ಪ್ರಧಾನಿ ಮಾತಿಗೆ ಓಗೊಟ್ಟು ಕಡೆ ಕ್ಷಣದಲ್ಲಿ ಭಾರತದಲ್ಲೇ ಮದ್ವೆಯಾಗಲು ನಿರ್ಧರಿಸಿದ ಗಿಲ್ಲಿ ಬೆಡಗಿ

By Anusha Kb  |  First Published Jan 31, 2024, 4:02 PM IST

ಕನ್ನಡದ ಗಿಲ್ಲಿ ಸೇರಿದಂತೆ ಹಲವು ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ನಟಿಸಿರುವ ಬಾಲಿವುಡ್ ಬೆಡಗಿ ರಾಕುಲ್ ಪ್ರೀತ್ ಸಿಂಗ್‌ಗೆ ಕಂಕಣಭಾಗ್ಯ  ಕೂಡಿ ಬಂದಿದ್ದು, ಮುಂದಿನ ಫೆಬ್ರವರಿ 21ರಂದು ಗೋವಾದಲ್ಲಿ ಹಸೆಮಣೆ ಏರಲಿದ್ದಾರೆ.


ಕನ್ನಡದ ಗಿಲ್ಲಿ ಸೇರಿದಂತೆ ಹಲವು ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ನಟಿಸಿರುವ ಬಾಲಿವುಡ್ ಬೆಡಗಿ ರಾಕುಲ್ ಪ್ರೀತ್ ಸಿಂಗ್‌ಗೆ ಕಂಕಣಭಾಗ್ಯ  ಕೂಡಿ ಬಂದಿದ್ದು, ಮುಂದಿನ ಫೆಬ್ರವರಿ 21ರಂದು ಗೋವಾದಲ್ಲಿ ಹಸೆಮಣೆ ಏರಲಿದ್ದಾರೆ. ತನ್ನ ಗೆಳೆಯ, ನಟ ಜಾಕಿ ಭಗ್ನಾನಿ ಜೊತೆ ಹಸೆಮಣೆ ಏರಲಿರುವ ರಾಕುಲ್ ಪ್ರೀತ್ ಅವರು ಮೊದಲಿಗೆ ತಮ್ಮ ಮದುವೆಯನ್ನು ಮಧ್ಯಪ್ರಾಚ್ಯದ ದೇಶವೊಂದರಲ್ಲಿ ನಡೆಸಲು ಮುಂದಾಗಿದ್ದರಂತೆ, ಆದರೆ ಪ್ರಧಾನಿ ನರೇಂದ್ರ ಮೋದಿಯವರ ಮಾತಿಗೆ ಮನ್ನಣೆ ನೀಡಿ ಈ ಜೋಡಿ ಭಾರತದಲ್ಲೇ ಅದರಲ್ಲೂ ದಕ್ಷಿಣದ ಗೋವಾದಲ್ಲಿ ನವ ಜೀವನಕ್ಕೆ ಕಾಲಿರಿಸಲು ನಿರ್ಧರಿಸಿದ್ದಾರೆ ಎಂದು ಈ ಜೋಡಿಯ ಹತ್ತಿರದ ಮೂಲವೊಂದು ಮಾಧ್ಯಮಗಳಿಗೆ ಸುಳಿವು ನೀಡಿದೆ.

ಪ್ರಧಾನಿ ನರೇಂದ್ರ ಮೋದಿಯವರು  ಈ ಹಿಂದೆ ಬಾಲಿವುಡ್ ಮಂದಿಗೆ ನಮ್ಮ ದೇಶದಲ್ಲೇ ವಿವಾಹವಾಗುವಂತೆ ಮನವಿ ಮಾಡಿದ್ದರು. ಈ ಮೂಲಕ ನಮ್ಮ ದೇಶದ ಆರ್ಥಿಕತೆಗೆ ಬಲ ತುಂಬುವಂತೆ ಕೇಳಿದ್ದರು. ಹೀಗಾಗಿ ಈ ಜೋಡಿ ಎರಡು ದಿನಗಳ ಅದ್ದೂರಿ ಸಮಾರಂಭದಲ್ಲಿ ಗೋವಾದಲ್ಲಿ ಹಸೆಮಣೆ ಏರಲು ನಿರ್ಧರಿಸಿದೆ. ಫೆಬ್ರವರಿ 21ರಂದು ಗೋವಾದಲ್ಲಿ ಈ ಮದ್ವೆ ನಡೆಯಲಿದೆ. ವಿದೇಶದಲ್ಲಿ ಮದ್ವೆಯಾಗಲು ಬಯಸಿದ್ದ ಈ ಜೋಡಿ ಪ್ರಧಾನಿ ಮೋದಿ ಮಾತಿನ ನಂತರ ಕೊನೆ ಕ್ಷಣದಲ್ಲಿ ತಮ್ಮ ನಿರ್ಧಾರ ಬದಲಿಸಿದ್ದಾರೆ ಎನ್ನಲಾಗಿದೆ. 

Tap to resize

Latest Videos

ಬಿಕಿನಿ ತೊಟ್ಟು ಬೀಚ್‌ನಲ್ಲಿ ಆಟವಾಡಿದ ಗಿಲ್ಲಿ ನಟಿ: ರಾಕುಲ್​ ಫೋಟೋಗೆ ಫ್ಯಾನ್ಸ್ ಕ್ಲೀನ್​ ಬೋಲ್ಡ್​!

ವಿದೇಶದಲ್ಲಿ ಮದುವೆಯಾಗುವುದಕ್ಕೆ ನಿರ್ಧರಿಸಿದ್ದ ಈ ಜೋಡಿ ಇದಕ್ಕಾಗಿ ಕಳೆದ ಆರು ತಿಂಗಳಿನಿಂದ ಎಲ್ಲಾ ತಯಾರಿಯನ್ನು ನಡೆಸಿದ್ದರಂತೆ, ಆದರೆ ಕೊನೆ ಕ್ಷಣದಲ್ಲಿ ನಿರ್ಧಾರ ಬದಲಿಸಿದ್ದರಿಂದ ವಿಶ್ರಾಂತಿ ಅತಿಥಿಗಳಿಗೆ ವಸತಿ ಸೇರಿದಂತೆ ಎಲ್ಲವನ್ನೂ ಮತ್ತೆ ಪ್ಲಾನ್ ಮಾಡಬೇಕಾಗಿ ಬಂತು. ಆದರೂ ಈ ಜೋಡಿ ಡಿಸೆಂಬರ್‌ನಲ್ಲಿ ಭಾರತದ ಪ್ರಧಾನ ಮಂತ್ರಿಯವರು ನೀಡಿದ ಕರೆಗೆ ಓಗೊಟ್ಟು ತಮ್ಮ ಜೀವನದ ಈ ಅವಿಸ್ಮರಣೀಯ ಘಟನೆಯನ್ನು  ಭಾರತದಲ್ಲೇ ಆಚರಿಸಲು ನಿರ್ಧರಿಸಿದರು. 

ರಾಕುಲ್ ಹಾಗೂ ಜಾಕಿ ಭಗ್ನಾನಿ ಈ ನಿರ್ಧಾರಕ್ಕೆ ಈಗ ಶ್ಲಾಘನೆ ವ್ಯಕ್ತವಾಗಿದೆ. ಭಾರತದ ನಾಗರಿಕರಾಗಿ ಈ ಜೋಡಿಯ ಸಾಮಾಜಿಕ ಜವಾಬ್ದಾರಿಯನ್ನು ಪ್ರದರ್ಶಿಸಿದ್ದಾರೆ. ಈ ಜೋಡಿಯ ರಾಷ್ಟ್ರೀಯತೆಯ ಭಾವನೆ ಮತ್ತು ದೇಶದೊಳಗೆ ಕಾರ್ಯಕ್ರಮಗಳನ್ನು ನಡೆಸುವುದರಿಂದ ಭಾರತೀಯ ಆರ್ಥಿಕತೆಗೆಯೂ ಕೊಡುಗೆ ನೀಡುತ್ತದೆ. ದೇಶದ ಹಣ ವಿದೇಶಕ್ಕೆ ಹೋಗದಂತೆ ತಡೆಯುತ್ತದೆ. ಈ ಮೂಲಕ ಈ ಜೋಡಿ ದೇಶಾಭಿಮಾನವನ್ನು ಮೆರೆದಿದ್ದಾರೆ ಎಂದರೆ ತಪ್ಪಾಗಲಾರದು. ಭಾರತದಲ್ಲಿ ವಿವಾಹವನ್ನು ಆಯೋಜಿಸುವುದರಿಂದ ಸ್ಥಳೀಯ ಆರ್ಥಿಕತೆಗೆ ಜೀವ ತುಂಬುತ್ತದೆ, ಸ್ಥಳೀಯ ವಿವಾಹ ಉದ್ಯಮಕ್ಕೆ ಉತ್ತೇಜನ ನೀಡುತ್ತದೆ. ಈ ಆಯ್ಕೆಯು ರಾಷ್ಟ್ರದ ಆರ್ಥಿಕತೆಯನ್ನು ಬೆಂಬಲಿಸುವ ಮತ್ತು ಭಾರತೀಯ ಆಚರಣೆಗಳ ಶ್ರೀಮಂತಿಕೆಯನ್ನು ಉತ್ತೇಜಿಸುವ ಪ್ರಧಾನಿ ಮನವಿಗೆ ಬೆಂಬಲವಾಗಿದೆ.

ಸದ್ಯದಲ್ಲೇ ರಾಕುಲ್ ಪ್ರೀತ್ ಸಿಂಗ್-ಜಾಕಿ ಭಗ್ನಾನಿ ಮದುವೆ; ಎಲ್ಲಿ, ಯಾವಾಗ ...?

click me!