ಏನಾದ್ರು ತುಂಬಿಸಿಕೊಂಡು ಹೋಗಮ್ಮ...; ಖಾಲಿ ಬ್ಯಾಗ್ ಹಿಡಿದು ಬಂದ ಅಲಿಯಾ ಕಾಲೆಳೆದ ನೆಟ್ಟಿಗರು

Published : May 17, 2023, 05:55 PM ISTUpdated : May 17, 2023, 05:57 PM IST
ಏನಾದ್ರು ತುಂಬಿಸಿಕೊಂಡು ಹೋಗಮ್ಮ...; ಖಾಲಿ ಬ್ಯಾಗ್ ಹಿಡಿದು ಬಂದ ಅಲಿಯಾ ಕಾಲೆಳೆದ ನೆಟ್ಟಿಗರು

ಸಾರಾಂಶ

ಖಾಲಿ ಬ್ಯಾಗ್ ಹಿಡಿದು ಬಂದ ಅಲಿಯಾ ಭಟ್‌ಗೆ ಏನಾದ್ರು ತುಂಬಿಸಿಕೊಂಡು ಹೋಗಮ್ಮ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. 

ಟ್ರೋಲ್‌ಗಳು ಸೆಲೆಬ್ರಿಟಿಗಳಿಗೆ ಸಾಮಾನ್ಯವಾಗಿದೆ. ಕಾಲೆಳೆಯುವವರ ಬಗ್ಗೆ ಸಿನಿಮಾ ಮಂದಿ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಹಾಗಂತ ಟ್ರೋಲ್‌ಗಳು ಸಹ ಕಡಿಮೆ ಆಗುತ್ತಿಲ್ಲ. ಬಹುಶಃ ಟ್ರೋಲ್ ಆಗದೇ ಇರುವ ಸೆಲೆಬ್ರಿಟಿಗಳಿಲ್ಲ ಅನ್ಸುತ್ತೆ. ಒಂದಲ್ಲೊಂದು ಒಂದು ಕಾರಣಕ್ಕೆ ಟ್ರೋಲ್ ಆಗಿರುತ್ತಾರೆ, ಆಗುತ್ತಿರುತ್ತಾರೆ. ಇದೀಗ ಬಾಲಿವುಡ್ ನಟಿ ಅಲಿಯಾ ಭಟ್ ಸಖತ್ ಟ್ರೋಲ್ ಆಗಿದ್ದಾರೆ. ಇತ್ತೀಚೆಗಷ್ಟೆ ಫ್ಯಾಷನ್ ಈವೆಂಟ್‌ನಲ್ಲಿ ಕಾಣಿಸಿಕೊಂಡ ಅಲಿಯಾ ಭಟ್ ಖಾಲಿ ಬ್ಯಾಗ್ ಹಿಡಿದು ಬಂದಿದ್ದರು. ಅಲಿಯಾ ಕೈಯಲ್ಲಿದ್ದ ಸ್ಟೈಲಿಶ್ ಆಗಿರುವ ಖಾಲಿ ಬ್ಯಾಗ್ ನೋಡಿ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. 

ಅಲಿಯಾ ಭಟ್ ಇತ್ತೀಚೆಗಷ್ಟೆ ಇಟಾಲಿಯನ್ ಐಷಾರಾಮಿ ಫ್ಯಾಶನ್ ಬ್ರಾಂಡ್‌ ಗುಚ್ಚಿಗೆ ಬ್ರಾಂಡ್ ಅಂಬಾಸಿಡರ್ ಆಗುವ ಮೂಲಕ ಭಾರತದ ಮೊದಲ ಸ್ಟಾರ್ ಎನ್ನುವ ಹೆಗ್ಗಳಿಕೆ ಗಳಿಸಿದ್ದಾರೆ. ಇತ್ತೀಚೆಗಷ್ಟೆ ನಡೆದ ಗಿಚ್ಚಿಯ ಫ್ಯಾಷನ್ ಈವೆಂಟ್ ನಲ್ಲಿ ಅಲಿಯಾ ಭಾಗಿಯಾಗಿದ್ದರು. ಕಪ್ಪು ಡ್ರೆಸ್‌ನಲ್ಲಿ ಮಸ್ತ್ ಆಗಿ ಕಾಣಿಸುತ್ತಿದ್ದ ಅಲಿಯಾ ಕ್ಯಾಮರಾ ಮುಂದೆ ಸಖತ್ ಪೋಸ್ ನೀಡಿದರು. ಅಲಿಯಾ ಕಪ್ಪು ಡ್ರೆಸ್ ಧರಿಸುವ ಜೊತೆಗೆ ಕೈಯಲ್ಲಿ ಬ್ಯಾಗ್ ಹಿಡಿದಿದ್ದರು. ಬ್ಯಾಗ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಅಲಿಯಾ ಹಿಡಿದಿರುವ ಬ್ಯಾಗ್‌ನಲ್ಲಿ ಏನು ಇರಲಿಲ್ಲ. ಪಾರದರ್ಶಕ ಬ್ಯಾಗ್ ಅದಾಗಿತ್ತು. ಬ್ಯಾಗ್ ನೋಡಿದ ನೆಟ್ಟಿಗರು ಅಲಿಯಾ ಕಾಲೆಳೆಯುತ್ತಿದ್ದಾರೆ. ಆ ಬ್ಯಾಗ್ನಲ್ಲಿ ಏನಾದ್ರು ತುಂಬಿಸಿಕೊಂಡು ಬರಬೇಕು ತಾನೆ ಎಂದು ಕೇಳುತ್ತಿದ್ದಾರೆ. 

ಖಾಲಿ ಬ್ಯಾಗ್‌ಅನ್ನು ಯಾಕೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಕನಿಷ್ಠ ಪಕ್ಷ ಕೆಲವು ವಸ್ತುಗಳನ್ನು ಹಿಡಿದುಕೊಳ್ಳಬೇಕು ತಾನೆ ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ಅಲಿಯಾ ಭಟ್ ಅವರನ್ನು ಹಾಡಿಹೊಗಳುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಜಾಗತಿಕ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವುದು ನಿಜಕ್ಕೂ ಗ್ರೇಟ್ ಎಂದು ಹೇಳುತ್ತಿದ್ದಾರೆ. ಮತ್ತೊಬ್ಬ ಕಾಮೆಂಟ್ ಮಾಡಿ, 'ಬ್ಯಾಗ್ ಖಾಲಿಯಾಗಿದೆ ಎಂದು ಹೇಳುವವರಿಗೆ ಆ ಬ್ಯಾಗ್ ಅನ್ನು ಹಿಡಿದು ಕೊಳ್ಳುವ ಯೋಗ್ಯತೆ ಕೂಡ ಇಲ್ಲ' ಎಂದು ಹೇಳುತ್ತಿದ್ದಾರೆ. 

ಇಟಾಲಿಯನ್ ಫ್ಯಾಶನ್ ಹೌಸ್ ಗುಸ್ಸಿಯ ಮೊದಲ ಭಾರತೀಯ ಜಾಗತಿಕ ರಾಯಭಾರಿಯಾಗಿ ಆಲಿಯಾ ಭಟ್‌

ಮೆಟ್ ಗಾಲಾ 2023 ರಲ್ಲಿ ಅವರ ಬಹು ನಿರೀಕ್ಷಿತ ಮತ್ತು ಯಶಸ್ವಿ ಚೊಚ್ಚಲ ಪ್ರವೇಶದ ನಂತರ, ಆಲಿಯಾ ಐಷಾರಾಮಿ ಲೇಬಲ್‌ನ ಜಾಗತಿಕ ಮುಖಗಳಲ್ಲಿ ಒಬ್ಬರಾಗುತ್ತಾರೆ. ಆಲಿಯಾ ಮೆಟ್‌ ಗಾಲಾದಲ್ಲಿ  'ಇನ್ ಹಾನರ್ ಆಫ್ ಕಾರ್ಲ್' ಥೀಮ್‌ಗೆ ಅನುಗುಣವಾಗಿ ಸುಮಾರು 1 ಲಕ್ಷ ಮುತ್ತುಗಳು ಮತ್ತು ಹರಳಿನ ಅಲಂಕಾರಗಳನ್ನು ಒಳಗೊಂಡಿರುವ ಡಿಸೈನರ್ ಪ್ರಬಲ್ ಗುರುಂಗ್‌ ಅವರ  ಬಿಳಿ ವಧುವಿನ ಗೌನ್ ಧರಿಸಿದ್ದರು.   

ನಾನು ಸ್ಟಾರ್ ಕಿಡ್ ಹೌದು, ಆದರೆ...: ನೆಪೋ ಕಿಡ್ ಎಂದು ಟೀಕಿಸಿದವರಿಗೆ ಅಲಿಯಾ ಖಡಕ್ ತಿರುಗೇಟು

ಸಿನಿಮಾ ವಿಚಾರಕ್ಕೆ ಬರುವುದಾದರೆ ನೆಟ್‌ಫ್ಲಿಕ್ಸ್‌ನ ಸ್ಪೈ ಥ್ರಿಲ್ಲರ್ ಹಾರ್ಟ್ ಆಫ್ ಸ್ಟೋನ್‌ನಲ್ಲಿ ಆಲಿಯಾ ಭಟ್ ಶೀಘ್ರದಲ್ಲೇ ಹಾಲಿವುಡ್‌ನಲ್ಲಿ ಪಾದಾರ್ಪಣೆ ಮಾಡಿದ್ದಾರೆ. ಇದು ಅವರ ಮೊದಲ ಅಮೇರಿಕನ್ ಚಲನಚಿತ್ರವಾಗಿದೆ. ಈ ಚಲನಚಿತ್ರವು ಆಗಸ್ಟ್ 11 ರಂದು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ. ಇದಲ್ಲದೆ ರಣವೀರ್ ಸಿಂಗ್ ಅವರೊಂದಿಗೆ ಕರಣ್ ಜೋಹರ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕತ್ರಿನಾ ಕೈಫ್ ಹಾಗೂ ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ಫರ್ಹಾನ್ ಅಖ್ತರ್ ಅವರ ಜೀ ಲೆ ಜರಾ ಚಿತ್ರೀಕರಣವನ್ನು ಇನ್ನೂ ಪ್ರಾರಂಭಿಸಬೇಕಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಯಾವುದೇ ಹಿನ್ನೆಲೆ ಇಲ್ಲದೆ ಸ್ಟಾರ್ ಆದ ನಟ.. ಮಗ ಹುಟ್ಟಿದಾಗ ಜಾತಕ ಹೇಳಿದ್ರು ಚಿರಂಜೀವಿ: ಅಷ್ಟಕ್ಕೂ ಯಾರು ಆ ಹೀರೋ?
ಮದುವೆ ಬಳಿಕ ಹನಿಮೂನ್ ಕ್ಯಾನ್ಸಲ್ ಮಾಡಿದ ಸಮಂತಾ? ಈ ಹೊಸ ನಿರ್ಧಾರ ತಗೊಂಡು ಶಾಕ್ ಕೊಟ್ಟಿದ್ಯಾಕೆ?