ಕಾಲಿವುಡ್​ ಸೂಪರ್​ಸ್ಟಾರ್​ ಅಜಿತ್ ಕುಮಾರ್​ಗೆ ಮಿದುಳಿಗೆ ಸರ್ಜರಿ ಆಯ್ತಾ? ನಟ ಈಗ ಹೇಗಿದ್ದಾರೆ?

Published : Mar 09, 2024, 07:20 PM ISTUpdated : Mar 10, 2024, 10:18 AM IST
ಕಾಲಿವುಡ್​ ಸೂಪರ್​ಸ್ಟಾರ್​ ಅಜಿತ್ ಕುಮಾರ್​ಗೆ ಮಿದುಳಿಗೆ ಸರ್ಜರಿ ಆಯ್ತಾ? ನಟ ಈಗ ಹೇಗಿದ್ದಾರೆ?

ಸಾರಾಂಶ

ಕಾಲಿವುಡ್​ ಸೂಪರ್​ಸ್ಟಾರ್​ ಅಜಿತ್ ಕುಮಾರ್​ಗೆ ಮಿದುಳಿಗೆ ಸರ್ಜರಿ ಆಯ್ತಾ? ನಟ ಈಗ ಹೇಗಿದ್ದಾರೆ? ಅವರ ಆರೋಗ್ಯದ ಅಪ್​ಡೇಟ್​ ಇಲ್ಲಿದೆ...  

ತಮಿಳು (Tamil) ಮಾತ್ರವಲ್ಲದೇ ಹಲವು ಭಾಷೆಗಳಲ್ಲಿ ಖ್ಯಾತಿ ಪಡೆದಿರುವ ನಟ ಅಜಿತ್ ಕುಮಾರ್​ ಇನ್ನೆರಡು ತಿಂಗಳಿನಲ್ಲಿ ಅಂದ್ರೆ ಮೇ ತಿಂಗಳಿನಲ್ಲಿ  53 ನೇ ವರ್ಷಕ್ಕೆ ಕಾಲಿಡಲಿದ್ದಾರೆ.  ಈ ವಯಸ್ಸಿನಲ್ಲಿಯೂ ಟಾಲಿವುಡ್​ನಲ್ಲಿ ಹವಾ ಸೃಷ್ಟಿಸುತ್ತಿದ್ದಾರೆ ನಟ ಅಜಿತ್​. ಸದ್ಯ ಇವರು,  ತಮ್ಮ 62ನೇ ಚಿತ್ರ ‘ವಿದಾ ಮುಯರ್ಚಿ’ (Vidaa Muyarchi) ಸಿನಿಮಾದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.  ಈ ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದ್ದು,  ಮಾಗಿಳ್ ತಿರುಮೇನಿ ನಿರ್ದೇಶಿಸುತ್ತಿದ್ದಾರೆ. ಇದರ ನಡುವೆಯೇ,  ಇದೀಗ ಆತಂಕ ವಿಷಯವೊಂದು ತಿಳಿದುಬಂದಿತ್ತು. ಅದೇನೆಂದರೆ, ಅಜಿತ್​ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.  

ಇದರಿಂದ ಅಭಿಮಾನಿಗಳು ಆತಂಕಗೊಂಡಿದ್ದರು.  ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ಎದುರಾದ ಆರೋಗ್ಯ ಸಮಸ್ಯೆ ಏನೆಂಬುದರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಬಂದಿರಲಿಲ್ಲ.  ಅವರ ಎಲ್ಲಾ ಚಿತ್ರಗಳ ಶೂಟಿಂಗ್​ ನಿಲ್ಲಿಸಲಾಗಿದೆ. ಆದರೆ ಈ ಮಧ್ಯೆಯೇ ಅಜಿತ್​ ಅವರಿಗೆ ಮಿದುಳಿನ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಇದು ಅಭಿಮಾನಿಗಳನ್ನು ಇನ್ನಷ್ಟು ಚಿಂತೆಗೀಡು ಮಾಡುತ್ತಿದೆ. ಅವರ ಮಿದುಳಿನಲ್ಲಿ ಗುಳ್ಳೆ ಉಂಟಾಗಿದೆ, ಇದರಿಂದ ಆಪರೇಷನ್​ ಮಾಡಬೇಕಾಗಿ ಬಂದಿದೆ ಎಂದೆಲ್ಲಾ ಸುದ್ದಿ ಹರಿದಾಡುತ್ತಿದೆ.

ಸೌತ್​ನಿಂದ ರಶ್ಮಿಕಾರನ್ನು ಬೈಕಾಟ್​ ಮಾಡುವಂತೆ ಜೋರಾಗಿದೆ ಕೂಗು: ಅಷ್ಟಕ್ಕೂ ನಟಿ ಹೇಳಿದ್ದೇನು?

ಈಗ ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಅವರ ವಕ್ತಾರರು, ನಟನ  ಮಿದುಳಿನಲ್ಲಿ ಗುಳ್ಳೆ ಉಂಟಾಗಿದೆ ಎಂಬುದು ಸುಳ್ಳು ಸುದ್ದಿ. ಇದನ್ನು ನಂಬಬೇಡಿ ಎಂದಿದ್ದಾರೆ.  ಅಜಿತ್ ಅವರು ಸಾಮಾನ್ಯ ಪರೀಕ್ಷೆಗಾಗಿ ಆಸ್ಪತ್ರೆಗೆ  ತೆರಳಿದ್ದರು. ಅವರ ಮಿದುಳು ಹಾಗೂ ಕಿವಿಗೆ ಕನೆಕ್ಟ್ ಆಗೋ ನರದಲ್ಲಿ ಊತ ಇದ್ದುದು ಪತ್ತೆ ಹಚ್ಚಲಾಗಿತ್ತು. ನರದಲ್ಲಿ ಯಾವುದೇ ರೀತಿಯ ಗುಳ್ಳೆ ಇಲ್ಲ. ಈ ಊತವನ್ನು ಸಾಮಾನ್ಯ ವೈದ್ಯಕೀಯ ಪ್ರಕ್ರಿಯೆಯಿಂದ ಮುಗಿಸಲಾಗಿದೆ.  ಅಜಿತ್ ಅವರು ಆರೋಗ್ಯವಾಗಿದ್ದಾರೆ. ಐಸಿಯುನಿಂದ ಅವರು ವಾರ್ಡ್​ಗೆ ನಡೆದೇ ಹೋಗಿದ್ದಾರೆ ಎಂದಿದ್ದಾರೆ. ಈಗ ಅವರು ಮನೆಗೆ ಹೋಗಲು ರೆಡಿಯಾಗಿದ್ದಾರೆ ಎನ್ನಲಾಗಿದೆ. 
 


 ಅಜಿತ್, ತಮ್ಮ ವಾರಗೆಯ ಇತರೆ ನಟರಂತಲ್ಲದೆ ವೈಯಕ್ತಿಕ ಆರೋಗ್ಯ, ವೈಯಕ್ತಿಕ ಹವ್ಯಾಸಗಳಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬೈಕರ್ ಸಹ ಆಗಿರುವ ಅಜಿತ್ ಕುಮಾರ್, ದೇಶ-ವಿದೇಶಗಳಲ್ಲಿ ಬೈಕಿಂಗ್ ಮಾಡಿದ್ದಾರೆ. ಶಿಸ್ತಿನ ಜೀವನ ಮಾಡುತ್ತಿರುವ ಅಜಿತ್​ಗೆ ಹಠಾತ್ತನೆ ಏನಾಯ್ತು ಎಂಬುದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಸೈಕಲ್, ಬೈಕ್ ಏರಿ ಏಕಾಏಕಿ ನೂರಾರು ಕೀಲೋ ಮೀಟರ್ ಪ್ರವಾಸ ಮಾಡುವ ಅಜಿತ್ ಅವರಿಗೆ  ಏನಾಯಿತು ಎಂದು ಪ್ರಶ್ನೆ ಮಾಡುತ್ತಿದ್ದಾರೆ ಫ್ಯಾನ್ಸ್​. ‘ವಿದಾ ಮುಯರ್ಚಿ’ ಚಿತ್ರಕ್ಕಾಗಿ 15 ಕೆ.ಜಿ ತೂಕ ಇಳಿಸಿಕೊಂಡಿದ್ದರು. ಏಕಾಏಕಿ ಇಷ್ಟೊಂದು ತೂಕ ಇಳಿಸಿಕೊಂಡಿರುವುದೇ ಕಾರಣವಾಯ್ತಾ ಎಂಬುದು ಹಲವರ ಪ್ರಶ್ನೆ. ಅಜಿತ್  ಆಗಾಗ್ಗೆ ಅವರು ವೈದ್ಯರನ್ನು ಭೇಟಿ ಮಾಡಿ, ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ. ಅದರಲ್ಲೂ ಬೈಕ್ ಸವಾರಿಗೆ ಹೊರಟರೆ, ಅದಕ್ಕೂ ಮುನ್ನ ಆರೋಗ್ಯ ತಪಾಸಣೆ ಮಾಡಿಕೊಳ್ಳುತ್ತಾರಂತೆ. ಹೀಗಿರುವಾಗಿ ತೂಕಕಳೆದುಕೊಂಡದ್ದೇ ಕಾರಣವಾಗಿರಬಹುದೇ ಎನ್ನುವ ಚರ್ಚೆ  ಶುರುವಾಗಿತ್ತು. ಈಗ ಅಭಿಮಾನಿಗಳು ನೆಮ್ಮದಿಯ ಉಸಿರು ಬಿಟ್ಟಿದ್ದಾರೆ.

ಶಾರುಖ್​ ಪುತ್ರನ ಡ್ರಗ್ಸ್​ ಕೇಸ್​ ನಡೆಸಿದ ಅಧಿಕಾರಿಯ ಪತ್ನಿಗೆ ಪಾಕ್​ನಿಂದ ಜೀವ ಬೆದರಿಕೆ!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

400 ಸಿನಿಮಾಗಳಲ್ಲಿ ನಟಿಸಿದ ದಾಖಲೆ, 100 ಕೋಟಿಗೂ ಹೆಚ್ಚು ಆಸ್ತಿ, 3 ಮದುವೆಯಾದ ಸ್ಟಾರ್ ನಟ ಇವರೇನಾ?
2025ರಲ್ಲಿ ಫ್ಲಾಪ್ ಸಿನಿಮಾಗಳಲ್ಲಿ ನಟಿಸಿದ ಸ್ಟಾರ್ ನಟಿಯರು ಯಾರು? ಇಬ್ಬರಿಗೆ ಮೂರು ಡಿಸಾಸ್ಟರ್!