ಅಂಬಾನಿ ಫ್ಯಾಮಿಲಿ ಮದುವೆ ಡಾನ್ಸ್​ ಮಾಡಿದ್ರೆ ಇದು 'ಜಿಯೋ ರಿಚಾರ್ಜ್'​ ಖುಷಿ ಅಂತಿದ್ದಾರಲ್ಲ ತರ್ಲೆ ಕಮೆಂಟಿಗರು?

Published : Jul 09, 2024, 06:11 PM IST
ಅಂಬಾನಿ ಫ್ಯಾಮಿಲಿ ಮದುವೆ ಡಾನ್ಸ್​ ಮಾಡಿದ್ರೆ ಇದು 'ಜಿಯೋ ರಿಚಾರ್ಜ್'​ ಖುಷಿ ಅಂತಿದ್ದಾರಲ್ಲ ತರ್ಲೆ ಕಮೆಂಟಿಗರು?

ಸಾರಾಂಶ

ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್​ ಮದುವೆಯ ಸಡಗರದಲ್ಲಿ ಅಂಬಾನಿ ಕುಟುಂಬ ಭರ್ಜರಿ ಸ್ಟೆಪ್​ ಹಾಕಿದ್ರೆ, ಅದಕ್ಕೂ ಜಿಯೊ ಮೊಬೈಲ್​ ರಿಚಾರ್ಜ್​ ಕನೆಕ್ಟ್​ ಮಾಡೋದಾ ಟ್ರೋಲಿಗರು?  

ಸದ್ಯ ಈಗ ಎಲ್ಲೆಲ್ಲೂ ಮುಖೇಶ್ ಅಂಬಾನಿ ಮತ್ತು ನೀತಾ ದಂಪತಿಯ ಪುತ್ರ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್​ ಮದುವೆಯ ವಿಷಯವೇ. ಇದೇ 12ರಂದು ನಡೆಯಲಿರುವ ಈ  ಶುಭ ಸಮಾರಂಭಕ್ಕೆ ಇದಾಗಲೇ ಭರದ ಸಿದ್ಧತೆ ನಡೆಸಲಾಗಿದ್ದು, ದಿನಕ್ಕೊಂದರಂತೆ  ಮದುವೆ ಕಾರ್ಯಕ್ರಮಗಳು ಜರಗುತ್ತಿವೆ. ಎರಡು ವಾರಗಳ ಮೊದಲೇ ವಿವಿಧ ರೀತಿಯ ಕಾರ್ಯಕ್ರಮಗಳು ನಡೆಯುತ್ತಿವೆ. ಇವರ ಮದುವೆಯ ಬಗ್ಗೆ ಇದಾಗಲೇ ಜಗತ್ತಿನ ಎಲ್ಲರ ಕಣ್ಣು ನೆಟ್ಟಿದೆ. ಇದಾಗಲೇ 50 ಕುಟುಂಬಗಳಿಗೆ  ಸಾಮೂಹಿಕ ವಿವಾಹ ಸಮಾರಂಭ ಏರ್ಪಡಿಸುವ ಮೂಲಕ ಅಂಬಾನಿ ಕುಟುಂಬ ಶ್ಲಾಘನೆಗೆ ಪಾತ್ರವಾಗಿದೆ.  ಇಲ್ಲಿ  ಭಾಗವಹಿಸಿರುವ ಪ್ರತಿ  ಜೋಡಿಗೂ ಮಂಗಳಸೂತ್ರ, ಮದುವೆಯ ಉಂಗುರಗಳು, ಮೂಗುತಿ ಸೇರಿ ಚಿನ್ನಾಭರಣ, ಕಾಲುಂಗುರ, ಕಾಲ್ಗೆಜ್ಜೆಯಂಥ ಬೆಳ್ಳಿ ಆಭರಣ ಸೇರಿದಂತೆ  ಪ್ರತಿ ವಧುವಿಗೆ ರೂ. ಒಂದು ಲಕ್ಷ ನಗದನ್ನು ನೀಡುವ ಮೂಲಕ ಕುಟುಂಬ ಶ್ಲಾಘನಾರ್ಹ ಕಾರ್ಯ ಮಾಡಿದೆ. 

ಇದೀಗ ಮದುವೆಗೆ ಸಂಬಂಧಿಸಿದ ಹಲವಾರು ವಿಡಿಯೋಗಳು ವೈರಲ್​ ಆಗುತ್ತಲೇ ಇವೆ. ಅದರಲ್ಲಿ ಒಂದು ನೀತಾ ಅಂಬಾನಿ ಸೇರಿದಂತೆ ಕುಟುಂಬಸ್ಥರು ನರ್ತಿಸುತ್ತಿರುವ ವಿಡಿಯೋ. ಅಷ್ಟಕ್ಕೂ ಈ ವಿಡಿಯೋದಲ್ಲಿ ನೀವು ಇವರ ಡಾನ್ಸ್​  ನೋಡಿ ನಕ್ಕರೆ, ಅವರು ನಿಮ್ಮ ಬ್ಯಾಂಕ್​ ಬ್ಯಾಲೆನ್ಸ್​ ನೋಡಿ ನಗುತ್ತಾರೆ ಎನ್ನುವ ಕ್ಯಾಪ್ಷನ್​ ನೀಡಲಾಗಿದೆ. ಆದರೆ ಇದಕ್ಕೆ ಕೆಲವು ತರ್ಲೆ ನೆಟ್ಟಿಗರು ಇದು ಜಿಯೋ ರಿಚಾರ್ಜ್​ ಖುಷಿ ಎಂದು ಕಾಲೆಳೆಯುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ. ಅಂಬಾನಿ ಪುತ್ರನ ಮದುವೆಯ ಸಮಯದಲ್ಲಿಯೇ ಅವರ ಒಡೆತನದ ಜಿಯೋ ನೆಟ್​ವರ್ಕ್​ ಬೆಲೆಯನ್ನು ಏರಿಕೆ ಮಾಡಲಾಗಿದೆ. ಜಿಯೋ ಮಾತ್ರವಲ್ಲದೇ ಏರ್​ಟೆಲ್​ ಕೂಡ ಬೆಲೆ ಏರಿಸಿದೆ. ಆದರೆ ಮದುವೆಯ ಸಮಯದಲ್ಲಿಯೇ ಬೆಲೆ ಏರಿಕೆ ಮಾಡಿದ್ದರಿಂದ ಎಲ್ಲರೂ ಈಗ ಈ ಡಾನ್ಸ್​ ನೋಡಿ ಕಾಲೆಳೆಯುತ್ತಿದ್ದಾರೆ.

ಪರಿಸರ ಪ್ರೇಮ ಬಿತ್ತುವ ರಥದಲ್ಲಿ ಪ್ಲಾಸ್ಟಿಕ್​ ಗಿಡ-ಮರಗಳಾ? ಅಂಬಾನಿ ಪುತ್ರನ ಮದ್ವೆಯಲ್ಲಿ ಇದೆಂಥ ಅಪಸ್ವರ?

ಜಿಯೋ ಬೆಲೆ ಹೆಚ್ಚು ಮಾಡುತ್ತಿದ್ದಂತೆಯೇ ಹಲವರು ಹಿಂದಿನ ದಿನವೇ ವರ್ಷದ ರೀಚಾರ್ಜ್​ ಮಾಡಿಸಿಕೊಂಡಿದ್ದಾರೆ. ಈ ಮೂಲಕ 500 ರೂಪಾಯಿಗೂ ಹೆಚ್ಚು ದುಡ್ಡು ಉಳಿಸಿಕೊಂಡಿದ್ದಾರೆ. ಅದಕ್ಕಾಗಿ ಲಕ್ಷಾಂತರ ಮಂದಿ ಇದೇ ರೀತಿಮಾಡಿದ್ದು, ಅವರು ರೀಚಾರ್ಜ್​ ಮಾಡಿಸಿಕೊಂಡ ಖುಷಿ ಇವರ ಫ್ಯಾಮಿಲಿಯ ಮುಖದಲ್ಲಿ ಕಾಣಿಸುತ್ತಿದೆ. ಅದಕ್ಕಾಗಿ ಎಲ್ಲರೂ ಖುಷಿಯಿಂಡ ಡ್ಯಾನ್ಸ್​ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮದುವೆಯ ಕುರಿತಂತೆ ದಿನಕ್ಕೊಂದು ರೀತಿಯಲ್ಲಿ ಹೊಸ ಹೊಸ ಅಪ್​ಡೇಟ್​ಗಳು ಬರುತ್ತಲೇ ಇವೆ. ಮದುವೆಯಲ್ಲಿ ಸ್ವಲ್ಪವೇ ಹೆಚ್ಚು ಕಡಿಮೆಯಾದರೆ ಕಾಲೆಳೆಯಲು ದೊಡ್ಡ ವರ್ಗವೇ ಕಾದು ಕುಳಿತಿದೆ. ಇದಾಗಲೇ ಮದುವೆಯ ಆರಂಭದ ದಿನದಿಂದಲೂ ಇಂಥ ವಿಷಯ ಸಿಕ್ಕರೆ ಟ್ರೋಲಿಗರು ಬಿಡುತ್ತಿಲ್ಲ. ಈಗ ಡಾನ್ಸ್​ ಮಾಡಿದ್ದಕ್ಕೂ ಜಿಯೋ ರಿಚಾರ್ಜ್​ಗೂ ಕನೆಕ್ಷನ್​ ಮಾಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಮದುವೆಗೆ ಅಣಿಗೊಳಿಸಲಾಗಿದ್ದ  ಮದುವೆಯ ರಥದ ಬಗ್ಗೆ ಅಪಸ್ವರ ಮೂಡಿತ್ತು. ಈ ಜೋಡಿಯ ಮದುವೆಯ ಅಂಗವಾಗಿ ಪರಿಸರ ಸ್ನೇಹವನ್ನು ಸಾರುವ ಮರಗಿಡಗಳು, ಪಕ್ಷಿ-ಪ್ರಾಣಿಗಳನ್ನು ಹೊತ್ತಿರುವ ರಥವೊಂದನ್ನು ಸಿದ್ಧಪಡಿಸಲಾಗಿದೆ. ಇದರ ವಿಡಿಯೋ ರಿಲೀಸ್​ ಆಗುತ್ತಲೇ ಕೆಲವರು ತಮಾಷೆ ಮಾಡುತ್ತಿದ್ದಾರೆ. ಇದರಲ್ಲಿ ಇರುವ ಗಿಡ-ಮರಗಳು ಪ್ಲಾಸ್ಟಿಕ್​ಗಳದ್ದು ಎನ್ನುವುದು ಹಲವರ ಆರೋಪ. ಮತ್ತೆ ಕೆಲವರು ಇದು ನಿಜವಾದ ಗಿಡ-ಮರಗಳು ಎನ್ನುತ್ತಿದ್ದರೂ, ವಿಡಿಯೋದಲ್ಲಿ ಅದು ಅಸಲಿಯದ್ದೋ, ಪ್ಲಾಸ್ಟಿಕ್​ನದ್ದೋ ಸರಿಯಾಗಿ ತಿಳಿಯದ ಕಾರಣ ಇದು ಪ್ಲಾಸ್ಟಿಕ್​ನದ್ದೇ ಎಂದು ಕಾಲೆಳೆಯುತ್ತಿದ್ದಾರೆ. 

ಅಬ್ಬಬ್ಬಾ ಸೀರಿಯಲ್​ ಮಹಿಮೆಯೆ? ಮೊದಲ ಎಪಿಸೋಡ್​ಗೆ 5 ಸಾವಿರ ಮುಗಿಯುವಾಗ ದಿನಕ್ಕೆ ಎರಡೂವರೆ ಲಕ್ಷ ಸಂಬಳ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?
ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!