ಸೆಕ್ಸ್​ನಲ್ಲಿ ನಿರಾಸಕ್ತಿ: ಪ್ರಿಯಾಂಕಾ ತಂಗಿ ಮೀರಾ ಚೋಪ್ರಾ ಈಗ 'ಸೂಪರ್​ ವುಮೆನ್​'

By Suvarna News  |  First Published May 17, 2023, 5:48 PM IST

ಲೈಂಗಿಕ ಕ್ರಿಯೆಯಲ್ಲಿ ನಿರಾಸಕ್ತಿ ಹೊಂದಿರುವ ಹೊಸ ವಿಷಯವನ್ನು ಆಧರಿಸಿ ಚಿತ್ರ ತಯಾರಾಗಿದೆ. ಈ ಬಗ್ಗೆ ನಟ ಹೇಳಿದ್ದೇನು? 
 


ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಯಾವ ವಿಷಯದಲ್ಲಿಯೂ  ಅಸ್ಪೃಶ್ಯವಾಗಿ ಉಳಿದಿಲ್ಲ. ಎಲ್ಲಾ ವಿಷಯಗಳ ಮೇಲೂ ಇದಾಗಲೇ ಸಿನಿಮಾ  ನಿರ್ಮಾಣ ಮಾಡಲಾಗಿದೆ. ಹಿಂದೊಮ್ಮೆ ಅಸ್ಪ್ರಶ್ಯ ಎಂದು ಬಿಟ್ಟಿರುವ ವಿಷಯಗಳ ಮೇಲೆಯೂ ಇದಾಗಲೇ ಸಾಕಷ್ಟು ಸಿನಿಮಾಗಳು ಬಂದಿವೆ. ಅವುಗಳಲ್ಲಿ ಹೆಚ್ಚಾಗಿ ಗಂಡು-ಹೆಣ್ಣಿನ ಸಂಬಂಧ, ಲೈಂಗಿಕತೆ (Sexuality) ಇತ್ಯಾದಿ. ಜನರು ಹೇಗೆ ಇವನ್ನು ಸ್ವೀಕರಿಸುತ್ತಾರೆ ಎಂದು ಅಂಜುವ ಕಾಲದಲ್ಲಿಯೇ  ಕೆಲವು ನಿರ್ದೇಶಕರು (Directors), ನಿರ್ಮಾಪಕರು ಇಂಥ ಚಿತ್ರಗಳನ್ನು ಮಾಡಲು ಧೈರ್ಯ ಮಾಡಿದ್ದಾರೆ, ಅವುಗಳಲ್ಲಿ ಹಲವು ಯಶಸ್ವಿ ಕೂಡ ಕಂಡಿವೆ. ಲೈಂಗಿಕತೆಯ ಕುರಿತಂತೆ ಸಾಕಷ್ಟು ಸಿನಿಮಾಗಳು ಇದಾಗಲೇ ಬಂದು ಹೋಗಿವೆ. ಆದರೆ ಇದುವರೆಗೆ ಹೆಚ್ಚಿನ ಗಮನ ಕೊಡದೇ ಇರುವುದು  ಅಲೈಂಗಿಕತೆಯ ಕುರಿತು.  ಸೂಕ್ಷ್ಮ ಮತ್ತು ಆಸಕ್ತಿದಾಯಕ ವಿಷಯವಾಗಿರೋ ಅಲೈಂಗಿಕತೆಯ ಕುರಿತು ಇದುವರೆಗೆ ಸಿನಿಮಾಗಳು ಬಂದಿಲ್ಲ ಎಂದೇ ಹೇಳಬಹುದು. ಬಂದರೂ ಅದು ಅಷ್ಟು ಪ್ರಭಾವ ಬೀರಿರಲಾರದು.

ಇದನ್ನೇ ಗಮನದಲ್ಲಿ ಇಟ್ಟುಕೊಂಡು ಈಗ ಒಂದು ಸಿನಿಮಾ ರೆಡಿಯಾಗುತ್ತಿದೆ. ಅದೇ  'ಸೂಪರ್ ವುಮನ್'. ಈ ಚಿತ್ರದಲ್ಲಿ ನಟ ರೋಹಿತ್ ರಾಜ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗೋಲ್ಡನ್ ರೇಶಿಯೋ ಫಿಲಂಸ್ ನಿರ್ಮಾಣದ ಈ ಚಿತ್ರದ ಚಿತ್ರೀಕರಣವನ್ನು ಅವರು ಇತ್ತೀಚೆಗೆ ಪೂರ್ಣಗೊಳಿಸಿದ್ದಾರೆ, ಇದು ರೋಹಿತ್ ರಾಜ್ ಅವರ ಎರಡನೇ ಚಲನಚಿತ್ರ. ಈ ಚಿತ್ರವನ್ನು ನಿರ್ದೇಶಕ ಜೈಘಮ್ ಇಮಾಮ್ ನಿರ್ದೇಶಿಸಿದ್ದಾರೆ. ಕುತೂಹಲದ ವಿಷಯವೇನೆಂದರೆ, ಈ ಚಿತ್ರದಲ್ಲಿ ಮೀರಾ ಚೋಪ್ರಾ (Meera Chopra) ನಾಯಕಿಯಾಗಿ ನಟಿಸಲಿದ್ದಾರೆ. ಮೀರಾ ಚೋಪ್ರಾ ಸಂಬಂಧದಲ್ಲಿ ನಟಿ  ಪ್ರಿಯಾಂಕಾ ಚೋಪ್ರಾ ಅವರ ತಂಗಿಯಾಗಬೇಕು. ಇವರನ್ನು ಹೊರತುಪಡಿಸಿದರೆ, ಚಿತ್ರದಲ್ಲಿ  ತಿಗ್ಮಾನ್ಶು ಧುಲಿಯಾ, ಪೂನಂ ಧಿಲ್ಲೋನ್, ಸನಂದ್ ವರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಕಥೆಯು ಅಲೈಂಗಿಕತೆಯ ವಿಷಯದ ಸುತ್ತ ಸುತ್ತುತ್ತದೆ.

Tap to resize

Latest Videos

 

Sexual Health: ಕೊಬ್ಬಿನಿಂದ ಸೆಕ್ಸ್ ಸುಖ ಕಡಿಮೆಯಾಗಬಹುದು! ಆರೋಗ್ಯದೆಡೆ ಇರಲಿ ಗಮನ

ಅಲೈಂಗಿಕತೆ ಎಂದರೇನು?
ಕುತೂಹಲಕಾರಿ ಸಂಗತಿಯೆಂದರೆ ಅಲೈಂಗಿಕತೆಯು (asexuality) ಯಾವುದೇ ರೀತಿಯ ಲೈಂಗಿಕ ಚಟುವಟಿಕೆಯಲ್ಲಿ ಆಸಕ್ತಿ ಅಥವಾ ಬಯಕೆಯ ಕೊರತೆ ಹೊಂದುವುದು ಎಂಬರ್ಥ. ಸುಲಭದಲ್ಲಿ ಹೇಳುವುದಾದರೆ ಸೆಕ್ಸ್​ ಮೇಲೆ ಆಸಕ್ತಿ ಇಲ್ಲದಿರುವುದು.  ಅಲೈಂಗಿಕವಾಗಿರುವುದು ಎಂದರೆ ಯಾವುದೇ ಲಿಂಗದ ಕಡೆಗೆ ದೈಹಿಕ ಬಯಕೆ ಅಥವಾ ಆಕರ್ಷಣೆಯನ್ನು ಹೊಂದಿರುವುದಿಲ್ಲ. ಪ್ರಪಂಚದ ಒಟ್ಟು ಜನಸಂಖ್ಯೆಯಲ್ಲಿ ಕೇವಲ 1% ಅಥವಾ ಅದಕ್ಕಿಂತ ಕಡಿಮೆ ಜನರು ಅಲೈಂಗಿಕರಾಗಿದ್ದಾರೆ ಮತ್ತು ಈ ಕಾರಣಕ್ಕಾಗಿ ಈ ಪರಿಕಲ್ಪನೆಯು ಸಮಾಜಕ್ಕೆ ಮತ್ತು ಜನರಿಗೆ ಇನ್ನೂ ಪರಿಚಿತವಾಗಿಲ್ಲ. ಇದರ ಕುರಿತು ಯಾವುದೇ ಚಿತ್ರ ಬಂದಿರದ ಹಿನ್ನೆಲೆಯಲ್ಲಿ ಇಂಥದ್ದೊಂದು ಚಿತ್ರಕ್ಕೆ ಈಗ ಕೈಹಾಕಲಾಗಿದೆ. 

ಚಿತ್ರವು ಅಲೈಂಗಿಕತೆಯ ಸುತ್ತ ವಿಶಿಷ್ಟವಾದ ಮತ್ತು ಆಸಕ್ತಿದಾಯಕ ಕಥೆಯನ್ನು ಚಿತ್ರಿಸುತ್ತದೆ ಮತ್ತು ವಿಷಯದ ಬಗ್ಗೆ ಪ್ರೇಕ್ಷಕರಿಗೆ ತಿಳುವಳಿಕೆ ನೀಡುವ ಗುರಿ ಹೊಂದಿದೆ. ನಾನು ಈ ಚಿತ್ರದಲ್ಲಿ ಮೀರಾ ಪಾತ್ರದ ಎದುರು ಕೆಲಸ ಮಾಡುತ್ತಿದ್ದೇನೆ. ನನ್ನ ಎರಡನೇ ಪ್ರಾಜೆಕ್ಟ್‌ನಲ್ಲಿ ಸಾಮಾಜಿಕ ವಿಷಯವನ್ನು ತಿಳಿಸುವ ಚಿತ್ರದಲ್ಲಿ ಕೆಲಸ ಮಾಡುವುದು ನನಗೆ ಆಶೀರ್ವಾದ ಎನಿಸಿದೆ ಎಂದಿದ್ದಾರೆ ರೋಹಿತ್ ರಾಜ್ (Rohith Raj).  ಒಬ್ಬ ನಟ ತನ್ನ ಕಲೆಯನ್ನು ಪ್ರದರ್ಶಿಸುವ ಚಿತ್ರಗಳಲ್ಲಿ ನಟಿಸುವುದು ಬಹಳ ಮುಖ್ಯ, ಅಂತಹ ಕಲಾತ್ಮಕ ಮತ್ತು ಚಿತ್ರಗಳಲ್ಲಿ ಕೆಲಸ ಮಾಡುವುದು ಯಾವಾಗಲೂ ಸಂತೋಷವಾಗಿದೆ. ಈ ಚಿತ್ರದಲ್ಲಿ ಸೃಜನಾತ್ಮಕ ಅಂಶವಿದೆ ಎಂದಿದ್ದಾರೆ.

ಫಸ್ಟ್ ಟೈಮ್ ಸೆಕ್ಸ್‌ಗೆ ಸಂಬಂಧಿಸಿದ ಈ ವಿಷಯಗಳನ್ನು ನಂಬಬಹುದಾ?
  
ಈ ಚಿತ್ರದ ನಿರ್ದೇಶಕರ ಜೊತೆ ಕೆಲಸ ಮಾಡುವುದು ನನಗೆ ತುಂಬಾ ಖುಷಿ ತಂದಿದೆ ಎಂದಿರುವ ರೋಹಿತ್‌,  "ನಿರ್ದೇಶಕ ಜೈಘಮ್ ಇಮಾಮ್ ಒಬ್ಬ ಅನುಭವಿ ನಿರ್ದೇಶಕ ಮತ್ತು ಅವರೊಂದಿಗೆ ಕೆಲಸ ಮಾಡುವುದು ತುಂಬಾ ಸುಲಭ. ಅವರು ನನ್ನ ಪಾತ್ರವನ್ನು ತೆರೆಯ ಮೇಲೆ ಅತ್ಯುತ್ತಮವಾಗಿ ಹೊರತರಲು ಪ್ರಯತ್ನಿಸಿದ್ದಾರೆ. ನನಗೆ ಈ ಚಿತ್ರದಲ್ಲಿ  ಸಾಕಷ್ಟು ಸ್ವಾತಂತ್ರ್ಯವನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ. ಅಂದಹಾಗೆ, ರೋಹಿತ್ ಅವರ ಚೊಚ್ಚಲ ಚಿತ್ರ 'ಮಿಸ್ಟರಿ ಆಫ್ ದಿ ಟ್ಯಾಟೂ' ಒಂದು ಕ್ರೈಮ್ ಥ್ರಿಲ್ಲರ್ (Crime Thriller) ಆಗಿದೆ, ಇದರಲ್ಲಿ ರೋಹಿತ್ 20 ವರ್ಷ ಹಳೆಯ ಕೊಲೆ ಪ್ರಕರಣವನ್ನು ತನ್ನ ಬುದ್ಧಿವಂತಿಕೆ ಮತ್ತು ಪೊಲೀಸರ ಸಹಾಯದಿಂದ ಪರಿಹರಿಸುವ ಬ್ಯಾರಿಸ್ಟರ್ ಪಾತ್ರವನ್ನು ನಿರ್ವಹಿಸಿದ್ದಾರೆ.  ಶೀಘ್ರದಲ್ಲೇ ಬಿಡುಗಡೆಯಾಗಲಿರುವ "ಸೂಪರ್ ವುಮನ್" (Super Woman) ಅರ್ಜುನ್ ರಾಂಪಾಲ್, ಮನೋಜ್ ಜೋಶಿ, ಡೈಸಿ ಶಾ ಮತ್ತು ಅಮೀಶಾ ಪಟೇಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

 

click me!