Lust Stories-2: ಬೋಲ್ಡ್​ ಸೀನ್​ನಲ್ಲಿ ಕಾಣಿಸಿಕೊಂಡಿರೋ ನಟಿ ಕಾಜೋಲ್​ ಕಾಮದ ಬಗ್ಗೆ ಹೇಳಿದ್ದೇನು?

Published : Jun 26, 2023, 02:39 PM IST
Lust Stories-2:  ಬೋಲ್ಡ್​ ಸೀನ್​ನಲ್ಲಿ ಕಾಣಿಸಿಕೊಂಡಿರೋ ನಟಿ ಕಾಜೋಲ್​ ಕಾಮದ ಬಗ್ಗೆ ಹೇಳಿದ್ದೇನು?

ಸಾರಾಂಶ

ಕಾಮದ ಕುರಿತು ವಿವರಣೆ ನೀಡುವ ಲಸ್ಟ್​ ಸ್ಟೋರೀಸ್​-2 ನಲ್ಲಿ ನಟಿಸಿರೋ ನಟಿ ಕಾಜೋಲ್​ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಅವರು ಹೇಳಿದ್ದೇನು?   

ಬಹು ನಿರೀಕ್ಷಿತ ಲಸ್ಟ್ ಸ್ಟೋರೀಸ್ 2' (Lust Stories-2) ಇದೇ 29ರಂದು ನೆಟ್​ಫ್ಲಿಕ್ಸನ   ಇಂಡಿಯಾದಲ್ಲಿ  ಪ್ರೀಮಿಯರ್ ಆಗಲಿದೆ.  ಲೈಂಗಿಕತೆ ಬಗೆಗಿನ ಬಣ್ಣದ ಕಥೆಗಳು ಇದರಲ್ಲಿವೆ. ಈ ಎರಡನೇ ಭಾಗವು ಹೊಸ ನಿರ್ದೇಶಕರಾಗಿರುವ  ಅಮಿತ್ ರವೀಂದ್ರನಾಥ್ ಶರ್ಮಾ, ಕೊಂಕಣ ಸೇನ್ ಶರ್ಮಾ, ಆರ್. ಬಾಲ್ಕಿ ಮತ್ತು ಸುಜೋಯ್ ಘೋಷ್ ಮತ್ತು ನಟರಲ್ಲಿ ಅಮೃತಾ ಶುಭಾಷ್, ಅಂಗದ್ ಬೇಡಿ, ಕಾಜೋಲ್, ಕುಮುದ್ ಮಿಶ್ರಾ, ಮೃಣಾಲ್ ಠಾಕೂರ್, ನೀನಾ ಗುಪ್ತಾ ಅವರನ್ನು ಒಳಗೊಂಡಿದ್ದರೆ, ದೊಡ್ಡ ತಾರಾ ಬಳಗವೇ ಇದೆ. ತಾರಾ ಬಳಗದಲ್ಲಿ  ಕಾಜೋಲ್​, ತಮನ್ನಾ ಭಾಟಿಯಾ, ತಿಲ್ಲೋಟಮಾ ಶೋಮ್ ಮತ್ತು ವಿಜಯ್ ವರ್ಮಾ ಮುಂತಾದವರು ಇದ್ದಾರೆ.  ಬೋಲ್ಡ್​ ಕಥಾಹಂದರ ಹೊಂದಿರುವ ಈ ಸಿನಿಮಾ ಬಗ್ಗೆ ಸಿನಿಪ್ರಿಯರು ಕುತೂಹಲ ಇಟ್ಟುಕೊಂಡಿದ್ದಾರೆ. 

ಒಟಿಟಿಯಲ್ಲಿ ಇಂಥ ಚಿತ್ರಗಳು ಸಕತ್​ ಫೇಮಸ್​ ಆಗಲು ಕಾರಣ ಇಲ್ಲಿ  ಸೆನ್ಸಾರ್​ (Sensor) ಹಂಗಿಲ್ಲ. ಯಾವುದೇ ಬೋಲ್ಡ್​ ದೃಶ್ಯಗಳನ್ನಾದರೂ ನೇರಾನೇರ ತೋರಿಸಲಾಗುತ್ತದೆ. ಈ ಚಿತ್ರದಲ್ಲಿ ನಟಿ ತಮನ್ನಾ ಕೂಡ ಬೋಲ್ಡ್​ ಆಗಿಯೇ ಕಾಣಿಸಿಕೊಂಡಿದ್ದಾರೆ. ಇಡೀ ಟ್ರೈಲರ್ ಬೆರಗುಗೊಳಿಸುವ ಇಂಟಿಮೇಟ್ ದೃಶ್ಯಗಳಿಂದ ತುಂಬಿದೆ.   'ಲಸ್ಟ್ ಸ್ಟೋರಿಸ್' (Lust Stories) ಸೀಸನ್- 2ನಲ್ಲಿ ವಿಜಯ್ ವರ್ಮಾ ಜೊತೆ ತಮನ್ನಾ  ಲಿಪ್‌ ಲಾಕ್‌  (Liplock) ಮಾಡಿದ್ದಾರೆ.  ವಿಜಯ್ ವರ್ಮಾ (Vijay Verma) ಅವರ ಜೊತೆ ತಮನ್ನಾ ಡೇಟಿಂಗ್​ನಲ್ಲಿ ಇರೋ ತಮನ್ನಾ ಲಿಪ್​ ಲಾಕ್​ ಯಾರ ಜೊತೆನೂ ಮಾಡಲ್ಲ ಎಂದಿದ್ದರು. ಆದರೂ ಈ ಚಿತ್ರದಲ್ಲಿ ಆ ನಿಯಮ ಮೀರಿದ್ದಾರೆ. ಅದೇ ರೀತಿ ಕಾಜೋಲ್​ ಕೂಡ ಹೈಲೈಟ್​ ಆಗುತ್ತಿದ್ದಾರೆ. ಒಂದೊಮ್ಮೆ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದ ನಟಿ ಕಾಜೋಲ್​ ಈಗ 20 ವರ್ಷದ ಮಗಳ ಅಮ್ಮ. ಆದರೂ ಲಸ್ಟ್​ ಸ್ಟೋರೀಸ್​ನಲ್ಲಿ ಈಕೆ ಕಾಣಿಸಿಕೊಂಡಿದ್ದಾರೆ.  ನಟಿ ಕಾಜೋಲ್ ನೀಡಿದ ಕೆಲವು ಇಂಟಿಮೇಟ್ ದೃಶ್ಯಗಳು (Intimate Sceenes) ಟ್ರೋಲ್​ಗೂ ಕಾರಣವಾಗುತ್ತಿದೆ.  ನಟನೆಯಲ್ಲಿ ಪರ್ಫೆಕ್ಷನ್ ಕೊಟ್ಟರೂ 20 ವರ್ಷದ ಮಗಳಿರುವಾಗ ನೀವು ಇಂಥಹ ಸಿನಿಮಾ ಮಾಡಬೇಕೆ ಎಂದಿದ್ದಾರೆ ನೆಟ್ಟಿಗರು.

Lust Stories 2: ಮದುವೆಗೂ ಮುನ್ನ ಟೆಸ್ಟ್ ಡ್ರೈವ್ ಬೇಡ್ವಾ ಎಂದ ನಟಿ ನೀನಾ ಸೆಕ್ಸ್​ ಬಗ್ಗೆ ಹೇಳಿದ್ದೇನು?

ಆದರೆ ಈ ಚಿತ್ರದಲ್ಲಿ ತಮ್ಮ ಪಾತ್ರದ ಕುರಿತು ನಟಿ ಕಾಜೋಲ್​ ಅನಿಸಿಕೆ, ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪರದೆಯ (Onscreen) ಮೇಲೆ ಕಾಮದ ಭಾವನೆಗಳನ್ನು (Feeling of Lust) ವ್ಯಕ್ತಪಡಿಸುವುದು  ಯಾವಾಗಲೂ ತಮಗೆ ಒಂದು  ಹೋರಾಟವಾಗಿದೆ ಎಂದು ಕಾಜೋಲ್​ ತಪ್ಪೊಪ್ಪಿಕೊಂಡಿದ್ದಾರೆ. 'ನಿಜವಾಗಿ ಹೇಳಬೆಕು ಎಂದರೆ,  ನನ್ನ ಬಳಿ ಇಲ್ಲ ಎನಿಸುವ ಎರಡು ವಿಷಯಗಳಿವೆ. ಅವುಗಳೆಂದರೆ ಮಾದಕ ನಟನೆ ಹಾಗೂ ನಾಚಿಕೆ. ಚಿತ್ರ ನಿರ್ದೇಶಕರು ನನಗೆ ನೀವು ನಾಚಿಕೆಯಿಂದ ವರ್ತಿಸಬೇಕು ಎಂದು ಹೇಳಿದಾಗ ಪ್ರತಿಸಲವೂ ಅವರಿಗೆ ನಾನು ನಾಚಿಕೆ ಎಂದರೇನು ಎಂದೇ ಕೇಳುತ್ತೇನೆ ಎಂದಿದ್ದಾರೆ ನಟಿ. ಲಸ್ಟ್​ ಸ್ಟೋರೀಸ್​ನಲ್ಲಿಯೂ ಇದೇ ಸನ್ನಿವೇಶ ಅನುಭವಿಸಬೇಕಾಯಿತು. ಕಾಮ ಹಾಗೂ ನಾಚಿಕೆಯನ್ನು ವ್ಯಕ್ತಪಡಿಸಲು ಸಿಕ್ಕಾಪಟ್ಟೆ ಕಷ್ಟವಾಯಿತು ಎಂದಿದ್ದಾರೆ ಕಾಜೋಲ್ (Actress Kajol)​, 

ಅದೇ ವೇಳೆ, ನಟಿ ಕಾಮದ  ಸನ್ನಿವೇಶಗಳ ಕುರಿತೂ ಮಾತನಾಡಿದ್ದಾರೆ. ಆಕೆಯ ಪ್ರಕಾರ, ಕಾಮವು ಯಾವುದನ್ನಾದರೂ ಬಲವಾದ, ತೀವ್ರವಾದ ಬಯಕೆಯನ್ನು ಪ್ರತಿನಿಧಿಸುತ್ತದೆ. ಅದು ಆಹಾರದ (Food) ಬಗ್ಗೆಯೂ ಆಗಿರಬಹುದು ಅಥವಾ ಇನ್ನಾವುದೇ ಆಗಿರಬಹುದು. ಕಾಮ ಅತ್ಯಂತ ವೈಯಕ್ತಿಕ ವಿಷಯಗಳಲ್ಲಿ ಒಂದಾಗಿದೆ ಎಂದು ನಾನು ಭಾವಿಸುತ್ತೇನೆ. ಪ್ರತಿಯೊಬ್ಬರ ಕಾಮದ ಕಲ್ಪನೆ ಮತ್ತು ಅವರು ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಸಂಪೂರ್ಣವಾಗಿ ವಿಭಿನ್ನವಾಗಿದೆ. ಇದು ವಸ್ತುನಿಷ್ಠಕ್ಕಿಂತ ಹೆಚ್ಚು ವ್ಯಕ್ತಿನಿಷ್ಠ ಭಾವನೆಯಾಗಿದೆ ಎಂದಿದ್ದಾರೆ. 

 ವಿಜಯ್ ವರ್ಮಾ ಜೊತೆ ಬೆಡ್‌ರೂಮ್ ದೃಶ್ಯ ಮಾಡುವಾಗ ಸೇಫ್ ಫೀಲ್ ಆಗ್ತಿತ್ತು: ನಟಿ ತಮನ್ನಾ
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?