ಗೌರಿ ಜೊತೆ ಡೇಟಿಂಗ್ ಒಪ್ಪಿಕೊಂಡ ಆಮಿರ್ ಖಾನ್, ಮೂರನೇ ಗರ್ಲ್ ಫ್ರೆಂಡ್ ಫೋಟೋ ವೈರಲ್

Published : Mar 13, 2025, 08:59 PM ISTUpdated : Mar 14, 2025, 10:04 AM IST
ಗೌರಿ ಜೊತೆ ಡೇಟಿಂಗ್ ಒಪ್ಪಿಕೊಂಡ ಆಮಿರ್ ಖಾನ್, ಮೂರನೇ ಗರ್ಲ್ ಫ್ರೆಂಡ್ ಫೋಟೋ ವೈರಲ್

ಸಾರಾಂಶ

ಖ್ಯಾತ ನಟ ಆಮಿರ್ ಖಾನ್ 60ನೇ ವಯಸ್ಸಿನಲ್ಲಿ ಗೌರಿ ಎಂಬುವವರೊಂದಿಗೆ ಪ್ರೀತಿಯಲ್ಲಿದ್ದಾರೆ. ಮುಂಬೈನಲ್ಲಿ ನಡೆದ ಹುಟ್ಟುಹಬ್ಬದ ಆಚರಣೆಯಲ್ಲಿ ಗೌರಿಯನ್ನು ಮಾಧ್ಯಮಕ್ಕೆ ಪರಿಚಯಿಸಿದರು. ಕಳೆದ 18 ತಿಂಗಳಿಂದ ಇವರಿಬ್ಬರು ಒಟ್ಟಿಗೆ ಇದ್ದಾರೆ. ಗೌರಿ ಬೆಂಗಳೂರಿನವರಾಗಿದ್ದು, ಈ ಹಿಂದೆ ವಿವಾಹವಾಗಿತ್ತು. ಆಮಿರ್ ಖಾನ್ ಈ ಹಿಂದೆ ಇಬ್ಬರನ್ನು ವಿವಾಹವಾಗಿದ್ದು, ಅವರಿಗೆ ಮಕ್ಕಳಿದ್ದಾರೆ. ಗೌರಿ ಆಮಿರ್ ಖಾನ್ ಅವರನ್ನ ಸೂಪರ್ ಸ್ಟಾರ್ ಎಂದು ಪರಿಗಣಿಸುವುದಿಲ್ಲ ಎಂದು ಹೇಳಿದ್ದಾರೆ.

ತಮ್ಮ 60ನೇ ವಯಸ್ಸಿನಲ್ಲಿ ಮೂರನೇ ಬಾರಿ ಪ್ರೀತಿಯಲ್ಲಿ ಬಿದ್ದಿರುವ ಬಾಲಿವುಡ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ (Bollywood perfectionist Aamir Khan), ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಮಾರ್ಚ್ 14ರಂದು ಅಮೀರ್ ಖಾನ್, ತಮ್ಮ 60ನೇ ಹುಟ್ಟುಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಅದಕ್ಕೂ ಒಂದು ದಿನ ಮೊದಲು ಆಮಿರ್ ಖಾನ್, ಪಾಪರಾಜಿಗಳು ಮತ್ತು ಅಭಿಮಾನಿಗಳ ಜೊತೆ ಬರ್ತ್ ಡೇ (birthday )ಸೆಲಬ್ರೇಟ್ ಮಾಡಿದ್ರು. ಈ ಸಂದರ್ಭದಲ್ಲಿ ಫ್ಯಾನ್ಸ್ ಗೆ ಗಿಫ್ಟ್ ಒಂದನ್ನು ಆಮಿರ್ ಖಾನ್ ನೀಡಿದ್ದಾರೆ.  ತಮ್ಮ ಪ್ರೀತಿಯನ್ನು ಕನ್ಫರ್ಮ್ ಮಾಡಿದ ಅಮೀರ್ ಖಾನ್, ಗರ್ಲ್ ಫ್ರೆಂಡ್ ಗೌರಿಯನ್ನು ಮಾಧ್ಯಮಕ್ಕೆ ಪರಿಚಯಿಸಿದ್ರು. 

ಆಮಿರ್ ಖಾನ್, ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮ ಪ್ರೋಡಕ್ಷನ್ ಹೌಸ್ ನಲ್ಲಿ ಕೆಲಸ ಮಾಡುವ ತಮ್ಮ ಪ್ರೇಮಿ ಗೌರಿಯನ್ನು ಪಾಪರಾಜಿಗಳಿಗೆ ಪರಿಚಯಿಸಿದ್ರು. ಈ ವೇಳೆ ಅಭಿಮಾನಿಗಳು ಹಾಗೂ ಪಾಪರಾಜಿಗಳಿಗೆ ಫೋಟೋ ಪೋಸ್ಟ್ ಮಾಡದಂತೆ ವಿನಂತಿ ಕೂಡ ಮಾಡಿಕೊಂಡ್ರು. ಇಷ್ಟಾದ್ರೂ ಒಂದು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದ್ದು, ಅದು ಗೌರಿ ಫೋಟೋ ಎನ್ನಲಾಗ್ತಿದೆ.  ಆಮಿರ್ ಖಾನ್ ಪ್ರೀತಿ ಮಾಡಿರುವ ಮಹಿಳೆ ಹೆಸರು ಗೌರಿ.  18 ತಿಂಗಳ ಹಿಂದೆಯೇ ಇಬ್ಬರ ಪ್ರೇಮ ಕಥೆ ಶುರುವಾಗಿದೆ. ಆದ್ರೆ ಕಳೆದ 25 ವರ್ಷಗಳ ಹಿಂದಿನಿಂದಲೂ ಗೌರಿಯನ್ನು ಆಮಿರ್ ಖಾನ್ ಬಲ್ಲವರಾಗಿದ್ದಾರೆ. ಸಿನಿಮಾ ರಂಗದಿಂದ ದೂರವಿರುವ ಗೌರಿ, ಬೆಂಗಳೂರು ಮೂಲದವರು. 

ಮತ್ತೆ ರೀ-ಎಂಟ್ರಿ ಕೊಡಲು ಸಜ್ಜಾಗಿದ್ದಾರೆ ಚಿರಂಜೀವಿ ನಾಯಕಿ, 90s ಫ್ಯಾನ್ಸ್‌ಗೆ ಸರ್ಪ್ರೈಸ್ ಕೊಡ್ತಿರೋ ಆ ಸುಂದರಿ ಯಾರು ಗೊತ್ತಾ?

ಗೌರಿ ಬಗ್ಗೆ ಆಮಿರ್ ಖಾನ್ ಹೇಳಿದ್ದೇನು? : ಇಷ್ಟು ದಿನ ಡೇಟಿಂಗ್ ವಿಷ್ಯವನ್ನು ಮುಚ್ಚಿಟ್ಟದ್ದ ಆಮಿರ್ ಖಾನ್ ಈಗ ಗೌರಿ ಜೊತೆ ಡೇಟಿಂಗ್ ಮಾಡ್ತಿರೋದನ್ನು ಒಪ್ಪಿಕೊಂಡಿದ್ದಾರೆ. ಆಮಿರ್ ಖಾನ್ ತಮ್ಮ ಹುಟ್ಟುಹಬ್ಬಕ್ಕೆ ಸ್ವಲ್ಪ ಸಮಯದ ಮೊದಲು  ಹೋಟೆಲ್‌ನಲ್ಲಿ ನಡೆದ ಅನಧಿಕೃತ ಸಭೆ ಮತ್ತು ಶುಭಾಶಯ ಕಾರ್ಯಕ್ರಮದಲ್ಲಿ ಗೌರಿಯನ್ನು ಎಲ್ಲರಿಗೂ ಪರಿಚಯಿಸಿದರು.  ಆಮಿರ್ ಮತ್ತು ಗೌರಿ ಒಟ್ಟಿಗೆ ಕುಳಿತು ಮಾಧ್ಯಮಗಳೊಂದಿಗೆ ಮಾತನಾಡಿದ್ರು.  ಈ ವೇಳೆ ಆಮಿರ್ ಖಾನ್, ತಮ್ಮ ಪ್ರೀತಿಯ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಇಬ್ಬರ ಭೇಟಿ 25 ವರ್ಷಗಳ ಹಿಂದೆ ಆಗಿತ್ತು. ಆದ್ರೆ ಕೆಲವು ವರ್ಷಗಳ ಹಿಂದೆ ಅವರು ಮತ್ತೆ ಒಂದಾದರು. ಕಳೆದ 18 ತಿಂಗಳಿನಿಂದ ಅವರು ಲಿವ್ ಇನ್ ನಲ್ಲಿದ್ದಾರೆ. ಈ ವಿಷ್ಯ ಹೇಳಿದ ಆಮಿರ್ ಖಾನ್, ನಿಮಗೆ ಇದು ಗೊತ್ತಾಗಿರಲಿಲ್ಲ ಅಲ್ವಾ ಅಂತ ತಮಾಷೆ ಮಾಡಿದ್ರು. 

ಆಮಿರ್ ಜೊತೆ ಡೇಟಿಂಗ್ ಮಾಡ್ತಿರುವ ಗೌರಿ, ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಅವರಿಗೆ ಈಗಾಗಲೇ ಮದುವೆಯಾಗಿದ್ದು, ಆರು ವರ್ಷದ ಮಗನಿದ್ದಾನೆ. ಆಮಿರ್ ಮಕ್ಕಳು ಮತ್ತು ಕುಟುಂಬಸ್ಥರು ಗೌರಿಯನ್ನು ಭೇಟಿಯಾಗಿದ್ದು, ತುಂಬಾ ಸಂತೋಷವಾಗಿದ್ದಾರೆ ಎಂದು ಆಮಿರ್ ಖಾನ್ ಹೇಳಿದ್ದಾರೆ. ಗೌರಿ, ಆಮಿರ್ ಖಾನ್ ಅಭಿನಯದ ಎರಡು ಸಿನಿಮಾ ಮಾತ್ರ ನೋಡಿದ್ದಾರೆ. 

ಬರ್ತ್ ಡೇ ಪಾರ್ಟಿಗೆ ಇಷ್ಟು ಕಡಿಮೆ ಬೆಲೆ ಕುರ್ತಾ ಧರಿಸಿ ಬಂದ ಆಲಿಯಾ ಭಟ್ ! ಗಮನ ಸೆಳೆದ

ಆಮಿರ್ ಖಾನ್ ಬಗ್ಗೆ ಗೌರಿ ಹೇಳಿದ್ದೇನು? : ಆಮಿರ್ ಬಗ್ಗೆ ಮಾತನಾಡಿದ ಗೌರಿ, ನಾನು ಆಮಿರ್ ಖಾನ್ ಅವರನ್ನು ಸೂಪರ್ ಸ್ಟಾರ್ ಅಂತ ಪರಿಗಣಿಸೋದಿಲ್ಲ ಎಂದಿದ್ದಾರೆ. ನಿಧಾನವಾಗಿ ಬಾಲಿವುಡ್ ಗೆ ಹೊಂದಿಕೊಳ್ತಿದ್ದೇನೆ. ನಿನ್ನೆಯಷ್ಟೆ ಸಲ್ಮಾನ್ ಖಾನ್ ಹಾಗೂ ಶಾರುಕ್ ಖಾನ್ ಅವರನ್ನು ಭೇಟಿಯಾಗಿದ್ದೇನೆ ಎಂದು ಗೌರಿ ಹೇಳಿದ್ದಾರೆ. 

ಗೌರಿಗಿಂತ ಮೊದಲು ಆಮಿರ್ ಖಾನ್ ಎರಡು ಮದುವೆಯಾಗಿದ್ದಾರೆ. 1986ರಲ್ಲಿ ರೀನಾ ದತ್ತ ಅವರನ್ನು ಮದುವೆಯಾಗಿದ್ದ ಆಮಿರ್ ಖಾನ್ ಗೆ ಇಬ್ಬರು ಮಕ್ಕಳು. 2002ರಲ್ಲಿ ರೀನಾಗೆ ವಿಚ್ಛೇದನ ನೀಡಿದ್ದ ಆಮಿರ್ ಖಾನ್ 2005ರಲ್ಲಿ ಕಿರಣ್ ರಾವ್ ಮದುವೆ ಆಗಿದ್ದರು. 2021ರಲ್ಲಿ ಇಬ್ಬರು ಬೇರೆಯಾದ್ರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

OTT release : ಧುರಂಧರ್ ಸಿನಿಮಾ ಒಟಿಟಿ ರಿಲೀಸ್ ಯಾವಾಗ?
Trisha Krishnan: ಪುನೀತ್‌ ರಾಜ್‌ಕುಮಾರ್ ಜೊತೆ 'ಪವರ್'ಫುಲ್ ರೊಮಾನ್ಸ್ ಮಾಡಿದ್ದ ನಟಿ ತ್ರಿಷಾ ಆಸ್ತಿ ಇಷ್ಟೊಂದಾ? ಓ ಮೈ ಗಾಡ್!