
ಬಾಲಿವುಡ್ ಚಿತ್ರರಂಗದಲ್ಲಿ ಲವರ್ ಬಾಯ್ ಎಂದೇ ಗುರುತಿಸಿಕೊಂಡಿದ್ದ ನಟ ರಿಷಿ ಕಪೂರ್ ಇನ್ನು ನೆನಪು ಮಾತ್ರ. ತಮ್ಮ ನೆಚ್ಚಿನ ನಟನ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಲಿಲ್ಲ ಎಂದು ನಟ-ನಟಿಯಲ್ಲಿ ತುಂಬಾ ಬೇಸರದಿಂದ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಸಂದೇಶಗಳನ್ನು ಬರೆದುಕೊಂಡಿದ್ದರು.
ಒಲಿಸುವ ಕಲೆಗಾರ ರಿಷಿ ಕಪೂರ್ ಬಗ್ಗೆ ಜಯಂತ ಕಾಯ್ಕಿಣಿ ಮಾತು!
ರಿಷಿ ಕಪೂರ್ ಅಗಲಿ ಎರಡು ದಿನಗಳ ಬಳಿಕ ಪತ್ನಿ ನೀತು ಸಿಂಗ್ ಹ್ಯಾಪಿ ಫೋಟೋ ಶೇರ್ ಮಾಡಿಕೊಂಡು ಭಾವುಕ ಸಂದೇಶವೊಂದನ್ನು ಬರೆದಿದ್ದಾರೆ. ರಿಷಿ ಕೈಯಲ್ಲಿ ಡ್ರಿಂಕ್ ಹಿಡಿದು ನಗುತ್ತಿದ್ದಾಗ ಸೆರೆ ಹಿಡಿದ ಪೋಟೋಗೆ ನೀತು 'End of our story' ಎಂದು ಬರೆದುಕೊಂಡಿದ್ದಾರೆ.
ಪದಗಳಲ್ಲಿ ವರ್ಣಿಸಲಾಗದ ನೋವನ್ನು ಒಂದೇ ಸಾಲಿನಲ್ಲಿ ಮನ ಮುಟ್ಟುವಂತೆ ಬರೆದ ನೀತು ಮಾತುಗಳು ಅನೇಕ ಅಭಿಮಾನಿಗಳಿಗೆ ಕಣ್ಣೀರು ತರಿಸಿದೆ. ಎರಡು ವರ್ಷಗಳ ಹಿಂದೆಯಷ್ಟೆ ಕಾಣಿಸಿಕೊಂಡ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ರಿಷಿ ಏಪ್ರಿಲ್ 30ರಂದು ಚಿಕಿತ್ಸೆ ವಿಫಲವಾದ ಕಾರಣ ಇಹಲೋಕ ತ್ಯಜಿಸಿದ್ದಾರೆ.
ಅಪ್ಪನ ಮಾತಿಗೆ ಆ ನಟಿಯ ಸಂಬಂಧವನ್ನೇ ಕಡಿದುಕೊಂಡಿದ್ದರು ರಿಷಿ ಕಪೂರ್
ಕೊರೋನಾ ವೈರಸ್‌ದಿಂದ ಲಾಕ್‌ಡೌನ್ ಆಗಿರುವುದರಿಂದ ಅನೇಕ ಗಣ್ಯರು ಹಾಗೂ ಆಪ್ತರು ರಿಷಿ ಅಂತಿಮ ವಿಧಿ-ವಿಧಾನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ರಿಷಿ ಕಪೂರ್ ಪುತ್ರಿ ರಿಧಿಮಾ ದೆಹಲಿಯಿಂದ ಮುಂಬೈಗೆ ಬರಲು ಸಾಧ್ಯವಾಗದ ಕಾರಣ ಆಲಿಯಾ ಭಟ್ ವಿಡಿಯೋ ಕಾಲ್ ಮೂಲಕ ತಂದೆಯನ್ನು ತೋರಿಸಿದ್ದಾರೆ. ಈ ಕ್ಷಣದಲ್ಲಿ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದರೂ ಆಲಿಯಾ ಟ್ರೋಲಿಗರಿಗೆ ಆಹಾರವಾದರು.
ನೀತು ಸಿಂಗ್ ಅಪ್ಲೋಡ್ ಮಾಡಿದ ಫೋಟೋಗೆ ನಟ ಅಭಿಷೇಕ್ ಬಚ್ಚನ್, ಅನುಪಮ್ ಕೇರ್, ಶ್ವೇತಾ ಬಚ್ಚನ್, ರಿಧಿಮಾ ಹಾಗೂ ಅನೇಕರು ಪ್ರೀತಿಯ ಸಂಕೇತದ ಮೂಲಕ ಕಾಮೆಂಟ್ ಮಾಡಿದ್ದಾರೆ.
ರಿಷಿ ಕಪೂರ್ ಸಂಸ್ಕಾರದಲ್ಲಿ ಆಲಿಯಾ ಭಟ್ ಟ್ರೋಲ್; Iphone ಅಂತ ಪೋಸ್ ಕೊಡ್ತಿದ್ದೀರಾ?
'ಚಿಕ್ಕ ವಯಸ್ಸಿನಿಂದಲ್ಲೂ ರಿಷಿ ಕಪೂರ್ ಹೇಗೆ ಎಂಬುದನ್ನು ನೋಡಿದೆ ಹಾಗೂ ಕೇಳಿದೆ ಆದರೆ ಈ ಎರಡು ವರ್ಷಗಳಿಂದ ಅವರೊಟ್ಟಿಗೆ ಇದ್ದು ಅ ಅಮೂಲ್ಯ ಕ್ಷಣಗಳನ್ನು ಅನುಭವಿಸಿರುವೆ. ಈ ಅವಧಿಯಲ್ಲಿ ರಿಷಿ ಇನ್ನೊಂದು ಮುಖ ನೋಡಿದೆ. ನನಗೆ ಒಳ್ಳೆಯ ಗೆಳೆಯನಾಗಿ, ಚೈನೀಸ್ ಆಹಾರ ಪ್ರೇಮಿಯಾಗಿ, ಸಿನಿಮಾ ಲವರ್ ಆಗಿ, ಫೈಟರ್, ಪ್ಯಾಷನೇಟ್ ಟ್ವೀಟರ್ ಹಾಗೂ ತಂದೆಯಾಗಿ ನೋಡಿರುವೆ. ರಿಷಿ ಅಂಕಲ್ ವಿ ಮಿಸ್ ಯು' ಎಂದು ಆಲಿಯಾ ಭಟ್ ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.