ಸರ್ಜರಿ ಬಳಿಕ 23-24 ಇಂಚು ಗಾಯವಾಗಿತ್ತು, ನಡೆಯಲು ಆಗ್ತಿರ್ಲಿಲ್ಲ; ಕ್ಯಾನ್ಸರ್ ಗೆದ್ದ ಬಗ್ಗೆ ಸೊನಾಲಿ ಭಾವುಕ ಮಾತು

Published : May 25, 2022, 06:24 PM IST
ಸರ್ಜರಿ ಬಳಿಕ 23-24 ಇಂಚು ಗಾಯವಾಗಿತ್ತು, ನಡೆಯಲು ಆಗ್ತಿರ್ಲಿಲ್ಲ; ಕ್ಯಾನ್ಸರ್ ಗೆದ್ದ ಬಗ್ಗೆ ಸೊನಾಲಿ ಭಾವುಕ ಮಾತು

ಸಾರಾಂಶ

ಬಾಲಿವುಡ್ ಸ್ಟಾರ್ ನಟಿ ಸೊನಾಲಿ ಬೇಂದ್ರೆ(Sonali Bendre) ಸದ್ಯ ಕ್ಯಾನ್ಸರ್ ರೋಗದಿಂದ ಚೇತರಿಸಿಕೊಂಡಿದ್ದಾರೆ. ಮಾರಕ ಕ್ಯಾನ್ಸರ್(cancer) ವಿರುದ್ಧ ನಟಿ ಸೊನಾಲಿ ದೀರ್ಘ ಹೋರಾಟ ನಡೆಸಿದ್ದಾರೆ. ಸೊನಾಲಿಗೆ ಕ್ಯಾನ್ಸರ್ ಇದೆ ಎನ್ನುವ ವಿಚಾರ ಬಹಿರಂಗವಾಗುತ್ತಿದಂತೆ ಅಭಿಮಾನಿಗಳು ಮತ್ತು ಬಾಲಿವುಡ್‌ಗೆ ಆಘಾತ ಆಗಿತ್ತು. 47 ವರ್ಷದ ನಟಿ ಸೊನಾಲಿ ಈ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಟಿ, ಈ ಹಂತ ದಾಟಿದ ಬಳಿಕ ಅನೇಕ ಪಾಠ ಕಲಿತಿರುವುದಾಗಿ ಹೇಳಿದ್ದಾರೆ.

ಬಾಲಿವುಡ್ ಸ್ಟಾರ್ ನಟಿ ಸೊನಾಲಿ ಬೇಂದ್ರೆ(Sonali Bendre) ಸದ್ಯ ಕ್ಯಾನ್ಸರ್ ರೋಗದಿಂದ ಚೇತರಿಸಿಕೊಂಡಿದ್ದಾರೆ. ಮಾರಕ ಕ್ಯಾನ್ಸರ್(cancer) ವಿರುದ್ಧ ನಟಿ ಸೊನಾಲಿ ದೀರ್ಘ ಹೋರಾಟ ನಡೆಸಿದ್ದಾರೆ. ಸೊನಾಲಿಗೆ ಕ್ಯಾನ್ಸರ್ ಇದೆ ಎನ್ನುವ ವಿಚಾರ ಬಹಿರಂಗವಾಗುತ್ತಿದಂತೆ ಅಭಿಮಾನಿಗಳು ಮತ್ತು ಬಾಲಿವುಡ್‌ಗೆ ಆಘಾತ ಆಗಿತ್ತು. ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದರು. ಅಪಾರ ಅಭಿಮಾನಿಗಳ ಮತ್ತು ಹಿತೈಶಿಗಳ ಹಾರೈಕೆ, ಪ್ರಾರ್ಥನೆ ಸೊನಾಲಿಗೆ ಮತ್ತಷ್ಟು ಧೈರ್ಯ ತಂದಿತ್ತು. 2018ರಲ್ಲಿ ಸೊನಾಲಿ ಬೇಂದ್ರೆಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಕ್ಯಾನ್ಸರ್ ಆರಂಭಿಕ ಹಂತದಲ್ಲಿದೆ ಎಂದು ಬಹಿರಂಗ ಪಡಿಸಿದ್ದರು.

ಚಿತ್ರರಂಗದಲ್ಲಿ ಸಕ್ರೀಯರಾಗಿದ್ದ ಸೊನಾಲಿ ಕ್ಯಾನ್ಸರ್ ಇದೆ ಎಂದು ಗೊತ್ತಾಗುತ್ತಿದಂತೆ ಬಣ್ಣದ ಲೋಕದಿಂದ ದೂರ ಸರಿದರು. ಕ್ಯಾನ್ಸರ್ ಬಳಿಕ ಸೊನಾಲಿ ಅವರ ಜೀವನ ತುಂಬಾ ಸಂಕಷ್ಟಕ್ಕೆ ಸಿಲುಕಿತ್ತು. ಅವರ ಕುಟುಂಬಕ್ಕೆ ಅದು ನಿಜಕ್ಕೂ ಕಠಿಣ ಸಮಯವಾಗಿತ್ತು. ಆದರೆ ಸೊನಾಲಿ ಕ್ಯಾನ್ಸರ್ ವಿರುದ್ಧ ಧೈರ್ಯವಾಗಿ ಹೋರಾಟ ಮಾಡಿ, ಗೆದ್ದು, ಇದೀಗ ಜೀವನ ನಡೆಸುತ್ತಿದ್ದಾರೆ. 47 ವರ್ಷದ ನಟಿ ಸೊನಾಲಿ ಈ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಟಿ, ಈ ಹಂತ ದಾಟಿದ ಬಳಿಕ ಅನೇಕ ಪಾಠ ಕಲಿತಿರುವುದಾಗಿ ಹೇಳಿದ್ದಾರೆ.

ಈ ಬಾಲಿವುಡ್ ನಟಿಗೆ MNS Raj Thackeray ಆಗಿದ್ದರು ಫಿದಾ!

ಕ್ಯಾನ್ಸರ್ ವಿರುದ್ಧ ಹೋರಾಡಿದ ಬಳಿಕ ದೈಹಿಕ ಬದಲಾವಣೆಗಳು ತನ್ನ ಜೀವನದಲ್ಲಿ ಕಷ್ಟಕರವಾದ ಹಂತವಾಗಿತ್ತು ಎಂದಿದ್ದಾರೆ. ಸೊನಾಲಿ ಬೇಂದ್ರೆ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆದುಕೊಂಡರು. ಸರ್ಜರಿ ವೇಳೆ ತನ್ನ ದೇಹದಲ್ಲಿ 23 ರಿಂದ 24 ಇಂಚಿನ ಗಾಯವಾಗಿತ್ತು. ಇದಲ್ಲದೆ ಆಂಟಿಬಯೋಕಿಟ್‌ಗಳಿಂದ ಸೋಂಕನ್ನು ತಡೆಯಲು ಸಾಧ್ಯವಾಯಿತು. ಬೇಗ ನಡೆಯುವಂತೆ ಆಗಲು ವೈದ್ಯರು ಸಲಹೆ ನೀಡಿದರು ಎಂದಿದ್ದಾರೆ.

ಸೋನಾಲಿ ಬೆಂದ್ರೆಯನ್ನು ಕಿಡ್‌ನ್ಯಾಪ್‌ ಮಾಡಲು ಬಯಸಿದ್ದ ಪಾಕ್ ಕ್ರಿಕೆಟಿಗ !

ಸರ್ಜರಿ ಬಳಿಕ ಗಾಯವಾಗಿದ್ದರೂ ನಡೆಯಲು ಪ್ರಾರಂಭಿಸಿದೆ. ತುಂಬಾ ಕಷ್ಟವಾಗಿತ್ತು. ಸ್ಟಿಕ್ ಹಿಡಿದುಕೊಂಡು ಕಾರಿಡಾರ್ ನಲ್ಲಿ ನಡೆಯುತ್ತಿದ್ದೆ ಎಂದಿದ್ದಾರೆ. ಇಷ್ಟೆಲ್ಲ ಕಷ್ಟವನ್ನು ಎದುರಿಸಿ ಸೊನಾಲಿ ಇದೀಗ ಸ್ಟ್ರಾಂಗ್ ಸರ್ವೈವರ್ ಆಗಿದ್ದಾರೆ. ಈಗ ಮತ್ತೆ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಒಟಿಟಿಗೆ ಎಂಟ್ರಿ ಕೊಟ್ಟಿರುವ ಸೊನಾಲಿ ಸದ್ಯ ದಿ ಬ್ರೋಕನ್ ನ್ಯೂಸ್ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಅನೇಕ ವರ್ಷಗಳ ಬಳಿಕ ಅದರಲ್ಲೂ ಕ್ಯಾನ್ಸರ್ ಗೆದ್ದು ಬಂದಿರುವ ಸೊನಾಲಿ ಸಿನಿಮಾ ಹೇಗಿರಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?