ಮೆಜೆಸ್ಟಿಕ್‌ನಲ್ಲಿ ಕಾಯ್ತಾ ಇರೋಳ್ ಥರ ಆಡ್ತಿದ್ದಿಯಲ್ಲಾ... ಬ್ರೇಕಪ್‌ ಆದ್ಮೇಲ್‌ ಏನಾಯ್ತು? ಅನನ್ಯಾ ಪಾಂಡೆಗೆ ಹೀಗೆ ಕಾಲೆಳೆಯೋದಾ?

Published : Jul 08, 2024, 08:25 PM IST
ಮೆಜೆಸ್ಟಿಕ್‌ನಲ್ಲಿ ಕಾಯ್ತಾ ಇರೋಳ್ ಥರ ಆಡ್ತಿದ್ದಿಯಲ್ಲಾ... ಬ್ರೇಕಪ್‌ ಆದ್ಮೇಲ್‌ ಏನಾಯ್ತು? ಅನನ್ಯಾ ಪಾಂಡೆಗೆ ಹೀಗೆ ಕಾಲೆಳೆಯೋದಾ?

ಸಾರಾಂಶ

ಬಾಲಿವುಡ್‌ ನಟಿ ಅನನ್ಯಾ ಪಾಂಡೆಯ ಹಾಟ್‌ ವಿಡಿಯೋಶೂಟ್‌ಗೆ ತರ್ಲೆ ಕಮೆಂಟಿಗರು ಏನೆಲ್ಲಾ ಹೇಳಿದ್ದಾರೆ ನೋಡಿ...   

ಸದಾ ಹಾಟ್​, ಬೋಲ್ಡ್​ ಲುಕ್​ನಿಂದಲೇ ಫೇಮಸ್​ ಆಗಿರೋ ನಟಿ ಅನನ್ಯಾ ಪಾಂಡೆ, ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್​ ಆಗಿದ್ದಾರೆ.  ಆಗಾಗ್ಗೆ ತಮ್ಮ ಬೋಲ್ಡ್​ ಫೋಟೋಶೂಟ್​ಗಳನ್ನು ಶೇರ್​ ಮಾಡಿ ಹಲವು ಬಾರಿ ಟ್ರೋಲ್​ಗೆ ಒಳಗಾಗುವುದೂ ಇದೆ. ಅನನ್ಯಾ ಪಾಂಡೆ ಬಾಲಿವುಡ್ ಹಿರಿಯ ನಟ ಚಂಕಿ ಪಾಂಡೆ ಮಗಳಾಗಿದ್ದು, ಸ್ಟಾರ್ ಕಿಡ್ ಆಗಿ ಬಾಲಿವುಡ್ ಗೆ ಎಂಟ್ರಿ ಕೊಟ್ಟವರು. ಕಡಿಮೆ ಸಮಯದಲ್ಲಿಯೇ ನಟಿ ಫೇಮಸ್ ಆದವರು.  ನೆಪೊಟಿಸಂ ಪ್ರಾಡಕ್ಟ್ ಆಗಿರುವ ಕಾರಣಕ್ಕೆ ಸಾಕಷ್ಟು ಟೀಕೆಗೆ ಗುರಿಯಾಗುತ್ತಿದ್ದರೂ ಸಹ ಬಾಲಿವುಡ್​ನಲ್ಲಿ ಅನನ್ಯಾಗೆ ಅವಕಾಶಗಳಿಗೇನೂ ಕೊರತೆ ಇಲ್ಲ.  ಕರಣ್ ಜೋಹರ್ ಸೇರಿದಂತೆ ಹಲವು ಗಾಡ್​ಫಾದರ್​ಗಳು ಅನನ್ಯಾಗೆ ಇರುವುದೇ ಇದಕ್ಕೆ ಕಾರಣ ಎನ್ನುವ ಮಾತುಗಳೂ ಇವೆ. 

ಕೆಲ ವರ್ಷಗಳಿಂದ ಅನನ್ಯಾ ಆದಿತ್ಯ ರಾಯ್‌ ಕಪೂರ್‌ ಜೊತೆ ಸಂಬಂಧದಲ್ಲಿ ಇದ್ದರು. ಅದಾದ ಬಳಿಕ ಬ್ರೇಕಪ್‌ ಆಗಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ನಟಿ ಹಾಟ್‌ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಅನನ್ಯಾ ನಿಂತಲ್ಲಿಯೇ ಅತ್ತ-ಇತ್ತ ಓಲಾಡಿದ್ದಾರೆ. ಇದನ್ನು ನೋಡಿ ತರ್ಲೆ ನೆಟ್ಟಿಗರು ಥಹರೇವಾರಿ ಕಮೆಂಟ್‌ ಮಾಡಿದ್ದಾರೆ. ನಟನೆ ಬರದಿದ್ರೂ ಇದಕ್ಕೇನೂ ಕಮ್ಮಿ ಇಲ್ಲ ಎಂದು ಕೆಲವರು ಹೇಳಿದ್ರೆ, ಮೆಜೆಸ್ಟಿಕ್‌ನಲ್ಲಿ ನಿಂತು ಓಲಾಡುತ್ತಿರುವ ರೀತಿಯಲ್ಲಿ ನುಲೀತೀರೋದ್ಯಾಕೆ ಎಂದು ಕನ್ನಡಿಗರು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಈ ಹಾಟ್‌ ಫೋಟೋಶೂಟ್‌ಗೆ ನೆಗೆಟಿವ್‌ ಕಮೆಂಟ್‌ಗಳೂ ಬಂದಿವೆ. 

ಜೋರು ಮಳೆಯಲ್ಲಿ ಶೂಟಿಂಗ್ ಇತ್ತು, ಒಳಗೆ ಬಟ್ಟೆ ಹಾಕಿರ್ಲಿಲ್ಲ... ಹೀರೋ ಎತ್ಕೊಂಡ್ಬಿಟ್ರು, ಆಗ... ಆ ದಿನ ನೆನೆದ ಶೋಭನಾ

ಅಂದಹಾಗೆ ಅನನ್ಯಾ ಮತ್ತು ಆದಿತ್ಯ ರಾಯ್​ ಕಪೂರ್​ ಹಲ ವರ್ಷಗಳಿಂದ ಸಂಬಂಧದಲ್ಲಿದ್ದರು. ಈ ಜೋಡಿಯ ಮದುವೆ ಯಾವಾಗ ಎಂದು ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದರು. ಅನನ್ಯಾ ಪಾಂಡೆ ಮತ್ತು ಆದಿತ್ಯ ರಾಯ್ ಕಪೂರ್ ಅವರು ಕಳೆದ ವರ್ಷ ಕಾಫಿ ವಿತ್ ಕರಣ್ ಷೋನಲ್ಲಿ ತಮ್ಮ ರಿಲೇಶನ್ ಶಿಪ್ ಬಗ್ಗೆ ಹಿಂಟ್ ಕೂಡ ನೀಡಿದ್ದರು.  ಆದಿತ್ಯ ಕಪೂರ್​ಗೂ ಮೊದಲದು ನಟಿ ಅನನ್ಯಾ ಪಾಂಡೆ (Ananya Panday) ಅವರು  ಇಶಾನ್ ಕಟ್ಟರ್ ಜೊತೆ ಸಂಬಂಧದಲ್ಲಿದ್ದರು.  ‘ಸ್ಟುಡೆಂಟ್ ಆಫ್ ದಿ ಇಯರ್ 2’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು ಅನನ್ಯಾ ಪಾಂಡೆ. ‘ಖಾಲಿ ಪೀಲಿ’ ಮೊದಲಾದ ಚಿತ್ರಗಳಲ್ಲಿ ಅವರು ಕಾಣಿಸಿಕೊಂಡರು. ‘ಲೈಗರ್’ ಸಿನಿಮಾ ಕೂಡ ಅಷ್ಟು ಸದ್ದು ಮಾಡಲಿಲ್ಲ. ಇನ್ನು ಆದಿತ್ಯ ರಾಯ್ ಕಪೂರ್ ಅವರು 2009ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ‘ಲಂಡನ್ ಡ್ರೀಮ್ಸ್’ ಅವರ ಮೊದಲ ಸಿನಿಮಾ. ಅನನ್ಯಾ ಪಾಂಡೆಗಿಂತ ಆದಿತ್ಯ ರಾಯ್ ಕಪೂರ್ ಶ್ರೀಮಂತ. ಅವರು ಹಲವು ವರ್ಷಗಳಿಂದ ಸಿನಿಮಾ ರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. 

ಆದರೆ ಇದೀಗ ಇಂಟರೆಸ್ಟಿಂಗ್​ ವಿಷಯವೊಂದು ಹೊರ ಬಂದಿದೆ. ಅದೇನೆಂದರೆ ಈ ಜೋಡಿ ಬ್ರೇಕಪ್​ ಆಗಿದೆ ಎನ್ನುವುದು.  ಇಬ್ಬರೂ ಬ್ರೇಕಪ್ ಮಾಡಿಕೊಂಡಿರುವ ಸುದ್ದಿ ಸ್ವಲ್ಪ ಸಮಯದಿಂದಲೇ ಕೇಳಿ ಬರುತ್ತಿದ್ದರೂ ಆದರೆ ಈಗ ಅದು ಕನ್ಫರ್ಮ್ ಆಗಿದೆ. ಸಂಬಂಧದಲ್ಲಿ ತಮ್ಮ ಕ್ರೇಜಿಯೆಸ್ಟ್ ವಿಷಯ ಏನು ಎಂದು ಈ ಹಿಂದೆ ಹೇಳಿದ್ದ ಅನನ್ಯಾ  ಕರೆಯನ್ನು ಸ್ವೀಕರಿಸದ ಕಾರಣ ಒಮ್ಮೆ ತನ್ನ ಗೆಳೆಯನಿಗೆ 50-75 ಬಾರಿ ಕರೆ ಮಾಡಿರುವುದಾಗಿ ತಿಳಿಸಿದ್ದರು. 'ನನಗೊಂದು ಸಮಸ್ಯೆಯಿದೆ. ಆ ನಿಮಿಷದಲ್ಲಿ ಸಮಸ್ಯೆಯನ್ನು ಬಗೆಹರಿಸಬೇಕಾದ ವ್ಯಕ್ತಿ ನಾನು. ಜನರಿಗೆ ಜಾಗ ಕೊಡುವುದು ನನಗೆ ಇಷ್ಟವಿಲ್ಲ. ಆದರೆ ಇದು ಒಳ್ಳೆಯ ಅಭ್ಯಾಸವಲ್ಲ' ಎಂದು ನನಗೆ ಗೊತ್ತು ಎಂದು ಅನನ್ಯ ಹೇಳಿದ್ದರು. ಆದರೆ  ಇದೀಗ ಜೋಡಿ ಬ್ರೇಕಪ್​ ಆಗಿದೆ ಎನ್ನಲಾಗುತ್ತಿದೆ.  ಈ ಬ್ರೇಕಪ್​ ನೋವಿನಿಂದ ಹೊರಬರಲು ನಟಿ ಹೊಸ ನಾಯಿ ಖರೀದಿಸಿದ್ದು, ಅದರ ಜೊತೆ ಸೋಷಿಯಲ್‌ ಮೀಡಿಯಾದಲ್ಲಿ  ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ.

ಆ ಘಟನೆ ಬಳಿಕ ಎಂದಿಗೂ ಬಿಕಿನಿ, ತುಂಡುಡುಗೆ ತೊಡದಿರಲು ನಿರ್ಧರಿಸಿದೆ.... ಸಾಯಿಪಲ್ಲವಿ ಮಾತಿಗೆ ಶ್ಲಾಘನೆಗಳ ಮಹಾಪೂರ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?