ನನ್ನ ತಂದೆಯೇ ನನ್ನ ಬೆಸ್ಟ್ ಟೀಚರ್: ಅನುಷ್ಕಾ ಶರ್ಮಾ

By Suvarna NewsFirst Published May 4, 2020, 12:16 PM IST
Highlights

ನಟಿ ಅನುಷ್ಕಾ ಶರ್ಮಾ ತಂದೆಯ ಮುದ್ದಿನ ಮಗಳು ಎಂಬುದಕ್ಕೆ ಸಂದರ್ಶನವೊಂದರಲ್ಲಿ ಆಡಿದ ಮಾತುಗಳೇ ಸಾಕ್ಷಿ...

ಬಾಲಿವುಡ್‌ ಸಿಂಪಲ್‌ ಮತ್ತು ಹಂಬಲ್ ನಟಿ ಅನುಷ್ಕಾ ಶರ್ಮಾ ವೃತ್ತಿ ಜೀವನದಲ್ಲಿ ಯಾರೊಬ್ಬರ ಮೇಲೂ ಆಪಾದನೆ ಮಾಡಿರುವುದಾಗಲಿ ಅಥವಾ ಯಾವುದೇ  ಗಾಸಿಪ್‌ನಲ್ಲಿ ಸಿಲುಕಿಕೊಂಡಿಲ್ಲ  . ತನ್ನ ಜೀವನದ ಪ್ರತಿ ನಿರ್ಧಾರವನ್ನು ತಾನಾಗಿಯೇ ತೆಗೆದುಕೊಳ್ಳುವ  ಸಾಮರ್ಥ್ಯ ಮತ್ತು ಸ್ವಾತಂತ್ರ್ಯ  ಎರಡೂ ನನಗಿದೆ  ಎಂದು ಕೆಲವೊಂದು ಸಂದರ್ಶನದಲ್ಲಿ ಮಾತುನಾಡಿರುವುದನ್ನು ನೋಡಿದ್ದೇವೆ. ಇಷ್ಟು ಬೋಲ್ಡ್‌ ಆಗಿರಲು ಸಾಧ್ಯವೇ? ಇಲ್ಲಿದೆ ಉತ್ತರ... 

ಅನುಷ್ಕಾ ಬೆಸ್ಟ್‌ ಟೀಚರ್‌:

ಅನುಷ್ಕಾ ಶರ್ಮಾಗೆ ತಂದೆ ಕರ್ನಲ್‌ ಅಜಯ್ ಕುಮಾರ್ ಶರ್ಮಾ ಬೆಸ್ಟ್‌ ಫ್ರೆಂಡ್‌ ಹಾಗೂ ಬೆಸ್ಟ್‌ ಟೀಚರ್‌. ಆರ್ಮಿ ಶಾಲೆಗೆ ಅನುಷ್ಕಾಳನ್ನು ದಿನವೂ ತಂದೆಯೇ ಕರೆದುಕೊಂಡು ಹೋಗುತ್ತಿದ್ದರಂತೆ, ಶಾಲೆ ತುಂಬಾ ದೂರವಿದ್ದ ಕಾರಣ ದಾರಿಯಲ್ಲಿ ಜೀವನದ ಪಾಠಗಳ ಬಗ್ಗೆ ಹೇಳಿಕೊಡುತ್ತಿದ್ದರಂತೆ. 'ನನ್ನ ಶಾಲೆಯಲ್ಲಿ ಟೀಚರ್‌ ಹಾಗೂ ಪ್ರಿನ್ಸಿಪಾಲ್‌ ಎಲ್ಲರೂ ತುಂಬಾ ಆತ್ಮೀಯರಾಗಿದ್ದರು ಅವರು ಹೇಳಿಕೊಟ್ಟ ಪಾಠಗಳನ್ನು ಈಗಲೂ  ನನ್ನೊಟ್ಟಿಗಿದೆ ಆದರೆ ನನ್ನ ತಂದೆ ಹೇಳಿಕೊಟ್ಟ ಪಾಠ ಅಮೂಲ್ಯವಾದದ್ದು, ನನ್ನ ಜೀವನ ರೂಪಿಸಿಕೊಳ್ಳಲು ಆ ಒಂದು ಸೂತ್ರವೇ ಕಾರಣ' ಎಂದು ಅನುಷ್ಕಾ ಮಾತನಾಡಿದ್ದಾರೆ.

ಕೌಟುಂಬಿಕ ದೌರ್ಜನ್ಯ: ಜನತೆಗೆ ಮಹತ್ವದ ಸಂದೇಶ ಸಾರಿದ ವಿರಾಟ್ ಕೊಹ್ಲಿ..!

ಮೇ 1ರಂದು 32 ವರ್ಷಕ್ಕೆ ಕಾಲಿಟ್ಟ ಅನುಷ್ಕಾ  ಶರ್ಮಾ ಕೊರೋನಾ ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿಯೇ  ವಿರಾಟ್ ತಯಾರಿಸಿದ ಕೇಕ್‌ನನ್ನು ಕಟ್‌ ಮಾಡಿ ಸಂಭ್ರಮಿಸಿದ್ದಾರೆ. ಅನುಷ್ಕಾ ತನ್ನ ಸ್ವಂತ  ಪರಿಶ್ರಮದಿಂದ ಚಿತ್ರರಂಗದಲ್ಲಿ ಒಂದೊಂದೆ ಹೆಜ್ಜೆ ಇಡುತ್ತಾ ಬೆಳೆದವರು ಹಂತ ಹಂತವಾಗಿ ಯಶಸ್ಸು ಕಂಡವರು . ಇದೆಲ್ಲಾ ಹೇಗೆ ಸಾಧ್ಯ ಎಂದು ಪ್ರಶ್ನಿಸಿದಾಗ..'ಆರ್ಮಿ ಫ್ಯಾಮಿಲಿ ಹುಡುಗಿಯಾದ ನನಗೆ ಪರಿಶ್ರಮದಿಂದ ಕೆಲಸ ಮಾಡಬೇಕು ಎಂಬುದು ನನ್ನ ರಕ್ತದಲ್ಲೇ ಬಂದಿದೆ. ಪ್ರಾಮಾಣಿಕವಾಗಿ ಜೀವನ ನಡೆಸಿದರೆ , ಬದುಕಿನ ದಾರಿ ಹೋದಂತೆ  ಸಾಗಿದರೆ ನೀವು ಗುರಿ ತಲುಪುವಿರಿ' ಎಂದು ಹೇಳುತ್ತಾ ತಂದೆ ಹೇಳಿಕೊಟ್ಟ ಲೈಫ್‌ ರೂಲ್‌ ಏನೆಂದು ರಿವೀಲ್‌ ಮಾಡಿದ್ದಾರೆ. 
ಪರಿಸ್ಥಿತಿ ಹೇಗೇ ಇರಲಿ, ಸರಿಯಾದ ಕೆಲಸ ಮಾಡು...

'ನನ್ನ ತಂದೆ ಸದಾ ಹೇಳುತ್ತಿದ್ದರು ನೀನು ಯಾವ ಪರಿಸ್ಥಿತಿಯಲ್ಲಿದ್ದರೂ, ಆ ಪರಿಸ್ಥಿತಿ ಎಷ್ಟೇ ಕೆಟ್ಟದಾಗಿದ್ದರೂ ನೀನು ಸರಿಯಾದ ಕೆಲಸಗಳನ್ನಷ್ಟೇ  ಮಾಡು, ಆ ಭಗವಂತನನ್ನು ಪ್ರಾರ್ಥಿಸು ನಿನಗೆ ಸರಿ ದಾರಿಯನ್ನು ಅವನೇ ತೋರಿಸುತ್ತಾನೆ ಎಂದು. ಇದನ್ನು ನಾನು ಮಾಡಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ದಿನದಿಂದ ಇಂದಿನವರೆಗೂ   ಪಾಲಿಸುತ್ತಿದ್ದೇನೆ  ಈ ಕಾರಣದಿಂದಲೇ  ನಾನು ಈ ಮಟ್ಟದಲ್ಲಿ ಏನಾದರೂ ಚೂರು ಸಾಧಿಸಿ ನಿಲ್ಲಲು ಸಾಧ್ಯವಾಗಿತ್ತು' ಎಂದು ಹೇಳಿದ್ದಾರೆ.

ಲಾಕ್‌ಡೌನ್‌ ನಡುವೆಯೂ ಪತ್ನಿ ಹುಟ್ಟುಹಬ್ಬ ಆಚರಿಸಿದ ವಿರಾಟ್‌ ಕೊಹ್ಲಿ!

ಸ್ಟ್ರಿಟ್  ಆರ್ಮಿ ಫ್ಯಾಮಿಲಿಯಲ್ಲಿ ಬೆಳೆದ ಅನುಷ್ಕಾ 14-15 ರ  ವಯಸ್ಸಿನಲ್ಲೇ ಮಾಡಲಿಂಗ್ ಲೋಕಕ್ಕೆ ಕಾಲಿಟ್ಟರು. ತನ್ನ ಜೀವನದ ಪ್ರತಿಯೊಂದು ನಿರ್ಧಾರವನ್ನು ಇಂಡಿಪೆಂಡೆಂಟ್‌ ಆಗಿ ತೆಗೆದುಕೊಂಡಿದ್ದಾರೆ. 'ನನ್ನ ತಂದೆ ಹೇಳಿದ ಮಾತುಗಳನ್ನು ಈಗಲೂ  ನಾನು ಪಾಲಿಸುತ್ತೇನೆ . ಚಿಕ್ಕ ವಯಸ್ಸಿನಲ್ಲಿದ್ದಾಗ  ನನಗೆ ತಂದೆಯೇ ರೋಲ್ ಮಾಡಲ್‌ ಅವರು ಹೇಳಿದ ಮಾತುಗಳು ನನ್ನ ಜೀನದಲ್ಲಿ ದೊಡ್ಡ ಮಟ್ಟಕ್ಕೆ ಪರಿಣಾಮ ಬೀರುತ್ತಿತ್ತು. ಮಾಡಲಿಂಗ್ ಗೆ ಕಾಲಿಟ್ಟ ನಂತರ ಸಿನಿಮಾ ಮಾಡುವುದಾ ಬೇಡವಾ ಎಂದು ಯೋಚಿಸುವಾಗ ಅಪ್ಪ ಹೇಳಿದ ಗೋಲ್ಡನ್ ವರ್ಡ್‌ ಫಾಲೋ ಮಾಡಿದಕ್ಕೆ ಕ್ಲಾರಿಟಿ ಬಂತು ' ಎಂದಿದ್ದಾರೆ.

ಬಾಲಿವುಡ್‌ ಚಿತ್ರರಂಗದಲ್ಲಿ ಅನುಷ್ಕಾ ಶರ್ಮಾ ಸಿನಿಮಾದಲ್ಲಿ ಆಯ್ಕೆ ಮಾಡಿಕೊಂಡ ಪಾತ್ರಕ್ಕಾಗಿ ಟ್ರೋಲ್‌ ಆಗುತ್ತಿದ್ದರು. ಹಲವು ವರ್ಷಗಳಿಂದ ವಿರಾಟ್‌ನನ್ನು ಪ್ರೀತಿಸುತ್ತಿದ್ದ ಅನುಷ್ಕಾ ಡಿಸೆಂಬರ್‌ 11,2017ರಂದು ಇಟಲಿಯಲ್ಲಿ ಡೆಸ್ಟಿನೇಷನ್‌ ವೆಡ್ಡಿಂಗ್ ಮಾಡಿಕೊಂಡರು.

ಬದುಕಿನ ಎಲ್ಲಾ ವಿಭಾಗದಲ್ಲೂ ಅಪ್ಪ ತೋರಿಸಿಕೊಟ್ಟ ಹಾದಿಯಲ್ಲಿ ಸಾಗುತ್ತಾ ಅವರು ಹೇಳಿದ ಮಾತುಗಳನ್ನು ಪಾಲಿಸುತ್ತಿರುವ ಅನುಷ್ಕಾ  ಬಾಲಿವುಡ್ ನ ಅದ್ಭುತ ನಟಿಯಾಗಿ ಅಲ್ಲದೇ ವಿರಾಟ್ ಅವರಿಗೆ ಉತ್ತಮ ಪತ್ನಿಯಾಗಿ ಗುರುತಿಸಿಕೊಂಡಿದ್ದಾರೆ . ಇಂಥಾ ಸ್ಟಾರ್ ಜೋಡಿಯ ಮೇಲೆ ಯಾರ ಕಣ್ಣು ಬೀಳದಿರಲಿ ಎಂಬುದೇ ನಮ್ಮ ಹಾರೈಕೆ .

click me!