ಕಂಗನಾ ರಣಾವತ್‌ - ರಾಣಾ ದಗ್ಗುಬಾಟಿ ನಡುವೆ ಮಾತಿನ ಚಕಾಮಕಿ; ಏನಿದು ಅಸಲಿ ಕಥೆ?

Suvarna News   | Asianet News
Published : Jul 28, 2020, 10:23 AM IST
ಕಂಗನಾ ರಣಾವತ್‌ - ರಾಣಾ ದಗ್ಗುಬಾಟಿ ನಡುವೆ ಮಾತಿನ ಚಕಾಮಕಿ; ಏನಿದು ಅಸಲಿ ಕಥೆ?

ಸಾರಾಂಶ

ಸ್ವಜನಪಕ್ಷಪಾತ ವಿರೋಧಿ ಕಂಗನಾ ರಣಾವತ್‌ ಟಾಲಿವುಡ್‌ ನಟ ರಾಣಾ ದಗ್ಗುಬಾಟಿ ಜೊತೆ ನಡೆದ ವರ್ಚುಯಲ್ ಮೀಟಿಂಗ್ ನಲ್ಲಿ ಅಚ್ಚರಿ ಬೆಳವಣಿಗೆ ಇದು!

ಬಾಲಿವುಡ್‌ ಬೋಲ್ಡ್‌ ಕ್ವೀನ್‌ ಕಂಗನಾ ರಣಾವತ್ ಅನೇಕ ವಿಚಾರಗಳಿಗೆ ಟಾಕ್ ಆಫ್‌ ದಿ ಟೌನ್ ಆಗಿದ್ದಾರೆ. ಅದರಲ್ಲೂ ಸುಶಾಂತ್ ಸಿಂಗ್ ಸಾವಿನ ನಂತರ ಸುಶಾಂತ್‌ಗಿಂತಲ್ಲೂ ಹೆಚ್ಚಾಗಿ ಕೇಳಿ ಬರುತ್ತಿರುವುದು ಕಂಗನಾ ಹೆಸರೇ.

ಕರಣ್ ಜೋಹಾರ್, ಮಹೇಶ್‌ ಭಟ್‌, ಸಲ್ಮಾನ್ ಖಾನ್‌ ಮತ್ತು ಬಾಲಿವುಡ್‌ ಮಾಫಿಯಾ ಬಗ್ಗೆ ಬೋಲ್ಡ್ ಆಗಿ ಮಾತನಾಡಿದ್ದಕ್ಕೆ ನೆಟ್ಟಿಗರ ದೃಷ್ಟಿಯಲ್ಲಿ ಧೀರೆ ಎಂದು ಕರೆಸಿಕೊಂಡಿದ್ದಾರೆ. ಈ ಚರ್ಚೆ ನಡುವೆ ನಟಿ ಕಂಗನಾ ಮತ್ತು ನಟ ರಾಣಾ ದಗ್ಗುಬಾಟಿ ಲೈವ್ ಚಾಟ್‌ನಲ್ಲಿ ಕಾಣಿಸಿಕೊಂಡಾಗ  ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟ ಫೋಟೋ ಈಗ ಫುಲ್ ಕ್ಲಾರಿಟಿ ನೀಡುತ್ತಿದೆ.

ಬಾಲಿವುಡ್ ನೆಪೊಟಿಸಂ: ಕ್ವೀನ್ ಕಂಗನಾ ಸಪೋರ್ಟ್‌ಗೆ ನಿಂತ ಸೋನು..!

ಇನ್‌ಸ್ಟಾ ಪೋಸ್ಟ್‌:

 

ವರ್ಚುಯಲ್ ಮಾತುಕತೆಗೆ ರೆಡಿಯಾಗಿರುವೆ. ರಾಣಾ ದಗ್ಗುಬಾಟಿ ಮುಂದಿನ ಸರ್ಪ್ರೈಸಿಂಗ್ ಪ್ರಾಜೆಕ್ಟ್‌ ಬಗ್ಗೆ ಚರ್ಚೆ' ಎಂದು ಬರೆದುಕೊಂಡಿದ್ದಾರೆ. ಕಂಗನಾ ರಾಣಿ ಪಿಂಕ್ ಡ್ರೆಸ್‌ ಮತ್ತು ನ್ಯೂಡ್ ಮೇಕಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.  

ಸದ್ಯ ಮೇಘಾಲಯದಲ್ಲಿರುವ ಕಂಗನಾ ತಮ್ಮ ನಿವಾಸದೊಳಗೆ ಫೋಟೋ ಶೂಟ್‌ ಮಾಡಿಸಿದ್ದಾರೆ. ಕಂಗನಾ ಲುಕ್‌ ಮತ್ತು ಮನೆಯ ಇನ್‌ಟೀರಿಯರ್‌ ಎಲ್ಲರ ಕಣ್ಸೆಳೆದಿದೆ. 

ಲಾಕ್‌ಡೌನ್‌ ಸಡಿಲಿಕೆ ಹಾಗೂ ಸುಶಾಂತ್ ಸಿಂಗ್ ಸಾವಿನ ಬಗೆಗಿನ  ವಿವಾದ ಪೂರ್ಣಗೊಂಡ ನಂತರ ಅರವಿಂದ್ ಸ್ವಾಮಿ ನಿರ್ದೇಶನದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಬಯೋಪಿಕ್ 'ತಲೈವಿ' ಉಳಿದ ಭಾಗಗಳ ಚಿತ್ರೀಕರಣದಲ್ಲಿ ಪಾಲ್ಗೊಳಲಿದ್ದಾರೆ ಎನ್ನಲಾಗಿದೆ. ಕಂಗನಾ ಮೇಘಾಲಯದಲ್ಲಿರುವ ಕಾರಣ ಚಿತ್ರೀಕರಣದಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ. ಆದರೆ ಆಕೆಯ ಜಯಲಲಿತಾ ಲುಕ್‌ ಮಾತ್ರ ಮಿಶ್ರ ಅಭಿಪ್ರಾಯ ಪಡೆದುಕೊಂಡಿತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌
ಐಎಂಡಿಬಿ 2025 ಪಟ್ಟಿಯಲ್ಲಿ ದಾಖಲೆ: ಮೂವರು ಕನ್ನಡದ ತಾರೆಗಳಿಗೆ ಟಾಪ್‌ 10ರಲ್ಲಿ ಸ್ಥಾನ!