
ಬಾಲಿವುಡ್ ಸ್ಟಾರ್ ಜೋಡಿಗಳಲ್ಲಿ ಒಬ್ಬರಾಗಿರುವ ಅಜಯ್ ದೇವಗನ್ (Ajay Devgn) ಹಾಗೂ ಕಾಜಲ್ (Kajol) ಲವ್‌ನಲ್ಲಿ ಬಿದ್ದು ಬಳಿಕ ಮದುವೆಯಾಗಿದ್ದು ಎಂಬುದು ಬಹುತೇಕರಿಗೆ ಗೊತ್ತು. ಅವರಿಬ್ಬರ ಲವ್ ಹೇಗಾಯ್ತು? ಲವ್ ಲೈಫ್‌ನಲ್ಲಿ ನಡೆದ ಘಟನೆಗಳೇನು? ಎಲ್ಲವನ್ನೂ ನಟ ಅಜಯ್ ದೇವಗನ್ ಪತ್ನಿ ಕಾಜಲ್ ರೀಲ್ಸ್ ಮೂಲಕ ಹಂಚಿಕೊಂಡಿದ್ದಾರೆ. ಈ ಬಗ್ಗೆ ಕಾಜಲ್ 'ನಮ್ಮಿಬ್ಬರ ಲವ್ ಸ್ಟೋರಿ ಶುರುವಾಗಿದ್ದು ಚಾನ್ಸ್ ಮೂಲಕ. 'ನಾನು ಅಜಯ್ ದೇವಗನ್ ಅವರನ್ನು ಮೊಟ್ಟಮೊದಲು ಭೇಟಿಯಾಗಿದ್ದು 1995, 'ಹಲ್‌ಚಲ್' ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ.
ಆ 'ಹಲ್‌ಚಲ್' ಸಿನಿಮಾ ನಾವಿಬ್ಬರೂ ಒಟ್ಟಾಗಿ ನಟಿಸಿದ ಮೊದಲನೆಯ ಚಿತ್ರ. ಆ ಚಿತ್ರಕ್ಕೆ ಅಜಯ್ ದೇವಗನ್ ಜೋಡಿಯಾಗಿ ನಟಿಸಬೇಕಾಗಿದ್ದ ನಟಿ ದಿವ್ಯಾ ಭಾರತಿ ಆಗಿತ್ತು. ಆದರೆ ಆಕೆಯ ದುರಂತ ಸಾವಿನಿಂದ ದಿವ್ಯಾ ಜಾಗಕ್ಕೆ ನಾನು ಸೆಲೆಕ್ಟ್ ಆದೆ. ಅಚ್ಚರಿ ಎಂದರೆ ಆ ಸಮಯದಲ್ಲಿ ಅಜಯ್ ದೇವಗನ್ ಹಾಗೂ ನಾನು ಇಬ್ಬರೂ ಬೇರೆಯವರೊಂದಿಗೆ ಡೇಟಿಂಗ್ ಮಾಡುತ್ತಿದ್ದೆವು. ಹಲ್‌ಚಲ್ ಶೂಟಿಂಗ್ ವೇಳೆ ನಾವಿಬ್ಬರೂ ಶೂಟಿಂಗ್ ಸೆಟ್‌ನಲ್ಲಿ ಬಹಳಷ್ಟು ಕಾಲ ಜೊತೆಯಾಗಿದ್ದೆವು.
ಗೌರಿ ಜೊತೆ ಲವ್ ಹೇಗಾಯ್ತು ಎಂಬ ಸ್ಟೋರಿಯನ್ನು ಚಾಚೂ ತಪ್ಪದೇ ಹೇಳಿದ ಶಾರುಖ್ ಖಾನ್!
ಅಜಯ್ ತುಂಬಾ ನಾಚಿಕೆ ಸ್ವಭಾವದವ್ಯಕ್ತಿಯಾಗಿದ್ದರು ಮತ್ತು ನಾನು ತುಂಬಾ ಬೋಲ್ಡ್ ವ್ಯಕ್ತಿತ್ವ ಪ್ರದರ್ಶಿಸುವ ಹುಡುಗಿಯಾಗಿದ್ದೆ. ಹೀಗಾಗಿ ನಾನು ಅಜಯ್ ಜತೆ ಕ್ಲೋಸ್ ಬಾಂಡಿಂಗ್ ಹೊಂದಲು ಕಷ್ಟವಾಯ್ತು. ಆದರೆ, ಅಂದುಕೊಂಡಿದ್ದಕ್ಕಿಂತ ಬೇಗನೇ ನಾವಿಬ್ಬರೂ ಒಳ್ಳೆಯ ಫ್ರಂಡ್ಸ್ ಆಗ್ಬಿಟ್ವಿ. ಬಳಿಕ ನಮ್ಮ ಸ್ನೇಹವೇ ಲವ್‌ಗೆ ತಿರುಗಿತು. ನಾನು ಮತ್ತು ಅಜಯ್ ಅದೆಷ್ಟು ಕ್ಲೋಸ್ ಆಗಿಬಿಟ್ವಿ ಅಂದ್ರೆ ನಾವಿಬ್ಬರೂ ಜೊತೆಯಾಗಿ ಇರಲು ನಮ್ಮ ಪೋಷಕರಿಂದಲೂ ದೂರವಾಗ್ಬಿಟ್ವಿ. ನಮ್ಮಿಬ್ಬರಲ್ಲಿ ಲವ್ ಪ್ರಪೋಸಲ್ ಏನೂ ನಡೆಯಲಿಲ್ಲ.
ಕಣ್ಣಪ್ಪ ಚಿತ್ರಕ್ಕೆ ಬಂತು ಭರ್ಜರಿ 'ಬಾಹುಬಲಿ' ಬಲ; ವಿಶೇಷ ಪಾತ್ರದಲ್ಲಿ ಡಾರ್ಲಿಂಗ್ ಪ್ರಭಾಸ್!
ಬದಲಾಗಿ, ನಾವಿಬ್ಬರೂ ಒಟ್ಟಿಗೇ ಇರಬೇಕಂಬ ಬಯಕೆ ಇಬ್ಬರಲ್ಲೂ ಇತ್ತು. ಹೀಗಾಗಿ ನಾವು ಬೇರೆ ಎಲ್ಲರಿಂದಲೂ ಅಂತರ ಕಾಯ್ದುಕೊಂಡು ನಾವಿಬ್ಬರೋ ಒಟ್ಟಾಗಿ ಇರಲು ಶುರು ಮಾಡಿದೆವು. ನನ್ನ ತಂದೆ ಒಂದು ವಾರಗಳ ಕಾಲ ನನ್ನ ಜೊತೆ ಮಾತನಾಡಲೇ ಇಲ್ಲ. ನಾನೇ ನನ್ನ ತಂದೆಯ ಬಳಿ ಹೋಗಿ 'ನಾನು ಮದುವೆಯಾಗಲು ಇಷ್ಟಪಡುತ್ತೇನೆ' ಎಂದು ಹೇಳಿದೆ.
ಹೊಸ ರೂಪದಲ್ಲಿ 'ಡಿಸ್ನಿ+ಹಾಟ್‌ಸ್ಟಾರ್'ನಲ್ಲಿ ಸ್ಟ್ರೀಮ್ ಆಗಲಿದೆ ಬಾಹುಬಲಿ; ರಾಜಮೌಳಿ ಹೇಳಿದ್ದೇನು?
ಆಗ ನಾನು ನನ್ನ ಕೆರಿಯರ್‌ನ ಪೀಕ್ ಟೈಂನಲ್ಲಿ ಇದ್ದೆ. ಬಳಿಕ, ನಾಲ್ಕು ವರ್ಷಗಳ ನಂತರ ನಾವಿಬ್ಬರೂ, 24 ಫೆಬ್ರವರಿ 1999ರಂದು ಮದುವೆಯಾದೆವು. ನ್ಯಾಸಾ ಹಾಗೂ ಯುಗ ಈ ಇಬ್ಬರೂ ಮಕ್ಕಳು ನಮ್ಮ ಜೊತೆಯಾಗುವ ಮೂಲಕ ನಮ್ಮಿಬ್ಬರ ಜೋಡಿ 'ಪರಿಪೂರ್ಣತೆ' ಪಡೆಯಿತು' ಎಂದಿದ್ದಾರೆ ನಟಿ ಕಾಜೋಲ್ ದೇವಗನ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.