ತುಕ್ಡೇ ಗ್ಯಾಂಗ್ ವಿರುದ್ಧ ಮಾತಾಡಿ 30 ರಿಂದ 40 ಕೋಟಿ ಕಳ್ಕೊಂಡೆ ಎಂದ ಕಂಗನಾ

Published : May 17, 2023, 07:48 PM ISTUpdated : May 17, 2023, 07:49 PM IST
ತುಕ್ಡೇ ಗ್ಯಾಂಗ್ ವಿರುದ್ಧ ಮಾತಾಡಿ  30 ರಿಂದ 40 ಕೋಟಿ ಕಳ್ಕೊಂಡೆ ಎಂದ ಕಂಗನಾ

ಸಾರಾಂಶ

ದೇಶ ವಿರೋಧಿಗಳ ವಿರುದ್ಧ ಮಾತನಾಡಿದ ಪರಿಣಾಮ 20 ಬ್ರಾಂಡ್‌ಗಳಿಗೆ ಪ್ರಮೋಟ್ ಮಾಡುವ ಆಫರ್‌ ಜೊತೆ ವರ್ಷಕ್ಕೆ ಸುಮಾರು 30 ರಿಂದ 40 ಕೋಟಿ ನಷ್ಟ ಅನುಭವಿಸಿದೆ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಹೇಳಿದ್ದಾರೆ.

ಮುಂಬೈ: ದೇಶ ವಿರೋಧಿಗಳ ವಿರುದ್ಧ ಮಾತನಾಡಿದ ಪರಿಣಾಮ 20 ಬ್ರಾಂಡ್‌ಗಳಿಗೆ ಪ್ರಮೋಟ್ ಮಾಡುವ ಆಫರ್‌ ಜೊತೆ ವರ್ಷಕ್ಕೆ ಸುಮಾರು 30 ರಿಂದ 40 ಕೋಟಿ ನಷ್ಟ ಅನುಭವಿಸಿದೆ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಹೇಳಿದ್ದಾರೆ. 'ನನಗೆ ಏನು ಹೇಳಬೇಕೆನಿಸುತ್ತದೆಯೋ ಅದನ್ನು ಹೇಳುತ್ತೇನೆ' ಎಂಬ ಹೇಳಿಕೆ ನೀಡಿದ್ದ ಸ್ಪೇಸ್‌ಎಕ್ಸ್ ಮಾಲೀಕ ಟ್ವಿಟ್ಟರ್ ಒಡೆಯ ಎಲಾನ್ ಮಸ್ಕ್‌ ಅವರನ್ನು ಇತ್ತೀಚೆಗೆ ಹೊಗಳಿದ್ದ ಬಾಲಿವುಡ್ ಕ್ವೀನ್ ತಾನು ಹೀಗೆ ಮಾತನಾಡಿದ್ದರಿಂದ ತನಗಾದ ನಷ್ಟದ ಬಗ್ಗೆ ಹೇಳಿದ್ದಾರೆ.

ಸ್ಪೇಸ್‌ಎಕ್ಸ್ ಸಂಸ್ಥಾಪಕ, ಅಮೆರಿಕಾದ ಉದ್ಯಮಿ ಟ್ವಿಟ್ಟರ್‌ನ ಒಡೆಯ ಎಲಾನ್ ಮಸ್ಕ್‌ (Elon Musk) ಅವರ ಸಂದರ್ಶನದ ತುಣುಕೊಂದನ್ನ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಇತ್ತೀಚೆಗೆ ಹಂಚಿಕೊಂಡ ಕಂಗನಾ, ನಾನು ಇದೇ ರೀತಿ ನೇರವಾಗಿ ದೇಶ ವಿರೋಧಿಗಳ ಬಗ್ಗೆ ಮಾತನಾಡಿದ್ದರಿಂದ 25 ಬ್ರಾಂಡ್‌ಗಳ ಅನುಮೋದನೆ ಕಳೆದುಕೊಳ್ಳಬೇಕಾಯಿತು. ರಾತ್ರೋರಾತ್ರಿ ನನ್ನನ್ನು ಬ್ರಾಂಡ್ ಪ್ರಮೋಷನ್‌ ಪ್ರಾಜೆಕ್ಟ್‌ಗಳಿಂದ ಕೈ ಬಿಡಲಾಯಿತು. ಇದರಿಂದ  ನನಗೆ ವರ್ಷಕ್ಕೆ 30 ರಿಂದ 40 ಕೋಟಿ ನಷ್ಟ ಉಂಟಾಯಿತು ಎಂದು ಹೇಳಿಕೊಂಡಿದ್ದಾರೆ. 

ಬಾಲಿವುಡ್ ಕಂಗನಾ ಮಾದಕ ದ್ರವ್ಯ ವ್ಯಸನಿಯೇ? Ex ಹೇಳಿದ್ದಿಷ್ಟು

ಕಂಗನಾ ಶೇರ್ ಮಾಡಿದ್ದ ಎಲಾನ್ ಮಸ್ಕ್‌ನ ಸಂದರ್ಶನದ ತುಣುಕಿನಲ್ಲಿ, ಎಲಾನ್ ಮಸ್ಕ್: "ನನಗೆ ಬೇಕಾದುದನ್ನು ನಾನು ಹೇಳುತ್ತೇನೆ, ಮತ್ತು ಅದರ ಪರಿಣಾಮ ಹಣವನ್ನು ನಾನೂ ಕಳೆದುಕೊಳ್ಳುತ್ತಿದ್ದರೆ ಹಾಗೇಯೇ ಆಗಲಿ" ಎಂದು ಹೇಳಿದ್ದರು.  ಇದನ್ನು ಶೇರ್ ಮಾಡಿದ ಕ್ವೀನ್ ಕಂಗನಾ, ಇದು ನಿಜವಾದ ಲಕ್ಷಣ, ಇದು ನಿಜವಾದ ಸ್ವಾತಂತ್ರ್ಯ ಮತ್ತು ಯಶಸ್ಸು, ಹಿಂದೂ ಧರ್ಮದ ಪರವಾಗಿ , ರಾಜಕಾರಣಿಗಳು,  ದೇಶ ವಿರೋಧಿಗಳು , ತುಕ್ಡೆ ಗ್ಯಾಂಗ್ ವಿರುದ್ಧ ಮಾತನಾಡಿದ್ದಕ್ಕೆ ನನ್ನ ಬಳಿ ಇದ್ದ 20 ರಿಂದ 25 ಬ್ರ್ಯಾಂಡ್‌ಗಳ ಪ್ರಮೋಷನ್‌ ಕೈ ಬಿಟ್ಟು ಹೋದವು.  ಅವರು ರಾತ್ರೋರಾತ್ರಿ ನನ್ನನ್ನು ಕೈಬಿಟ್ಟರು ಮತ್ತು ಅದರಿಂದ ನನಗೆ ವರ್ಷಕ್ಕೆ 30 ರಿಂದ 40 ಕೋಟಿ ನಷ್ಟವಾಯ್ತು ಎಂದು ಕಂಗನಾ ಹೇಳಿದ್ದಾರೆ. 

ಆದರೆ ನಾನು ಸ್ವತಂತ್ರಳಾಗಿದ್ದೇನೆ ಮತ್ತು ನನಗೆ ಅನಿಸಿದ್ದನ್ನು ಹೇಳುವುದಕ್ಕೆ ಯಾವುದೂ ನನ್ನನ್ನು ತಡೆಯಬಾರದು. ಖಂಡಿತವಾಗಿಯೂ ಅಜೆಂಡಾ ಹೊಂದಿರುವ ಬಹುರಾಷ್ಟ್ರೀಯ ಕಂಪನಿಗಳು  ಹಾಗೂ ಅದರ ಕಾರ್ಪೋರೇಟ್ ಬ್ರ್ಯಾಂಡ್‌ನ ಮುಖ್ಯಸ್ಥರು ಭಾರತವನ್ನು, ಭಾರತದ ಏಕತೆಯನ್ನು ಭಾರತದ ಸಂಸ್ಕೃತಿಯನ್ನು ದ್ವೇಷಿಸಬಾರದು ಎಂದು ನಾನು ಬಯಸುತ್ತೇನೆ. ಈ ಸಂದರ್ಭದಲ್ಲಿ ನಾನು ಎಲಾನ್ ಮಸ್ಕ್ ಅವರನ್ನು ಪ್ರಶಂಸಿಸುತ್ತೇನೆ.  ಏಕೆಂದರೆ ಎಲ್ಲರೂ ದುರ್ಬಲತೆಯನ್ನು ಪ್ರದರ್ಶಿಸಿದರು. ಕನಿಷ್ಠ ಶ್ರೀಮಂತ ವ್ಯಕ್ತಿ ಹಣದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅಂತಹ ಹೆಚ್ಚು ಶ್ರೀಮಂತರನ್ನು ನಾನು ನೋಡುತ್ತೇನೆ ಎಂದು ಕ್ವೀನ್ ಹೇಳಿಕೊಂಡಿದ್ದಾರೆ. 

ಹೃತಿಕ್ ರೋಷನ್ ಜೊತೆ ಗಲಾಟೆಗೂ ಮುನ್ನ ಆಮೀರ್ ಖಾನ್ ನನ್ನ ಬೆಸ್ಸ್‌ ಫ್ರೆಂಡ್‌ ಆಗಿದ್ದರು: ಕಂಗನಾ

ಕಂಗನಾ   ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಎಲಾನ್ ಮಸ್ಕ್ ಅವರನ್ನು ಹೊಗಳುತ್ತಿರುತ್ತಾರೆ. ಟ್ವಿಟ್ಟರ್ ಮಾಲೀಕತ್ವವನ್ನು ಎಲಾನ್ ಮಸ್ಕ್ ವಹಿಸಿಕೊಂಡಾಗಲೂ ಕಂಗನಾ ಎಲಾನ್ ಮಸ್ಕ್‌ಗೆ ಶುಭ  ಹಾರೈಸಿದ್ದರು.  

ಇನ್ನು ಕಂಗನಾ ಸಿನಿಮಾಗಳಿಗೆ ಬರುವುದಾದರೆ, ಪಿ ವಾಸು ಅವರ ಚಂದ್ರಮುಖಿ 2 (Chandramukhi 2) ಸಿನಿಮಾದಲ್ಲಿ ಕಂಗನಾ ಕಾಣಿಸಿಕೊಳ್ಳಲಿದ್ದಾರೆ. ಮುಂಬರುವ ತಿಂಗಳುಗಳಲ್ಲಿ, ಪ್ರೇಕ್ಷಕರು ಮಣಿಕರ್ಣಿಕಾ ರಿಟರ್ನ್ಸ್: ದಿ ಲೆಜೆಂಡ್ ಆಫ್ ದಿಡ್ಡಾ (Manikarnika Returns: The Legend of Didda) ಮತ್ತು ದಿ ಇನ್ಕಾರ್ನೇಷನ್: ಸೀತಾದಲ್ಲಿ (The Incarnation: Sita) ಕಂಗನಾ ಅವರನ್ನು ನೋಡಬಹುದು ಇದರ ಜೊತೆಗೆ ತೇಜಸ್ ಅಲ್ಲೂ ಕಂಗನಾ ಇದ್ದು, ಇದರಲ್ಲಿ ಅವರು ಭಾರತೀಯ ವಾಯುಪಡೆಯ ಪೈಲಟ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಇದಲ್ಲದೇ  ಕಂಗನಾ ಅವರ ಮೊದಲ ಏಕವ್ಯಕ್ತಿ ನಿರ್ದೇಶನದ ಚಲನಚಿತ್ರ ಎಮರ್ಜೆನ್ಸಿ ಮುಂಬರುವ ದಿನಗಳಲ್ಲಿ ತೆರೆ ಕಾಣಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?