
ಮುಂಬೈ (ಫೆ. 11): ಬಾಲಿವುಡ್ ಬೆಡಗಿ ಕಲ್ಕಿ ಕೊಚ್ಲಿನ್ ಮಗಳು ಆಗಮಿಸಿದ್ದಾಳೆ. ಫೆ. 07 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಇದೀಗ ಪತಿ ಹಾಗೂ ಮಗಳ ಜೊತೆ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
'ಸ್ಯಾಪ್ಪೋಳಿಗೆ ಸ್ವಾಗತ. ನನ್ನ ಹೊಟ್ಟೆಯಲ್ಲಿ 9 ತಿಂಗಳು ಕಳೆದಿದ್ದಾಳೆ. ಇದೀಗ ಹೊರ ಬಂದಿದ್ದಾಳೆ. ಅವಳಿಗಾಗಿ ಒಂದಷ್ಟು ಜಾಗ ಕೊಡೋಣ. ನನ್ನೊಳಗೆ ಪಾಸಿಟೀವ್ ಎನರ್ಜಿ ತುಂಬಿದ, ಶುಭ ಹಾರೈಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು' ಎಂದಿದ್ದಾರೆ.
ಪುಕ್ಸಟ್ಟೆ ಲೈಫಿಗಾಗಿ ಮುಸಲ್ಮಾನನಾದ ಸಂಚಾರಿ ವಿಜಯ್ !
ಹೊಟ್ಟೆಯೊಳಗೆ ಜೀವ ಸೇರಿಕೊಂಡ ಮೇಲೆ ಹೀಗೆಲ್ಲಾ ಆಗುತ್ತೆ ಅಂತ ನಂಗ್ಯಾರ ಯಾಕೆ ಹೇಳಿಲ್ಲ? ಇದೊಳ್ಳೆ ರೋಲರ್ ಕಾಸ್ಟರ್ ಇದ್ದಂಗಿದೆಯಲ್ಲಪ್ಪಾ.. ಆ ಎಕ್ಸ್‌ಪೀರಿಯನ್ಸ್‌ಗಳ ಶಾಕ್‌ಗೆ ಏನು ಮಾಡ್ಲಿ ಅಂತಾನೇ ಗೊತ್ತಾಗದೇ ಕಕ್ಕಾಬಿಕ್ಕಿಯಾಗಿ ತಲೆ ಮೇಲೆ ಕೈ ಹೊತ್ತು ನಿಂತಿದ್ದೆ' ಅಂತ ಗರ್ಭ ಧರಿಸಿದಾಗಿನ ನವಿರಾದ ಅನುಭವವನ್ನು ಹಂಚಿಕೊಂಡಿದ್ದರು.
ಅಭಿಮಾನಿಗಳ ಅಂಗೈನಲ್ಲಿ ಐಂದ್ರಿತಾ, ಹೊಸ ಅವತಾರ್ ಏನ್ ಗೊತ್ತಾ!
ಕಲ್ಕಿ ಕೊಚ್ಲಿನ್ 'ಯೇ ಜಿಂದಹಿ ನಾ ಮಿಲೇಂಹಿ ದುಬಾರಾ, ಯೇ ಜವಾನಿ ಯೇ ದಿವಾನಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.