ಮಕ್ಕಳ ಪುಸ್ತಕ ಬರೆದ ಕರಣ್‌ ಜೋಹಾರ್‌; ಇಲ್ಲೂ ಅವರ ಅವಳಿ ಮಕ್ಕಳೇ ಸ್ಟಾರ್ಸ್‌ ?

Suvarna News   | Asianet News
Published : Sep 02, 2020, 05:28 PM IST
ಮಕ್ಕಳ ಪುಸ್ತಕ ಬರೆದ ಕರಣ್‌ ಜೋಹಾರ್‌; ಇಲ್ಲೂ ಅವರ ಅವಳಿ ಮಕ್ಕಳೇ ಸ್ಟಾರ್ಸ್‌ ?

ಸಾರಾಂಶ

3 ವರ್ಷಗಳ ಹಿಂದೆ ಆಟೋಬಯೋಗ್ರಫಿ ಬರೆದಿದ್ದ ಕರಣ್‌ ಜೋಹಾರ್‌ ಈಗ ಪುಟ್ಟ ಮಕ್ಕಳಿಗಾಗಿ ಫಿಚರ್‌ ಬುಕ್ ಬರೆದಿದ್ದಾರೆ.   

ಬಾಲಿವುಡ್‌ ಖ್ಯಾತ ನಿರ್ದೇಶಕ ಕರಣ್ ಜೋಹಾರ್‌ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುವುದು ತುಂಬಾನೇ ಕಾಮನ್‌ ಆಗಿದೆ. ಅದರಲ್ಲೂ ಸುಶಾಂತ್ ಸಿಂಗ್ ಸಾವಿನ  ಪ್ರಕರಣದ ನಂತರ ನೆಟ್ಟಿಗರು ಕರಣ್ ಏನೇ ಅಪ್ಲೋಡ್‌ ಮಾಡಿದರೂ  ಕಾಲು ಎಳೆಯಲು ಶುರು ಮಾಡಿದ್ದಾರೆ. 

ಸುಮಾರು 3 ತಿಂಗಳ ಕಾಲ ಡಿಜಿಟಲ್ ಲೈಫ್‌ಯಿಂದ ದೂರ ಉಳಿದಿದ್ದ ಕರಣ್ ಸ್ವಾತಂತ್ರ್ಯ ದಿನಾಚರಣೆಯ ದಿನದಂದು  ಕಮ್‌ಬ್ಯಾಕ್‌ ಮಾಡಿದ್ದರು. ಈ ಅವಧಿಯಲ್ಲಿ ತಮ್ಮ ಮಕ್ಕಳನ್ನು  ಪ್ರೇರಣೆಯಾಗಿಟ್ಟುಕೊಂಡು ಮಕ್ಕಳ ಪುಸ್ತಕ ಬರೆದಿದ್ದಾರೆ.

ಕರಣ್‌ನಿಂದ ಪದ್ಮಶ್ರೀ ಹಿಂಪಡೆಯಲು ಸರ್ಕಾರಕ್ಕೆ ಕಂಗನಾ ಮನವಿ

'ನಿಮ್ಮೆಲ್ಲರೊಂದಿಗೆ ಒಂದು ಸಂತೋಷದ ವಿಚಾರ ಹಂಚಿಕೊಳ್ಳುತ್ತಿದ್ದು 'The big thoughts of little love' ಎಂಬ ನನ್ನ  ಮೊದಲ ಮಕ್ಕಳ ಪುಸ್ತಕ ಲಾಂಚ್ ಮಾಡಲು ತಯಾರಿ ನಡೆಸುತ್ತಿರುವೆ. ಅತಿ ಶೀಘ್ರದಲ್ಲಿ ಬಿಡುಗಡೆ ಆಗಲಿದೆ' ಎಂದು ಬರೆದುಕೊಂಡಿದ್ದಾರೆ. ಫಿಚರ್‌ ಸ್ಟೋರಿ ಬುಕ್‌ನಲ್ಲಿ ತನ್ನ ಅವಳಿ ಮಕ್ಕಳು ಅವ್‌ ಹಾಗೂ ಖುಷಾ ಅವರೇ ಸ್ಟಾರ್ಸ್ ಆಗಿ ತೋರಿಸಲಾಗಿದೆ. ಮಕ್ಕಳ ಮನಸ್ಥಿತಿ, ಅವರ ಆಯ್ಕೆ ಹೇಗಿರುತ್ತದೆ ಎಂದೆಲ್ಲಾ ಹೇಳಲಾಗಿದೆ.

 

 ಪುಸ್ತಕದ ಬಗ್ಗೆ ಘೋಷಣೆ ಮಾಡಿದ ನಂತರ ನೆಟ್ಟಿಗರು ಕರಣ್ ಕಾಲು ಎಳೆಯಲು ಪ್ರಾರಂಭಿಸಿದ್ದು ಕಾಮೆಂಟ್‌ನಲ್ಲಿ ಸುಶಾಂತ್ ಆತ್ಮಹತ್ಯೆ ಬಗ್ಗೆ ಪ್ರಶ್ನಿಸಲು ಆರಂಭಿಸಿದ್ದರು. ಇನ್ನು ಕೆಲವರು ಸಿನಿಮಾದಲ್ಲಿ ಮಾತ್ರ ನೆಪೋಟಿಸಂ ಎಂದುಕೊಂಡರೆ ಮಕ್ಕಳ ಪುಸ್ತಕಕ್ಕೂ ನಿಮ್ಮ ಮಕ್ಕಳನ್ನು ಬಳಸಿಕೊಂಡಿದ್ದೀರಾ? ಓದುಗರಿಗೆ  ಇವೆಲ್ಲಾ ಮ್ಯಾಟರ್‌ ಆಗುವುದಿಲ್ಲ ಎಂದು ಕಾಲು ಕೆಳೆದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!