ಸುಶಾಂತ್ ಸಾವಿನ ನಂತರ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳದ ಕರಣ್ ಜೋಹಾರ್ ಇದೀಗ ಮತ್ತೆ ಪ್ರತ್ಯಕ್ಷರಾಗಿದ್ದಾರೆ. ಆದರೀಗ ಸಿನಿಮಾ ಪ್ರಚಾರಕ್ಕಾಗಲಿ ಅಥವಾ ಪರ್ಸನಲ್ ಮ್ಯಾಟರ್‌ಗೆ ಅಲ್ಲ......
ಬಾಲಿವುಡ್ ಚಿತ್ರರಂಗದಲ್ಲಿ ನಡೆಯವ ಪ್ರತಿಯೊಂದೂ ಕಾರ್ಯಕ್ರಮದಲ್ಲಿಯಬ ಸಕ್ರಿಯವಾಗಿ ತೊಡಗಿಸಿಕೊಳ್ಳುವ ನಿರ್ದೇಶಕ ಕರಣ್ ಜೋಹಾರ್, ಎಂ.ಎಸ್.ಧೋನ್, ದಿ ಅನ್‌ಟೋಲ್ಡ್ ಸ್ಟೋರಿ ಹೀರೋ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಎಲ್ಲಿಯೂ ಕಾಣಿಸಿಕೊಂಡಿಲ್ಲ. ನೀತು ಕಪೂರ್ ಬರ್ತಡೇ ದಿನ ಕಂಡಿದ್ದು ಬಿಟ್ಟರೆ, ಸೋಷಿಯಲ್ ಮೀಡಿಯಾಗೆ ಬೈ ಹೇಳಿದ್ದರು. ಆದರೀಗ ಮತ್ತೊಮ್ಮೆ ಕಾಣಿಸಿಕೊಂಡಿದ್ದಾರೆ. ಆದರೆ ಇದು ಯಾವ ವಿಚಾರಕ್ಕೆ ನೀವೆ ನೋಡಿ....
ತಾನೇ ನಿರ್ಮಿಸಿದ ಸಿನಿಮಾ ಟ್ರೈಲರ್, ಪೋಸ್ಟರ್‌ನಿಂದ ಕರಣ್ ಔಟ್..! ಅಸಲಿಗೆ ಆಗಿದ್ದೇನು..?
ಕರಣ್ ಫೊಸ್ಟ್:
ಎರಡು ತಿಂಗಳ ನಂತರ ಕರಣ್ ಜೋಹಾರ್ ಪೋಸ್ಟ್ ಹಾಕಿದ್ದಾರೆ. 'ನಮ್ಮ ಮಹಾನ್ ರಾಷ್ಟ್ರ..ಸಂಸ್ಕೃತಿ, ಪರಂಪರೆ ಹಾಗೂ ಇತಿಹಾಸ..ಸ್ವಾಂತಂತ್ರ್ಯ ದಿನಾಚರಣೆ ಶುಭಾಶಯಗಳು. ಜೈ ಹಿಂದ್' ಎಂದು ಬರೆದು ಭಾರತ ಧ್ವಜ ಫೋಟೋ ಶೇರ್ ಮಾಡಿದ್ದಾರೆ.
ಕರಣ್ ಯಾಕೆ ಕಾಣೆಯಾಗಿದ್ದರು:
ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡ ನಂತರ ಬಾಲಿವುಡ್ ಚಿತ್ರರಂಗದಲ್ಲಿ ನೆಪೋಟಿಸಂ ಅಲೆ ಹೆಚ್ಚಾಯ್ತು. ಸುಶಾಂತ್ ಸಾವಿಗೆ ಅಲಿಯಾ ಭಟ್ ಹಾಗೂ ಕರಣ್ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಅದರಲ್ಲೂ ವಿಡಿಯೋ ಮೂಲಕ ಕಂಗನಾ ಆಕ್ರೋಶ ವ್ಯಕ್ತ ಪಡಿಸಿದ ನಂತರವಂತೂ ಕರಣ್‌ಗೆ ಬೆಂಬಲಿಗರು ಕಡಿಮೆಯಾದರು.
ಯಾರೊಂದಿಗೂ ಮಾತನಾಡುವುದಿಲ್ಲ ಎಂದ ಕರಣ್ ಜೋಹಾರ್ ಈಗ ರಣ್ಬೀರ್ ಕಪೂರ್ ಪಾರ್ಟಿಯಲ್ಲಿ ಪ್ರತ್ಯಕ್ಷ !
ಸುಶಾಂತ್ ಸಿಂಗ್ ಜೊತೆ ಭಾವುಕ ಪೋಸ್ಟ್ ಶೇರ್ ಮಾಡಿದ ನಂತರ ಯಾವುದೇ ಪೋಸ್ಟ್ ಹಾಕಿರಲಿಲ್ಲ ಈ ಕರಣ್. ತಮ್ಮ ಬ್ಯಾನರ್‌ನಲ್ಲೇ ಲಾಂಚ್ ಆದ ಜಾಹ್ನವಿ ಕಪೂರ್ ಮತ್ತೊಂದು ಬಹುನಿರೀಕ್ಷಿತ ಸಿನಿಮಾ 'ಗುಂಜನ್ ಸೆಕ್ಸೇನಾ' ಚಿತ್ರವನ್ನು ಕರಣ್ ನಿರ್ಮಿಸಿದ್ದರೂ, ಯಾವ ರೀತಿಯ ಪ್ರಮೋಷನ್‌ನಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಚಿತ್ರದ ಬಗ್ಗೆ ಒಂದು ಪೋಸ್ಟ್ ಕೂಡ ಮಾಡಿಲ್ಲ. ಭಾರತದ ಬಗ್ಗೆ ಪೋಸ್ಟ್ ಮೂಲಕ ಕರಣ್ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಸಕ್ರಿಯರಾಗಿರುತ್ತಾರೆ ಎಂಬುವುದು ಅಭಿಮಾನಿಗಳ ಮಾತು.
ಸುಶಾಂತ್ ತಮ್ಮ ಮನೆಯಲ್ಲಿ ಆತ್ಮಹತ್ಯೆ ಶರಣಾಗಿದ್ದು, ಬಾಲಿವುಡ್ ತಲ್ಲಣಗೊಳ್ಳುವಂತೆ ಮಾಡಿದೆ. ಅದರಲ್ಲಿಯೂ ಬಿಹಾರದ ಹುಡುಗನೊಬ್ಬ ಯಾವುದೇ ಸಿನಿಮಾ ಬ್ಯಾಕ್‌ಗ್ರೌಂಡ್ ಇಲ್ಲದೇ ಬೆಳೆದ ಪರಿ ಅನನ್ಯ. ಓದಿನಲ್ಲಿಯೂ ಚುರುಕಾಗಿದ್ದ ಸುಶಾಂತನ ಹವ್ಯಾಸಗಳೂ ಎಲ್ಲರೂ ಮೆಚ್ಚುವಂತೆ ಇದ್ದವು. ಅವನ ಓದು, ಕನಸುಗಳು, ಜೀವನದ ಗುರಿ ಎಲ್ಲರಿಗೂ ಮಾದರಿಯಾಗುವಂತೆ ಇದ್ದವು. ಅದೂ ಅಲ್ಲದೇ ಸುಶಾಂತ್ ನಟಿಸಿದ ಬಹುತೇಕ ಸಿನಿಮಾಗಳು ಜೀವನೋತ್ಸಾಹ ಹೆಚ್ಚಿಸುವಂತೆ ಮಾಡುತ್ತಿತ್ತು. ಇಂಥ ನಟನೊಬ್ಬ ಆತ್ಮಹತ್ಯೆಯಂಥ ದುಡುಕು ನಿರ್ಧಾರ ತೆಗೆದುಕೊಂಡಿರುವುದು ಅಭಿಮಾನಿಗಳಿಗೆ ಸಹಿಸಲಾಗದ ನೋವು ತಂದಿದೆ. ಇದಕ್ಕೆ ಬಾಲಿವುಡ್‌ನಲ್ಲಿರುವ ಸ್ವಜನಪಕ್ಷಪಾತವೇ ಕಾರಣ ಎಂಬ ಕೂಗು ಕೇಳಿ ಬರಲು ಶುರುವಾಗಿತ್ತು. ಅದರಲ್ಲಿಯೂ ಆಲಿಯಾ ಭಟ್ ಹಾಗೂ ಕರಣ್ ಜೋಹರ್ ಕಡೆಗೇ ಅನೇಕರು ಬೆರಳು ಮಾಡಿ ತೋರಿಸಲು ಶುರು ಮಾಡಿದ್ದು, ಅವರಿಬ್ಬರಿಂದಲೇ ಸುಶಾಂತ್ ನೊಂದಿದ್ದ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಕರಣ್ ಹಾಗೂ ಆಲಿಯಾ ಸೋಷಿಯಲ್ ಮೀಡಿಯಾ ಫಾಲೋಯರ್ಸ್ ಸಂಖ್ಯೆಯೂ ಅಪಾರ ಪ್ರಮಾಣದಲ್ಲಿ ಕುಸಿದಿದೆ. ಆ ಮೂಲಕ ಸುಶಾಂತ್ ಅಭಿಮಾನಿಗಳು ಹಾಗೂ ಸಿನಿ ಪ್ರೇಮಿಗಳು ಕರಣ್ ಹಾಗೂ ಆಲಿಯಾ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ.
ಸುಶಾಂತ್ ಸಾವಿನ ಬೆನ್ನಲ್ಲೇ ಬಾಲಿವುಡ್‌ನ ಸ್ವಜನಪಕ್ಷಪಾತದ ಬಗ್ಗೆ ಪರ, ವಿರೋಧ ಚರ್ಚೆಗಳು ಶುರುವಾಗಿವೆ. ಅಲ್ಲದೇ ಬಿಜೆಪಿ ಮುಖಂಡ ಸೇರಿ ಹಲವು ರಾಜಕೀಯ ನಾಯಕರು ನಟ ಸಾವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದ್ದರು. ಇದೀಗ, ತನಿಖೆ ಮುಂದುವರಿದಿದ್ದು ಈ ಪ್ರತಿಭಾನ್ವಿತನ ಸಾವಿಗೆ ಕಾರಣ ಗೊತ್ತು ಮಾಡಿಕೊಳ್ಳಬೇಕಾಗಿದೆ.