ನೆನಪಿಟ್ಕೊಂಡು ಮಾತನಾಡಿಸಿದ್ರು, ರಶ್ಮಿಕಾ ಮಂದಣ್ಣ ಹೊಗಳಿದ ಕಾಕ್ರೋಚ್ ಸುಧಿ

Published : Oct 04, 2025, 06:45 PM IST
Cockroach Sudhi

ಸಾರಾಂಶ

ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಕಾಕ್ರೋಚ್ ಸುಧಿಗೆ ರಶ್ಮಿಕಾ ಮಂದಣ್ಣ ಚೆನ್ನಾಗಿ ಗೊತ್ತಂತೆ. ರಶ್ಮಿಕಾ ಮಂದಣ್ಣ ಅವರನ್ನು ಹಾಡಿಹೊಗಳಿರುವ ಕಾಕ್ರೋಚ್ ಸುಧಿ, ತಮ್ಮ ಹಳೆ ವಿಡಿಯೋಕ್ಕೆ ಸ್ಪಷ್ಟನೆ ನೀಡಿದ್ದಾರೆ. 

ಸ್ಯಾಂಡಲ್ವುಡ್ ವಿಲನ್ ಕಾಕ್ರೋಚ್ ಸುಧಿ (Cockroach Sudhi) ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ಇಬ್ರೂ ಸದ್ಯ ಟ್ರೆಂಡಿಂಗ್ ನಲ್ಲಿದ್ದಾರೆ. ಸುಧಿ, ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆ ಸೇರಿ ತಮ್ಮ ಆಟ ತೋರಿಸ್ತಿದ್ರೆ, ರಶ್ಮಿಕಾ ಮಂದಣ್ಣ ಸದ್ದಿಲ್ಲದೆ ಎಂಗೇಜ್ಮೆಂಟ್ ಮಾಡ್ಕೊಂಡು ಹುಡುಗ್ರ ಹೃದಯಕ್ಕೆ ಚೂರಿ ಹಾಕಿದ್ದಾರೆ. ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಕೈನಲ್ಲಿ ಉಂಗುರ ಕಾಣಿಸ್ತಿದೆ. ಇಬ್ರೂ ಎಂಗೇಜ್ಮೆಂಟ್ ಮಾಡ್ಕೊಂಡಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ. ಈ ಮಧ್ಯೆ ಬಿಗ್ ಬಾಸ್ ಮನೆಯಲ್ಲಿರುವ ಕಾಕ್ರೋಚ್ ಸುಧಿ, ರಶ್ಮಿಕಾ ಮಂದಣ್ಣ ಮುಗ್ದರು, ತುಂಬಾ ಒಳ್ಳೆಯವರು ಅಂತ ಹಾಡಿ ಹೊಗಳಿದ್ದಾರೆ.

ರಶ್ಮಿಕಾ ಮಂದಣ್ಣ ತುಂಬಾ ಒಳ್ಳೆಯವರು ಎಂದ ಕಾಕ್ರೋಚ್ ಸುಧಿ : 

ಈ ವರ್ಷ ನಡೆದ ಸೈಮಾ 2025ರಲ್ಲಿ ರಶ್ಮಿಕಾ ಮಂದಣ್ಣ ಹಾಗೂ ಕಾಕ್ರೋಚ್ ಸುಧಿ ಜೊತೆಗಿರುವ ವಿಡಿಯೋ ಒಂದು ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಸುಧಿ ಅವರನ್ನು ನೋಡಿ ಅವ್ರ ಬಳಿ ಬರುವ ರಶ್ಮಿಕಾ ಮಂದಣ್ಣ, ಅವರ ಜೊತೆ ಮಾತನಾಡ್ತಾ, ಫೋಟೋ ತೆಗೆಸಿಕೊಂಡಿದ್ರು. ಈ ವಿಡಿಯೋ ನೋಡಿದ್ದ ಸುಧಿ ಫ್ಯಾನ್ಸ್ ಸ್ವಲ್ಪ ಅಸಮಾಧಾನಗೊಂಡಿದ್ರು. ರಶ್ಮಿಕಾ ಮಂದಣ್ಣಗಿಂತ ನೀವು ಅತ್ಯುತ್ತಮ ಕಲಾವಿದರು. ಅವ್ರ ಜೊತೆ ಫೋಟೋ ತೆಗೆಸಿಕೊಳ್ಳೋ ಅಗತ್ಯ ಇಲ್ಲ,ಇನ್ನೊಂದಿಷ್ಟು ಬೇರೆ ಭಾಷೆ ಸಿನಿಮಾ ಮಾಡಿ, ಆಗ ಅವ್ರೇ ನಿಮ್ಮ ಬಳಿ ಬಂದು ಫೋಟೋ ತೆಗೆಸಿಕೊಳ್ತಾರೆ ಅಂತ ಅಭಿಮಾನಿಗಳು ಕಮೆಂಟ್ ಮಾಡಿದ್ರು. ಈಗ ಸುಧಿ, ರಶ್ಮಿಕಾ ಬಗ್ಗೆ ತಮಗಿರುವ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

150 ಮನೆ ಬಾಡಿಗೆ ಕೊಡೋವಷ್ಟು ಆಸ್ತಿ ಇರೋ BBK 12 ಅಶ್ವಿನಿ ಗೌಡ, ಹೋರಾಟಗಾರ್ತಿ ಆಗಿದ್ಯಾಕೆ?

ರಶ್ಮಿಕಾ ಮಂದಣ್ಣ ತುಂಬಾ ಒಳ್ಳೆಯವರು ಅಂತ ಕಾಕ್ರೋಚ್ ಸುಧಿ ಹೇಳಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ಕಾಕ್ರೋಚ್ ಸುಧಿ, ಅಂಜನಿ ಪುತ್ರ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಸುಮಾರು 10 -12 ದಿನ ಇಬ್ಬರೂ ಒಟ್ಟಿಗೆ ಶೂಟಿಂಗ್ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ನನಗೆ ಚೆನ್ನಾಗಿಯೇ ಗೊತ್ತು, ಅವ್ರ ಜೊತೆ ನಾನು ಶೂಟಿಂಗ್ ಮಾಡಿದ್ದೆ, ಅವ್ರು ನನ್ನ ಮಧ್ಯೆ ಬಾಂಧವ್ಯ ಚೆನ್ನಾಗಿದೆ ಎಂದು ಸುಧಿ ಹೇಳಿದ್ದಾರೆ.

ಅಂಜನಿ ಪುತ್ರದ ನಂತ್ರ ರಶ್ಮಿಕಾರನ್ನು ಸುಧಿ ಭೇಟಿಯಾಗಿಲ್ಲ. ಫೋನ್ ಕಾಂಟೆಕ್ಟ್ ಕೂಡ ಇಲ್ಲ. ಆದ್ರೂ ಸೈಮಾದಲ್ಲಿ ಸುಧಿ ಅವರನ್ನು ರಶ್ಮಿಕಾ ಗುರುತಿಸಿದ್ರಂತೆ. ಸುಧಿ ಬಳಿ ಬಂದ ಅವ್ರು ಫೋಟೋಕ್ಕೆ ಫೋಸ್ ನೀಡಿದ್ದಾರೆ. ಈ ಟೈಂನಲ್ಲಿ ಸುಧಿ, ನನ್ನ ನೆನಪಿದೆಯಾ ಅಂತ ರಶ್ಮಿಕಾ ಅವರನ್ನು ಕೇಳಿದ್ದಾರೆ. ಅದಕ್ಕೆ ಯಸ್, ಮರೆಯೋಕೆ ಆಗುತ್ತಾ ಅಂತ ರಶ್ಮಿಕಾ ಕೇಳಿದ್ದಲ್ದೆ ಕನ್ನಡದಲ್ಲಿ ಸ್ವಲ್ಪ ಹೊತ್ತು ಮಾತನಾಡಿದ್ದಾರೆ. ರಶ್ಮಿಕಾ ತುಂಬಾ ಒಳ್ಳೆಯವರು. ಕಿರಿಕ್ ಪಾರ್ಟಿ ಟೈಂನಲ್ಲಿ ಅವ್ರ ಅನುಭವ ತುಂಬಾ ಕಡಿಮೆ ಇತ್ತು. ಆಗ ನನ್ನಗಿಂತ ಜ್ಯೂನಿಯರ್ ಅವ್ರು. ಈಗ ಸಾಕಷ್ಟು ಸಿನಿಮಾ ಮಾಡಿದ್ದಾರೆ. ಅಂಜನಿಪುತ್ರ ಟೈಂನಲ್ಲಿ ರಶ್ಮಿಕಾಗೆ ಚಿಕ್ಕ ವಯಸ್ಸು. 21 ವರ್ಷಕ್ಕೆ ಅಂಜನಿಪುತ್ರ ಸಿನಿಮಾ ಮಾಡಿದ್ದ ಅವರು ತುಂಬಾ ಸ್ವೀಟ್ ಆಗಿದ್ರು. ಈಗ್ಲೂ ತುಂಬಾ ಒಳ್ಳೆಯವರು. ಹಿಂದಿನಂತೆ ನನ್ನನ್ನು ಪ್ರೀತಿಯಿಂದ ಮಾತನಾಡಿಸಿದ್ರು ಅಂತ ಸುಧಿ ಹೇಳಿದ್ದಾರೆ.

Bigg Boss​ ಕ್ಲೋಸ್​ ಫ್ರೆಂಡ್ಸ್​ ತ್ರಿವಿಕ್ರಮ್​- ಭವ್ಯಾ ಮದ್ವೆ ಆಗ್ತಾ ಇದ್ದಾರಾ? ಖುದ್ದು ನಟ ಹೇಳಿದ್ದೇನು ಕೇಳಿ

ಫೈನಲಿಸ್ಟ್ ಆದ ಸುಧಿ :

 ಬಿಗ್ ಬಾಸ್ ಮನೆಯಲ್ಲಿ ಕಾಕ್ರೋಚ್ ಸುಧಿ ಟಾಸ್ಕ್ ಗೆದ್ದು ಫೈನಲಿಸ್ಟ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಮೊದಲ ಟಾಸ್ಕ್ ರದ್ದಾದಾಗ ಕಾಕ್ರೋಚ್ ಸುಧಿ ಕೂಗಾಡಿದ್ರು. ಆದ್ರೆ ಎರಡನೇ ಬಾರಿ ಟಾಸ್ಕ್ ನಡೆದಾಗ ಕಾಕ್ರೋಚ್ ಸುಧಿ, ಮಾಳು ಸಹಾಯದಿಂದ ಗೆಲುವು ಸಾಧಿಸಿ, ಮೊದಲ ಫೈನಲಿಸ್ಟ್ ಆಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಾಂತಾರಾ ಹಿಂದಿಕ್ಕಿದ ಧುರಂಧರ್‌: 876 ಕೋಟಿ ಸಂಪಾದನೆಯ ದಾಖಲೆ
Avatar 3: ಅವತಾರ್‌ನಲ್ಲಿ ಬಾಲಿವುಡ್‌ ನಟ ಗೋವಿಂದ ನಟನೆಯ ಹಿಂದಿನ ರಹಸ್ಯ!