
ಚಿತ್ರರಂಗಕ್ಕೆ ಕಾಲಿಡುವ ಆರಂಭದಲ್ಲಿ ಹೆಸರು ಬದಲಾಯಿಸಿಕೊಳ್ಳುವುದು ತುಂಬಾನೇ ಕಾಮನ್ ವಿಚಾರ. ಎಂಟ್ರಿ ಕೊಟ್ಟ ಮೇಲೂ ಲಕ್ಕಿ ಇಲ್ಲ ಅಂದ್ರೆ ಇರೋ ಹೆಸರಿಗೆ ಒಂದು ಅಕ್ಷರ ಸೇರಿಸುತ್ತಾರೆ, ಇಲ್ಲವಾದರೆ ಕಟ್ ಶಾರ್ಟ್ ಮಾಡುತ್ತಾರೆ. ಇರೋ ಹೆಸರಲ್ಲೇ ನೇಮ್, ಫೇಮ್ ಆ್ಯಂಡ್ ಮನಿ ಮಾಡಿರುವ ಹೀರೋ ಅಜಯ್ ದೇವಗನ್ ಇದ್ದಕ್ಕಿದ್ದಂತೆ ಹೆಸರು ಬದಲಾಯಿಸಿ, ಈ ಹೆಸರಿನಿಂದಾನೇ ನನ್ನನ್ನು ಕರೆಯಬೇಕು ಎಂದು ಡಿಮ್ಯಾಂಡ್ ಮಾಡಿದ್ದಾರೆ.
ನಟ ಅಜಯ್ ದೇವಗನ್ ಕಾರು ತಡೆದು ರಂಪಾಟ, ರೈತರ ಬೆಂಬಲಿಸುವಂತೆ ಆಗ್ರಹ!
'ನಾನು ನಿಮಗೆ ಎಷ್ಟು ಬಾರಿ ಹೇಳಬೇಕು? ಯಾರು ಅದು ಅಜಯ್? ನನ್ನ ಹೆಸರು ಸುದರ್ಶನ್,' ಎಂದು ವಿಡಿಯೋ ಮೂಲಕ ಅಜಯ್ ದೇವಗನ್ ಮಾತನಾಡಿದ್ದಾರೆ. ಅಷ್ಟಕ್ಕೂ ಅಜಯ್ ಹೆಸರು ಬದಲಾಯಿಸಿಕೊಂಡಿದಕ್ಕೆ ಉತ್ತರ ಈಗ ಸಿಕ್ಕಿದೆ...
ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಜಾಹೀರಾತಿನಲ್ಲಿ ಬರುವ ಅಜಯ್ ಪಾತ್ರದ ಹೆಸರು ಸುದರ್ಶನ್ ಆಗಿರಲಿದೆ. ಹೆಸರು ಮಾತ್ರವಲ್ಲ, ಅಜಯ್ ಪೂರ್ಣ ಲುಕ್ ಈ ಜಾಹೀರಾತಿನಲ್ಲಿ ಬದಲಾಗಿರುವುದನ್ನು ನೀವು ಕಾಣಬಹುದು. ಇದೇ ಮೊದಲ ಬಾರಿ ಅಜಯ್ ಉದ್ದ ಗಡ್ಡ ಮೀಸೆ ಬಿಟ್ಟಿರುವುದು. ಖಂಡಿತವಾಗಿಯೂ ಈ ಲುಕ್‌ನಲ್ಲಿ ಅಜಯ್‌ಗೆ ಒಂದು ಸಿನಿಮಾ ಆಫರ್ ಬರಲಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ನೂತನ BMW XDrive 40i ಕಾರಿನೊಂದಿಗೆ ಸಿಂಗಂ ಅಜಯ್ ದೇವಗನ್ ಪ್ರತ್ಯಕ್ಷ!
ಇನ್ನೂ ಅಜಯ್ ದೇವಗನ್ ನಿರ್ಮಾಣದ ಸಿನಿಮಾ ಬಿಗ್ ಬುಲ್ ಓಟಿಟಿಯಲ್ಲಿ ರಿಲೀಸ್ ಆಗಲು ಸಿದ್ಧವಾಗಿದೆ. ಬಹಳ ವರ್ಷಗಳ ನಂತರ ಅಭಿಷೇಕ್ ಬಚ್ಚನ್ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಮುಖ ಪಾತ್ರದಲ್ಲಿರುವ ಅಭಿಷೇಕ್ ಪಾತ್ರದ ಬಗ್ಗೆ ಹೊರತು ಪಡಿಸಿ, ಚಿತ್ರದ ಬಗ್ಗೆ ಯಾವ ಮಾಹಿತಿಯೂ ಹೊರ ಬಂದಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.