ಬಾಲಿವುಡ್ ನಟಿ ಕರೀನಾ ಕಪೂರ್ ಏನು ತಿಂತಾರೆ? ಇಷ್ಟೊಂದು ಬೆಳ್ಳಗೆ, ತೆಳ್ಳಗೆ ಇರಲು ಕಾರಣ ಏನು? ಯಾವ್ದು ಅವರ ಫೆವರೆಟ್ ಫುಡ್? ಇದಕ್ಕೆಲ್ಲ ಉತ್ತರ ಇಲ್ಲಿದೆ.
ಬಾಲಿವುಡ್ ನಟಿ ಬೇಬೋ ಕರೀನಾ ಕಪೂರ್ (Bollywood actress Bebo Kareena Kapoor ) 44ನೇ ವಯಸ್ಸಿನಲ್ಲೂ ಯುವಕರನ್ನು ಆಕರ್ಷಿಸುವಷ್ಟು ಫಿಟ್ ಆಗಿದ್ದಾರೆ. ಅವರನ್ನು ನೋಡಿದ್ರೆ 2 ಮಕ್ಕಳ ತಾಯಿ ಎನ್ನಲು ಸಾಧ್ಯವೇ ಇಲ್ಲ. ಕರೀನಾ ತಮ್ಮ ಫಿಟ್ನೆಸ್, ಡಯಟ್ ಹಾಗೂ ವ್ಯಾಯಾಮಕ್ಕೆ ಹೆಚ್ಚಿನ ಗಮನ ನೀಡ್ತಾರೆ. ಇದೇ ಅವರ ಬ್ಯೂಟಿಯನ್ನು ಮತ್ತಷ್ಟು ಹೆಚ್ಚಿಸಿದೆ. ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ಕರೀನಾ ತಮ್ಮ ಬ್ಯೂಟಿ ಸಿಕ್ರೇಟ್ ಹಾಗೂ ತಮ್ಮಿಷ್ಟದ ಡಯಟ್ ಬಗ್ಗೆ ಮಾತನಾಡಿದ್ದಾರೆ. ನ್ಯೂಟ್ರಿಶಿಯನ್ ರಿತುಜಾ ದಿವೇಕರ್ ಅವರ ದಿ ಕಾಮನ್ಸೆನ್ಸ್ ಡಯಟ್ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದ ಕರೀನಾ, ತಮ್ಮ ದಿನಚರಿ, ಜೀವನದಲ್ಲಿ ಅತೀ ಹೆಚ್ಚು ಇಷ್ಟಪಡುವ ಆಹಾರದ ಬಗ್ಗೆ ಹೇಳಿದ್ದಾರೆ.
ಕರೀನಾಗೆ ಇಷ್ಟ ಈ ಆಹಾರ : ಕಾರ್ಯಕ್ರಮದಲ್ಲಿ ಕರೀನಾ ಖಿಚಡಿ (Khichdi) ಬಗ್ಗೆ ಹೇಳಿದ್ದಾರೆ. ಕರೀನಾಗೆ ಖಿಚಡಿ ಅಂದ್ರೆ ತುಂಬಾ ಇಷ್ಟ. ಒಂದೆರಡು ದಿನ ಖಿಚಡಿ ತಿನ್ನದೆ ಹೋದ್ರೆ ಕರೀನಾಗೆ ತಿನ್ನೋ ಆಸೆ ಶುರುವಾಗುತ್ತೆ. ಅದಿಲ್ಲದೆ ಕರೀನಾ ಇರೋದು ಬಹಳ ಕಷ್ಟ. ಕಾರ್ಯಕ್ರಮದಲ್ಲಿ ಮಾತನಾಡಿದ ಕರೀನಾ, ನಾನು ಸಾಕಷ್ಟು ಆಹಾರವನ್ನು ಟ್ರೈ ಮಾಡಿದ್ದೇನೆ. ಆದ್ರೆ ನನಗೆ ಖಿಚಡಿ ಬಹಳ ಇಷ್ಟ. ನಾನು ಮನೆಯಲ್ಲಿ ಖಿಚಡಿ ಇಲ್ಲ ಎಂದಾಗ ರಿತುಜಾಗೆ ಮೆಸ್ಸೇಜ್ ಕಳುಹಿಸುತ್ತೇನೆ. ಖಿಚಡಿ ತಿನ್ನದಿದ್ದರೆ, ನನಗೆ ನಿದ್ರೆ ಬರುವುದಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಖಿಚಡಿ ಇಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಕರೀನಾ ಹೇಳಿದ್ದಾರೆ. ಮನೆಯ ಆಹಾರ ನನಗೆ ಪ್ರಿಯ. ಖಿಚಡಿ ನನ್ನ ಕಂಫರ್ಟ್ ಆಹಾರ. ದಿನದಲ್ಲಿ ಐದು ಬಾರಿ ಬೇಕಾದ್ರೂ ನಾನು ಖಿಚಡಿ ತಿನ್ನುತ್ತೇನೆ ಎಂದು ಕರೀನಾ ಹೇಳಿದ್ದಾರೆ. ಕರೀನಾಗೆ ಹಸಿವಿನಿಂದ ಇರಲು ಸಾಧ್ಯವಿಲ್ವಂತೆ. ಮಧ್ಯಂತರ ಉಪವಾಸ ಕೂಡ ನಾನು ಮಾಡೋದಿಲ್ಲ. ಹಸಿವು ನನ್ನ ಮನಸ್ಥಿತಿ ಹಾಳು ಮಾಡುತ್ತೆ, ಕೆಲಸ ಮಾಡಲು ಇದ್ರಿಂದ ತೊಂದ್ರೆ ಆಗುತ್ತೆ ಎಂದು ಕರೀನಾ ಹೇಳಿದ್ದಾರೆ.
ಮೊದಲ ನೋಟದಲ್ಲೇ ಸ್ನೇಹ ಲವ್ವಲ್ಲಿ ಬಿದ್ದಿದ್ದ ಅಲ್ಲು ಅರ್ಜುನ್… ಇಲ್ಲಿದೆ ಪುಷ್ಫಾ ನಟನ ಲವ್ ಸ್ಟೋರಿ
ಫಿಟ್ನೆಸ್ ಬಗ್ಗೆ ಕರೀನಾ ಹೇಳಿದ್ದೇನು : ವಯಸ್ಸನ್ನು ಒಂದು ಸಂಖೆ ಅಂತ ಪರಿಗಣಿಸ್ತಾರೆ ಕರೀನಾ. ವಯಸ್ಸು ಕೇವಲ ಒಂದು ಸಂಖ್ಯೆ. ನಾನು ಯಾವಾಗಲೂ ಫಿಟ್ ಆಗಿರಲು ಬಯಸ್ತೇನೆ. ಇದ್ರಿಂದ ವೃದ್ಧಾಪ್ಯದಲ್ಲಿ ಏನೇ ಬಂದರೂ ಅದನ್ನು ನಾನು ಚೆನ್ನಾಗಿ ಎದುರಿಸಬಲ್ಲೆ ಎಂದು ಕರೀನಾ ಹೇಳಿದ್ದಾರೆ. ವ್ಯಾಯಾಮ, ವಾಕಿಂಗ್, ಸೂರ್ಯ ನಮಸ್ಕಾರ, ಸ್ಕಿನ್ ಟ್ರೀಟ್ ಮೆಂಟ್, ಬೊಟಾಕ್ಸ್ ಜೊತೆ ನಮ್ಮ ಸಣ್ಣಪುಟ್ಟ ಕೆಲಸವನ್ನು ನಾವೇ ಮಾಡಿಕೊಳ್ಬೇಕು ಎಂದು ಕರೀನಾ ಹೇಳಿದ್ದಾರೆ.
ಕರೀನಾ – ಸೈಫ್ ರಲ್ಲಿ ಯಾರು ಬೆಸ್ಟ್ ಕುಕ್ : ಮಾತುಕತೆ ವೇಳೆ ಕರೀನಾ ತಮ್ಮ ಪತಿ ಸೈಫ್ ಅಲಿ ಖಾನ್ ಅವರನ್ನು ಹೊಗಳಿದ್ದಾರೆ. ಅವರು ನನಗಿಂತ ಬೆಸ್ಟ್ ಕುಕ್ ಎಂದಿರುವ ಕರೀನಾ, ಅವರಿಗೆ ಮೊಟ್ಟೆಯನ್ನೂ ಸರಿಯಾಗಿ ಬೇಯಿಸೋಕೆ ಬರೋದಿಲ್ಲ ಎಂದಿದ್ದಾರೆ.
ಐಶ್ವರ್ಯಾ ರೈ ಬಾಡಿಗಾರ್ಡ್ ಸಂಬಳ ಗೊತ್ತಾದ್ರೆ ಗಾಬರಿ ಬೀಳ್ತೀರಾ!.
ಕೆಲಸದ ಬಗ್ಗೆ ಕರೀನಾ ಅಭಿಪ್ರಾಯ ಏನು? : 85 ವರ್ಷವಾದ್ರೂ ಕರೀನಾ ಕಪೂರ್ ಕೆಲಸ ಮಾಡೋದನ್ನು ಬಿಡೋದಿಲ್ಲವಂತೆ. ನನಗೆ ಅವಲಂಬನೆ ಇಷ್ಟವಿಲ್ಲ ಎಂದು ಕರೀನಾ ಹೇಳಿದ್ದಾರೆ. ಕರೀನಾ ಕಪೂರ್ ಸದ್ಯ ಯಾವುದೇ ಸಿನಿಮಾದಲ್ಲಿ ನಟಿಸ್ತಿಲ್ಲ. ಹಿಂದಿನ ದೀಪಾವಳಿಯಲ್ಲಿ ತೆರೆಗೆ ಬಂದ ಸಿಂಘಮ್ ಅಗೇನ್ ಅವರ ಕೊನೆ ಸಿನಿಮಾ. ಆದ್ರೆ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಹಣ ಗಳಿಸೋಕೆ ವಿಫಲವಾಗಿದೆ.
ಖಿಚಡಿ ಬಗ್ಗೆ ತಜ್ಞರ ಅಭಿಪ್ರಾಯ ಏನು? : ಕರೀನಾಗೆ ಇಷ್ಟವಾಗಿರುವ ಖಿಚಡಿ ಆರೋಗ್ಯಕ್ಕೆ ಒಳ್ಳೆಯದು. ಆರೋಗ್ಯ ತಜ್ಞರು ದಿನಕ್ಕೆ ಒಂದು ಬಾರಿಯಾದ್ರೂ ಖಿಚಡಿ ತಿನ್ನುವಂತೆ ಶಿಫಾರಸು ಮಾಡುತ್ತಾರೆ. ಇದು ಹಗುರ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ತೂಕ ನಿಯಂತ್ರಣಕ್ಕೆ ಸಹಕಾರಿ. ದೇಸಿ ತುಪ್ಪದ ಜೊತೆ ತಯಾರಿಸಿದ ಅನ್ನ ಹಾಗೂ ಹೆಸರು ಬೇಳೆ ಖಿಚಡಿ ಆರೋಗ್ಯಕ್ಕೆ ಬಹಳ ಒಳ್ಳೆಯದು.