ಸ್ಟೂಡೆಂಟ್ ಆಫ್ ದಿ ಈಯರ್, 2 ಸ್ಟೇಟ್ಸ್, ಗಂಗೂಬಾಯಿ ಕಥಿಯಾವಾಡಿ, ಬ್ರಹ್ಮಾಸ್ತ್ರ, ಹಾರ್ಟ್ ಆಫ್ ಸ್ಟೋನ್, ರಾಜಿ, ಡಿಯರ್ ಜಿಂದಗಿ, ಗಲ್ಲಿ ಬಾಯ್ಸ್, ಹೀಗೆ ಬಹಳಷ್ಟು,, ಸಾಲುಸಾಲು ಚಿತ್ರಗಳಲ್ಲಿ ನಟಿಸಿದ್ದಾರೆ ನಟಿ ಆಲಿಯಾ ಭಟ್. ಹೀರೋ ಜತೆಯಲ್ಲಿ ಮರ ಸುತ್ತುವ ಪಾತ್ರವನ್ನೂ ಮಾಡಿ, ಹೀರೋಯಿನ್ ಓರಿಯೆಂಟೆಡ್ ಚಿತ್ರಗಳಲ್ಲಿ ಕೂಡ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಬಾಲಿವುಡ್ ನಟಿ ಆಲಿಯಾ ಭಟ್ ಅಪರೂಪಕ್ಕೆ ಅನ್ನುವಂತೆ ಸತ್ಯವೊಂದನ್ನು ಹೇಳಿದ್ದಾರೆ ಎನ್ನಬಹುದು. ಅವರಿಗೆ ನಾವು ಶಾಶ್ವತವಲ್ಲ, ನಮಗೆ ಸಾವಿದೆ, ನಮ್ಮ ಇಲ್ಲಿನ ಜೀವನ ತುಂಬಾ ಕಡಿಮೆ ಅವಧಿಯದ್ದು' ಎಂದು ಅರ್ಥವಾಗಿದೆಯಂತೆ. ಈ ಸಾರ್ವಕಾಲಿಕ ಸತ್ಯವನ್ನು ಅರ್ಥ ಮಾಡಿಕೊಳ್ಳಲು ನನ್ನ ಸಿನಿಮಾವೊಂದು ಪ್ಲಾಪ್ ಆಗಬೇಕಾಯ್ತು' ಎಂದಿದ್ದಾರೆ ನಟಿ ಆಲಿಯಾ ಭಟ್. ಬಾಲಿವುಡ್ ನಿರ್ಮಾಪಕ ಮತ್ತು ನಿರ್ದೇಶಕ ಮಹೇಶ್ ಭಟ್ ಪುತ್ರಿ ಈ ಆಲಿಯಾ ಭಟ್ ಎಂಬುದು ಹೆಚ್ಚಿನವರಿಗೆ ಗೊತ್ತಿರುವ ಸಂಗತಿ.
ನಟಿ ಆಲಿಯಾ ಭಟ್ ಕೆರಿಯರ್ ಶುರುವಾದಾಗಿನಿಂದಲೇ ತಾವೊಬ್ಬರು ಪ್ರಬುದ್ಧ ನಟಿ ಎಂಬುದನ್ನು ಸಾಬೀತು ಮಾಡಿದ್ದಾರೆ. ಹಿಂದಿ ಚಿತ್ರರಂಗದ ನಿರ್ಮಾಪಕರು ಹಾಗು ನಿರ್ದೇಶಕರ ಮಗಳಾಗಿ, ಸಿನಿಮಾ ಹಿನ್ನೆಲೆಯಿಂದ ಬಂದವರಾಗಿ ಅಲ್ಲಿಯೇ ವೃತ್ತಿ ಮಾಡಬೇಕೆಂದು ನಿರ್ಧಾರ ಮಾಡಿದ್ದರಂತೆ. ತಮಗೆ ಸೂಕ್ತ ಎನಿಸುವ ಶಿಕ್ಷಣ ಮುಗಿಸಿದ ತಕ್ಷಣ, ನಟನೆಗೆ ಬೇಕಾದ ಬೇಸಿಕ್ ತರಬೇತಿ ತೆಗದುಕೊಂಡು, ಹಿಂದೆ ಮುಂದೆ ಯೋಚಿಸದೇ ಬಾಲಿವುಡ್ ಚಿತ್ರೋದ್ಯಮಕ್ಕೆ ಧುಮುಕಿದರು.
ಸ್ಟೂಡೆಂಟ್ ಆಫ್ ದಿ ಈಯರ್, 2 ಸ್ಟೇಟ್ಸ್, ಗಂಗೂಬಾಯಿ ಕಥಿಯಾವಾಡಿ, ಬ್ರಹ್ಮಾಸ್ತ್ರ, ಹಾರ್ಟ್ ಆಫ್ ಸ್ಟೋನ್, ರಾಜಿ, ಡಿಯರ್ ಜಿಂದಗಿ, ಗಲ್ಲಿ ಬಾಯ್ಸ್, ಹೀಗೆ ಬಹಳಷ್ಟು,, ಸಾಲುಸಾಲು ಚಿತ್ರಗಳಲ್ಲಿ ನಟಿಸಿದ್ದಾರೆ ನಟಿ ಆಲಿಯಾ ಭಟ್. ಹೀರೋ ಜತೆಯಲ್ಲಿ ಮರ ಸುತ್ತುವ ಪಾತ್ರವನ್ನೂ ಮಾಡಿ, ಹೀರೋಯಿನ್ ಓರಿಯೆಂಟೆಡ್ ಚಿತ್ರಗಳಲ್ಲಿ ಕೂಡ ನಟಿಸಿ ಸೈ ಎನಿಸಿಕೊಂಡಿದ್ದಾರೆ ನಟಿ ಆಲಿಯಾ ಭಟ್. ಇತ್ತೀಚೆಗೆ ನಟ ರಣವೀರ್ ಕಪೂರ್ ಜತೆ ಮದುವೆಯಾಗಿ ಮಗುವೊಂದರ ತಾಯಿಯೂ ಆಗಿರುವ ಆಲಿಯಾ, ತಮ್ಮ ಕೆರಿಯರ್‌ನಲ್ಲಿ ತಾವೊಬ್ಬರು ಸಮರ್ಥ ನಟಿ ಎಂಬುದನ್ನು ಪ್ರೂವ್ ಮಾಡಿದವರು ಎಂಬುದನ್ನು ಹೇಳಬಹುದು.
ಇಂಥ ನಟಿ ಆಲಿಯಾಗೆ ಒಮ್ಮೆ, ಜೀವನದ ಬಗ್ಗೆ ಜ್ಞಾನೋದಯ ಆಯ್ತಂತೆ. ಅವರೇ ಹೇಳುವಂತೆ 'ನನಗೆ ಚಿತ್ರೋದ್ಯಮಕ್ಕೆ ಬಂದ ಹೊಸದರಲ್ಲೇ ಸಕ್ಸಸ್ ಸಿಕ್ಕಿದೆ, ಜೀವನ ಅಂದ್ರೆ ಯಾವತ್ತೂ ಸಕ್ಸಸ್, ಜನರು ನಮ್ಮ ಸುತ್ತಲು ಸುತ್ತುತ್ತಲೇ ಇರುತ್ತಾರೆ, ಎಲ್ಲವೂ ನಾನು ಅಂದುಕೊಂಡಂತೆ ಆಗುತ್ತದೆ ಎಂಬ ಭ್ರಮೆ ಹುಟ್ಟಿಸಿಬಿಟ್ಟಿತ್ತು. ಜನರು ಯಾವತ್ತೂ ನನ್ನ ಹೆಗಲ ಮೇಲೆ ಕೈ ಹಾಕಿ, ನನ್ನೊಂದಿಗೆ ನನ್ನ ಸಕ್ಸಸ್ ಗುಣಗಾನ ಮಾಡುತ್ತಾ ಇರುತ್ತಾರೆ. ಜೀವನ ಪೂರ್ತಿ ಹೀಗೆ ಇರುತ್ತೆ ಎಂಬ ನಿರೀಕ್ಷೆಯಲ್ಲಿದ್ದೆ. ಅಷ್ಟೇ ಅಲ್ಲ, ಯಶಸ್ಸು, ಕೀರ್ತಿ ಎಲ್ಲವೂ ಶಾಶ್ವತ ಎಂಬ ಭ್ರಮೆಯಲ್ಲಿ ತೇಲಾಡುತ್ತಿದ್ದೆ.
ಪ್ರಿಯಾಂಕಾ ಚೋಪ್ರಾ ಜತೆ ನಟಿಸಿದ್ದ ಟ್ಯಾಲೆಂಟೆಡ್ ನಟ ಈಗ ಮುಂಬೈನಲ್ಲಿ ಹೊಟ್ಟೆಪಾಡಿಗೆ ಹಣ್ಣು ಮಾರುತ್ತಿದ್ದಾರೆ
ಆದರೆ, ನನ್ನ ಒಂದು ಸಿನಿಮಾ ಸೋತು ಹೋಯ್ತು. ಅಂದೇ ನನಗೆ ಅರ್ಥವಾಗಿದ್ದು ಜೀವನ ಅಂದ್ರೇನು ಎಂಬುದು. ಸಕ್ಸಸ್ ಯಾವತ್ತು ಹೀಗೇ ಇರುವುದಿಲ್ಲ. ಜನರು ಯಾವತ್ತೂ ನಮ್ಮ ಸುತ್ತಲೇ ಸುತ್ತುತ್ತ ಇರುವುದಿಲ್ಲ, ಜೀವನವೇ ಶಾಶ್ವತವಲ್ಲ ಎಂಬುದು ಅರ್ಥವಾಗಿ ಹೋಯ್ತು. ಸಿನಿಮಾವೃತ್ತಿ ಅಂದಮೇಲೆ ಸೋಲು-ಗೆಲುವು ಎರಡೂ ಇರುತ್ತೆ. ಎರಡನ್ನೂ ಸ್ವೀಕರಿಸುವ ಮನಸ್ಥಿತಿ ತಂದುಕೊಳ್ಳದಿದ್ದರೆ ಇಲ್ಲಿ ಮನಸ್ಸು ಸ್ಥಿಮಿತದಲ್ಲಿ ಇಟ್ಟುಕೊಳ್ಳಲು ಸಾಧ್ಯವೇ ಇಲ್ಲ. ಜನರು ಗೆದ್ದಾಗ ಕೈ ಕುಲುಕುತ್ತಾರೆ, ಸೋತಾಗ ದೂರ ಸರಿಯುತ್ತಾರೆ. ಅದಕ್ಕೆಲ್ಲ ನಾವು ತಲೆ ಕೆಡಿಸಿಕೊಳ್ಳಬಾರದು. ಅಷ್ಟಕ್ಕೂ ಜೀವನ ಶಾಶ್ವತವಲ್ಲ, ನಾವೆಲ್ಲರೂ ಸಾಯುತ್ತೇವೆ ಎಂದು ಅರಿವಾಗಿದೆ' ಎಂದಿದ್ದಾರೆ ನಟಿ ಆಲಿಯಾ ಭಟ್.