ಕೋವಿಡ್ 19ನಿಂದ ಚೇತರಿಸಿಕೊಂಡು ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿರುವ ನಟ ಅಮಿತಾಭ್ ಬಚ್ಚನ್ ಹೊಸ ಕಾರು ಖರೀದಿಸಿದ್ದಾರೆ. ನೆಟ್ಟಿಗರು ಅಮಿತಾಭ್‌ನನ್ನು ನಟ ಸೋಸು ಸೂದ್ ನೋಡಿ ಸಮಾಜ ಸೇವೆ ಮಾಡೋದ ಕಲೀರಿ ಎಂದು ಬುದ್ಧಿಮಾತು ಹೇಳಿದ್ದಾರೆ...
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕೆಲವು ದಿನಗಳಿಂದ ಕೆಬಿಸಿ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ. ಪ್ರೋಮೋ ಶೂಟಿಂಗ್ ಫೋಟೋಗಳನ್ನು ಶೇರ್ ಮಾಡಿಕೊಂಡು ಕಾರ್ಯಕ್ರಮದ ಬಗ್ಗೆ ಅಪ್ಡೇಟ್ ನೀಡುತ್ತಲೇ ಇರುತ್ತಾರೆ. ಅಮಿತಾಬ್ ಅನಾರೋಗ್ಯದಿಂದ ಬಳಲುತ್ತಿರುವಾಗ ಜನರು ತೋರಿಸುತ್ತಿದ್ದ ಅನುಕಂಪ ಇದೀಗ ಇದ್ದಕ್ಕಿದ್ದಂತೆ ಕಡಿಮೆಯಾಗಿದೆ...
ಅಮಿತಾಬ್ ಬಚ್ಚನ್ ಮನೆಗೆ ಹೊಸ ಅತಿಥಿ ಆಗಮನ; ಶುರುವಾಯ್ತು ಹೊಸ ಜೀವನ!
ಹೌದು! ಕೋವಿಡ್19ಗೆ ತುತ್ತಾಗಿದ್ದ ಅಮಿತಾಬ್ ಆರೋಗ್ಯದ ಬಗ್ಗೆ ಚಿತ್ರರಂಗ ಮಾತ್ರವಲ್ಲದೇ ಇಡೀ ಭಾರತೀಯ ಸಿನಿ ಪ್ರೇಮಿಗಳು ಗಾಬರಿಯಾಗಿದ್ದರು. ಬಚ್ಚನ್ ಚೇತರಿಸಿಕೊಂಡು ಮನೆಗೆ ಮರುಳಿದ ವಿಚಾರ ಕೇಳಿ ಸಂಭ್ರಮಿಸಿದ್ದರು. ಆದರೆ ಈಗ ಬಚ್ಚನ್ ಮಾಡಿರುವ ಕೆಲಸ ನೋಡಿ ಕಿಡಿ ಕಾರುತ್ತಿದ್ದಾರೆ.
ಕೆಲವ ದಿನಗಳ ಹಿಂದೆ ಅಮಿತಾಬ್ ಹೊಸ ಕಾರು ಖರೀದಿಸಿದ್ದಾರೆ. ಅದುವೇ ಬಿಳಿ ಬಣ್ಣದ ಮರ್ಸಿಡೀಸ್ ಬೆಂಝ್ s ಕ್ಲಾಸ್ ಕಾರು. ಸರಿ ಸುಮಾರು 1.35 ಕೋಟಿ ರೂಪಾಯಿ ಬೆಲೆ ಬಾಳುವ ಈ ಕಾರು ಬಾಲಿವುಡ್ ಬಿಗ್ ಬಿ ಬಳಿ ಇರುವ ಐಷಾರಾಮಿ ಕಾರುಗಳ ಪಟ್ಟಿಗೆ ಹೊಸ ಸೇರ್ಪಡೆ.
ಸೋಸು ಸೂದ್ ನೋಡಿ ಕಲಿಯಿರಿ:
ಕೊರೋನಾ ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿ ಕೊಂಡಿರುವ ಜನರಿಗೆ ಸಹಾಯ ಮಾಡುತ್ತಾ, ಅವರರನ್ನು ತಮ್ಮ ಊರಿಗೆ ಕಳುಹಿಸಲು ಹಾಗೂ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಾ ಸಮಾಜಮುಖಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವ ಸೋಸು ಸೂದ್ ಅವರ ಬಗ್ಗೆ ಜನರಿಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕಷ್ಟದಲ್ಲಿದ್ದ ಕರ್ನಾಟಕದ ಯಾದಗಿರಿಯ ಬಡ ಕುಟುಂಬದ ನೋವಿಗೂ ಸೋನು ಸ್ಪಂದಿಸಿ ಭೇಷ್ ಎನಿಸಿಕೊಂಡಿದ್ದಾರೆ.
ಆದರೆ, ಬಚ್ಚನ್ ಕುಟುಂಬ ಚಿತ್ರರಂಗದಲ್ಲೇ ಅತಿ ಹೆಚ್ಚು ಹೆಸರು ಮಾಡಿರುವ ಫ್ಯಾಮಿಲಿ. ಆದರೆ ಒಂದೂ ರೂಪಾಯಿ ಸಹಾಯ ಮಾಡಿಲ್ಲ ಎಂದು ನೆಟ್ಟಿಗರು ಗರಂ ಆಗಿದ್ದಾರೆ. ಈಗಾಗಲೇ ಅನೇಕ ಐಷಾರಾಮಿ ಕಾರುಗಳನ್ನು ಹೊಂದಿರುವ ಬಚ್ಚನ್ ಈ ಹಣವನ್ನು ಸಂಕಷ್ಟದಲ್ಲಿರುವ ಅಭಿಮಾನಿಗಳಿಗೆ ಸಹಾಯ ಮಾಡಬಹುದಿತ್ತು. ಎಲ್ಲಾ ನಟ-ನಟಿಯರು ಲಾಕ್‌ಡೌನ್ ಸಡಿಲಿಕೆ ನಂತರ ತಮ್ಮ ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಕೆಲವರು ಎಕ್ಸಾರ್ಟಿಕ್ ಟ್ರಿಪ್ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಮಾಡಲು ಅವರ ಬಳಿ ಹಣವಿದೆ. ಆದರೆ ಜನರಿಗೆ ಕೊಡಲು ಹಣವಿಲ್ಲ ಎಂದು ಬಚ್ಚನ್ ಕುಟುಂಬದ ಕಾಲು ಎಳೆದಿದ್ದಾರೆ.