ ಈ ರೀತಿಯ ಪ್ರಶ್ನೆ ಅಭಿಮಾನಿಗಳ ಕಡೆಯಿಂದ ಬರುತ್ತಿರುತ್ತದೆ. ಆದರೆ ಅವರು ಒಟ್ಟಾಗಿ ನಟಿಸಬೇಕು ಎಂದರೆ ಕಾಲ ಕೂಡಿ ಬರಬೇಕು ಜೊತೆಗೆ ಚಿತ್ರಕತೆ, ಚಿತ್ರತಂಡ ಸಿಗಬೇಕು.
ಕೊನೆಗೂ ಇನ್‌ಸ್ಟಾಗ್ರಾಮ್‌ಗೆ ಹಲೋ ಹೇಳಿದ ಬಾಲಿವುಡ್ ಬೇಬೋ ಕರೀನಾ ಕಪೂರ್!
ಈಗ ಕರೀಷ್ಮಾ ಮತ್ತು ಕರೀನಾ ಒಟ್ಟಿಗೆ ನಟಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇದು ಸಾಧ್ಯವಾಗಬೇಕಾದರೆ ಒಳ್ಳೆಯ ಸ್ಕಿ್ರಪ್ಟ್ ಸಿಗಬೇಕು. ಅದು ಇಬ್ಬರಿಗೂ ಇಷ್ಟವಾಗಬೇಕು. ಹಾಗಾದ ತಕ್ಷಣ ನಾವು ಒಟ್ಟಿಗೆ ತೆರೆಯ ಮೇಲೆ ಕಾಣಿಸಿಕೊಂಡು ಅಭಿಮಾನಿಗಳ ಆಸೆ ಈಡೇರಿಸುತ್ತೇವೆ ಎಂದು ಸ್ವತಃ ಕರೀನಾ ಕಪೂರ್ ಖಾನ್ ಹೇಳಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿ ಒಳ್ಳೆಯ ಸ್ಕಿ್ರಪ್ಟ್ ಸಿಕ್ಕರೆ ಸದ್ಯದಲ್ಲೇ ಕರೀಷ್ಮಾ, ಕರೀನಾ ಒಂದಾಗೋದು ಪಕ್ಕಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.