ಅಕ್ಷಯ್ ಕುಮಾರ್‌ಗೆ ಚೀಟಿಂಗ್ ಮಾಡಿದ ಚೋಟಾ ಮಿಯಾನ್ ಟೈಗರ್ ಶ್ರಾಫ್!

By Sathish Kumar KH  |  First Published Mar 9, 2024, 7:44 PM IST

ಬಾಲಿವುಡ್ ದಿಗ್ಗಜ ನಟರಾದ ಅಕ್ಷಯ್ ಕುಮಾರ್ ಅವರಿಗೆ ಟೈಗರ್ ಶ್ರಾಫ್ ಅವರು ವಂಚನೆ ಮಾಡಿರುವ ವಿಡಿಯೋ ವೈರಲ್ ಆಗಿದೆ.


ನವ ದೆಹಲಿ (ಮಾ.09): ಬಾಲಿವುಡ್ ದಿಗ್ಗಜ ನಟರಾದ ಅಕ್ಷಯ್ ಕುಮಾರ್ ಅವರಿಗೆ ಟೈಗರ್ ಶ್ರಾಫ್ ಅವರು ವಂಚನೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಬಾಲಿವುಡ್ ನಟರಾದ ಇವರಿಬ್ಬರೂ ಸ್ವಿಮ್ಮಿಂಗ್ ಪೂಲ್ ಒಂದರ ಬಳಿ ಈಜಾಡುವಾಗ ಅಕ್ಷಯ್‌ಗೆ ವಂಚನೆ ಮಾಡಿದ ಘಟನೆ ನಡೆದಿದೆ. 

ಬಾಲಿವುಡ್‌ನಲ್ಲಿ ನಟರಾದ ಟೈಗರ್ ಶ್ರಾಫ್ ಮತ್ತು ಅಕ್ಷಯ್ ಕುಮಾರ್ ಅವರ ಬಹು ನಿರೀಕ್ಷಿತ ಚಿತ್ರ  'ಬಡೇ ಮಿಯಾನ್ ಚೋಟೆ ಮಿಯಾನ್'  ಸದ್ದು ಮಾಡುತ್ತಿದೆ. ನಟರು ಕೂಡ ಪ್ರಚಾರ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ. ಟೈಗರ್ ಶ್ರಾಫ್ ಮತ್ತು ಅಕ್ಷಯ್ ಕುಮಾರ್ ಇಬ್ಬರೂ ಫಿಟ್‌ನೆಸ್‌ಗೆ ಪ್ರಸಿದ್ಧಿಯಾದವರು. ಆದರೆ, ಈಗ ಟೈಗರ್ ಶ್ರಾಫ್ ಇನ್‌ಸ್ಟಾಗ್ರಾಮ್‌ನಲ್ಲಿ ಅಕ್ಷಯ್ ಅವರೊಂದಿಗೆ ಮೋಜಿನ ವೀಡಿಯೊವನ್ನು ಹಂಚಿಕೊಂಡಿದ್ದು, ಅದರಲ್ಲಿ ಅಕ್ಷಯ್ ಕುಮಾರ್ ಅವರಿಗೆ ವಂಚನೆ ಮಾಡಿರುವುದು ಕಂಡುಬಂದಿದೆ. 

Tap to resize

Latest Videos

ಬೆಂಗಳೂರು ನಿವಾಸಿಗಳೇ ನೀರಿಗಾಗಿ ಮಾಸಿಕ 6,000 ರೂ. ಭರಿಸಲು ಸಿದ್ಧರಾಗಿ; ಇಲ್ಲವೆಂದರೆ ನೀರು ಸಿಗೊಲ್ಲ!

ಇನ್ನು ವಿಡಿಯೋ ವಿಚಾರಕ್ಕೆ ಬರುವುದಾದರೆ, ಟೈಗರ್ ಶ್ರಾಫ್ ಅವರು ನಾವಿಬ್ಬರೂ ಸ್ವಿಮ್ಮಿಂಗ್ ಪೂಲ್‌ನ ಒಂದು ಬದಿಯಿಂದ ಮತ್ತೊಂದು ಬದಿಗೆ ಈಜಬೇಕು. ಯಾರು ಈಜಿ ಮೊದಲು ದಡ ಸೇರುತ್ತಾರೆ ಎಂದು ಸವಾಲು ಹಾಕುತ್ತಾರೆ. ಇದಕ್ಕೆ ತಕ್ಷಣವೇ ಸಿದ್ಧಗೊಂಡ ಅಕ್ಷಯ್ ಕುಮಾರ್ ಅವರು ಒನ್‌.. ಟೂ.. ತ್ರೀ... ಎಂದು ಹೇಳುತ್ತಿದ್ದಂತೆ ಸ್ವಿಮ್ಮಿಂಗ್ ಪೂಲ್ ನೀರಿಗೆ ಜಿಗಿದು ಈಜುತ್ತಾರೆ. ಆದರೆ, ಟೈಗರ್ ಶ್ರಾಫ್ ನೀರಿಗೆ ಬೀಳದೇ ಸ್ವಿಮ್ಮಿಂಗ್ ಪೂಲ್‌ನ ದಡದಲ್ಲಿ ಓಡಿಕೊಂಡು ಬಂದು ಇನ್ನೊಂದು ತೀರಕ್ಕೆ ಬರುತ್ತಾರೆ. ಇನ್ನು ಅಕ್ಷಯ್ ಕುಮಾರ್ ನೀರಿನಲ್ಲಿ ಮುಳುಗಿ ಒಂದು ಮೇಲೇಳುವ ವೇಳೆಗೆ ಟೈಗರ್‌ ಶ್ರಾಫ್ ಮತ್ತೊಂದು ಬದಿಯಲ್ಲಿನ ನೀರಿಗೆ ಜಿಗಿದು ದಡದಲ್ಲಿ ತಾವೇ ಮೊದಲು ಈಜಿ ದಡ ಸೇರಿದ್ದು ಎಂದು ಹೇಳುತ್ತಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಇದು ಮಹಾವಂಚನೆ ಎಂದು ಕಮೆಂಟ್ ಮಾಡಿದ್ದಾರೆ.

ಬಾಲಿವುಡ್‌ನ ಪವರ್-ಪ್ಯಾಕ್ಡ್ ಜೋಡಿಗಳಾದ ಅಕ್ಷಯ್ ಕುಮಾರ್ (Akshay Kumar)ಮತ್ತು ಟೈಗರ್ ಶ್ರಾಫ್ (Tiger Shroff) ನಟನೆಯ 'ಬಡೇ ಮಿಯಾನ್ ಚೋಟೆ ಮಿಯಾನ್’ ಸಿನಿಮಾದ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದೆ. ಬಾಸ್ಕೊ-ಸೀಸರ್ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದಿರುವ ಹಾಡಿಗೆ ಅಕ್ಕಿ-ಟೈಗರ್ ಭರ್ಜರಿ ಹೆಜ್ಜೆ ಹಾಕಿದ್ದಾರೆ. ಅನಿರುದ್ಧ್ ರವಿಚಂದರ್ ಮತ್ತು ವಿಶಾಲ್ ಮಿಶ್ರಾ ಧ್ವನಿಯಾಗಿರುವ ಟೈಟಲ್ ಟ್ರ್ಯಾಕ್ ಗೆ ವಿಶಾಲ್ ಮಿಶ್ರಾ ಟ್ಯೂನ್ ಹಾಕಿದ್ದಾರೆ. ಡೆಹರೂಡನ್ ನಲ್ಲಿ ಚಿತ್ರೀಕರಿಸಲಾಗಿರುವ ಹಾಡಿಗೆ 100ಕ್ಕೂ ಹೆಚ್ಚು ಡ್ಯಾನ್ಸರ್ಸ್ ಕುಣಿದು ಕುಪ್ಪಳಿಸಿದ್ದಾರೆ. 

ನೀವು ಬೆಂಗಳೂರಿಗೆ ಬಂದಿದ್ದು ಯಾಕೆ? ಕೆಲವರು ದುಡ್ಡು ಮಾಡೋಕೆ ಬಂದು, ಸಾಲ ಮಾಡ್ಕೊಂಡು ಹೋದ್ರಂತೆ!

ಕನ್ನಡದಲ್ಲಿಯೂ  ಹಾಡು ಮೂಡಿಬಂದಿದ್ದು, ಸಂತೋಷ್ ವಿಶ್ವರತ್ನ ಸಾಹಿತ್ಯ ಬರೆದಿದ್ದು, ಅನಿರುದ್ಧ ಶಾಸ್ತ್ರಿ,  ಅಭಿಷೇಕ್ ಎಂ ಆರ್ ಹಾಗೂ ಋಷಿಕೇಶ ಬಿ ಆರ್  ಧ್ವನಿ ನೀಡಿದ್ದಾರೆ. ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ನಾಯಕರಾಗಿ ನಟಿಸಿದ್ದು, ಖಳನಾಯಕನಾಗಿ ಪೃಥ್ವಿರಾಜ್ ಸುಕುಮಾರನ್ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟಿಮಣಿಯರಾದ ಸೋನಾಕ್ಷಿ ಸಿನ್ಹಾ, ಮಾನುಷಿ ಚಿಲ್ಲರ್, ಅಲಯಾ ಎಫ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮುಂಬೈ, ಲಂಡನ್, ಅಬುಧಾಬಿ, ಸ್ಕಾಟ್ಲೆಂಡ್ ಮತ್ತು ಜೋರ್ಡಾನ್ ಸ್ಥಳಗಳಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಹಾಲಿವುಡ್ ರೇಂಜ್ ಗೆ ದೊಡ್ಡ ಬಜೆಟ್ ನಲ್ಲಿ ಬಡೇ ಮೀಯಾ ಚೋಟೆ ಮೀಯಾ ಚಿತ್ರ ನಿರ್ಮಿಸಲಾಗಿದೆ.

click me!