ಅಲ್ಲು ಅರ್ಜುನ್‌ ಹೇರ್‌ ವಿಗ್‌ ಹಾಕಿ ಕೊಳ್ಳೋ ಗತಿ ಬಂತಾ? ಶ್ರೀ ರೆಡ್ಡಿ ಯಾಕ್ಹಿಂಗ್ ಹೇಳಿದ್ರು!

Suvarna News   | Asianet News
Published : Jan 11, 2020, 12:40 PM IST
ಅಲ್ಲು ಅರ್ಜುನ್‌ ಹೇರ್‌ ವಿಗ್‌ ಹಾಕಿ ಕೊಳ್ಳೋ ಗತಿ ಬಂತಾ? ಶ್ರೀ ರೆಡ್ಡಿ ಯಾಕ್ಹಿಂಗ್ ಹೇಳಿದ್ರು!

ಸಾರಾಂಶ

ಅಲ್ಲು ಅರ್ಜುನ್ - ಶ್ರೀ ರೆಡ್ಡಿ ನಡುವೆ ಮತ್ತೊಂದು  cold war ಶುರುವಾಗಿದೆ.  ಸ್ಟೈಲಿಶ್‌ ನಟನ ಫ್ಯಾಷನ್‌ ಬಗ್ಗೆ ಕಾಮೆಂಟ್‌ ಮಾಡಿದ ಶ್ರೀ ರೆಡ್ಡಿಗೆ ಫ್ಯಾನ್ಸ್‌ ತಗೊಂಡ್ರು ಫುಲ್ ಕ್ಲಾಸ್....  

ಟಾಲಿವುಡ್‌ ಸ್ಟೈಲಿಶ್ ನಟ ಅಲ್ಲ ಅರ್ಜುನ್ ಎಕ್ಸ್ ಪೆರಿಮೆಂಟ್ ಮಾಡವುದರಲ್ಲಿ ಎತ್ತಿದ ಕೈ. ಒಂದು ಸಿನಿಮಾದಲ್ಲಿ ಡ್ಯಾನ್ಸ್‌ನಿಂದ ಜನರ ಪ್ರೀತಿ ಗೆದ್ದರೆ ಮತ್ತೊಂದು ಚಿತ್ರದಲ್ಲಿ ಅವರ ಲವ್ಲಿ ಡೈಲಾಗ್‌ಗೆ ಹುಡುಗಿಯರು ಫುಲ್ ಫಿದಾ ಆಗುತ್ತಾರೆ. ಅಷ್ಟೇ ಯಾಕೆ, ನೀವು ಗಮನಿಸಿದರೆ ಅವರ ಪ್ರತಿಯೊಂದೂ ಚಿತ್ರದಲ್ಲಿಯೂ ವಿಭಿನ್ನ ಹೇರ್‌ ಸ್ಟೈಲ್‌ನಲ್ಲಿಯೇ ಕಾಣಿಸಿಕೊಳ್ಳುತ್ತಾರೆ. 

ಅಬ್ಬಬ್ಬಾ! ಇದು ರೀಲಾ, ರಿಯಲ್ಲಾ? ಅರ್ಜುನ್‌-ಸ್ನೇಹ ಲವ್‌ ಸ್ಟೋರಿ ಕೇಳಿದ್ದೀರಾ?

ಇನ್ನು 'ಅಲಾ ವೈಕುಂಠಪುರಂಲ್ಲೊ' ಚಿತ್ರದಲ್ಲಿ ಪೂಜಾ ಹೆಗ್ಡೆಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ಅಲ್ಲು ಅರ್ಜುನ್ ಹೇರ್‌ ಸ್ಟೈಲ್ ಸಿಕ್ಕಾಪಟ್ಟೆ ಡಿಫರೆಂಟ್‌ ಆಗಿದೆ. ಇದನ್ನು ಗಮನಿಸಿದ ಕಾಂಟ್ರೋವರ್ಸಿ ನಟಿ ಶ್ರೀ ರೆಡ್ಡಿ ಕಾಮೆಂಟ್ ಮಾಡಿದ್ದಾರೆ. 

ಅಲ್ಲು ಅರ್ಜುನ್ ಫಾಲ್ಕನ್ ವ್ಯಾನ್; ಹೇಗಿದೆ 7 ಕೋಟಿ ರೂಪಾಯಿ ವಾಹನ?

'ಅರ್ಜುನ್ ನಿಮ್ಮ ಚಿತ್ರಗಳಲ್ಲಿ ವಿಭಿನ್ನ ಹೇರ್‌ ಸ್ಟೈಲ್ ಮಾಡ್ತೀಯಾ. ಇದು ನಿನ್ನ ನಿಜವಾದ ಕೂದಲಾ ಅಥವಾ ಹೇರ್‌ ಎಕ್ಸ್‌ಟೆನ್ಷನ್ ಬಳಸುತ್ತೀಯಾ?' ಎಂದು ಕೇಳಿದ್ದಾರೆ.  ಶ್ರೀ ರೆಡ್ಡಿ ಕಾಮೆಂಟ್ ಮಾಡುತ್ತಿದ್ದಂತೆ ಅಲ್ಲು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ, ಆಕೆಯನ್ನು ಟ್ರೋಲ್ ಮಾಡುತ್ತಿದ್ದಾರೆ.

ವೈರಲ್ ಆಯ್ತು ಶ್ರೀರೆಡ್ಡಿ ಕಿಕಿ ಡ್ಯಾನ್ಸ್

ಈ ಹಿಂದೆ ಕೇರಳ ಪ್ರವಾಹ ವಿಚಾರದಲ್ಲೂ ಅಲ್ಲು ಕಾಲೆಳೆದಿದ್ದರು ಶ್ರೀ. 'ಜನರು ಕೇರಳದಲ್ಲಿ ನರಳುತ್ತಿದ್ದಾರೆ. ನೀನು ಅವರಿಗೆ ಸಹಾಯ ಮಾಡುತ್ತಿಲ್ಲ. ಆದರೆ 10 ಕೋಟಿ ರೂ. ವೆಚ್ಚದ ವ್ಯಾನಿಟಿ ವ್ಯಾನ್ ತಯಾರಿಸಲು ಹಣವಿದೆ' ಎಂದು ಕಾಲೆಳೆದಿದ್ದರು. ಸಾಮಾನ್ಯವಾಗಿ ಅರ್ಜುನ್ ಇಂಥ ಮಾತುಗಳಿಗೆ ಕಿವಿ ಕೊಡುವುದಿಲ್ಲ, ವಿವಾದಗಳಿಂದ ದೂರ ಉಳಿಯುತ್ತಾರೆ. ಆದರೆ, ಶ್ರೀಗೋ ಸದಾ ಸುದ್ದಿಯಲ್ಲಿರೋ ಚಪಲ. ಲೈಂಗಿಕ ಕಿರುಕುಳದ ಆರೋಪ ಹೊರಿಸಿ, ಅರೆ ಬೆತ್ತಲೆಯಾಗಿ ಪ್ರತಿಭಟನೆ ನಡೆಸಿಯೂ ಸುದ್ದಿಯಾಗಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!