ಬಾಲಿವುಡ್ ನಟ ಆಮೀರ್ ಖಾನ್ ಕುಡಿತದ ಚಟದಿಂದ ಹೊರಬಂದ ಬಗ್ಗೆ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ. 'ವ್ಯಕ್ತಿ ತನ್ನ ನಿಯಂತ್ರಣದಲ್ಲಿ ಇರುವುದಿಲ್ಲ ಎನ್ನುವುದು ನನಗೆ ಸರಿಹೊಂದುವುದಿಲ್ಲ. ನಾನು ಮದ್ಯವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಭಾವಿಸುತ್ತೇನೆ. ಹಾಗಾಗಿ ನಾನು ಕುಡಿಯುವುದನ್ನು ಬಿಟ್ಟುಬಿಡುವುದು ಉತ್ತಮ ಎಂದು ನಿರ್ಧರಿಸಿದೆ' ಎಂದು ಹೇಳಿದ್ದಾರೆ.
ಬಾಲಿವುಡ್ ನ ಅತ್ಯಂತ ಜನಪ್ರಿಯ ನಟರಲ್ಲಿ ಆಮೀರ್ ಖಾನ್ ಕೂಡ ಒಬ್ಬರು. ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಕರೆಸಿಕೊಳ್ಳುವ ಆಮೀರ್ ಖಾನ್(Aamir khan) ತನ್ನ ವೃತ್ತಿ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಸಿನಿಮಾವನ್ನು ಅಪಾರವಾಗಿ ಪ್ರೀತಿಸುವ ಆಮೀರ್ ಖಾನ್ ಇತ್ತೀಚಿಗೆ ವೈಯಕ್ತಿಕ ವಿಚಾರಗಳಿಗೆ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಎರಡನೇ ಪತ್ನಿ ಕಿರಣ್ ರಾವ್ ಗೆ(Kiran rao) ವಿಚ್ಛೇದನ ನೀಡಿದ ಆಮೀರ್ ಖಾನ್ ಹೆಸರು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದೀಗ ಆಮೀರ್ ಖಾನ್ ಅವರ ವೈಯಕ್ತಿಕ ಜೀವನಕ್ಕೆ ಸಂಭಂದಿಸಿದ ಮತ್ತೊಂದು ಅಚ್ಚರಿಕರ ವಿಚಾರ ಬಹಿರಂಗವಾಗಿದೆ.
ಒಂದು ಕಾಲದಲ್ಲಿ ಆಮೀರ್ ಖಾನ್ ಕುಡಿತದ ಚಟಕ್ಕೆ ಬಲಿಯಾಗಿದ್ದರಂತೆ. ಒಂದು ಬಾಟಲಿಯನ್ನು ಒಮ್ಮೆಗೆ ಸಂಪೂರ್ಣವಾಗಿ ಕುಡಿದು ಮುಗಿಸುತ್ತಿದ್ದರು ಎಂದು ಸ್ವತಃ ಆಮೀರ್ ಖಾನ್ ಹೇಳಿಕೊಂಡಿದ್ದಾರೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಆಮೀರ್ ಖಾನ್, "ನಾನು ನಿಮಗೆ ಒಳ್ಳೆಯ ಸುದ್ದಿ ನೀಡುತ್ತಿದ್ದೇನೆ. ನಾನು ಕೆಲವೊಮ್ಮೆ ವಿಪರೀತ ಕುಡಿಯುತ್ತಿದ್ದೆ. ಆದರೀಗ ನನ್ನ ಜೀವನದಲ್ಲಿ ಮತ್ತೆ ನಾನು ಎಂದಿಗೂ ಮದ್ಯವನ್ನು ಮುಟ್ಟಬಾರದು ಎಂದು ನಿರ್ಧರಿಸಿದ್ದೇನೆ. ಕೆಲವರು ಎರಡು ಪೆಗ್ ತೆಗೆದುಕೊಳ್ಳುತ್ತಾರೆ. ಆದರೆ ನಾನು ಹಾಗೆ ಇರಲಿಲ್ಲ. ನಾನು ಕುಡಿಯಲು ಕುಳಿತರೆ ಸಂಪೂರ್ಣ ಬಾಟಲಿಯನ್ನೇ ಕುಡಿದು ಮುಗಿಸುತ್ತಿದ್ದೆ. ಆದರೆ ಅದು ಸರಿಯಲ್ಲ ಎಂದು ನನಗೆ ಎನಿಸಿತು"ಎಂದು ಆಮೀರ್ ಖಾನ್ ಕುಡಿತದ ಬಗ್ಗೆ ಬಾಯಿಬಿಟ್ಟಿದ್ದಾರೆ.
Aamir Khan Rejected Movies: ಮಿಸ್ಟರ್ ಪರ್ಫೆಕ್ಷನಿಸ್ಟ್ ಬೇಡವೆಂದ ಸಿನಿಮಾ ಸೂಪರ್ ಹಿಟ್ !
"ಕುಡಿದ ಬಳಿಕ ಅಮಲಿನಲ್ಲಿ ನೀವು ಏನಾದರು ಮಾಡುತ್ತೀರಿ, ಕೆಲವು ವಿಷಯಗಳನ್ನು ಮಾತನಾಡುತ್ತೀರಿ, ನಂತರ ನೀವು ವಿಷಾದಿಸುತ್ತೀರಿ. ಇಲ್ಲಿವರೆಗೆ ಅಂತಹ ಪ್ರಮುಖವಾದದ್ದೇನೂ ಸಂಭವಿಸಿಲ್ಲ. ಆದರೆ ವ್ಯಕ್ತಿ ತನ್ನ ನಿಯಂತ್ರಣದಲ್ಲಿ ಇರುವುದಿಲ್ಲ ಎನ್ನುವುದು ನನಗೆ ಸರಿಹೊಂದುವುದಿಲ್ಲ. ನಿಮ್ಮ ನಿಯಂತ್ರಣದಲ್ಲಿ ನೀವಿರಲು ಸಾಧ್ಯವಾಗದೆ ಇರುವ ಯಾವುದಾದರೂ ಸರಿ ಅದರಿಂದ ದೂರ ಇರಬೇಕು. ಎಲ್ಲವೂ ನಿಮ್ಮ ನಿಯಂತ್ರಣದಲ್ಲಿ ಇರಬೇಕು. ನಾನು ಮದ್ಯವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಭಾವಿಸುತ್ತೇನೆ. ಹಾಗಾಗಿ ನಾನು ಕುಡಿಯುವುದನ್ನು ಬಿಟ್ಟುಬಿಡುವುದು ಉತ್ತಮ ಎಂದು ನಿರ್ಧರಿಸಿದೆ" ಎಂದು ಹೇಳಿದ್ದಾರೆ.
ಇದೇ ಸಂದರ್ಶನದಲ್ಲಿ ಆಮೀರ್ ಖಾನ್ ಮಗಳು ಇರಾ ಖಾನ್(Ira khan) ಬಗ್ಗೆಯೂ ಮಾತನಾಡಿದ್ದಾರೆ. ಮಗಳು ಇರಾ ಖಾನ್ ಜೊತೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗದ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ತನ್ನ ಆತ್ಮೀಯರಿಗೆ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ಹೊರಹಾಕಿದಿರು. ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡ ನಟ ಆಮೀರ್ ಖಾನ್ ಗೆ ಮಗಳು ಇರಾ ಖಾನ್ ಪ್ರೀತಿಯ ಶುಭಾಶಯ ತಿಳಿಸಿದ್ದರು. ತಂದೆಯ ಮೇಲಿನ ಅಪಾರ ಪ್ರೀತಿಯನ್ನು ಇರಾ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದರು.
'ತಾರೆ ಜಮೀನ್ ಪರ್' ನಟ ದರ್ಶೀಲ್ ಸಫಾರಿ ಹೀಗಾಗಿದ್ದಾರೆ ನೋಡಿ...
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಆಮೀರ್ ಖಾನ್ ಸದ್ಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಬಹುನಿರೀಕ್ಷೆಯ ಸಿನಿಮಾ ಆಗಸ್ಟ್ 11ಕ್ಕೆ ಬಿಡುಗಡೆಯಾಗಲು ಸಿದ್ಧವಾಗಿದೆ. ಈ ಸಿನಿಮಾದಲ್ಲಿ ಅಮೀರ್ ಖಾನ್ ಗೆ ಜೋಡಿಯಾಗಿ ಕರೀನಾ ಕಪೂರ್ ಕಾಣಿಸಿಕೊಂಡಿದ್ದಾರೆ. ಇನ್ನು ಈ ಸಿನಿಮಾದ ಮತ್ತೊಂದು ವಿಶೇಷ ಎಂದರೆ ತೆಲುಗು ಸ್ಟಾರ್ ನಟ ನಾಗಚೈತನ್ಯ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ನಾಗಚೈತನ್ಯ ಬಾಲಿವುಡ್ ಸಿನಿಮಾದಲ್ಲಿ ನಟಿಸಿದ್ದು ಬಿಡುಗಡೆ ಕಾತರದಿಂದ ಕಾಯುತ್ತಿದ್ದಾರೆ.