ಹೆಣ್ಣು ಮಕ್ಕಳೆ ಎತ್ತುಗಳು...ರೈತನ ಕುಟುಂಬಕ್ಕೆ ಸೋನು ಸೂದ್ 'ಟ್ರ್ಯಾಕ್ಟರ್'

Published : Jul 27, 2020, 02:54 PM ISTUpdated : Jul 27, 2020, 04:40 PM IST
ಹೆಣ್ಣು ಮಕ್ಕಳೆ ಎತ್ತುಗಳು...ರೈತನ ಕುಟುಂಬಕ್ಕೆ ಸೋನು ಸೂದ್ 'ಟ್ರ್ಯಾಕ್ಟರ್'

ಸಾರಾಂಶ

ಹೆಣ್ಣು ಮಕ್ಕಳೆ ಎತ್ತುಗಳು/ ಆಂಧ್ರದ ಕುಟುಂಬಕ್ಕೆ ಟ್ರ್ಯಾಕ್ಟರ್ ನೀಡಿದ ಸೋನು ಸೂದ್/ ಸೋನು ಕಾರ್ಯಕ್ಕೆ ಚಂದ್ರಬಾಬು ನಾಯ್ಡು ಮೆಚ್ಚುಗೆ/ ವೈರಲ್ ಆಗಿದ್ದ ವಿಡಿಯೋ

ಹೈದರಾಬಾದ್(ಜು. 27)  ಎತ್ತುಗಳಿಲ್ಲದೇ ರೈತನೊಬ್ಬ ಮಕ್ಕಳನ್ನೆ ಎತ್ತುಗಳನ್ನಾಗಿಸಿಕೊಂಡು ಹೊಲದಲ್ಲಿ ಉಳುಮೆ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು, ಈ ವಿಡಿಯೋ ನೋಡಿದ್ದ ನಟ ಸೋನು ಸೂದ್ ರೈತನಿಗೆ ಟ್ರ್ಯಾಕ್ಟರ್ ಗಿಫ್ಟ್ ನೀಡಿದ್ದಾರೆ.

"

ಆಂಧ್ರ ಪ್ರದೇಶದ ಚಿತ್ತೂರ್ ಜಿಲ್ಲೆಯ ಮದನಪಲ್ಲಿಯ ರೈತರಿಗೆ ಟ್ರ್ಯಾಕ್ಟರ್ ಕಳುಹಿಸಿಕೊಟ್ಟಿದ್ದಾರೆ. ಹೆಣ್ಣು ಮಕ್ಕಳು ಎತ್ತುಗಳಾಗಿ ಭೂಮಿ ಉಳುತ್ತಿದ್ದ ವಿಡಿಯೋವನ್ನು ಪತ್ರಕರ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ನಂತರ ವಿಡಿಯೋ ವಿಡಿಯೋ ವೈರಲ್ ಆಗಿತ್ತು. 

ವಿಡಿಯೋ ನೋಡಿದ ಸೋನು ಸೂದ್  ಎತ್ತುಗಳನ್ನು ಕೊಡಿಸುತ್ತೇನೆ ಎಂದು ಹೇಳಿದ್ದರು.  ನಂತರ ಎತ್ತುಗಳ ಬದಲಾಗಿ ಇದೀಗ ಟ್ರ್ಯಾಕ್ಟರ್ ನೀಡಿದ್ದಾರೆ.   ಹೆಣ್ಣು ಮಕ್ಕಳು ವಿದ್ಯಾಭ್ಯಾಸದ ಕಡೆ ಗಮನ ಹರಿಸಲಿ ಎಂದು ಹೇಳಿದ್ದಾರೆ.

ಸಂಕಷ್ಟದಲ್ಲಿದ್ದ ವಿದ್ಯಾರ್ಥಿಗಳ ತವರಿಗೆ ಕರೆತಂದ ಸೋನು ಸೂದ್

ಸೋನು ಸೂದ್ ಕಾರ್ಯವನ್ನು ಆಂಧ್ರಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಕೊಂಡಾಡಿದ್ದಾರೆ. ಚಂದ್ರಬಾಬು ನಾಯ್ಡು ಹೊಗಳಿಗೆ ಸೋನು ಅಭಿನಂದನೆ ಸಲ್ಲಿಸಿದ್ದಾರೆ.

ಚಿತ್ತೂರ್ ಜಿಲ್ಲೆಯ ರಾಜುವರಿಪಿಲ್ಲೆಯ ರೈತ ನಾಗೇಶ್ವರ ರಾವ್ ಕುಟುಂಬಕ್ಕೆ ಸೋನು ಸೂದ್ ಟ್ರ್ಯಾಕ್ಟರ್ ನೀಡಿದ್ದಾರೆ.  ನಾಗೇಶ್ವರ ರಾವ್ ಮಕ್ಕಳಾದ ವೆನೆಲ್ಲಾ ಮತ್ತು ಚಂದನಾ ಎತ್ತುಗಳ ರೀತಿ ನೇಗಿಲು ಎಳೆದಿದ್ದರೆ ತಂದ ತಾಯಿ ಬಿತ್ತನೆ ಕೆಲಸ ಮಾಡಿದ್ದರು.  

ಲಾಕ್ ಡೌನ್ ಕಾರಣಕ್ಕೆ ಸಮಸ್ಯೆಗೆ ಸಿಲುಕಿದ್ದ ಸಾವಿರಾರು ವಲಸೆ ಕಾರ್ಮಿಕರಿಗೆ ನೆರವು ನೀಡಿದ್ದ ಸೋನು ಸೂದ್ ಈಗ ಮತ್ತೊಂದು ಮಾದರಿ ಕೆಲಸ ಮಾಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಒಂದು ಫ್ಲಾಪ್‌ನೊಂದಿಗೆ, ಪವನ್ ಕಲ್ಯಾಣ್ ಮೇಲೆ ಭರವಸೆಯಿಟ್ಟು ಈ ವರ್ಷಕ್ಕೆ ವಿದಾಯ ಹೇಳಿದ ನಟಿ ಯಾರು?
Breaking News: ಇದು 2025ರ ಅತಿದೊಡ್ಡ ದಾಖಲೆ..1000 ಕೋಟಿ ಕ್ಲಬ್ ಸೇರಿದ ರಣವೀರ್ ಸಿಂಗ್ 'ಧುರಂಧರ್'..!