ದುರ್ಗಾ ಪೆಂಡಾಲ್ ನಲ್ಲಿ ಕಾಜೋಲ್ ದರ್ಬಾರ್!

By Roopa Hegde  |  First Published Oct 11, 2024, 1:49 PM IST

ಬಾಲಿವುಡ್ ನಟಿ ಕಾಜೋಲ್, ದುರ್ಗಾ ಪೂಜೆಯಲ್ಲಿ ಬ್ಯುಸಿಯಾಗಿದ್ದಾರೆ. ಸತತ 8 ದಿನಗಳಿಂದ ದುರ್ಗಾ ಪೆಂಡಲ್ ನೋಡಿಕೊಳ್ತಿರುವ ಕಾಜೋಲ್ ವಿಡಿಯೋ ವೈರಲ್ ಆಗ್ತಿದೆ. ಕೆಲ ವಿಡಿಯೋದಲ್ಲಿ ಕಾಜೋಲ್ ಮುನಿಸಿಕೊಂಡಿದ್ದು, ನೆಟ್ಟಿಗರಿಗೆ ಆಹಾರವಾಗಿದ್ದಾರೆ. 
 


ಬಾಲಿವುಡ್ ನಟಿ ಕಾಜೋಲ್ (Bollywood actress Kajol) ದುರ್ಗಾ ಪೆಂಡಾಲ್ ನಲ್ಲಿ ಮಿಂಚುತ್ತಿದ್ದಾರೆ. ನವರಾತ್ರಿ ಆರಂಭದಿಂದ 8 ದಿನಗಳ ಕಾಲ ದುರ್ಗಾ ಪೆಂಡಾಲ್ (Durga Pendal) ನಲ್ಲಿರುವ ಕಾಜೋಲ್, ತಾಯಿ ಪೂಜೆ ಜೊತೆ ಸೆಲೆಬ್ರಿಟಿಗಳನ್ನು, ಭಕ್ತರನ್ನು ಸಂಭಾಳಿಸ್ತಾ, ಅವರಿಗೆ ಪ್ರಸಾದ ವಿತರಣೆ ಸೇರಿದಂತೆ ಜವಾಬ್ದಾರಿಯುತ ಕೆಲಸಗಳನ್ನು ಮಾಡ್ತಿದ್ದಾರೆ. ಕಾಜೋಲ್ ವಿಡಿಯೋ ಸೋಶಿಯಲ್ ಮೀಡಿಯಾ (Social Media)ದಲ್ಲಿ ವೈರಲ್ ಆಗ್ತಿದೆ. ಕಾಜೋಲ್, ಬಾಲಿವುಡ್ ಹಿರಿಯ ನಟಿ ಜಯಾ ಬಚ್ಚನ್ (Jaya Bachchan) ಹಾಗೂ ರಾಣಿ ಮುಖರ್ಜಿ (Rani Mukerji) ಸೇರಿದಂತೆ ಅನೇಕ ನಟಿಯರ ಜೊತೆ ಪೆಂಡಾಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಪತಿ ಅಜಯ್ ದೇವಗನ್, ಮಗನ ಜೊತೆ ದುರ್ಗೆ ಪೂಜೆಯಲ್ಲಿ ಪಾಲ್ಗೊಂಡು ಗಮನ ಸೆಳೆದಿರುವ ಕಾಜೋಲ್, ಈ 8 ದಿನದಲ್ಲಿ ತಮ್ಮ ಬಹುರೂಪ ತೋರಿಸಿದ್ದಾರೆ. ಪೆಂಡಾಲ್ ನಲ್ಲಿ ಕಾಜೋಲ್ ದುರ್ಗೆಯಾಗಿದ್ದಿದೆ. ದುರ್ಗಾ ಪೆಂಡಾಲ್ ನಲ್ಲಿ ಕಾಜೋಲ್ ಕೋಪಗೊಂಡ ಕೆಲ ವಿಡಿಯೋ ವೈರಲ್ ಆಗಿದೆ. 

ಒಂದು ವಿಡಿಯೋದಲ್ಲಿ ಕಾಜೋಲ್, ಭಕ್ತಾಧಿಗಳನ್ನು ಮುಂದೆ ಕಳುಹಿಸುವ ಕೆಲಸ ಮಾಡ್ತಿದ್ದಾರೆ. ಹಿಂದೆ ತುಂಬಾ ಜನರಿದ್ದಾರೆ. ಅವರಿಗೂ ತಾಯಿ ದರ್ಶನಕ್ಕೆ ಅವಕಾಶ ಮಾಡಿಕೊಡ್ಬೇಕು. ನೀವೆಲ್ಲ ಬೇಗ ಬೇಗ ಮುಂದೆ ಹೋಗಿ ಎನ್ನುತ್ತಾರೆ ಕಾಜೋಲ್. ಆದ್ರೆ ಅಲ್ಲಿ ನಿಂತಿದ್ದವರು, ನಾವೀಗಷ್ಟೆ ಬಂದಿದ್ದೇವೆ ಎನ್ನುತ್ತಾರೆ. ಇದನ್ನು ಕೇಳಿದ ಕಾಜೋಲ್, ಸುಳ್ಳು ಹೇಳ್ಬಾರದು ಎನ್ನುತ್ತಲೇ ತಮ್ಮ ಅಂಕಲ್ ಕಡೆ ತಿರುಗಿ ನಗ್ತಾರೆ.

Tap to resize

Latest Videos

undefined

ನುಗ್ಗೆಕಾಯಿ ನೋಡಿ ವರ್ತೂರು ಹೇಳಿದ್ದೇನು? ವೇದಿಕೆ ಮೇಲೆ ಮಿಂಚಿದ ತನಿಷಾ

ಇನ್ನು ಇನ್ನೊಂದು ವಿಡಿಯೋದಲ್ಲಿ ಕಾಜೋಲ್, ಪೆಂಡಾಲ್ ಗೆ ಬಂದ ಎಲ್ಲ ಭಕ್ತರಿಗೆ ಊಟ ಬಡಿಸ್ತಿದ್ದಾರೆ. ಈ ಸಮಯದಲ್ಲಿ ಕಾಜೋಲ್ ಬಾಯಿ ಆಡಿಸ್ತಿದ್ದು, ಅವರು ಏನೋ ತಿನ್ನುತ್ತಿದ್ದಾರೆ ಎಂಬುದು ಸ್ಪಷ್ಟ. ಅವರು ಊಟ ಬಡಿಸುವ ಸಮಯದಲ್ಲಿ ವ್ಯಕ್ತಿಯೊಬ್ಬ ಕಾಜೋಲ್ ಅವರ ವೀಡಿಯೊ ಮಾಡಲು ಮುಂದಾಗ್ತಾರೆ. ಇದನ್ನು ನೋಡಿ ಕೋಪಗೊಳ್ಳುವ ಕಾಜೋಲ್,ವಿಡಿಯೋ ಮಾಡದಂತೆ ಸೂಚನೆ ನೀಡ್ತಾರೆ., ಕಾಜೋಲ್ ಅವರ ಅಂಗರಕ್ಷಕರು ಕೂಡ ಆಕ್ಷನ್‌ಗೆ ಇಳಿಯುತ್ತಾರೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಕಾಜೋಲ್ ಕೆಲ ವಿಡಿಯೋಗಳು, ಉತ್ತರ ಬಾಂಬೆ ಸರ್ಬೋಜನಿನ್ ದುರ್ಗಾ ಪಂಡಲ್‌ನದ್ದು. ಇದನ್ನು ಕಾಜೋಲ್, ರಾಣಿ ಮುಖರ್ಜಿ ಕುಟುಂಬ  ಒಟ್ಟಿಗೆ ನಡೆಸುತ್ತಿದೆ. ಇಲ್ಲಿ ಎಲ್ಲಾ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಇರುತ್ತದೆ. 

ದುರ್ಗಾ ಪೆಂಡಾಲ್ ನ ಅನೇಕ ವಿಡಿಯೋಗಳು ವೈರಲ್ ಆಗಿವೆ. ಇದನ್ನು ನೋಡಿದ ಫ್ಯಾನ್ಸ್, ಕಾಜೋಲ್ ಅವರನ್ನು ಜಯಾ ಬಚ್ಚನ್ ಗೆ ಹೋಲಿಸ್ತಿದ್ದಾರೆ. ಜೂನಿಯರ್ ಜಯಾ ಬಚ್ಚನ್ ಎನ್ನುತ್ತಿದ್ದಾರೆ. ಜಯಾಗೆ ಸೊಕ್ಕಿದೆ. ಅಹಂಕಾರಿ. ದೇವಸ್ಥಾನದಲ್ಲಿ ಯಾರು ಸುಳ್ಳು ಹೇಳ್ತಾರೆ ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಆದ್ರೆ ಅನೇಕ ಫ್ಯಾನ್ಸ್, ಕಾಜೋಲ್ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಪ್ರತಿ ಬಾರಿಯೂ ಅವರನ್ನು ತಪ್ಪಾಗಿ ತಿಳಿಯುವ ಅಗತ್ಯವಿಲ್ಲ. ಪೆಂಡಾಲ್ ಗೆ ಬರುವ ಎಲ್ಲ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡ್ಬೇಕು. ಈ ಸಮಯದಲ್ಲಿ ಕಾಜೋಲ್ ಮಾಡಿದ್ದು ತಪ್ಪೇನಿಲ್ಲ ಎನ್ನುತ್ತಿದ್ದಾರೆ. ಕಾಜೋಲ್ ಬ್ಯೂಟಿ ಬಗ್ಗೆಯೂ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. 

ಪುನೀತ್ ರಾಜ್​​ರನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ನಮ್ರತಾ ಗೌಡ ನೋವಿನ ನುಡಿ... ಕೈ ಮೇಲೆ ಅಪ್ಪು ಹಚ್ಚೆ...

ನವರಾತ್ರಿ ಶುರುವಾದಾಗಿನಿಂದ್ಲೂ ಕಾಜೋಲ್ ವಿಡಿಯೋ ವೈರಲ್ ಆಗ್ತಾನೆ ಇದೆ. ನವರಾತ್ರಿ ಮೂರನೇ ದಿನ ರಾಣಿ ಮುಖರ್ಜಿ ಹಾಗೂ ಕಾಜೋಲ್ ವಿಡಿಯೋ ವೈರಲ್ ಆಗಿತ್ತು. ಪೆಂಡಾಲ್ ಗೆ ಬಂದ ರಾಣಿ, ಕಾಜೋಲ್ ಮಾತು ಕೇಳಲ್ಲ. ಈ ಸಮಯದಲ್ಲಿ ರಾಣಿ ಭುಜಕ್ಕೆ ಹೊಡೆಯುವ ಕಾಜೋಲ್, ಮಾತು ಮುಂದುವರೆಸ್ತಾರೆ. ಈ ವಿಡಿಯೋ ನೋಡಿದ ಫ್ಯಾನ್ಸ್, ಹಣ ಮಾತನಾಡ್ತಿದೆ ಎಂಬ ಕಮೆಂಟ್ ಮಾಡಿದ್ದರು. 

click me!