
ಬಿಗ್‌ಬಾಸ್ ಒಟಿಟಿ ಸೀಸನ್ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿಯಂತೂ ಸಿಕ್ಕಾಪಟ್ಟೆ ಸುದ್ದಿಯಾಗ್ತಿದ್ದಾರೆ. ಬಿಗ್‌ಬಾಸ್ ಮನೆಯೊಳಗೆ ಸದ್ಯ ಹೆಚ್ಚು ಸುದ್ದಿ ಮಾಡುತ್ತಿರುವುದೇ ಶಮಿತಾ ಶೆಟ್ಟಿ. ಮಾರ್ನಿಂಗ್ ಕಿಸ್, ಫೈಟ್, ರೊಮ್ಯಾನ್ಸ್ ಅಂತ ಎಲ್ಲದರಲ್ಲೂ ಶಮಿತಾ ಹೆಸರು ಕೇಳಿ ಬರುತ್ತಿದೆ. ಇತ್ತೀಚೆಗೆ ಸಹಸ್ಪರ್ಧಿ ಹೋಸ್ಟ್ ಕರಣ್ ಜೋಹರ್ ಶಮಿತಾ ಶೆಟ್ಟಿಯ ಪರ್ಸನಲ್ ಹೋಸ್ಟ್ ಎಂದೂ ಟೀಕಿಸಿದ್ದರು.
ಬೆಳಗಿನ ಜಾವ ಪ್ರತಿದಿನ ಶಮಿತಾ ಕೈಗೆ ಕಿಸ್ ಕೊಡುವ ಪದ್ಧತಿಯ ಜೊತೆಗೆ ಈ ಇನ್ನೊಂದು ಶುರುವಾಗಿದೆ. ನಟಿಯೇ ಸ್ವತಃ ತನಗೆ ನೋಯಿಸಿದ ಗೆಳೆಯನಿಂದ ಕಿಸ್ ಕೇಳಿ ಪಡೆದಿದ್ದಾರೆ. ಅಂತೂ ಈ ಬಾರಿಯ ಸೀಸನ್ ಬರೀ, ಕಿಸ್ ರೊಮ್ಯಾನ್ಸ್‌ನಲ್ಲಿಯೇ ಮುಗಿಯುವಂತಿದೆ ಬೆಳವಣಿಗೆಗಳು.
ಬಿಗ್ ಬಾಸ್ ಮನೆಯಲ್ಲಿ ಶಮಿತಾ ಶೆಟ್ಟಿಗೆ ಮುತ್ತಿಟ್ಟ ರಾಕೇಶ್; ಫೋಟೋ ವೈರಲ್!
ಬಿಗ್ ಬಾಸ್ ಒಟಿಟಿ ತನ್ನ ಪ್ರೇಕ್ಷಕರಿಗೆ ಡ್ರಾಮಾ0, ಸಿನಿಮಾ, ಎಮೋಷನ್, ಮನರಂಜನೆ ಮತ್ತು ಫೈಟಿಂಗ್‌ನ ಪರಿಪೂರ್ಣ ಪ್ರಮಾಣವನ್ನು ನೀಡುತ್ತಿದೆ. ಶಮಿತಾ ಶೆಟ್ಟಿ ಮತ್ತು ರಾಕೇಶ್ ಬಾಪತ್ ನಡುವೆ ನಡೆಯುತ್ತಿರುವ ಪ್ರಣಯವು ಪ್ರತಿ ದಿನ ಕಳೆದಂತೆ ಹತ್ತಿರವಾಗುತ್ತಿದೆ. ಹೆಚ್ಚಾಗುತ್ತಲೇ ಇದೆ.
ಕಪಲ್ ನಡುವೆ ಕೆಲವು ಮುದ್ದಾದ ಕ್ಷಣಗಳನ್ನು ಅಭಿಮಾನಿಗಳು ಈಗಾಗಲೇ ನೋಡಿದ್ದಾರೆ. ಇತ್ತೀಚಿನ ಸಂಚಿಕೆಯು ಇಬ್ಬರ ನಡುವೆ ಹಂಚಿಕೊಂಡ ಅಂತಹ ಇನ್ನೊಂದು ಕ್ಷಣದ ನೋಟವನ್ನು ನೀಡಿತು. ಇತ್ತೀಚಿನ ಸಂಚಿಕೆಯಲ್ಲಿ, ರಾಕೇಶ್ ಅಡುಗೆಮನೆಯಲ್ಲಿ ಏನನ್ನೋ ಬಿಸಿ ಮಾಡುತ್ತಿದ್ದಾಗ ಶಮಿತಾ ಅವನಿಗೆ ಒಂದು ಸಲಹೆಯನ್ನು ನೀಡಿದ್ದಾರೆ. ಅವನು ತನ್ನ ಕೈಯನ್ನು ಹಿಂಭಾಗದಲ್ಲಿ ನಿಲ್ಲಿಸಿ, ಔರ್ ಕುಚ್?(ಬೇರೇನಾದರೂ) ಎಂದು ಪ್ರಶ್ನಿಸಿದ್ದಾನೆ.
ಗೆಳೆಯನೊಂದಿಗೆ ಯುವತಿಯ ಬೆತ್ತಲೆ ವಿಡಿಯೋ: ಅದು ನಾನಲ್ಲ ಎಂದ ನಟಿ
ಇದು ಶಮಿತಾಗೆ ಸರಿ ಹೋಗಲಿಲ್ಲ. ಅವನಿಗೆ ಸಮಸ್ಯೆ ಇದ್ದರೆ ಅವಳು ಏನನ್ನೂ ಹೇಳುವುದಿಲ್ಲ ಎಂದು ಹೇಳಿದಳು. ರಾಕೇಶ್ ಆ ರೀತಿ ಏನೂ ಇಲ್ಲ ಎಂದು ಉತ್ತರಿಸಿದ್ದಾರೆ. ಶಮಿತಾ ಕೋಪದ ಭಾವದಿಂದ ಅವನನ್ನು ನೋಡಿದ್ದಾರೆ.
ಆದರೂ ಆಕೆಯ ಮುಂದಿನ ಹೇಳಿಕೆಯು ರಾಕೇಶ್‌ಗೂ ಆಶ್ಚರ್ಯವನ್ನುಂಟು ಮಾಡಿತು. ಕಟ್ಟುನಿಟ್ಟಾದ ಸ್ವರ ಮತ್ತು ನೇರ ಮುಖದಿಂದ, ಇಲ್ಲಿಗೆ ಬಂದು ಈಗಲೇ ನನಗೆ ಒಂದು ಮುತ್ತು ಕೊಡು ಎಂದು ಹೇಳಿದ್ದಾರೆ ಶಮಿತಾ. ಆಕೆಯ ಬೇಡಿಕೆಯಿಂದ ಆಶ್ಚರ್ಯಗೊಂಡ ರಾಕೇಶ್ ಅವಳ ಬಳಿಗೆ ನಡೆದು ಅವಳ ಕೆನ್ನೆಯ ಮೇಲೆ ಒಂದು ಮುತ್ತನ್ನು ಕೊಟ್ಟು, 'ಇದು ಶಾಶ್ವತವಾಗಿ' ಎಂದು ಹೇಳಿದ್ದಾನೆ. ತನ್ನ ಬೇಡಿಕೆಗೆ ಸಮರ್ಥನೆಯನ್ನು ನೀಡಿದ ಶಮಿತಾ, ನೀವು ಮುದ್ದಾಗಿ ಕಾಣುತ್ತಿರುವುದೇ ಇದಕ್ಕೆ ಕಾರಣ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.