ನಿದ್ದೆಗೆಡಿಸೋ ಹಾಟ್‌ ಲುಕ್‌; ಕೆಟ್ಟ ಕಾಮೆಂಟ್‌ ಮಾಡಿದ ನೆಟ್ಟಿಗನಿಗೆ ಚಳಿ ಬಿಡಿಸಿದ ನಟಿ!

Suvarna News   | Asianet News
Published : Apr 24, 2020, 03:14 PM ISTUpdated : Apr 24, 2020, 04:43 PM IST
ನಿದ್ದೆಗೆಡಿಸೋ ಹಾಟ್‌ ಲುಕ್‌; ಕೆಟ್ಟ ಕಾಮೆಂಟ್‌ ಮಾಡಿದ ನೆಟ್ಟಿಗನಿಗೆ ಚಳಿ ಬಿಡಿಸಿದ ನಟಿ!

ಸಾರಾಂಶ

ಬಾಲಿವುಡ್‌ ಬೋಲ್ಡ್‌ ನಟಿಯ ಹಾಟ್‌ ಫೋಟೋಗೆ ಕಾಮೆಂಟ್‌ ಮಾಡಿದ ನೆಟ್ಟಿಗನಿಗೆ ಚಳಿ ಬಿಡಿಸಿದ ಸುಂದರಿ. ಇನ್ಮುಂದೆ ಟ್ರೋಲ್‌ಗೆ ಡೋಂಟ್‌ ಕೇರ್‌.....

34 ವರ್ಷದ ಮಾಜಿ ಮಿಸ್‌ ಇಂಡಿಯಾ ಇಶಾ ಗುಪ್ತಾ ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದ ಮನೆಯಲ್ಲಿ ಕಾಲ ಕಳೆಯುತ್ತಿದ್ದು ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಏನೇ ಮಾಡಿದರೂ ಡಿಫರೆಂಟ್‌ ಎಂದು ಹೇಳುವ ಇಶಾ ಅವರ  ಪ್ರತಿಯೊಂದು ಫೋಟೋ ವಿಭಿನ್ನವಾಗಿರುತ್ತದೆ.

ಇತ್ತೀಚಿಗೆ ಇನ್‌ಸ್ಟಾಗ್ರಾಂನಲ್ಲಿ ಇಶಾ ಗುಪ್ತಾ ಕ್ಲೋಸಪ್‌ ಫೋಟೋ ಅಪ್ಲೋಡ್‌ ಮಾಡಿದ್ದು ಅದಕ್ಕೆ ಬಂದ ನೆಟಿಗನ್ನೊಬ್ಬನ ಕಾಮೆಂಟ್‌ಗೆ ಕೆಂಡಾಮಂಡಲವಾಗಿದ್ದಾರೆ. ಹೌದು! ಇಶಾ ಕ್ಲೋಸಪ್‌ ಲುಕ್‌ನಲ್ಲಿ ಮುಖದ ಫೀಚರ್ಸ್‌ಗಳು ಸ್ಪಷ್ಟವಾಗಿ ಕಾಣಿಸುತ್ತದೆ, ಅದರಲ್ಲಿ ಯಾವ ಅಶ್ಲೀಲತೆಯೂ ಇರಲಿಲ್ಲ ಆದರೂ ಆ ಒಂದು ಕಾಮೆಂಟ್ ಬಗ್ಗೆ  ಇಶಾ ಫುಲ್ ಗರಂ ಆಗಿದ್ದಾರೆ . 

ಚಿತ್ರಗಳು: ಬೋಲ್ಡ್ ಅವತಾರದಲ್ಲಿ ಇಶಾ ಗುಪ್ತಾ, ಇದು ಪಡ್ಡೆ ಹುಡುಗರ ನಿದ್ದೆಗೆಡಿಸೋ ಅವತಾರ

ನೆಟ್ಟಿಗ ಮಾಡಿದ ಕಾಮೆಂಟ್‌ ಇನ್‌ಸ್ಟಾಗ್ರಾಂ ಪೋಸ್ಟಿಂದ  ಮಾಯವಾಗಿದೆ ಈ ವಿಚಾರ ವೈರಲ್‌ ಆಗುತ್ತಿದ್ದಂತೆ ಆತನೇ ಕಾಮೆಂಟ್‌ ಡಿಲೀಟ್‌ ಮಾಡಿದ್ದಾನೆ ಎನ್ನಲಾಗಿದೆ. ಆದರೆ ಕಾಮೆಂಟ್‌ ಫೋಟೋ ಎಲ್ಲೆಡೆ ವೈರಲ್‌ ಆಗುತ್ತಿದೆ. ಕ್ಲೋಸಪ್‌ ಫೋಟೋಗೆ ಇಶಾ 'Looking at you looking at me' ಎಂದು ಬರೆದುಕೊಂಡಿದ್ದಾರೆ. 

 

ಟ್ರೋಲ್‌ ಮಾಡುವವರಿಗೆ 'I don't care' ಎಂದು ಇಶಾ ಇನ್ನೂ ಹೆಚ್ಚಾಗಿ ಬಿಕಿನಿ ಹಾಗೂ ಬೋಲ್ಡ್‌ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಮಿತಾಭ್ 14 ಚಿತ್ರಗಳ ರೀಮೇಕ್ ಮಾಡಿ, 33 ವರ್ಷಗಳ ಬಳಿಕ ಅಮಿತಾಭ್ ಜೊತೆ ನಟಿಸಿದ ನಟ ರಜನಿಕಾಂತ್!
Sonali Bendre: 'ಅಡುಗೆಮನೆಗೆ ಹೋಗ್ಬೇಡ ನೀನು'.. ಅಂತ ಖಡಕ್ ಆಗಿ ಹೇಳಿದ್ರು ನನ್ ಅತ್ತೆ!