ಬಾಲಿವುಡ್‌ನ ಎವಗ್ರೀನ್ ನಟಿ ಎಂದೇ ಖ್ಯಾತಿ ಪಡೆದಿರುವ ರೇಖಾ 180 ಸಿನಿಮಾದಲ್ಲಿ ನಟಿಸಿದ್ದಾರೆ. ವೈಯುಕ್ತಿ ಜೀವನದಲ್ಲಿ ಹಲವು ಏರಿಳಿತ ಕಂಡಿರುವ ರೇಖಾ, ಮುಂಬೈನಲ್ಲಿ ಅತೀ ದೊಡ್ಡ ಅರಮನೆ ಹೊಂದಿದ್ದಾರೆ. ರೇಖಾ ವಾಸವಿರುವ ಮನೆ ಬಾಲಿವುಡ್ ದಿಗ್ಗಜರನ್ನೇ ಮೀರಿಸುತ್ತದೆ. ಬರೋಬ್ಬರಿ 100 ಕೋಟಿಗೂ ಅಧಿಕ ಮೌಲ್ಯದ ಈ ಮನೆ ಹೇಗಿದೆ ಗೊತ್ತಾ?
ಮುಂಬೈ(ಜೂನ್ 03) ನಟಿ ರೇಖಾ ಸಿನಿ ಕರಿಯರ್ ಹೊರಗಿಟ್ಟರೆ ಅರ್ಧ ಬಾಲಿವುಡ್ ಶೂನ್ಯವಾಗಲಿದೆ. 40 ವರ್ಷಗಳ ಸಿನಿಮಾ ಕರಿಯರ್‌ನಲ್ಲಿ ನಟಿ 180ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಬಾಲ ನಟಿಯಾಗಿ ಎಂಟ್ರಿಕೊಟ್ಟು ನಾಯಕಿಯಾಗಿ ಭಿನ್ನಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಈಗಿನ 1,000 ಕೋಟಿ, 1,500 ಕೋಟಿ ಬಜೆಟ್ ಚಿತ್ರಗಳ ಭರಾಟೆಗೂ ಮೊದಲೇ ಕಡಿಮೆ ಬಜೆಟ್‌ನಲ್ಲಿ ಸೂಪರ್ ಹಿಟ್ ಚಿತ್ರ ನೀಡಿದ ಹೆಗ್ಗಳಿಗೆ ನಟಿ ರೇಖಾಗಿದೆ. ನಟಿ ರೇಖಾ ಅಭಿನಯ, ಸೌಂದರ್ಯಕ್ಕೆ ಮಾರು ಹೋಗದವರಿಲ್ಲ. ಇದರ ಜೊತೆಗೆ ರೇಖಾ ಅರಮನೆ ನೋಡಿದರೆ ಒಂದು ಕ್ಷಣ ದಂಗಾಗುವುದು ಖಚಿತ. ಮುಂಬೈನಲ್ಲಿ ರೇಖಾ ಅತೀ ದೊಡ್ಡ ಬಂಗಲೆಯಲ್ಲಿ ವಾಸವಿದ್ದಾರೆ.
ಮುಂಬೈನ ಪ್ರತಿಷ್ಠಿತ ಬಾಂದ್ರಾದಲ್ಲಿ ರೇಖಾ ಅರಮನೆ ಇದೆ. ಬ್ಯಾಂಡ್‌ಸ್ಟಾಂಡ್ ಪಕ್ಕದಲ್ಲೇ ಇರುವ ಈ ಅರಮನೆಯ ಮೌಲ್ಯ 100 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಆದರೆ ತಜ್ಞರು ಹೇಳುವ ಪ್ರಕಾರ ಇದು 100 ಕೋಟಿಗೂ ಅಧಿಕ ಮೌಲ್ಯ ಹೊಂದಿದೆ ಎಂದಿದ್ದಾರೆ. ರೇಖಾ ಅರಮನೆ ಕೆಲ ದೂರದಲ್ಲಿ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಮನೆ ಇದೆ.
undefined
ಏಕಾಏಕಿ ತುಟಿ ಕಚ್ಚಿ ಚುಂಬಿಸಿಬಿಟ್ಟ; ವಿಶ್ವಜಿತ್ ಚುಂಬನಕ್ಕೆ ರೇಖಾ ಕೌಂಟರ್ ಹೇಗಿತ್ತು?
ಬಹುಮಹಡಿಗಳ ಈ ಅರಮನೆ ಅತ್ಯಂತ ಸುಂದರವಾಗಿದೆ. ಇಷ್ಟೇ ಅಲ್ಲ ವಿಶಾಲವಾದ ಜಾಗದಲ್ಲಿ ತಲೆ ಎತ್ತಿ ನಿಂತಿದೆ. ಅದ್ಬುತ ಡಿಸೈನ್, ಮುಂಭಾಗದಲ್ಲಿ ಹಸಿರು ಎಲೆಗಳ ಹೊದಿಗೆ, ದೊಡ್ಡ ಕೌಂಪೌಂಡ್, ವುಡನ್ ಪೈಂಟ್ ಗೇಟ್, ಮುಂಭಾಗದಲ್ಲಿ ಸಣ್ಣ ಗಾರ್ಡನ್ ಸೇರಿದಂತೆ ಎಲ್ಲವೂ ಅಚ್ಚುಕಟ್ಟಾಗಿದೆ.ಮನೆ ಸುತ್ತಲೂ ಬಿದಿರು ನೆಟ್ಟಿದ್ದಾರೆ. ಎತ್ತರಕ್ಕೆ ಈ ಬಿದಿರುಗಳು ಬೆಳೆದು ನಿಂತಿದೆ.
ಇನ್ನು ರೇಖಾ ಮನೆಯೊಳಗೆ ಅತ್ಯಂತ ದುಬಾರಿ ಹಾಗೂ ಐಷಾರಾಮಿ ವಸ್ತುಗಳಿವೆ. ಎಲ್ಲವೂ ಐಕಾನಿಕ್. ವಿಶಾಲವಾದ ಹಾಲ್, ಯೋಗ, ಧ್ಯಾನ ಕೇಂದ್ರ, ಜಿಮ್, ಸ್ವಿಮ್ಮಿಂಗ್‌ಪೂಲ್, ವಿಶ್ರಾಂತಿ ಕೊಠಡಿ ಸೇರಿದಂತೆ ಎಲ್ಲಾ ಐಷಾರಾಮಿತನವೂ ಈ ಮನೆಯಲ್ಲಿದೆ. ಇಷ್ಟು ದೊಡ್ಡ ಅರಮನೆಯಲ್ಲಿ ರೇಖಾ ಒಬ್ಬರೆ ಇದ್ದಾರೆ. ರೇಖಾ ಆಪ್ತರಿಗೆ ಮಾತ್ರ ಈ ಮನೆಗೆ ಎಂಟ್ರಿಗೆ ಅವಕಾಶವಿದೆ.
ರೇಖಾ ಮನೆ ಹೆಸರು
ರೇಖಾ ಅರಮನೆಗೆ ಬಸೆರಾ ಎಂದು ಹೆಸರಿಟ್ಟಿದ್ದಾರೆ. ಬಸೆರಾ ಎಂದರೆ ಪಕ್ಷಿಗಳು ಸುರಕ್ಷಿತವಾಗಿ ಮಲಗುವ ಅಥವಾ ವಿಶ್ರಾಂತಿ ಪಡೆದುಕೊಳ್ಳುವ ಸ್ಥಳ ಎಂದರ್ಥ. ಆದರೆ ಈ ಮನೆಯ ಹೆಸರು ಇಷ್ಟಕ್ಕೆ ಸೀಮಿತವಾಗಿಲ್ಲಿ. ಈ ಮನೆ ಹೆಸರಿಗೂ ಬಾಲಿವುಡ್ ಸಿನಿಮಾಗೂ ನಂಟಿದೆ. ಹೌದು, 1981ರಲ್ಲಿ ತೆರೆಕಂಡ ಬಾಲಿವುಡ್ ಚಿತ್ರ ಬಸೆರಾ ಭಾರಿ ಹಿಟ್ ಆಗಿತ್ತು. ಶಶಿ ಕಪೂರ್, ರೇಖಾ ಹಾಗೂ ರಾಖಿ ಗುಲ್ಜಾರ್ ಅಭಿನಯದ ಈ ಚಿತ್ರ ಹೊಸ ಇತಿಹಾಸ ಸೃಷ್ಟಿಸಿತ್ತು. ರೇಖಾ ಸಿನಿ ಕರಿಯರ್‌ನಲ್ಲಿ ಬಸೆರಾ ಚಿತ್ರ ಹೊಸ ಅಧ್ಯಾಯ ಬರೆದಿತ್ತು. ಈ ಚಿತ್ರದ ಅಭಿನಯಕ್ಕೆ ರೇಖಾ ಭಾರಿ ಮನ್ನಣೆ ದೊರಕಿತ್ತು. ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಆಗಿತ್ತು. 1998ರಲ್ಲಿಇದೇ ಬಸೆರಾ ಚಿತ್ರವನ್ನು ಕನ್ನಡದಲ್ಲಿ ಸುವ್ವಿ ಸುವ್ವಾಲಿ ಎಂದು ರಿಮೇಕ್ ಮಾಡಲಾಗಿತ್ತು. ರೇಖಾ ಸಿನಿ ಕರಿಯರ್‌ಗೆ ಹೊಸ ಆಯಾಮ ನೀಡಿದ ಬಸೆರಾ ಚಿತ್ರದ ಟೈಟಲ್‌ನ್ನೇ ತಮ್ಮ ಮನೆಗೆ ಇಟ್ಟಿದ್ದಾರೆ.
ರೇಖಾ ಹಣೆಯಲ್ಲಿರುವುದು ಅಮಿತಾಭ್ ಹೆಸರಿನ ಕುಂಕುಮ; ಮದುವೆ ಆಗದಿರಲು ಕಾರಣವೇನು?