
ಮುಂಬೈ (ಫೆ. 11): ನಟಿ ತಾಪ್ಸಿ ಪನ್ನು ಅಭಿನಯದ 'ತಪ್ಪಡ್' ಚಿತ್ರದ ಟ್ರೇಲರ್ ಕೆಲದಿನಗಳ ಹಿಂದೆ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಈ ಚಿತ್ರದ ಬಗ್ಗೆ ಮಾತನಾಡಿರುವುದು ಎಲ್ಲಾ ಕಡೆ ಸದ್ದು ಮಾಡುತ್ತಿದೆ.
ಮಗಳಿಗೆ ಜನ್ಮ ನೀಡಿದ ಕಲ್ಕಿ; ಪತಿಯೊಂದಿಗೆ ಮಗಳ ಫೋಟೋ ರಿವೀಲ್!
'ತಪ್ಪಡ್' ಚಿತ್ರದ ನಿರ್ದೇಶಕರು, ನಟಿಯ ಪೊಲಿಟಿಕಲ್ ಐಡಿಯಾಲಜಿ ಬಗ್ಗೆ ನನ್ನ ಬೆಂಬಲವಿಲ್ಲ. ಅದೇನೇ ಇರಲಿ, ನಾನು ಈ ಸಿನಿಮಾವನ್ನು ಮಿಸ್ ಮಾಡದೇ ನೋಡುತ್ತೇನೆ' ಎಂದಿದ್ದಾರೆ.
ಈ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕುತ್ತಾ, ನಿಮ್ಮಲ್ಲಿ ಎಷ್ಟು ಮಂದಿ ಕೇಳಿದ್ದೀರಿ, 'ಮಹಿಳೆಯೇ ಪ್ರತಿಯೊಂದಕ್ಕೂ ಹೊಂದಿಕೊಳ್ಳಬೇಕು ಎನ್ನುವುದನ್ನು. ನಿಮ್ಮಲ್ಲಿ ಎಷ್ಟು ಮಂದಿ ಯೋಚಿಸುತ್ತೀರಿ, ಹೆಂಡತಿಗೆ ಹೊಡೆಯುವುದು, ಬಡಿಯುವುದನ್ನು ಬಡ ಮಹಿಳೆಯರ ಗಂಡಂದಿರೇ ಮಾಡುತ್ತಾರೆಂದು, ಎಷ್ಟು ಜನ ನಂಬುತ್ತೀರಿ, ಸುಶಿಕ್ಷಿತರು ಹೆಂಡತಿ ಮೇಲೆ ಕೈ ಎತ್ತುವುದಿಲ್ಲ ಅಂತ ಎಂದು ಪ್ರಶ್ನಿಸಿದ್ದಾರೆ.
ಈ ಚಿತ್ರದ ನಿರ್ದೇಶಕರು, ನಟಿಯ ಐಡಿಯಾಲಜಿ ಬಗ್ಗೆ ನನ್ನ ಬೆಂಬಲವಿಲ್ಲ. ಇದರ ಹೊರತಾಗಿಯೂ ನಾನು ಸಿನಿಮಾವನ್ನು ನೋಡುತ್ತೇನೆ' ಎಂದಿದ್ದಾರೆ.
ಒಂದು ಸುಂದರವಾದ, ಸಂತುಷ್ಟ ಕುಟುಂಬ. ಮನೆಗೆ ಅತಿಥಿಗಳನ್ನು ಕರೆದು ಗಂಡ ಪಾರ್ಟಿಯೊಂದನ್ನು ಏರ್ಪಡಿಸುತ್ತಾನೆ. ಆಗ ಬಂದಿರುವ ಅತಿಥಿಗಳ ಎದುರು ಗಂಡ ಹೆಂಡತಿಯನ್ನು ಹೊಡೆಯುತ್ತಾನೆ. ಇದರಿಂದ ಬೇಸರಿಸಿಕೊಂಡ ಪತ್ನಿ ಸಂಬಂಧದಿಂದ ಆಚೆ ಹೊರಡುವ ತಿರುಳೇ ತಪ್ಪಡ್..!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.