
ದಿಶಾ ಪಟಾಣಿ ಇನ್ನು ಕೆಲವೇ ದಿನಗಳಲ್ಲಿ ಪಂಜಾಬಿ ಹುಡುಗಿಯಾಗಿ ಬದಲಾಗಲಿದ್ದಾರೆ. ಅದು ಏಕ್ತಾ ಕಪೂರ್ ಬ್ಯಾನರ್‌ನಲ್ಲಿ ತಯಾರಾಗುತ್ತಿರುವ ಸಲ್ಮಾನ್ ಖಾನ್ ಹೀರೋ ಆಗುವ ಚಿತ್ರದಲ್ಲಿ. ಈಗಾಗಲೇ ‘ಭಾರತ್’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆಯಾಗಿದ್ದ ದಿಶಾ ಮುಂದಿನ ಚಿತ್ರದಲ್ಲೂ ಸಲ್ಮಾನ್‌ಗೆ ಸಾಥ್ ನೀಡಲಿದ್ದಾರೆ. ಅದಕ್ಕಾಗಿ ದಿಶಾ ಪಟಾಣಿ ತುಂಬಾ ಪ್ರೀತಿಯಿಂದ ಪಂಜಾಬಿ ಭಾಷೆ ಕಲಿಯಲು ಮುಂದಾಗಿದ್ದಾರೆ.
ಬಾತ್ ಟಬ್ ಗಿಳಿದ ದಿಶಾ ಪಟಾನಿ ಫೋಟೋ ವೈರಲ್... ಅಂಥಾದ್ದೇನು ಇಲ್ಲ
‘ಇದೊಂದು ಕಾಮಿಡಿ ಚಿತ್ರ. ನನ್ನದು ಪಂಜಾಬಿ ಹುಡುಗಿಯ ಪಾತ್ರ. ಈಗಾಗಲೇ ನಾನು ಪಾತ್ರಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನೂ ಮಾಡಿಕೊಳ್ಳಲು ಶುರು ಮಾಡಿದ್ದೇನೆ. ಅದರ ಒಂದು ಭಾಗವಾಗಿ ಪಂಜಾಬಿ ಭಾಷೆ ಕಲಿಯಲು ಮುಂದಾಗಿದ್ದೇನೆ. ಪಾತ್ರ ಚಿಕ್ಕದಾಗಿದ್ದರೂ ಅದಕ್ಕೆ ತುಂಬಾ ಮಹತ್ವ ಇದೆ.
ಸಲ್ಮಾನ್ ಜೊತೆ ನಟಿಸಲು, ಏಕ್ತಾ ಕಪೂರ್ ಬ್ಯಾನರ್‌ನಲ್ಲಿ ನಟಿಸಲು ನನಗೆ ತುಂಬಾ ಖುಷಿ ಮತ್ತು ಚಾಲೆಂಜಿಂಗ್’ ಎಂದು ಹೇಳಿಕೊಂಡಿದ್ದಾರೆ. ಚಿತ್ರಕ್ಕೆ ಇನ್ನೂ ಟೈಟಲ್ ಪಕ್ಕಾ ಆಗಿಲ್ಲದೇ ಹೋದರೂ ದಿಶಾ ಮತ್ತು ಸಲ್ಮಾನ್ ಜೋಡಿ ಮತ್ತೊಮ್ಮೆ ಕಮಾಲ್ ಮಾಡಲು ಸಲಕ ತಯಾರಿಗಳನ್ನೂ ಮಾಡಿಕೊಳ್ಳಲು ಅಣಿಯಾಗುತ್ತಿರುವುದು ಖಚಿತ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.