'Black Panther'ಖ್ಯಾತಿಯ ಚಾಡ್ವಿಕ್ ಬೋಸ್‌ಮನ್ (43) ಕ್ಯಾನ್ಸರ್‌ನಿಂದಾಗಿ ಕೊನೆ ಉಸಿರೆಳೆದಿದ್ದಾರೆ.
ನಾಲ್ಕು ವರ್ಷದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟ ಚಾಡ್ವಿಕ್ ಬೋಸ್‌ಮನ್ ತಮ್ಮ ಲಾಸ್ ಏಂಜಲೀಸ್ ನಿವಾಸದಲ್ಲಿ ಕೊನೆ ಉಸಿರೆಳೆದಿದ್ದಾರೆ. 'ಪತ್ನಿ ಹಾಗೂ ಕುಟುಂಬಸ್ಥರು ಪಕ್ಕದಲ್ಲಿದ್ದಾಗಲ್ಲೇ ಚಾಡ್ವಿಕ್ ಬೋಸ್‌ಮನ್ ಉಸಿರು ಬಿಟ್ಟರು,' ಎಂದು ಕುಟುಂಬಸ್ಥರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ನಟ ಸಂಜಯ್ ದತ್‌ಗೆ ಶ್ವಾಸಕೋಶ ಕ್ಯಾನ್ಸರ್!
ತೀವ್ರ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಚಾಡ್ವಿಕ್ ಬೋಸ್‌ಮನ್ 2016ರಲ್ಲಿ ಪರೀಕ್ಷೆ ಮಾಡಿಸಿಕೊಂಡ ನಂತರ ಮೂರನೇ ಸ್ಟೇಜ್ ಕ್ಯಾನ್ಸರ್ ಎಂದು ತಿಳಿದು ಬಂದಿತ್ತು. ಆಗಿನಿಂದಲೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಚಾಡ್ವಿಕ್, ಸುಮಾರು ನಾಲ್ಕು ವರ್ಷಗಳ ಹೋರಾಟದ ನಂತರ ಕೊನೆಯುಸಿರೆಳೆದಿದ್ದಾರೆ. ಚಾಡ್ವಿಕ್ ಬೋಸ್‌ಮನ್ ಟ್ಟಿಟರ್ ಖಾತೆ ಮೂಲಕ ಇನ್ನಿಲ್ಲ ಎಂಬ ವಿಚಾರವನ್ನು ಕುಟುಂಬಸ್ಥರು ಬಹಿರಂಗ ಪಡಿಸಿದ್ದಾರೆ.
'ತುಂಬಾ ದುಖಃವಾಗುತ್ತಿದೆ ನಮ್ಮೆಲ್ಲರ ಚಾಡ್ವಿಕ್ ಬೋಸ್‌ಮನ್ ಇನ್ನಿಲ್ಲ ಎಂಬುದನ್ನು ತಿಳಿಸುವುದಕ್ಕೆ. 2016ರಲ್ಲಿ ಮೂರನೇ ಸ್ಟೇಜ್ ಕೋಲೋನ್ ಕ್ಯಾನ್ಸರ್ ಇರುವುದಾಗಿ ತಿಳಿದು ಬಂದಿತ್ತು. ನಾಲ್ಕು ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದು ನಾಲ್ಕನೇ ಸ್ಟೇಜ್ ಮುಟ್ಟಿತ್ತು. ನಿಜವಾದ ಫೈಟರ್ ಚಾಡ್ವಿಕ್ ಬೋಸ್‌ಮನ್ ಅದ್ಭುತ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ನಿಮ್ಮೆಲ್ಲರ ಮುಖದಲ್ಲಿ ನಗು ತರುತ್ತಿದ್ದರು. ಮಾರ್ಷಲ್, ಡಾ 5 ಬ್ಲಡ್, August wilson's Ma Rainey's ಬ್ಲಾಕ್ ಬಾಟಮ್ ಸೇರಿದಂತೆ ಅನೇಕ ಸಿನಿಮಾಗಳನ್ನು ತಮ್ಮ ಸರ್ಜರಿ ಹಾಗೂ ಕಿಮೋ ಥೆರಪಿ ನಡೆಯುತ್ತಿರುವಾಗಲೇ ಚಿತ್ರೀಕರಿಸಿದ್ದು. ಅದರಲ್ಲೂ ಬ್ಯಾಕ್ ಪ್ಯಾಂಥರ್ ಸಿನಿಮಾ ವೃತ್ತಿ ಜೀವನಕ್ಕೆ ಹೆಮ್ಮೆ ತಂದುಕೊಟ್ಟಿತ್ತು. ಚಾಡ್ವಿಕ್ ಬೋಸ್‌ಮನ್ ಅಭಿಮಾನಿಗಳಿಗೆ ತುಂಬಾ ಥ್ಯಾಂಕ್ಸ್ ಈ ಸಮಯದಲ್ಲಿ ನಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಪ್ರೈವರ್ಸಿ ನೀಡಿದ್ದಕ್ಕೆ' ಎಂದು ಬರೆದಿದ್ದಾರೆ.
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹಾಸ್ಯ ನಟ ಮೋಹಿತ್ ನಿಧನಸೌತ್ ಕಾರೋಲಿನ್‌ನಲ್ಲಿ ಹುಟ್ಟಿ ಬೆಳೆದ ಚಾಡ್ವಿಕ್ ಬೋಸ್‌ಮನ್, 2003ರಲ್ಲಿ ಕಿರುತೆರೆ ನಿರೂಪಕನಾಗಿದ್ದ. 2013ರಲ್ಲಿ 'ಡ್ರಾಮಾ 42' ಚಿತ್ರದಲ್ಲಿ ಫುಟ್‌ಬಾಲ್ ಪ್ಲೇಯರ್ ಪಾತ್ರದ ಮೂಲಕ ಸಿನಿ ಜರ್ನಿ ಅರಂಭಿಸಿದ್ದರು. ಕುಟುಂಬಸ್ಥರನ್ನು ಹಾಗೂ ಅಭಿಮಾನಿಗಳನ್ನು ಅಗಲಿರುವ ಚಾಡ್ವಿಕ್ ಬೋಸ್‌ಮನ್ ಆತ್ಮಕ್ಕೆ ಶಾಂತಿ ಸಗಲಿ.
ಕೋಲೋನ್ ಕ್ಯಾನ್ಸರ್ ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರ್ ಆಗಿದ್ದು, ಮೊದಲ ಹಂತದಲ್ಲಿಯೇ ಗುರುತಿಸಿದರೆ ಗುಣಪಡಿಸುವುದು ಕಷ್ಟವಲ್ಲ.