Bigg Boss ವೇದಿಕೆಯಲ್ಲಿ ಡಿಪ್ಪಿ ನಮಸ್ಕಾರ ಫುಲ್ ಟ್ರೋಲ್!

Suvarna News   | Asianet News
Published : Jan 13, 2020, 12:07 PM IST
Bigg Boss ವೇದಿಕೆಯಲ್ಲಿ ಡಿಪ್ಪಿ ನಮಸ್ಕಾರ  ಫುಲ್ ಟ್ರೋಲ್!

ಸಾರಾಂಶ

'ಚಪಕ್' ಪ್ರಮೋಷನ್‌ಗೆಂದು ಬಿಗ್‌ ಬಾಸ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡ ದೀಪಿಕಾ ಪಡುಕೋಣೆ, ಸಲ್ಲು ಬಾಯ್‌ಗೆ ನಮಸ್ಕರಿಸಿ ಸ್ವಾಗತಿಸಿದ್ದಾರೆ. ಇಷ್ಟೇ ಆಗಿದ್ದರೆ ಏನೂ ಆಗುತ್ತಿರಲಿಲ್ಲ. ಈಗಾಗಲೇ ಜೆಎನ್‌ಯು ಪ್ರತಿಭಟನೆಯಲ್ಲಿ ಕಾಣಿಸಿಕೊಂಡು ಕೇಸರಿ ಪಡೆಯ ಕೆಂಗಣ್ಣಿಗೆ ಗುರಿಯಾಗಿರುವ ಡಿಪ್ಪಿ ಈ ನಡೆಯಿಂದಲೂ ಟ್ರೋಲ್ ಆಗುತ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನು?

ಬಿಗ್‌‌ಬಾಸ್‌ ಸೀಸನ್‌ 13 ಎಪಿಸೋಡ್‌ 30ರಲ್ಲಿ ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ 'ಚಪಕ್‌' ಚಿತ್ರದ ಪ್ರಮೋಷನ್‌ಗಾಗಿ 'ವೀಕೆಂಡ್‌ ಕ ವಾರ್‌' ಕಾರ್ಯಕ್ರಮದಲ್ಲಿ ಆ್ಯಸಿಡ್ ಸಂತ್ರಸ್ತೆ ಲಕ್ಷ್ಮಿ ಅಗರ್ವಾಲ್ ಮತ್ತು ನಟ ವಿಕ್ರಂತ್ ಜೊತೆ ಪಾಲ್ಗೊಂಡಿದ್ದರು. 

ವೇದಿಕೆ ಮೇಲೆ ಚಿತ್ರ ತಂಡದವರನ್ನು ಬರ ಮಾಡಿಕೊಂಡ ಸಲ್ಮಾನ್ ಖಾನ್‌ರನ್ನು ನೋಡಿ ದೀಪಿಕಾ ಕೈ ಮುಗಿದು, ಶಿರ ಭಾಗಿಸಿ ನಮಸ್ಕರಿಸುತ್ತಾರೆ. ತಕ್ಷಣವೇ ಸಲ್ಲು 'ನೀವು ಯಾವಾಗ ಅಮಿತಾಭ್ ಬಚ್ಚನ್ ಆದ್ರೀ?' ಎಂದು ಕಾಲೆಳೆದೆದಿದ್ದಾರೆ. 'ಸಾರಾ ಅಲಿ ಖಾನ್‌ ನೋಡಿ ನಮಸ್ಕರಿಸುವುದ ಕಲಿತುಕೊಂಡೆ. ಆಕೆ ಆ ರೀತೆ ಹೆಚ್ಚು ನಮಸ್ಕರಿಸುತ್ತಾರೆ,' ಎಂದು  ದೀಪಿಕಾ ಉತ್ತರಿಸಿ 'ಐ ಲವ್ ಯೂ ಸಾರಾ' ಎಂದಿದ್ದಾರೆ. 

ಮಗು ಮಾಡಿಕೊಳ್ಳುವಾಗ ನಿಮ್ಮನ್ನೇ ಕೇಳ್ತೇನೆ; ಯಾರಿಗೆ ಹಿಂಗಂದ್ರು ನಟಿ?

ಕ್ರಿಕೆಟಿಗ ಮನ್ಸೂರ್ ಆಲಿ ಖಾನ್ ಹಾಗೂ ಶರ್ಮಿಳಾ ಠಾಗೋರ್ ಪುತ್ರ ಸೈಫ್ ಆಲಿ ಖಾನ್ ಮೊದಲ ಪತ್ನಿ ಅಮೃತಾ ಸಿಂಗ್ ಮಗಳು ಸಾರಾ ಆಲಿ ಖಾನ್. 'ನಮಸ್ಕಾರ ಮಾಡುವುದನ್ನು ಒಬ್ಬ ಮುಸ್ಲಿಮ್‌ನಿಂದ ನೀವು ಕಲಿತು ಕೊಳ್ಳಬೇಕಾ, ಹಿಂದೂವಾಗಿ ನಿಮಗೆ ಗೊತ್ತಿಲ್ವಾ?' ಎಂದು ಕೇಸರಿ ಸಂಘಟನೆಗಳ ಸೋಷಿಯಲ್ ಮೀಡಿಯಾ ಪೇಜಿನಲ್ಲಿ ಇದೀಗ ದೀಪಿಕಾರನ್ನು ಟ್ರಾಲ್ ಮಾಡಲಾಗುತ್ತಿದೆ.

ಮೊದಲೇ ಹಿಂದು ಪರ ಸಂಘಟನೆಗಳು ದೀಪಿಕಾ ಮೇಲೆ ಕಣ್ಣಿಟ್ಟಿವೆ. ಅಷ್ಟೇ ಅಲ್ಲದೇ ಜೆಎನ್‌ಯು ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ದೀಪಿಕಾಗೆ ಈಗಾಗಲೇ ವಿರೋಧ ವ್ಯಕ್ತವಾಗಿದೆ. ಹಿಂದು ಪರ ಸಂಘಟನೆಗಳು 'ಚಪಕ್' ಚಿತ್ರ ನಿಷೇಧಿಸಬೇಕೆಂದು ಆಗ್ರಹಿಸಿ, ಸೋಷಿಯಲ್ ಮೀಡಿಯಾದಲ್ಲಿ ಕ್ಯಾಂಪೇನ್ ಮಾಡಿವೆ. ಅಷ್ಟೇ ಅಲ್ಲ, ಆ್ಯಸಿಡ್ ಸಂತ್ರಸ್ತರ ಕಥೆಯುಳ್ಳ ಈ ಚಿತ್ರದಲ್ಲಿ ದುಷ್ಕೃತ್ಯವೆಸಗಿದ ಮೂಲ ದೋಷಿ ಒಬ್ಬ ಮುಸ್ಲಿಂ. ಆದರೆ, ಹಿಂದೂ ಹೆಸರು ಬಳಸಿ, ಒಂದು ಧರ್ಮಕ್ಕೇ ಚಿತ್ರ ತಂಡ ಮೋಸ ಮಾಡಿದೆ ಎಂಬ ಸುಳ್ಳು ಸುದ್ದಿಯನ್ನೂ ಹರಡಿತ್ತು. ಇಷ್ಟೆಲ್ಲಾ ಆದರೂ ಚಪಕ್ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ ಎಂಬುವುದು ಸುಳ್ಳಲ್ಲ. 

ಬಿಜೆಪಿ ಹಾಗೂ ಮಿತ್ರ ಸಂಘಟನೆಗಳು ಚಪಕ್ ವಿರುದ್ಧ ಅಭಿಯಾನ ಕೈಗೊಂಡರೆ, ಪ್ರತಿಪಕ್ಷಗಳು ಈ ಚಿತ್ರದ ಪ್ರಚಾರ ಕಾರ್ಯಕ್ಕೆ ಮುಂದಾಗಿದೆ. ಕರ್ನಾಟಕದಲ್ಲಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಇಡೀ ಚಿತ್ರ ಮಂದಿರವನ್ನೇ ಬುಕ್ ಮಾಡಿ, ಆ್ಯಸಿಡ್ ಸಂತ್ರಸ್ತರ ಪರ ಕಾಂಗ್ರೆಸ್ ಇದೆ ಎಂದು ಹೇಳಿ, ಟ್ವೀಟ್ ಮಾಡಿದ್ದರು. 

ಚಪಕ್‌ ಚಿತ್ರಕ್ಕೆ ಬೆಂಬಲ: ಚಿತ್ರಮಂದಿರದ ಎಲ್ಲ ಟಿಕೆಟ್ ಬುಕ್ ಮಾಡಿದ 'ಕೈ' ಶಾಸಕ

ಪ್ರಚಾರದ ವೇಳೆ ಲಕ್ಷ್ಮಿ ಮತ್ತು ಸಲ್ಮಾನ್ ಖಾನ್‌ಗೆ ಬಿಗ್ ಬಾಸ್‌ ಕುಕಿಂಗ್ ಟಾಸ್ಕ್‌ ನೀಡಿದ್ದಾರೆ. ನೀಡಲಾಗಿದ್ದ ಹಣ್ಣುಗಳನ್ನು ಸುಂದರವಾಗಿ ಕಟ್‌ ಮಾಡಿ ತಮ್ಮ ಪ್ರೊಫೆಷನಲ್‌ ಕುಕ್ಕಿಂಗ್ ಸ್ಕಿಲ್ ತೋರಿಸಿ, ವೀಕ್ಷಕರನ್ನು ಇಂಪ್ರೆಸ್‌ ಮಾಡಿದ್ದಾರೆ. 

ಇನ್ನು ಬಾಲಿವುಡ್‌ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿರುವ ಚಪಕ್ ಚಿತ್ರ ಒಂದೇ ದಿನದಲ್ಲಿ 11.67 ಕೋಟಿ ಕಲೆಕ್ಷನ್ ಮಾಡಿದೆ. ದೀಪಿಕಾ ಪಡುಕೋಣೆ ನಿರ್ಮಾಣದ ಮೊದಲ ಚಿತ್ರ ಇದಾಗಿದ್ದು ಪ್ರಮೋಷನ್‌ಗೆ ಟಿಕ್‌ಟಾಕ್‌ಗೆ ಸೇರಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಒಂದೇ ದಿನದಲ್ಲಿ 3 ಮಿಲಿಯನ್‌ ಫಾಲೋವರ್ಸ್‌ ಪಡೆದುಕೊಂಡಿದ್ದಾರೆ.

ಪಟೌಡಿ-ಖಾನ್ ಕುಟುಂಬದ ಕುಡಿ ಯಾಕಿಂಗೆ? ಗ್ಲಾಮರ್ ಗೊಂಬೆ ಸಾರಾ ನೋಡಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!