
ಬಾಲಿವುಡ್ ನಟಿ ರಾಧಿಕಾ ಆಪ್ಟೆ (Bollywood actress Radhika Apte), ಅಮ್ಮನಾಗಿ ಫ್ಯಾನ್ಸ್ ಗೆ ಶಾಕ್ ನೀಡಿದ್ದು ಒಂದ್ಕಡೆಯಾದ್ರೆ ಅವರ ಹಾಟ್ ಬೇಬಿ ಬಂಪ್ ಫೋಟೋ ಶೂಟ್ (hot baby bump photo shoot) ಇನ್ನೊಂದು ಕಡೆ ಚರ್ಚೆಗೆ ಗ್ರಾಸವಾಗಿದೆ. ಬರೀ ನೆಟ್ ಧರಿಸಿ, ಗ್ಲಾಮರ್ ಫೋಟೋಕ್ಕೆ ಫೋಸ್ ನೀಡಿದ ಅವರ ಫೋಟೋಗಳು ಈಗ ಟ್ರೋಲ್ ಆಗ್ತಿವೆ. ಅರೆ ಬೆತ್ತಲಾಗಿ ರಾಧಿಕಾ ಫೋಟೋ ತೆಗೆಸಿಕೊಂಡಿರೋದನ್ನು ಫ್ಯಾನ್ಸ್ ಇಷ್ಟಪಡ್ತಿಲ್ಲ.
ರಾಧಿಕಾ ಆಪ್ಟೆಗೆ ಮದುವೆಯಾಗಿ 12 ವರ್ಷಗಳ ನಂತ್ರ ಮಗುವಾಗಿದೆ. ಗರ್ಭಧಾರಣೆಯನ್ನು ಸಂಪೂರ್ಣ ಗೌಪ್ಯವಾಗಿಟ್ಟಿದ್ದ ರಾಧಿಕಾ, ಹೆಣ್ಣು ಮಗು (baby girl) ವಿಗೆ ಜನ್ಮ ನೀಡಿದ ನಂತ್ರ ಒಂದೊಂದೇ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಿದ್ದಾರೆ. ಮೊದಲು ಮಗುವಿನ ಜೊತೆಗಿರುವ ಫೋಟೋ ಹಂಚಿಕೊಂಡು, ಹೆರಿಗೆಯಾಗಿ ವಾರದ ನಂತ್ರ ಕೆಲಸಕ್ಕೆ ಮರಳಿರೋದಾಗಿ ತಿಳಿಸಿದ್ದರು. ನಂತ್ರ ತಮ್ಮ ಬೇಬಿ ಬಂಪ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಮಗನಿಗೋಸ್ಕರ ನಟಿ ಸಮಂತಾಗೆ ಫಾರ್ಮ್‌ಹೌಸ್ ಗಿಫ್ಟ್ ಕೊಟ್ಟ ಸ್ಟಾರ್ ನಿರ್ಮಾಪಕ: ಯಾಕೆ?
ರಾಧಿಕಾ ಆಪ್ಟೆ ಅವರ ಬೋಲ್ಡ್ ಫೋಟೋಗಳು ಬಳಕೆದಾರರನ್ನು ಕೆರಳಿಸಿದೆ. ಟ್ರೋಲರ್ (troller) ಬಾಯಿಗೆ ರಾಧಿಕಾ ಗುರಿಯಾಗಿದ್ದಾರೆ. ರಾಧಿಕಾ ಮೂರು ಔಟ್ ಫಿಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದರಲ್ಲಿ ಬರೀ ನೆಟ್ ಧರಿಸಿದ್ದಾರೆ. ಇನ್ನೊಂದರಲ್ಲಿ ಟ್ರಾನ್ಸಫರೆಂಟ್, ಡೀಪ್ ನೆಕ್ ಡ್ರೆಸ್ ಹಾಕಿದ್ದಾರೆ. ಕೊನೆಯಲ್ಲಿ ಬಿಳಿ ಬಣ್ಣದ ಡ್ರೆಸ್ ನಲ್ಲಿ ಪೋಸ್ ನೀಡಿದ್ದಾರೆ. ಯಾಕೋ ಬಹುತೇಕ ಬಳಕೆದಾರರಿಗೆ ರಾಧಿಕಾ ಈ ಡ್ರೆಸ್ ಸೆನ್ಸ್ ಇಷ್ಟವಾಗಿಲ್ಲ. ಗರ್ಭಧಾರಣೆಯಲ್ಲಿ ಫೋಟೋ ಶೂಟ್ ಭೂತ ಜನರ ತಲೆ ಹೊಕ್ಕಿದೆ. ಅದ್ರಲ್ಲೂ ಬಾಲಿವುಡ್ ಸೆಲೆಬ್ರಿಟಿಗಳು ಅರೆ ಬೆತ್ತಲಾಗಿ ಫೋಟೋಕ್ಕೆ ಪೋಸ್ ನೀಡ್ತಿದ್ದಾರೆ. ಇದ್ರ ಅನಿವಾರ್ಯತೆ ಇಲ್ಲ. ಗರ್ಭಧಾರಣೆ ಹಾಗೂ ತಾಯ್ತನ ಎರಡೂ ಅತ್ಯಂತ ಅಧ್ಬುತ. ಅದನ್ನು ಅರೆ ಬರೆ ಬಟ್ಟೆ ಧರಿಸಿ, ದೇಹದ ಭಾಗಗಳನ್ನು ತೋರಿಸಿ ಹೇಳಬೇಕಾದ ಅವಶ್ಯಕತೆ ಇಲ್ಲ. ಸಭ್ಯತೆಯಿಂದಲೂ ಫೋಟೋ ಶೂಟ್ ಮಾಡಿಸಬಹುದು ಎಂಬ ಮಾತುಗಳು ನೆಟ್ಟಿಗರಿಂದ ಕೇಳಿ ಬರ್ತಿವೆ.
ಫೋಟೋ ಹಂಚಿಕೊಂಡಿರುವ ರಾಧಿಕಾ, ತಮ್ಮ ಗರ್ಭಾವಸ್ಥೆಯಲ್ಲಿ ದೇಹದಲ್ಲಾದ ಬದಲಾವಣೆ ಹಾಗೂ ನಂತ್ರ ಆತ ಬದಲಾವಣೆ ಬಗ್ಗೆ ಫ್ಯಾನ್ಸ್ ಗೆ ತಿಳಿಸಿದ್ದಾರೆ. ಮಗುವಿಗೆ ಜನ್ಮ ನೀಡುವ ಒಂದು ವಾರ ಮೊದಲು ನಾನು ಈ ಫೋಟೋಶೂಟ್ ಮಾಡಿದ್ದೇನೆ. ಆ ಸಮಯದಲ್ಲಿ ನನ್ನ ದೇಹವನ್ನು ಒಪ್ಪಿಕೊಳ್ಳೋದು ನನಗೆ ಕಷ್ಟವಾಗಿತ್ತು. ಎಂದೂ ನನ್ನ ಇಷ್ಟೊಂದು ತೂಕ ಹೆಚ್ಚಾಗಿರಲಿಲ್ಲ. ನನ್ನ ದೇಹ ಊದಿಕೊಂಡಿತ್ತು. ನನ್ನ ದೇಹವನ್ನು ಒಪ್ಪಿಕೊಳ್ಳಲು ನಾನು ತುಂಬಾ ಕಷ್ಟಪಡಬೇಕಾಗಿತ್ತು. ನನ್ನ ಸೊಂಟದಲ್ಲಿ ವಿಪರೀತ ನೋವಿತ್ತು. ನಿದ್ರೆ ಸಮಸ್ಯೆ ನನ್ನನ್ನು ಕಾಡುತ್ತಿತ್ತು. ಈಗ ತಾಯಿಯಾಗಿ ಎರಡು ವಾರವೂ ಕಳೆದಿಲ್ಲ, ನನ್ನ ದೇಹ ಮತ್ತೆ ವಿಭಿನ್ನವಾಗಿ ಕಾಣಲಾರಂಭಿಸಿದೆ ಎಂದು ರಾಧಿಕಾ ಬರೆದುಕೊಂಡಿದ್ದಾರೆ.
ಅಣ್ಣಾವ್ರ ಮನೆಗೆ ಫ್ರೀ ಆಗಿ ನಾಯಿ ಕೊಟ್ಟಿದ್ದೀನಿ, ಸಲ್ಮಾನ್ ಖಾನ್‌ಗೆ 6 ತಿಂಗಳು ಕೂಡ
ಅಷ್ಟೇ ಅಲ್ಲ ತಾಯಿಯಾದ್ಮೇಲೆ ರಾಧಿಕಾ ಮನಸ್ಥಿತಿ ಹೇಗಿದೆ ಎಂಬುದನ್ನು ಕೂಡ ಫ್ಯಾನ್ಸ್ ಜೊತೆ ಹಂಚಿಕೊಂಡಿದ್ದಾರೆ. ಹೊಸ ಸವಾಲುಗಳಿವೆ, ಹೊಸ ಆವಿಷ್ಕಾರಗಳು ಮತ್ತು ವಿಭಿನ್ನ ದೃಷ್ಟಿಕೋನವು ಹೊರಹೊಮ್ಮಿದೆ. ನನ್ನ ಗರ್ಭಾವಸ್ಥೆ ಫೋಟೋಗಳನ್ನು ನಾನು ಸದಾ ಜೊತೆಯಲ್ಲಿಟ್ಟುಕೊಳ್ಳುತ್ತೇನೆ. ಹೆಚ್ಚಿನ ಮಹಿಳೆಯರು ಗರ್ಭಾವಸ್ಥೆಯಲ್ಲಿ ತೊಂದರೆಗಳನ್ನು ಎದುರಿಸಿದ್ದಾರೆ. ಇದು ಋತುಬಂಧ ಅಥವಾ ಪಿರಿಯಡ್ಸ್ ನಂತೆ ಇರುತ್ತದೆ. ಈ ಹಾರ್ಮೋನ್ ಗಳು ಜೋಕ್ ಅಲ್ಲ ಎಂದು ರಾಧಿಕಾ ಶೀರ್ಷಿಕೆ ಹಾಕಿದ್ದಾರೆ.
ರಾಧಿಕಾ ಡ್ರೆಸ್ ಇಷ್ಟಪಡದ ಬಳಕೆದಾರರು, ರಾಧಿಕಾ ಭಾವನೆಗಳಿಗೆ ಬೆಲೆ ನೀಡಿದ್ದಾರೆ. ಅಮ್ಮಂದಿರ ಕಷ್ಟವನ್ನು, ಗರ್ಭಧಾರಣೆ ಜರ್ನಿಯನ್ನು ಎಲ್ಲರ ಮುಂದಿಟ್ಟ ನಿಮಗೆ ಧನ್ಯವಾದ ಎಂದಿದ್ದಾರೆ. ರಾಧಿಕಾ ತಮ್ಮ ವೈಯಕ್ತಿಕ ವಿಷ್ಯಗಳನ್ನು ಹೆಚ್ಚಾಗಿ ಮಾಧ್ಯಮದ ಮುಂದೆ ತರೋದಿಲ್ಲ. ಹಾಗಾಗಿ ಅವರಿಗೆ ಮದುವೆಯಾಗಿದೆ ಎಂಬುದೇ ಅನೇಕರಿಗೆ ತಿಳಿದಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.