ಅಲ್ಲು ಅರ್ಜುನ್ ಸೀರೆಯುಟ್ಟು ಶೂಟಿಂಗ್​ಗೆ ಬಂದ್ರಾ? ಲೀಕ್ ಆಗಿರೋ ಫೋಟೋಗಳ ನೋಡಿ ಉಫ್​ ಎಂದ ಫ್ಯಾನ್ಸ್​

Published : Jan 31, 2024, 02:44 PM ISTUpdated : Jan 31, 2024, 02:45 PM IST
 ಅಲ್ಲು ಅರ್ಜುನ್ ಸೀರೆಯುಟ್ಟು ಶೂಟಿಂಗ್​ಗೆ ಬಂದ್ರಾ?  ಲೀಕ್ ಆಗಿರೋ ಫೋಟೋಗಳ ನೋಡಿ ಉಫ್​ ಎಂದ ಫ್ಯಾನ್ಸ್​

ಸಾರಾಂಶ

ನಟ ಅಲ್ಲು ಅರ್ಜುನ್​ ಅವರ ಬಹುನಿರೀಕ್ಷಿತ ಪುಷ್ಪಾ-2 ಬಿಡುಗಡೆ ಬೆನ್ನಲ್ಲೇ ಸೀರೆಯುಟ್ಟ ಫೋಟೋಗಳು ಲೀಕ್​ ಆಗಿವೆ. ಅಷ್ಟಕ್ಕೂ ಇದ್ಯಾವ ಚಿತ್ರದ ದೃಶ್ಯ?   

ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್ ಅಭಿನಯದ 'ಪುಷ್ಪ: ದಿ ರೈಸ್' ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ದೇಶದ ಗಡಿ ದಾಟಿ ಪುಷ್ಪ ಸದ್ದು ಮಾಡಿದೆ. ಸಿನಿಮಾ ನಿರೀಕ್ಷೆಗೂ ಮೀರಿ ದೊಡ್ಡ ಯಶಸ್ಸು ಕಂಡಿದೆ. ಜೊತೆಗೆ ಬಾಕ್ಸಾಫೀಸ್ ಗಳಿಕೆಯಲ್ಲೂ ಕೂಡ ಮಹತ್ತರ ದಾಖಲೆ ಮಾಡಿತ್ತು. ಈ ಚಿತ್ರದಲ್ಲಿದ ಮೇಕಿಂಗ್, ನಟ-ನಟಿಯರ  ಲುಕ್, ಡೈಲಾಗ್ಸ್ ಪರಿ ಕೂಡ ವಿಭಿನ್ನ ಮತ್ತು ಹೊಸತು ಎನಿಸಿರುವ ಕಾರಣ, ಇಷ್ಟೆಲ್ಲಾ  ಸಕ್ಸಸ್​ ಕಂಡಿತ್ತು. ಇದರ ಬೆನ್ನಲ್ಲೇ ಪುಷ್ಪ ಎನ್ನುವ ಸೀರೆ ಕೂಡ ಸಕತ್​ ವೈರಲ್​ ಆಗಿತ್ತು. ಅಂದಹಾಗೆ, ಈ ಸೀರೆಯಲ್ಲಿ   ಶ್ರೀವಲ್ಲಿ ಅವತಾರದಲ್ಲಿರುವ ರಶ್ಮಿಕಾ ಮಂದಣ್ಣ ಮತ್ತು ಪುಷ್ಪ ಅವತಾರದಲ್ಲಿ ಇರುವ ಅಲ್ಲು ಅರ್ಜುನ್ ಫೋಟೊಗಳು ಇದ್ದವು. ರಶ್ಮಿಕಾ, ಅಲ್ಲು ಅರ್ಜುನ್ ಪ್ರಿಂಟ್ ಇರುವ ಬಗೆ ಬಗೆ ಬಣ್ಣದ ಸೀರೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟವು.
 
ಇದು ಪುಷ್ಪ-1 ಸೀರೆಯ ವಿಷ್ಯವಾದರೆ ಇದೀಗ  ಪುಷ್ಪ 2 ನಲ್ಲೂ ಸೀರೆ ಸಕತ್​ ಸೌಂಡ್​ ಮಾಡುತ್ತಿದೆ. ಅಲ್ಲು ಅರ್ಜುನ್ ಅಭಿನಯದ ಪುಷ್ಪ 2: ದಿ ರೂಲ್ 2024 ರ ಬಹು ನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದಾಗಿದೆ. ಸುಕುಮಾರ್ ಅವರ ನಿರ್ದೇಶನದ ಈ ಚಿತ್ರ 2021 ರ ಪುಷ್ಪ: ದಿ ರೈಸ್ ಸಿನಿಮಾದ ಮುಂದುವರೆದ ಭಾಗವಾಗಿದೆ. ಸಿನಿಮಾ ಸೆಟ್‌ಗಳಿಂದ ಅಲ್ಲು ಅರ್ಜುನ್‌   ಸೀರೆಯ ಲುಕ್‌ ಲೀಕ್‌ ಆಗಿದೆ.  ಅಲ್ಲು ಅರ್ಜುನ್ ಅವರು ಸೀರೆ ತೊಟ್ಟು ಶೂಟಿಂಗ್ ಗಾಗಿ ಕಾಯುತ್ತಿರುವ ಫೋಟೋ ಅದಾಗಿದ್ದು, ಸಿನಿಮಾದ ಪ್ರಮುಖ ದೃಶ್ಯದಲ್ಲಿ ಅವರು ಆ ರೀತಿ ಕಾಣಲಿದ್ದಾರೆ ಎನ್ನಲಾಗಿದೆ. ಇದರ ಫೋಟೋಗಳು ಲೀಕ್​ ಆಗಿವೆ. ಆದರೆ ಇದು ತಿರುಚಿದ ಫೋಟೋ ಎನ್ನಲಾಗಿದೆ. ಈ ಬಗ್ಗೆ ಚಿತ್ರತಂಡ ಗರಂ ಆಗಿದೆ. 

ರಜನೀಕಾಂತ್‌ ‘ಸಂಘಿ‘ ವಿವಾದ: ಅಪ್ಪ-ಅಮ್ಮಗಳ ಮಾತಿನ ಮಧ್ಯೆ ಬಂದ ನಟ ಅಹಿಂಸಾ ಚೇತನ್‌!
 
ಇನ್ನು ಈ ಚಿತ್ರದ ಬಗ್ಗೆ ಹೇಳುವುದಾದರೆ, ರಶ್ಮಿಕಾ ಮಂದಣ್ಣ, ಫಹದ್ ಫಾಸಿಲ್, ಜಗಪತಿ ಬಾಬು, ಪ್ರಕಾಶ್ ರಾಜ್, ಸುನಿಲ್, ಅನಸೂಯಾ ಭಾರದ್ವಾಜ್ ಮತ್ತು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ ಮತ್ತು ಯಲಮಂಚಿಲಿ ರವಿಶಂಕರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಪುಷ್ಪ 2: ದಿ ರೂಲ್ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. 

ಆಗಸ್ಟ್​ 15ರಂದು ರಿಲೀಸ್​ ಆಗಲಿದೆ ಎನ್ನಲಾಗುತ್ತಿದೆ.  ಅಲ್ಲು ಅರ್ಜುನ್ ಹುಟ್ಟುಹಬ್ಬದ ಸ್ಪೆಷಲ್ ಆಗಿ ಹೊರಬಿದ್ದಿದ್ದ ಪುಷ್ಪ-2 ಟೀಸರ್ ಝಲಕ್ ಹಲ್ ಚಲ್ ಎಬ್ಬಿಸಿತ್ತು. ಪುಷ್ಪ 2 ಟೀಸರ್ ಜೊತೆ ಹೊರಬಿದ್ದಿದ್ದ ಪುಷ್ಪರಾಜನ ಹೊಸ ಫೋಟೋವಂತೂ ಟಾಕ್ ಆಫ್ ದಿ ಟಾಲಿವುಡ್ ಆಗಿತ್ತು. ಸೀರೆ ತೊಟ್ಟು ಬಳೆ ತೊಟ್ಟು ಮೂಗುತಿ ಧರಿಸಿ ಕೈಯಲ್ಲಿ ಪಿಸ್ತೂಲ್ ಹಿಡಿದು ದರ್ಶನ ಕೊಟ್ಟಿದ್ದ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಅವತಾರಕ್ಕೆ ಫ್ಯಾನ್ಸ್ ದಿಲ್​ಖುಷ್​ ಆಗಿದ್ದರು.  ಶೂಟಿಂಗ್ ಹಂತದಲ್ಲಿರುವ ಪುಷ್ಪ ಸೀಕ್ವೆಲ್ ಕ್ರೇಜ್‌ಗೆ ಬಾಲಿವುಡ್ ಮಂದಿ ಥಂಡಾ ಹೊಡೆದಿದ್ದಾರೆ. ಸುಕುಮಾರ್ ಚಿತ್ರದ ಸೆಟ್‌ಗಳಿಂದ ಫೋಟೋಗಳು ಸೋರಿಕೆಯಾಗುತ್ತಿರುವುದು ಇದೇ ಮೊದಲಲ್ಲ. 2020 ರಲ್ಲಿಯೂ ಅಲ್ಲು ಅರ್ಜುನ್ ಅವರ ಪುಷ್ಪರಾಜ್ ಲುಕ್ ಸೋರಿಕೆ ಆಗಿತ್ತು. 2021 ರಲ್ಲಿ ಪುಷ್ಪ ಬಿಡುಗಡೆಯಾಯಿತು. ಬ್ಲಾಕ್‌ಬಸ್ಟರ್‌ ಹಿಟ್‌ ಪಡೆಯಿತು. ಈ ಸಿನಿಮಗಾಗಗಿ ಅಲ್ಲು ಅರ್ಜುನ್ ಮತ್ತು ದೇವಿ ಶ್ರೀ ಪ್ರಸಾದ್ ಕ್ರಮವಾಗಿ ಅತ್ಯುತ್ತಮ ನಟ ಮತ್ತು ಅತ್ಯುತ್ತಮ ಸಂಗೀತ ನಿರ್ದೇಶಕ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದರು. 
ಅವ್ರ ಬಗ್ಗೆ ಯಾಕೆ ಗುರೂ? ಅವ್ರ ಫ್ಯಾನ್ಸ್‌ ಸರಿಯಿಲ್ಲ ಎಂದ ಸುದೀಪ್‌: ಅಷ್ಟಕ್ಕೂ ಕಿಚ್ಚ ಹೇಳಿದ್ದು ಇವ್ರ ಬಗ್ಗೆ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!