ಗಾಯಗೊಂಡ ಶ್ವಾನದ ಸಹಾಯ ಮಾಡಿದ ವ್ಯಕ್ತಿ
ಶ್ವಾನಕ್ಕೆ ಸಹಾಯ ಮಾಡಿದ ವ್ಯಕ್ತಿಗೆ ಹುಚ್ಚ ಎಂದ ಜನ
ಈ ಕುರಿತಾಗಿ ಇನ್ಸ್ ಟಾಗ್ರಾಮ್ ನಲ್ಲಿ ಪೋಸ್ಟ್ ಹಂಚಿಕೊಂಡ ಅನುಷ್ಕಾ ಶರ್ಮ
ಬೆಂಗಳೂರು (ಫೆ 20): ಪ್ರಾಣಿಗಳನ್ನು ಅಪಾರವಾಗಿ ಪ್ರೀತಿಸುವ ಹಾಗೂ ಅವುಗಳ ಹಕ್ಕುಗಳ (Animal Rights) ಪರವಾಗಿ ಹೋರಾಟ ನಡೆಸುವ ಬಾಲಿವುಡ್ ನಟಿ (Bollywood actor) ಅನುಷ್ಕಾ ಶರ್ಮ ಇತ್ತೀಚೆಗೆ ಇದೇ ವಿಚಾರವಾಗಿ ಸುದ್ದಿಯಾಗಿದ್ದಾರೆ. ರಸ್ತೆ ಬದಿಯಲ್ಲಿ ಗಾಯಗೊಂಡ ಶ್ವಾನವನ್ನು ಉಪಚರಿಸಿದ ವೈಕ್ತಿಯ ವೈರಲ್ ವಿಡಿಯೋವನ್ನು ತಮ್ಮ ಇನ್ಸ್ ಟಾಗ್ರಾಮ್ (Instagram) ಪುಟದಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಶ್ವಾನವನ್ನು ಉಪಚರಿಸಿದ ವ್ಯಕ್ತಿಯನ್ನು ಅಲ್ಲಿನ ಜನ "ಹುಚ್ಚ" ಎಂದು ಕರೆಯುತ್ತಾರೆ.
ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಗಾಯಗೊಂಡ ಬೀದಿನಾಯಿಯನ್ನು ಕೈಯಲ್ಲಿ ಹಿಡಿದುಕೊಂಡಿದ್ದು, ಇನ್ನೊಬ್ಬ ವ್ಯಕ್ತಿಯೊಂದಿಗೆ ಈ ಕುರಿತಾಗಿ ವಾದ ಮಾಡುತ್ತಿದ್ದಾರೆ. ಬೀದಿನಾಯಿಯ ಕುರಿತಾಗಿ ಅತಿಯಾದ ಕಾಳಜಿ ವಹಿಸುತ್ತಿರುವ ವಿಚಾರಕ್ಕಾಗಿ ಪಕ್ಕದಲ್ಲಿದ್ದ ಇನ್ನೊಬ್ಬ ಹಿರಿಯ ವ್ಯಕ್ತಿ ಅತನನ್ನು ಹುಚ್ಚ ಎಂದು ಕರೆಯುತ್ತಾರೆ. ಅದಕ್ಕೆ ಪ್ರತಿಕ್ರಿಯೆ ನೀಡುತ್ತಿರುವ ವ್ಯಕ್ತಿ, "ಮೇ ಪಾಗಲ್ ಹೂಂ, ತುಮ್ಹೆ ಮೇ ಪಾಗಲ್ ದಿಖಾಯಿ ದೇ ರಹಾ ಹುಂ, ಪಶು ಕೀ ಸೇವಾ ಕರ್ನಿ ಚಾಹಿಯೇ ಹಮೇಶಾ" (ಹೌದು ನಾನು ಹುಚ್ಚ, ನಿಮಗೆ ನಾನು ಹುಚ್ಚನಂತೆ ಕಾಣುತ್ತಿದ್ದೇನೆ. ಒಬ್ಬನು ಯಾವಾಗಲೂ ಅಸಹಾಯಕ ವ್ಯಕ್ತಿಗಳಿಗೆ ಸೇವೆ ಸಲ್ಲಿಸಬೇಕು) ಎಂದು ಹೇಳಿದ್ದಾನೆ.
ಈ ವಿಡಿಯೋವನ್ನು ತಮ್ಮ ಇನ್ಸ್ ಟಾಗ್ರಾಮ್ ಪುಟದಲ್ಲಿ ಮರು ಹಂಚಿಕೊಂಡಿರುವ ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ, ಇದಕ್ಕೆ ಆಕಷರ್ಕ ಮಾತನ್ನು ಕೂಡ ಸೇರಿಸಿದ್ದಾರೆ. "ಪಾಗಲ್ ತೋ ವೋ ಹೈ, ಜೋ ಇನ್ಸಾನಿಯತ್ ನಹೀಂ ಸಮ್ಜೆ, ಆಪ್ ತೋಹ್, (ಮನುಷ್ಯತ್ವವನ್ನು ಅರ್ಥಮಾಡಿಕೊಳ್ಳದವರು ಹುಚ್ಚರು, ಇನ್ನೊಂದೆಡೆ ನೀವು...)' ಎಂದು ಆ ವ್ಯಕ್ತಿಯ ಪ್ರಾಣಿ ಪ್ರೀತಿಗೆ ತಮ್ಮ ಮೆಚ್ಚುಗೆಯನ್ನೂ ಸೂಚಿಸಿದ್ದು, ಚಪ್ಪಾಳೆಗಳನ್ನು ತಟ್ಟುವ ಇಮೋಜಿಗಳನ್ನು ಕೂಡ ಸೇರಿಸಿದ್ದಾರೆ.
ಅನುಷ್ಕಾ ಆಗಾಗ್ಗೆ ಪ್ರಾಣಿ ಕಲ್ಯಾಣ ಮತ್ತು ಪ್ರಾಣಿಗಳ ಹಕ್ಕುಗಳ ಬಗ್ಗೆ ಮಾತನಾಡುತ್ತಲೇ ಬಂದಿದ್ದಾರೆ. ಅವರು 2019 ರಲ್ಲಿ #JusticeForAnimals ಅಭಿಯಾನವನ್ನು ಪ್ರಾರಂಭಿಸಿದರು, ಕಠಿಣ ಕಾನೂನುಗಳು, ಪ್ರಾಣಿ ಹಿಂಸೆಯ ವಿರುದ್ಧ ಕಠಿಣ ಶಿಕ್ಷೆ ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ಕಾಯ್ದೆ, 1960 ರ ತಿದ್ದುಪಡಿಗೆ ಒತ್ತಾಯ ಮಾಡಿದ್ದರು. ಅನುಷ್ಕಾ ಅವರ ಪ್ರಾಣಿಗಳ ಮೇಲಿನ ಉತ್ಸಾಹದಿಂದ ಪ್ರೇರಿತರಾಗಿ, ಅವರ ಪತಿ ಮತ್ತು ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಬೀದಿ ಪ್ರಾಣಿಗಳನ್ನು ಆರೈಕೆ ಮಾಡುವ ಸಂಸ್ಥೆಯೊಂದನ್ನೂ ಕೂಡ ಪ್ರಾರಂಭಿಸಿದ್ದರು.
Celebrity Life : ಮಾಂಸ ತ್ಯಜಿಸಿದ ವಿರುಷ್ಕಾ ಜೋಡಿ! ಮಹತ್ವದ ನಿರ್ಧಾರಕ್ಕೆ ಕಾರಣ ಇಲ್ಲಿದೆ
ಸೆಲೆಬ್ರಿಟಿ ದಂಪತಿಗಳಾಗಿರುವ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ಇತ್ತೀಚೆಗೆ ತಾವು ಮಾಂಸವನ್ನು ತ್ಯಜಿಸಿದ್ದಾಗಿಯೂ ಹೇಳಿದ್ದಲ್ಲದೆ, ಕಳೆದ ಕೆಲವು ಸಮಯಗಳಿಂದ ಸಸ್ಯ ಆಧಾರಿಯ ಆಹಾರವನ್ನು ಅನುಸರಿಸುತ್ತಿದ್ದೇವೆ ಎಂದು ಘೋಷಿಸಿದ್ದರು. ಪ್ರಾಣಿ ಪ್ರಿಯರು ಎಂಬ ಕಾರಣಕ್ಕಾಗಿ ಮಾತ್ರವಲ್ಲದೆ ತಮ್ಮ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡಲು ಬಯಸುತ್ತಾರೆ ಎಂಬ ಕಾರಣಕ್ಕಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದು ಅವರು ಹೇಳಿದರು. ಸಸ್ಯ ಆಧಾರಿತ ಮಾಂಸದ ಪ್ರವರ್ತಕ ಬ್ರಾಂಡ್ ಆಗಿರುವ ಬ್ಲೂ ಟ್ರೈಬ್ ಫುಡ್‌ನಲ್ಲಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ದಂಪತಿ ಹೂಡಿಕೆ ಮಾಡಿದ್ದಾರೆ.ಇದ್ರ ಬ್ರಾಂಡ್ ಅಂಬಾಸಿಡರ್ ಆಗುವ ಮೂಲಕ ಈಗ ತಮ್ಮ ಭರವಸೆಯನ್ನು ಈಡೇರಿಸಿದ್ದೇವೆ ಎಂದು ದಂಪತಿ ಹೇಳಿದ್ದಾರೆ.
ಮಗಳ ಆಗಮನದ ನಂತರ Anushka Sharma ಕೈಯಲ್ಲಿ 408 ಕೋಟಿ ರೂ. ಪ್ರಾಜೆಕ್ಟ್?
ಇನ್ನು ವೃತ್ತಿಪರ ನಿಟ್ಟಿನಲ್ಲಿ ಹೇಳುವುದಾದರೆ, ಅನುಷ್ಕಾ ಚಕ್ದಾ ಎಕ್ಸ್‌ಪ್ರೆಸ್ ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದು, ಭಾರತ ಮಹಿಳಾ ತಂಡದ ಅಗ್ರ ಬೌಲರ್ ಜೂಲನ್ ಗೋಸ್ವಾಮಿ ಪಾತ್ರವನ್ನು ಇವರು ನಿಭಾಯಿಸುತ್ತದ್ದಾರೆ. ಈ ನಿಟ್ಟಿನಲ್ಲಿ ಸಾಕಷ್ಟು ತರಬೇತಿಯನ್ನೂ ಅವರು ಪ್ರಾರಂಭಿಸಿದ್ದಾರೆ. ಈ ಚಿತ್ರ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ.