ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಯಾವುದೇ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಕಾರಣವೇನು ಎಂದು ಅವರ ಹಲವು ಅಭಿಮಾನಿಗಳು ಕಾಯುತ್ತಿದ್ದಾರೆ. 2018 ರಲ್ಲಿ ಅಮೆರಿಕಾದ ಪಾಪ್ ಸಿಂಗರ್ ನಿಕ್ ಜೊನಾಸ್ ಅವರನ್ನು ಮದುವೆಯಾದ ಬಳಿಕ ನಟಿ ಪ್ರಿಯಾಂಕಾ..
ಬಾಲಿವುಡ್‌ನಲ್ಲಿ ಮೆರೆದು ಹಾಲಿವುಡ್‌ಗೆ ಹಾರಿರುವ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಆಗಾಗ ಸಂದರ್ಶನಗಳಲ್ಲಿ ಇಂಟರೆಸ್ಟಿಂಗ್ ಸಂಗತಿಗಳನ್ನು ಶೇರ್ ಮಾಡಿಕೊಳ್ಳುತ್ತ ಇರುತ್ತಾರೆ. ವೀಡಿಯೋ ಒಂದರಲ್ಲಿ ನಟಿ ಪ್ರಿಯಾಂಕಾ ಚೋಪ್ರಾ 'ಹೊಸ ಹೊಸ ವರ್ಷಕ್ಕೆ ಬೇರೆ ಬೇರೆ ರೆಸಲ್ಯೂಷನ್ ತಗೋತಾರಲ್ಲ, ನಾನು ಹಾಗಲ್ಲ' ಎಂದಿದ್ದಾರೆ. ನಾನು ಏನು ಬೇಕಾದ್ರೂ ಮಾಡೋದಕ್ಕೆ ರೆಡಿ, ಆದ್ರೆ ಅಡುಗೆ ಮಾತ್ರ ಮಾಡೋಕೆ ಆಗಲ್ಲ. ನಾನು ಚೆನ್ನಾಗಿ ಪಾತ್ರೆ ತೊಳೆಯಬಲ್ಲೆ, ಬಟ್ಟೆ ವಾಶ್ ಮಾಡಬಲ್ಲೆ. ತುಂಬಾ ಚೆನ್ನಾಗಿ ಶಾಪಿಂಗ್ ಹಾಗೂ ವಸ್ತುಗಳ ಆರ್ಡರ್ ಮಾಡಬಲ್ಲೆ ಎಂದಿದ್ದಾರೆ.
ಆದರೆ, ನಂಗೆ ಆಸ್ಪತ್ರೆ ವಾಸನೆ ಆಗಿಬರಲ್ಲ. ನಾನು ಹಾಸ್ಪಟಲ್‌ಗೆ ಹೋಗಲು ಇಷ್ಟಪಡುವುದಿಲ್ಲ. ಚಿಕ್ಕಂದಿನಿಂದಲೂ ಅಷ್ಟೇ, ನಾನು ಆಸ್ಪತ್ರೆಯಿಂದ ಬಹಳಷ್ಟು ದೂರ ಇದೀನಿ' ಎಂದಿದ್ದಾರೆ ನಟಿ ಪ್ರಿಯಾಂಕಾ. ನನ್ನ ಮದುವೆ ಮಾಡಲು ಯೋಚಿಸುತ್ತಿದ್ದ ವೇಳೆಯಲ್ಲಿ ನನ್ನ ಅಮ್ಮನಿಗೆ, ನಾನು ಅಡುಗೆ ಮಾಡಲು ಕಲಿತಿಲ್ಲ ಎಂಬುದೇ ಬಹಳಷ್ಟು ಚಿಂತೆಗೆ ಕಾರಣವಾಗಿತ್ತು. ಆದರೆ, ನನ್ನ ಅಪ್ಪ ಹಾಗಲ್ಲ, ನನಗೇ ಸಪೋರ್ಟ್ ಮಾಡುತ್ತ 'ನನ್ನ ಮಗಳು ಅಡುಗೆ ಮಾಡಬೇಕಿಲ್ಲ. ಅವಳು ಮದುವೆಯಾಗಿ ಹೋಗುವಾಗ ನಾನು ಅವಳ ಜತೆಯಲ್ಲೇ ಒಳ್ಳೆಯ ಕುಕ್ ಕಳುಹಿಸಿಕೊಡುತ್ತೇನೆ ಎಂದಿದ್ದರು. ಹಾಗೇ ಮಾಡಿದ್ದಾರೆ ಕೂಡ' ಎಂದಿದ್ದಾರೆ ಪ್ರಿಯಾಂಕಾ ಚೋಪ್ರಾ.
ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಯಾವುದೇ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಕಾರಣವೇನು ಎಂದು ಅವರ ಹಲವು ಅಭಿಮಾನಿಗಳು ಕಾಯುತ್ತಿದ್ದಾರೆ. 2018 ರಲ್ಲಿ ಅಮೆರಿಕಾದ ಪಾಪ್ ಸಿಂಗರ್ ನಿಕ್ ಜೊನಾಸ್ ಅವರನ್ನು ಮದುವೆಯಾದ ಬಳಿಕ ನಟಿ ಪ್ರಿಯಾಂಕಾ ಚೋಪ್ರಾ ಹಿಂದಿಯ, ಅಂದರೆ ಭಾರತದ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಆದರೆ, ಇತ್ತೀಚೆಗೆ ಹಾಲಿವುಡ್ ಸಿನಿಮಾ (Hollywood Movies) ಹಾಗೂ ವೆಬ್ ಸಿರೀಸ್‌ನಲ್ಲಿ ನಟಿಸುತ್ತಿದ್ದಾರೆ. ಅವರಿಗೆ ಬಾಲಿವುಡ್ ಅಥವಾ ತೆಲುಗು ಚಿತ್ರರಂಗಗಳಿಂದ ಆಫರ್ ಇದೆ ಎನ್ನಲಾಗುತ್ತಿದೆ.
ಹಾಗಿದ್ದರೆ, ನಟಿ ಪ್ರಿಯಾಂಕಾ ಚೋಪ್ರಾ ಭಾರತೀಯ ಸಿನಿಮಾಗಳನ್ನು ಯಾಕೆ ಕಡೆಗಣಿಸುತ್ತಿದ್ದಾರೆ? ಈ ಬಗ್ಗೆ ಪ್ರಿಯಾಂಕಾ ಚೋಫ್ರಾಗೆ ಒಬ್ಬರು ಪ್ರಶ್ನೆ ಕೇಳಲಾಗಿ ಅವರು ಉತ್ತರಿಸಿದ್ದಾರೆ. 'ನನಗೆ ಈಗಲೂ ಬಾಲಿವುಡ್ ಕಡೆಯಿಂದ ಆಫರ್‌ಗಳು ಬರುತ್ತಿರುವುದು ನಿಜ. ಟಾಲಿವುಡ್ ಕಡೆಯಿಂದ ಕೂಡ ಒಂದೆರಡು ಆಫರ್‌ಗಳು ಬಂದಿವೆ. ನನಗೂ ಸಹಜವಾಗಿಯೇ ನನ್ನ ತವರು ನೆಲ ಭಾರತದ ಸಿನಿಮಾಗಳಲ್ಲಿ ನಟಿಸಬೇಕೆಂಬ ಆಸೆಯಿದೆ. ಆದರೆ, ಶೂಟಿಂಗ್‌ಗೆಂದು ಅಮೆರಿಕಾ ಬಿಟ್ಟು ನಾನು ತುಂಬಾ ದಿನಗಳು ಇರಲು ಸಾಧ್ಯವಿಲ್ಲ.
ಏಕೆಂದರೆ, ನಿಕ್ ಜೊನಾಸ್ ಯಾವತ್ತು ಅಮೆರಿಕಾದಲ್ಲಿಯೇ ಇರಬೇಕಾಗುತ್ತದೆ, ನನ್ನ ಜೊತೆ ಭಾರತದಲ್ಲಿ ಅಷ್ಟೊಂದು ದಿನಗಳ ಕಾಲ ಬಂದಿರಲು ಸಾಧ್ಯವಿಲ್ಲ. ಏಕೆಂದರೆ, ಅವರೊಬ್ಬರು ಪಾಪ್ ಸಿಂಗರ್. ನಾನು ಅವರನ್ನು ತುಂಬಾ ದಿನ ಬಿಟ್ಟಿರಲು ಇಷ್ಟಪಡುವುದಿಲ್ಲ. ನಮ್ಮಿಬ್ಬರದು ಲವ್ ಮ್ಯಾರೇಜ್ ಎಂದು ಎಲ್ಲರಿಗೂ ಗೊತ್ತು. ಮದುವೆಯಾಗಿದ್ದು ಬಿಟ್ಟಿರಲು ಅಲ್ಲ ತಾನೆ? ಹೀಗಾಗಿ ನಾನು ಬಾಲಿವುಡ್ ಕಡೆಯಿಂದ ಬಂದ ಎಲ್ಲ ಆಫರ್‌ಗಳನ್ನೂ ರಿಜೆಕ್ಟ್ ಮಾಡಬೇಕಾಯ್ತು.
ನಾನು ನೆಪೋಟಿಸಂ ಬಗ್ಗೆ ಮಾತನಾಡಿದ್ದೇನೆ. ಬಾಲಿವುಡ್‌ನಲ್ಲಿ ಸ್ಟಾರ್ ಕಿಡ್‌ಗಳಿಗೇ ಹೆಚ್ಚು ಮಣೆ ಹಾಕುವ ಸಂಪ್ರದಾಯದ ಬಗ್ಗೆಯೂ ನನಗೆ ಕೋಪವಿದೆ. ಆದರೆ, ನಾನು ನಟಿಸದಿರಲು ಅದು ಕಾರಣವಲ್ಲ. ನಿಜವಾದ ಕಾರಣ ನಾನು ಈ ಮೊದಲು ಹೇಳಿದ್ದು. ನನಗೆ ನಿಕ್ ಬಿಟ್ಟಿರಲು ಇಷ್ಟವಿಲ್ಲ, ಕರೆದುಕೊಂಡು ಬರಲು ಸಾಧ್ಯವಿಲ್ಲ. ಜತೆಗೆ, ನನಗೆ ಈಗ ನಟನೆಗೆ ಅವಕಾಶ ಹಾಲಿವುಡ್ ಚಿತ್ರರಂಗದಲ್ಲಿ ಹೇರಳವಾಗಿದೆ. ಕಲಾವಿದರಿಗೆ, ಕೆಲಸ ಮಾಡುವವರಿಗೆ ಯಾವ ಭಾಷೆ, ಯಾವ ದೇಶವಾದರೇನು?