ಪತ್ರಿಕಾಗೋಷ್ಠಿಯಲ್ಲಿ ಸದ್ದು ಮಾಡಿದ ಪೂನಂ ಪಾಂಡೆ ಅಂಡರ್​ವೇರ್​! ನಟಿಯ ಪರವಾಗಿ ಬಿಗ್​ಬಾಸ್​ ಶಿವ್​ ಠಾಕ್ರೆ ಬ್ಯಾಟಿಂಗ್​

By Suvarna News  |  First Published Dec 18, 2024, 12:39 PM IST

ಅಂಡರ್​ವೇರ್​ ಧರಿಸದೇ ಎಲ್ಲವನ್ನೂ ಪ್ರದರ್ಶನ ಮಾಡಿ ಟ್ರೋಲ್​ಗೆ ಒಳಗಾಗಿರುವ ಪೂನಂ ಪಾಂಡೆ ಪರವಾಗಿ ನಿಂತ ಬಿಗ್​ಬಾಸ್​ ಸ್ಪರ್ಧಿ ಶಿವ ಠಾಕ್ರೆ ಇನ್ನಿಲ್ಲದಂತೆ ಟ್ರೋಲ್​ಗೆ ಒಳಗಾಗ್ತಿದ್ದಾರೆ!
 


 ಹಾಟೆಸ್ಟ್​ ನಟಿ, ಮಾದಕ ತಾರೆ ಎಂದೇ ಖ್ಯಾತಿ ಪಡೆದ, ಸದಾ ತಮ್ಮ ಬಟ್ಟೆಗಳಿಂದಲೇ ವಿವಾದದಲ್ಲಿಯೂ ಇರೋ ಬಾಲಿವುಡ್​​ ನಟಿ  ಪೂನಂ ಪಾಂಡೆಯ ಮತ್ತೊಂದು ಅಶ್ಲೀಲತೆಯ ವಿಡಿಯೋ ನಿನ್ನೆ ವೈರಲ್‌ ಆಗಿತ್ತು.  ನಟಿ ದಿವ್ಯಾ ಅಗರ್ವಾಲ್‌ ಅವರ ಹುಟ್ಟುಹಬ್ಬಕ್ಕೆ ಹೋಗಿದ್ದ ನಟಿ ಕೆಳಗಿನ ಒಳ ಉಡುಪು ಧರಿಸದೇ ಇರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಪೂನಂ ಪಾಂಡೆಯನ್ನು ಕಂಡು ಖುಷಿಯಿಂದ ದಿವ್ಯಾ ತಬ್ಬಿಕೊಂಡಾಗ, ಬಟ್ಟೆ ಮೇಲೆ ಹೋಗಿದೆ. ಆಗ ಕೆಳಗಿನ ಒಳ ಉಡುಪು  ಧರಿಸದೇ ಇರುವುದು ಕಂಡು ಬಂದಿದೆ. ಇನ್ನು ಪಾಪರಾಜಿಗಳಿಗೆ ಕೇಳಬೇಕಾ? ಜೋರಾಗಿ ಕೂಗಿದ್ದಾರೆ. ಆ ಸಂದರ್ಭದಲ್ಲಿ ನಟಿ ಹಿಂಬದಿ ಕೈಯಿಟ್ಟು ಅದನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ ಏನೂ ಆಗಿಲ್ಲ ಎನ್ನುವಂತೆ ನಗುತ್ತಿರುವುದನ್ನು ಕೂಡ ಈ ವಿಡಿಯೋದಲ್ಲಿ ನೋಡಬಹುದಾಗಿದೆ!

ಇದು ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದಾರೆ ಪೂನಂ ಪಾಂಡೆ. ಒಳ್ಳೆಯ ವಿಡಿಯೋಗಳು ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುವುದು ತುಂಬಾ ಕಮ್ಮಿ. ಆದರೆ ಇಂಥ ವಿಡಿಯೋಗಳು ಮಾತ್ರ ಕ್ಷಣ ಮಾತ್ರದಲ್ಲಿ ವಿಶ್ವಾದ್ಯಂತ ವೈರಲ್‌ ಆಗುವುದೂ ಇದೆ. ಇಷ್ಟು ವೈರಲ್‌ ಆಗುತ್ತಿದ್ದಂತೆಯೇ ತಾವು ಒಳ ಉಡುಪು ಧರಿಸಿರುವುದಾಗಿ ಸಮಜಾಯಿಷಿ ಕೊಡಲು ವಿಡಿಯೋ ಮಾಡಿರುವ ನಟಿ, 'ನಿನ್ನೆಯ ವಿಡಿಯೋ ಸಾಕಷ್ಟು ವೈರಲ್‌ ಆಗಿವೆ. ಅಲ್ಲಿದ್ದ ಕ್ಯಾಮೆರಾಮೆನ್‌ಗಳು ದಿಖ್‌ಗಯಾ ದಿಖ್‌ಗಯಾ (ಕಂಡೇ ಬಿಡ್ತು, ಕಂಡೇ ಬಿಟ್ಟಿತು) ಎಂದು ಕೂಗಿದ್ದಾರೆ. ಈ ಸಂದರ್ಭದಲ್ಲಿ ನನಗೆ ನೆನಪಾಗುವುದು ಒ೦ದು ಮೀಮ್ಸ್‌, ಅದೇನೆಂದ್ರೆ ಯಾವ ಬಣ್ಣದ ಚೆಡ್ಡಿ ಧರಿಸಿದ್ದಿ, ಎಂದು ಹೇಳಿದ್ದಾರೆ. ಈ ಮೂಲಕ, ತಾವು ಚೆಡ್ಡಿಯನ್ನು ಧರಿಸಿರುವುದಾಗಿ ಸಮಜಾಯಿಷಿ ಕೊಟ್ಟಿದ್ದರು. 

Tap to resize

Latest Videos

undefined

ಸ್ನೇಹಿತೆ ಎತ್ತಿದ ರಭಸಕ್ಕೆ ಕಾಣಬಾರದ್ದೆಲ್ಲಾ ಕಂಡೋಯ್ತು! ವೈರಲ್‌ ವಿಡಿಯೋ ಝೂಮ್‌ ಮಾಡಿ ಮಾಡಿ ನೋಡ್ತಿರೋ ನೆಟ್ಟಿಗರು!

ಆದರೆ ಇದೀಗ ಮರಾಠಿ ಮತ್ತು ಹಿಂದಿ ಬಿಗ್​ಬಾಸ್ ​ ಸ್ಪರ್ಧಿ ಶಿವ್​ ಠಾಕ್ರೆ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಪೂನಂ ಪಾಂಡೆ ಅಂಡರ್​ವೇರ್​ ಹಾಕದೇ ಆ ಭಾಗ ಕಾಣಿಸ್ತಿದ್ದರೂ ಅದು ಆಕೆಯ ತಪ್ಪಲ್ಲ. ಆಕೆ ಬೋಲ್ಡ್​ ನಟಿ ಹೌದಾದರೂಆದರೂ   ಹೆಣ್ಣುಮಗಳು ಎನ್ನುವ ಪ್ರಜ್ಞೆ ನಿಮಗೆ ಇರಬೇಕಿತ್ತು. ನೀವು ವ್ಯೂಸ್​ ಸಲುವಾಗಿ ಆ ವಿಡಿಯೋ ಹಾಕಿದ್ದು ನಿಮ್ಮದೇ ತಪ್ಪು. ಬಟ್ಟೆ ಧರಿಸದೇ ಇರುವುದು ಆಕೆಯ ತಪ್ಪಲ್ಲ. ನೀವು ಮಾಡಿದ್ದು ದೊಡ್ಡ ತಪ್ಪು. ಹೆಣ್ಣು ಮಗಳ ಮರ್ಯಾದೆ ಕಾಪಾಡಬೇಕಿತ್ತು ಎಂದಿದ್ದಾರೆ. ಈ ಮಾತು ವೈರಲ್​ ಆಗುತ್ತಲೇ ಪೂನಂ ಜೊತೆ ಶಿವ್​ ಠಾಕ್ರೆ ಕೂಡ ಸಕತ್​ ಟ್ರೋಲ್​ಗೆ ಒಳಗಾಗಿದ್ದಾರೆ. ಅವರು ಅಂಡರ್​ವೇರ್​ ಧರಿಸದೇ ಇರೋದಕ್ಕೂ, ನಿಮಗೂ ಏನಪ್ಪಾ ಸಂಬಂಧ ಎಂದು ಪ್ರಶ್ನಿಸುತ್ತಿದ್ದಾರೆ. 

ಈ ಮುಂಚೆ ನಟಿ ಕೊಟ್ಟ  ಸಮಜಾಯಿಷಿಗೂ ಸಕತ್​ ಟ್ರೋಲ್​ ಆಗಿತ್ತು.  ಎಲ್ಲವನ್ನೂ ನೋಡಿಯಾಗಿದೆ. ಇನ್ನೇನೂ ನೋಡುವುದು ಬಾಕಿ ಇಲ್ಲ. ಮೇಲಿಂದೆಲ್ಲಾ ಪ್ರತಿದಿನವೂ ಪ್ರದರ್ಶನ ಮಾಡುತ್ತಲೇ ಇರುತ್ತಿ, ಇದೀಗ ಕೆಳಗಿನ ದರ್ಶನವೂ ಆಗಿದೆ. ಈಗ ಸಮಜಾಯಿಷಿ ಕೊಟ್ಟು ಏನೂ ಪ್ರಯೋಜನ ಇಲ್ಲ ಎಂದು ಹಲವರು ಹೇಳಿದ್ದಾರೆ. ಮತ್ತೆ ಕೆಲವರು, ಈ ವಿಡಿಯೋ ನೋಡಿದ ಮೇಲೆ ಆ ವಿಡಿಯೋ ಅನ್ನು ನೋಡಲಿ ಎನ್ನುವ ಕಾರಣಕ್ಕೆ ಸಮಜಾಯಿಷಿ ಕೊಡಲು ಬಂದಿದ್ದಾಳೆ ಅಷ್ಟೇ, ಒಟ್ಟಿನಲ್ಲಿ ಈಕೆಗೆ ಪ್ರಚಾರದಲ್ಲಿ ಇರಬೇಕು. ಅದು ಸಿಕ್ಕಿದೆ ಎಂದಿದ್ದಾರೆ. ಒಳ ಉಡುಪು ಧರಿಸದೇ ಬಂದಿರುವ ಕಾರಣವೂ ಪ್ರಚಾರವೇ ಆಗಿದೆ. ಅದು ಇನ್ನಷ್ಟು ಪ್ರಚಾರ ಆಗಬೇಕು ಎನ್ನುವ ಕಾರಣಕ್ಕೆ ಮತ್ತೊಂದು ವಿಡಿಯೋ ಮಾಡುತ್ತಿದ್ದಾಳೆ ಎಂದು ಟ್ರೋಲ್‌ ಮಾಡುತ್ತಿದ್ದಾರೆ. 

ಎಲ್ಲಾ ಕಡೆ ಒಳ ಉಡುಪು ಹಾಕಿದ್ದೆ, ನಿಮಗೆ ಕಾಣಿಸ್ಲಿಲ್ಲ: ಸಮಜಾಯಿಷಿ ಕೊಟ್ಟು ಮತ್ತೆ ಎಡವಟ್ಟು ಮಾಡಿಕೊಂಡ ಪೂನಂ ಪಾಂಡೆ !

click me!