
ಬಾಲಿವುಡ್ ಚಿತ್ರರಂಗ ಒಂದಾದ ಮೇಲೊಂದು ಆಘಾತಕಾರಿ ಸುದ್ದಿಗಳನ್ನು ಕೇಳುತ್ತಲೇ ಇದೆ. ನೆಚ್ಚಿನ ನಟ, ನಿರ್ದೇಶಕರನ್ನು ಕಳೆದುಕೊಂಡು ಶೋಕದಲ್ಲಿದೆ. ಇಂಥ ಸಮಯದಲ್ಲಿ ಮತ್ತೊಬ್ಬ ಖ್ಯಾತ ನಿರ್ದೇಶಕನನ್ನು ಕಳೆದುಕೊಂಡಿದೆ.
ಬಾಲಿವುಡ್‌ನ ಖ್ಯಾತ ನಿರ್ದೇಶಕ ರಜತ್ ಮುಖರ್ಜಿ ಇನ್ನಿಲ್ಲ!
ಚಿತ್ರರಂಗಕ್ಕೆ 'ದೃಶ್ಯಂ' ಎಂಬ ಅದ್ಭುತ ಚಿತ್ರವನ್ನು ಕೊಡುಗೆಯಾಗಿ ನೀಡಿದ ನಿಶಿಕಾಂತ್ ಕಾಮತ್ ಕೆಲವು ತಿಂಗಳಿನಿಂದ ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದರು. ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಜುಲೈ 31ರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ವಿಫಲವಾದ ಕಾರಣ ಕೊನಯುಸಿರೆಳೆದಿದ್ದಾರೆ.
ನಿಶಿಕಾಂತ್ ಇನ್ನಿಲ್ಲ ಎಂಬ ವಿಚಾರವನ್ನು ನಟ ರಿತೇಶ್ ದೇಶಮುಖ್ ಬಹಿರಂಗ ಪಡಿಸಿದ್ದಾರೆ. 'ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಗೆಳೆಯ. ಆತ್ಮಕ್ಕೆ ಶಾಂತಿ ಸಿಗಲಿ,' ಎಂದು ಟ್ಟೀಟ್ ಮಾಡಿದ್ದರು.
ಸ್ಯಾಂಡಲ್‌ವುಡ್ ಹಿರಿಯ ನಟ ಹುಲಿವನ್ ಗಂಗಾಧರ್ ಇನ್ನಿಲ್ಲ!
2005ರಲ್ಲಿ 'ಡೊಂಬಿವಾಲಿ ಫಾಸ್ಟ್' ಚಿತ್ರದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟ ನಿಶಿಕಾಂತ್ ಕಾಮತ್ ಮರಾಠಿ ಭಾಷೆಯಲ್ಲಿ ದೊಡ್ಡ ಮಟ್ಟಕ್ಕೆ ಯಶಸ್ಸನ್ನು ಕಂಡ ನಂತರ ಹಿಂದಿ ಚಿತ್ರಗಳನ್ನು ನಿರ್ದೇಶನ ಮಾಡಲು ಪ್ರಾರಂಭಿಸಿದ್ದರು. ಹಿಂದಿಯಲ್ಲಿ ನಿರ್ದೇಶನ ಮಾಡಿದ ಮೊದಲ ಸಿನಿಮಾ 'Hava Aney Dey'.'ರಾಕಿ ಹ್ಯಾಂಡ್‌ಸಂ' ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಕುಟುಂಬಸ್ಥರನ್ನು ಹಾಗೂ ಚಿತ್ರರಂಗದ ಆಪ್ತರನ್ನು ಅಗಲಿದ ನಿಶಿಕಾಂತ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಿನಿಮಾ ಗಣ್ಯರು ಕಂಬನಿ ಮಿಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.