ತಂದೆ ಸಾವಿನ ಬಳಿಕ ಹಸಿದ ಹೊಟ್ಟೆಯಲ್ಲಿ ಮಲಗಬೇಕಾಯ್ತು; ಇಂದು ಕಿರುತೆರೆಯ ಸ್ಟಾರ್ ನಟ

Published : Dec 17, 2024, 11:03 PM IST
ತಂದೆ ಸಾವಿನ ಬಳಿಕ ಹಸಿದ ಹೊಟ್ಟೆಯಲ್ಲಿ ಮಲಗಬೇಕಾಯ್ತು; ಇಂದು ಕಿರುತೆರೆಯ ಸ್ಟಾರ್ ನಟ

ಸಾರಾಂಶ

ಕಿರುತೆರೆ ನಟ ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ, ಬಡತನದಿಂದಾಗಿ ಹಸಿವಿನಿಂದ ಮಲಗಬೇಕಾಗಿತ್ತು. ಜಾಹೀರಾತಿನಿಂದ ಅವರ ನಟನಾ ವೃತ್ತಿ ಆರಂಭವಾಯಿತು ಮತ್ತು ಇಂದು ಅವರು ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಸಲ್ಮಾನ್ ಖಾನ್ ಕರೆದು ಇವರಿಗೆ ಆಫರ್ ಕೊಟ್ಟಿದ್ದರು.

ಮುಂಬೈ: ಈ ಕಿರುತೆರೆಯ ನಟ ಇಂದು ಜನಪ್ರಿಯ  ಕಲಾವಿದ. ಕಿರುತೆರೆಯ ಜನಪ್ರಿಯ ಧಾರಾವಾಹಿಯಾದ 'ಚಕ್ರವರ್ತಿ ಸಾಮ್ರಾಟ್' ನಲ್ಲಿ ಇವರು ಬಾಲನಟರಾಗಿ ನಟಿಸಿದ್ದರು.  ಸದ್ಯ  ವೃತ್ತಿಜೀವನದ  ಯಶಸ್ಸಿನಲ್ಲಿರೋ ನಟ ಕಿರುತೆರೆ ಸೇರಿದಂತೆ ಜಾಹೀರಾತುಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲನಟನಾಗಿ ತಮ್ಮ ಛಾಪು ಮೂಡಿಸಿರುವ ಇವರು, ಇತ್ತೀಚಿಗೆ ಸಂದರ್ಶನವೊಂದರಲ್ಲಿ ತಮ್ಮ ಕಷ್ಟದ  ದಿನಗಳ ಬಗ್ಗೆ  ಮಾತನಾಡಿ ಭಾವುಕರಾಗಿದ್ದಾರೆ. ತಂದೆಯ ಮರಣದ ಬಳಿಕ ಹಸಿವಿನಿಂದ ಮಲಗಿರುವ ದಿನಗಳ ಬಗ್ಗೆ ಮಾತನಾಡಿದ್ದಾರೆ.

ಅಂದು ಹಸಿವಿನಿಂದ ಮಲಗಿದ್ದ ನಟನ ಹೆಸರು  ಸಿದ್ಧಾರ್ಥ್ ನಿಗಮ್.  'ಚಕ್ರವರ್ತಿ ಸಾಮ್ರಾಟ್'  ಧಾರಾವಾಹಿಯಲ್ಲಿ ರಾಜ ಅಶೋಕನ ಪಾತ್ರದಲ್ಲಿ ಸಿದ್ಧಾರ್ಥ್ ನಿಗಮ್ ನಟಿಸಿದ್ದರು. ಧಾರಾವಾಹಿಯಲ್ಲಿ ತಮ್ಮ ನಟನಾ ಪ್ರತಿಭೆಯ ಮೂಲಕ ಇಂದು ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಸಿದ್ಧಾರ್ಥ್ ನಿಗಮ್ ಸಂದರ್ಶನದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕಿರುತೆರೆಯ ಜನಪ್ರಿಯ ನಟ ಸಿದ್ಧಾರ್ಥ್ ನಿಗಮ್ ವಾಸ್ತವದಲ್ಲಿ ತಮ್ಮ ವೃತ್ತಿಜೀವನದಲ್ಲಿ ಬಹಳಷ್ಟು ಕಷ್ಟಪಟ್ಟಿದ್ದಾರೆ. ಒಂದು ಸಮಯವಿತ್ತು, ಸಿದ್ಧಾರ್ಥ್ ಬಡತನದಿಂದಾಗಿ ಹಸಿವಿನಿಂದ ಮಲಗಬೇಕಾಗಿತ್ತು. ಈ ವಿಷಯವನ್ನು ಸಿದ್ಧಾರ್ಥ್ ಅವರೇ ಒಂದು ಸಂದರ್ಶನದಲ್ಲಿ ಬಹಿರಂಗಪಡಿಸಿದ್ದರು.

ಸಿದ್ಧಾರ್ಥ್ ಸಂದರ್ಶನ
ನಾನು ಅಲಹಾಬಾದ್  ಎಂಬ ಪಟ್ಟಣದಿಂದ ಬಂದವನು. ನಾನು ಚಿಕ್ಕವನಿದ್ದಾಗ, ಯಾರೂ ನನ್ನಿಂದ ಯಾವುದೇ ರೀತಿಯ ನಿರೀಕ್ಷೆಯನ್ನು ಹೊಂದಿರಲಿಲ್ಲ. ಏಕೆಂದರೆ ನಾನು ಓದಿನಲ್ಲಿ ಚೆನ್ನಾಗಿರಲಿಲ್ಲ. ನಂತರ ನನ್ನ ತಂದೆ ನಿಧನರಾದಾಗ, ನನಗೆ ಜೀವನದಲ್ಲಿ ಏನೂ ಉಳಿದಿಲ್ಲ ಎಂದು ನನಗೆ ಅನಿಸಿತು. ಆ ದಿನಗಳಲ್ಲಿ ನಮ್ಮ ಬಳಿ ಹಣವೂ ಇರಲಿಲ್ಲ. ಈ ಕಾರಣದಿಂದಾಗಿ ನಮಗೆ ಊಟವೂ ಸಿಗುತ್ತಿರಲಿಲ್ಲ. ಹಾಗಾಗಿ  ಎಷ್ಟೋ ದಿನ  ಹಸಿವಿನಿಂದ  ಮಲಗಬೇಕಾಗಿತ್ತು. ಆಟದಲ್ಲಿ ಉತ್ತಮವಾಗಿರುವುದರಿಂದ ನನಗೆ ಹಾಸ್ಟೆಲ್‌ನಲ್ಲಿ ಕೊಠಡಿ ಮತ್ತು ಆಹಾರ ಸಿಗುತ್ತಿತ್ತು. ನಾನು ಹಾಸ್ಟೆಲ್ ಸೇರಿಕೊಂಡಿದ್ದರಿಂದ ತಾಯಿಯ ಮೇಲಿನ ಹೊರೆ ಕಡಿಮೆಯಾಯ್ತು. ಮೊದಲು ಜಾಹೀರಾತುವೊಂದಿನಲ್ಲಿ ನಟಿಸುವ ಅವಕಾಶ  ಸಿಕ್ಕಿತ್ತು. ಅಲ್ಲಿಂದ ನನ್ನ  ನಟನಾ ವೃತ್ತಿ ಆರಂಭವಾಯ್ತು ಎಂದು ಸಿದ್ಧಾರ್ಥ್ ನಿಗಮ್ ಹೇಳಿದ್ದರು.

ಇದನ್ನೂ ಓದಿ:  ಫ್ಲಾಪ್ ನಟನಾದ ಸೂಪರ್‌ಸ್ಟಾರ್ ಮಗ, 12ನೇ ವಯಸ್ಸಿನಲ್ಲಿಯೇ ಡ್ರಗ್ಸ್ ದಾಸ, ಈಗ ಕನ್ನಡದ ನಟಿ ಜೊತೆ ಸ್ಕ್ರೀನ್ ಶೇರ್

ನಟ ಸಿದ್ಧಾರ್ಥ್ ನಿಗಮ್ 'ಚಕ್ರವರ್ತಿ ಸಾಮ್ರಾಟ್ ಅಶೋಕ್', 'ಅಲಾದ್ದೀನ್', 'ಹೀರೋ- ಗಾಯಬ್ ಮೋಡ್ ಆನ್', 'ಚಂದ್ರ ನಂದಿನಿ' ಮುಂತಾದ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.  'ಧೂಮ್ 3' ಸಿನಿಮಾದಲ್ಲಿ ಆಮಿರ್ ಖಾನ್ ಅವರ ಬಾಲ್ಯದ ಪಾತ್ರವನ್ನು ನಿರ್ವಹಿಸಿದ್ದರು. ಇದರೊಂದಿಗೆ, ಅವರು 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ಯುವ ನಟನಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಕೆಲಸ ಮಾಡಲು ಸಲ್ಮಾನ್ ಸ್ವತಃ ಸಿದ್ಧಾರ್ಥ್‌ಗೆ ಕರೆ ಮಾಡಿ ಚಿತ್ರದ ಆಫರ್ ನೀಡಿದ್ದರು ಎಂದು ಸಿದ್ಧಾರ್ಥ್ ಒಮ್ಮೆ ಬಹಿರಂಗಪಡಿಸಿದ್ದರು.

ಇದನ್ನೂ ಓದಿ: ಇವರು ಬಾಲಿವುಡ್‌ನ ಫ್ಲಾಪ್ ನಟ, ಆದ್ರೆ ಸೌಥ್‌ನಲ್ಲಿ ಸೂಪರ್‌ಸ್ಟಾರ್; ಅಮಿತಾಬ್‌ಗೆ ಸ್ಪರ್ಧೆ ನೀಡಿದ್ದ ಹೀರೋ ₹1650 ಕೋಟಿ ಒಡೆಯ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!