Bad Newz ತೃಪ್ತಿ ದಿಮ್ರಿ ಜೊತೆ ಈಜುಕೊಳದಲ್ಲಿ ವಿಕ್ಕಿ ರೊಮ್ಯಾನ್ಸ್, ಕತ್ರೀನಾಗೆ ಟ್ಯಾಗ್ ಮಾಡಿದ ನೆಟ್ಟಿಗರು!

By Chethan Kumar  |  First Published Jul 8, 2024, 5:54 PM IST

ಆ್ಯನಿಮಲ್‌ನಲ್ಲಿ ಬೆತ್ತಲಾದ ತೃಪ್ತಿ ದಿಮ್ರಿ ಜೊತೆ ಇದೀಗ ವಿಕ್ಕಿ ಕೌಶಾಲ್ ಈಜುಕೊಳದಲ್ಲಿ ರೋಮ್ಯಾನ್ಸ್ ಮಾಡುತ್ತಿರುವ ಫೋಟೋಗಳು ಹರಿದಾಡಿದೆ. ಈ ಫೋಟೋಗಳನ್ನು ನೆಟ್ಟಿಗರು ಕತ್ರೀನಾ ಕೈಫ್‌ಗೆ  ಟ್ಯಾಗ್ ಮಾಡಿದ್ದಾರೆ.
 


ಮುಂಬೈ(ಜು.08) ಬಾಲಿವುಡ್ ನಟ ವಿಕ್ಕಿ ಕೌಶಾಲ್ ಭಾರಿ ಸದ್ದು ಮಾಡುತ್ತಿದ್ದಾರೆ. ಇದೀಗ ಆ್ಯನಿಮಲ್ ಚಿತ್ರದಲ್ಲಿ ಬೆತ್ತಲಾಗಿ ನಟಿಸಿ ಕೋಲಾಹಲ ಸೃಷ್ಟಿಸಿದ್ದ ತೃಪ್ತಿ ದಿಮ್ರಿ ಜೊತೆ ವಿಕ್ಕಿ ಕೌಶಾಲ್ ರೊಮ್ಯಾನ್ಸ್ ಫೋಟೋಗಳು ಹರಿದಾಡಿದೆ. ಈಜುಕೊಳದಲ್ಲಿ ಭರ್ಜರಿ ರೊಮ್ಯಾನ್ಸ್ ಫೋಟೋಗಳನ್ನು ನೆಟ್ಟಿಗರು ವಿಕ್ಕಿ ಪತ್ನಿ ಕತ್ರೀನಾ ಕೈಫ್‌ಗೆ ಟ್ಯಾಗ್ ಮಾಡಿದ್ದಾರೆ. ಇದು ಬ್ಯಾಡ್ ನ್ಯೂಝ್. ಹೌದು, ಬಾಲಿವುಡ್‌ನಲ್ಲಿ ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಬ್ಯಾಡ್ ನ್ಯೂಝ್ ಚಿತ್ರದ ರೊಮ್ಯಾನ್ಸ್ ಫೋಟೋಗಳು ಇದೀಗ ಭಾರಿ ಸದ್ದು ಮಾಡುತ್ತಿದೆ.

ತೃಪ್ತಿ ದಿಮ್ರಿ ನೀಲಿ ಬಿಕಿನಿಯಲ್ಲಿ ಕಂಗೊಳಿಸಿದ್ದರೆ, ವಿಕ್ಕಿ ಕೌಶಾಲ್ ಕಟ್ಟುಮಸ್ತಾದ ದೇಹ ಪ್ರದರ್ಶಿಸಿದ್ದರೆ. ಸ್ವಿಮ್ಮಿಂಗ್‌ಫೂಲ್‌ನಲ್ಲಿ ತೃಪ್ತಿ ಸೊಂಟ ಬಳುಕಿಸಿ ಹಿಡಿದ ವಿಕ್ಕಿ ಫೋಟೋಗಳು ಚಿತ್ರದ ಕುತೂಹಲ ಮತ್ತಷ್ಟು ಹೆಚ್ಚಿಸಿದೆ. ಆ್ಯನಿಮಲ್ ಬಳಿಕ ತೃಪ್ತಿ ದಿಮ್ರಿ ಫ್ಯಾನ್ ಫಾಲೋವಿಂಗ್ ದುಪ್ಪಟ್ಟಾಗಿದೆ. ಇಷ್ಟೇ ಅಲ್ಲ ತೃಪ್ತಿ ದಿಮ್ರಿ ಚಿತ್ರದಲ್ಲಿದ್ದಾರೆ ಎಂದರೆ ಕುತೂಹಲಗಳು ಮತ್ತಷ್ಟು ಹೆಚ್ಚಾಗಿದೆ. ಇದೀಗ ವಿಕ್ಕಿ ಹಾಗೂ ತೃಪ್ತಿ ರೊಮ್ಯಾನ್ಸ್ ಫೋಟೋಗಳು ಭಾರಿ ವೈರಲ್ ಆಗಿದೆ.

Tap to resize

Latest Videos

ತೃಪ್ತಿ ದಿಮ್ರಿ ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ಬ್ಯಾಡ್ ನ್ಯೂಝ್ ಸಿನಿಮಾ ಹಾಡು ರಿಲೀಸ್!

ಖುದ್ದು ವಿಕ್ಕಿ ಕೌಶಾಲ್ ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಜುಲೈ 9 ರಂದು ಚಿತ್ರದ ಜಾನಮ್ ಹಾಡು ರಿಲೀಸ್ ಆಗಲಿದೆ ಎಂದು ವಿಕ್ಕಿ ಮಾಹಿತಿ ನೀಡಿದ್ದಾರೆ. ಈ ಜೊತೆಗೆ ಈ ಚಿತ್ರದ ರೊಮ್ಯಾಂಟಿಕ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಹಂಚಿಕೊಂಡು ಮಾಹಿತಿ ನೀಡಿದ ವಿಕ್ಕಿ ಕೌಶಾಲ್, ತೃಪ್ತಿ ದಿಮ್ರಿ, ನೇಹಾ ಧೂಪಿಯಾ , ಕರಣ್ ಜೋಹರ್ ಸೇರಿದಂತೆ ಚಿತ್ರ ತಂಡದ ಪ್ರಮುಖರಿಗೆ ಟ್ಯಾಗ್ ಮಾಡಿದ್ದಾರೆ. 

 

 

ಇತ್ತ ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಇದೀಗ ವಿಕ್ಕಿ ಪತ್ನಿ ಕತ್ರೀನಾ ಕೈಫ್‌ಗೆ ಟ್ಯಾಗ್ ಮಾಡಿದ್ದಾರೆ. ಇದೊಂದು ಬಿಟ್ಟು ಹೋಗಿದೆ. ನಾವು ಟ್ಯಾಗ್ ಮಾಡಿದ್ದೇವೆ ಎಂದು ಕಮೆಂಟ್ ಮಾಡಿದ್ದಾರೆ. ವಿಕ್ಕಿ ಪೋಸ್ಟ್‌ಗೆ ಭರ್ಜರಿ ಕಮೆಂಟ್‌ಗಳು ವ್ಯಕ್ತವಾಗಿದೆ. ಹಾಟ್ ಫೋಟೋ ತಲ್ಲಣ ಸೃಷ್ಟಿಸುತ್ತಿದೆ. ಇದೀಗ ಜಾನಮ್ ಹಾಡಿಗೆ ಕಾಯುತ್ತಿದ್ದೇವೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. 

ಆ್ಯನಿಮಲ್‌ನಲ್ಲಿ ಬೆತ್ತಲಾದ ದಿಮ್ರಿಗೆ ಭರ್ಜರಿ ಆಫರ್, ಮುಂಬೈನಲ್ಲಿ 14 ಕೋಟಿ ಮನೆ ಖರೀದಿಸಿದ ನಟಿ!

ಬ್ಯಾಡ್ ನ್ಯೂಜ್ ರೋಮ್ಯಾಂಟಿಕ್ ಕಾಮಿಡಿ ಹಾಗೂ ಲವ್ ಟ್ರಯಾಂಗಲ್ ಮೂವಿ. ಇತ್ತೀಚೆಗೆ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿತ್ತು. ಕ್ಷಣಾರ್ಧದಲ್ಲೇ ಟ್ರೇಲರ್ ಬಾರಿ ಲೈಕ್ಸ್ ಹಾಗೂ ಕಮೆಂಟ್ಸ್ ಪಡೆದಿತ್ತು. ಇದರ ಬೆನ್ನಲ್ಲೇ ತೌಬಾ ತೌಬಾ ಸಾಂಗ್ ರಿಲೀಸ್ ಮಾಡಲಾಗಿತ್ತು. ವಿಕ್ಕಿ ಕೌಶಾಲ್ ಹಾಗೂ ತೃಪ್ತಿ ದಿಮ್ರಿ ಪಾರ್ಟಿ ಡ್ಯಾನ್ಸ್ ಸಾಂಗ್ ಭಾರಿ ವೈರಲ್ ಆಗಿದೆ. ವಿಕ್ಕಿ ಕೌಶಾಲ್ ಡ್ಯಾನ್ಸ್ ಸ್ಟೆಪ್ಸ್‌ಗೆ ಭರ್ಜರಿ ಪ್ರಶಂಸೆ ವ್ಯಕ್ತವಾಗಿತ್ತು. ನಟ ಹೃತಿಕ್ ರೋಶನ್ ಕೂಡ ವಿಕ್ಕಿ ಕೌಶಾಲ್ ಡ್ಯಾನ್ಸ್ ಸ್ಟೆಪ್ಸ್‌ಗೆ ಫಿದಾ ಆಗಿದ್ದರು.


 

click me!