ನನ್ನ ಕನ್ಯತ್ವ ಮಾರಾಟ ಮಾಡಿ ಸೋನಾಕ್ಷಿ ಸ್ಟಾರ್ ಆದರು; ಶತ್ರುಘ್ನ ಸಿನ್ಹಾ ಕುಟುಂಬದ ವಿರುದ್ಧ ಪೂಜಾ ಗಂಭೀರ ಆರೋಪ

Published : May 05, 2022, 04:14 PM IST
ನನ್ನ ಕನ್ಯತ್ವ ಮಾರಾಟ ಮಾಡಿ ಸೋನಾಕ್ಷಿ ಸ್ಟಾರ್ ಆದರು; ಶತ್ರುಘ್ನ ಸಿನ್ಹಾ ಕುಟುಂಬದ ವಿರುದ್ಧ ಪೂಜಾ ಗಂಭೀರ ಆರೋಪ

ಸಾರಾಂಶ

'ನನ್ನ ವೃತ್ತಿ ಸಂಪೂರ್ಣ ಹಾಳಾಗಿದೆ. ಬಾಲಿವುಡ್ ಕುಟುಂಬ ನನ್ನ ವೃತ್ತಿ ಜೀವನವನ್ನು ಮಾತ್ರವಲ್ಲದೇ ನನ್ನ ವೈಯಕ್ತಿಕ ಜೀವನ ಮತ್ತು ಆರ್ಥಿಕ ಜೀವನವನ್ನು ಸಂಪೂರ್ಣವಾಗಿ ಆಪಾಯಕ್ಕೆ ತಳ್ಳಿದರು' ಎಂದು ಬಿಗ್ ಬಾಸ್ ಖ್ಯಾತಿಯ ನಟಿ, ನಿರೂಪಕಿ, ಮಾಡೆಲ್ ಪೂಜಾ ಮಿಶ್ರಾ(Pooja Mishra) ಬಾಲಿವುಡ್‌ನ ಹಿರಿಯ ನಟ ಶತ್ರುಘ್ನಾ ಸಿನ್ಹಾ(Shatrughan Sinha) ಮತ್ತು ಅವರ ಕುಟುಂಬದವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.  

'ನನ್ನ ವೃತ್ತಿ ಸಂಪೂರ್ಣ ಹಾಳಾಗಿದೆ. ಬಾಲಿವುಡ್ ಕುಟುಂಬ ನನ್ನ ವೃತ್ತಿ ಜೀವನವನ್ನು ಮಾತ್ರವಲ್ಲದೇ ನನ್ನ ವೈಯಕ್ತಿಕ ಜೀವನ ಮತ್ತು ಆರ್ಥಿಕ ಜೀವನವನ್ನು ಸಂಪೂರ್ಣವಾಗಿ ಆಪಾಯಕ್ಕೆ ತಳ್ಳಿದರು' ಎಂದು ಬಿಗ್ ಬಾಸ್ ಖ್ಯಾತಿಯ ನಟಿ, ನಿರೂಪಕಿ, ಮಾಡೆಲ್ ಪೂಜಾ ಮಿಶ್ರಾ(Pooja Mishra) ಬಾಲಿವುಡ್‌ನ ಹಿರಿಯ ನಟ ಶತ್ರುಘ್ನಾ ಸಿನ್ಹಾ(Shatrughan Sinha) ಮತ್ತು ಅವರ ಕುಟುಂಬದವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ತನ್ನನ್ನು ಪ್ರಜ್ಞಾಹೀನ ಮಾಡಿ ಲೈಂಗಿಕ ದಂಧೆಯಲ್ಲಿ ಬಳಸಿಕೊಂಡಿದ್ದರು. ಶತೃಜ್ಞ ಸಿನ್ಹಾ ಹೆಂಡತಿ ಪೂಜಾ ಸಿನ್ಹಾ ಕೂಡ ಇದರಲ್ಲಿ ಭಾಗಿಯಾಗಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಷ್ಟೆಯಲ್ಲದೆ ಪೂಜಾ ಮಿಶ್ರಾ ಅವರ ಕನ್ಯತ್ವ ಮಾರಾಟ ಮಾಡುವ ಮೂಲಕ ಸೋನಾಕ್ಷಿ ಸಿನ್ಹ ಸ್ಟಾರ್ ಆದರೂ ಎಂದು ಹೇಳಿದ್ದಾರೆ.

'ನನ್ನ ಕನ್ಯತ್ವ ಮಾರಾಟ ಮಾಡುವ ಮೂಲಕ ಶತ್ರುಘ್ನ ಸಿನ್ಹಾ ಫ್ಯಾಷನ್ ಡಿಸೈನರ್ ಆಗಬೇಕಿದ್ದ ತನ್ನ ಮಗಳನ್ನು ಸ್ಟಾರ್ ಆಗಿ ಮಾಡಿದರು. ನನ್ನ ತಂದೆ ಮತ್ತು ಶತ್ರುಘ್ನ ಸಿನ್ಹ ಒಂದು ಕಾಲದಲ್ಲಿ ಉತ್ತಮ ಸ್ನೇಹಿತರಾಗಿದ್ದರು. ಆದರೆ ಅವರ ಪತ್ನಿ ಪೂನಂ ಬಾಲಿವುಡ್‌ನಲ್ಲಿ ಕೇವಲ ವೇಶ್ಯೆಯರು ಮಾತ್ರ ಕೆಲಸ ಮಾಡುತ್ತಾರೆ ಎಂದು ಹೇಳುವ ಮೂಲಕ ನನ್ನ ತಂದೆಯ ಬ್ರೈನ್ ವಾಶ್ ಮಾಡಿದರು. ಅದರಿಂದ ನಾನು ಸಿನಿಮಾರಂಗದಿಂದ ಸಂಪೂರ್ಣವಾಗಿ ದೂರ ಉಳಿಯಬೇಕಾಯಿತು' ಎಂದು ಹೇಳಿದ್ದಾರೆ.

'2005ರಲ್ಲಿ ನನ್ನ ತಂದೆ ನಿವೃತ್ತಿ ಹೊಂದಿದರು ಬಳಿಕ ಪುಣೆಗೆ ತೆರಳಿದರು. ಆ ಹೊತ್ತಿಗೆ ಸೋನಾಕ್ಷಿಯ ಪೋಷಕರು ಮುಂಬೈನಲ್ಲಿ ತನ್ನನ್ನು ನಿಗ್ರಹಿಸಲು ಪ್ರಾರಂಭಿಸಿದರು. ಅವರಿಗಿಂತ ನಾನು ಜನಪ್ರಿಯ ಆಗಿಬಿಡುತ್ತೇನೆ ಎನ್ನುವ ಭಯ ಅವರಿಗಿತ್ತು'ಎಂದಿದ್ದಾರೆ.

Bollywood Stories : ಶತ್ರುಘ್ನ ಸಿನ್ಹಾ ಜೊತೆ ಆಫೇರ್‌; ಪಾಕಿಸ್ತಾನಿ ಕ್ರಿಕೆಟರ್‌ ಜೊತೆ ಮ್ಯಾರೇಜ್!

ನನಗೆ ಬ್ಲಾಕ್ ಮ್ಯಾಜಿಕ್ ಮಾಡಿದ್ದಾರೆ

'ಸಿನ್ಹಾ ಕುಟುಂಬ ದುರಾಸೆಯ ಕುಟುಂಬ. ಅವರು ಬಲವಂತವಾಗಿ ನನ್ನ ಮನೆಗೆ ನುಗ್ಗಿ ಪ್ರಯೋಜಕರನ್ನು ಕದಿಯುತ್ತಿದ್ದರು. ಒಮ್ಮೆ ಶತ್ರುಘ್ನ ಸನ್ಹಾ ಅವರ ಹುಟ್ಟುಹಬ್ಬಕ್ಕೆ ಮೇಣದ ಬತ್ತಿ ಹಿಡಿದು ವಿಶ್ ಮಾಡಲು ಹೋದಾಗ ಪೂನಂ ಸಿನ್ಹಾ ಏನೋ ತಿನ್ನಿಸಿ ಬ್ಲಾಕ್ ಮ್ಯಾಜಿಕ್ ಮಾಡಿದ್ದರು. 2007ರಿಂದ 2014ರ ವರೆಗೂ ನಾನು ಲೋಖಂಡವಾಲಾದಲ್ಲಿರುವ ನನ್ನ ಕುಟುಂಬದ ಅಪಾರ್ಟ್ಮೆಂಟ್ ನಲ್ಲಿ ವಾಸಿಸುತ್ತಿದ್ದೆ. ಸಿನ್ಹಾ ಕುಟುಂಬ ಕೂಡ ಅದೇ ಅಪಾರ್ಟ್ಮೆಂಟ್ ನಲ್ಲಿ ಇದ್ದರು. ನಾನು ಶಾಪಿಂಗ್ ಮುಗಿಸಿ ಸಿಂಗಪುರದಿಂದ ಬರುತ್ತಿದ್ದಾಗ ಇವರು ನನ್ನ ಮನೆಗೆ ನುಗ್ಗಿ ಮಸ್ತುಗಳನ್ನು ಕದಿಯುತ್ತಿದ್ದರು' ಎಂದು ಆರೋಪ ಮಾಡಿದ್ದಾರೆ.

ಶಾರೂಖ್ ಲೆಕ್ಕ ಚುಕ್ತಾ ಮಾಡೋಕೆ ಆರ್ಯನ್ ಬಳಕೆ: ಶತ್ರುಘ್ನ ಸಿನ್ಹಾ ಸಪೋರ್ಟ್

    ಶತ್ರುಘ್ನ ಸಿನ್ಹಾ ಅವರಿಂದ ನಾನು ಮದುವೆಯಾಗಿಲ್ಲ

    'ಶತ್ರುಘ್ನ ಸಿನ್ಹಾ ಅವರಿಂದ ನಾನು ಮದುವೆಯಾಗಿಲ್ಲ. ಅವರು ನನಗೆ ಮಾದಕದ್ರವ್ಯ ನೀಡಿ ಅನೇಕ ಬಾರಿ ಲಾಭ ಪಡೆದರು. ನನ್ನ ವೃತ್ತಿ ಜೀವನದಲ್ಲಿ ನಾನು ಯಾರನ್ನಾದರೂ ದೂಷಿಸಿದರೆ ಅದು ಅವರಿಂದ ಮಾತ್ರ. ನಾನು 17 ವರ್ಷಗಳಿಂದ ಬಳಲಿದ್ದೇನೆ' ಎಂದಿದ್ದಾರೆ.

    ಶತ್ರುಘ್ನ ಸಿನ್ಹಾ ಕುಟುಂಬದವರ ಪ್ರತಿಕ್ರಿಯೆ

    ಪೂಜಾ ಮಿಶ್ರಾ ಮಾತಿಗೆ ಸಿನ್ಹಾ ಕುಟುಂಬದ ಲವ್ ಸಿನ್ಹಾ ಪ್ರತಿಕ್ರಿಯೆ ನೀಡಿದ್ದು, ‘ಪೂಜಾ ಮಿಶ್ರಾ ಮಾನಸಿಕ ಅಸ್ವಸ್ಥೆ. ಅವರಿಗೆ ಚಿಕಿತ್ಸೆ ಅವಶ್ಯಕತೆ ಇದೆ. ವೃತ್ತಿಪರ ವೈದ್ಯರೇ ಅವರಿಗೆ ಸಹಾಯ ಮಾಡಬೇಕು. ಇದರ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ ನಾನು ನನ್ನ ಸಮಯವನ್ನು ವ್ಯರ್ಥ ಮಾಡುವುದಿಲ್ಲ. ಕುಟುಂಬದ ಪರವಾಗಿ ಕಾನೂನು ಕ್ರಮ ತಗೆದುಕೊಳ್ಳುತ್ತೇವೆ’ ಎಂದು ಅವರು ಟ್ವಿಟ್ ಮಾಡಿದ್ದಾರೆ.

     

    PREV

    ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

    Read more Articles on
    click me!

    Recommended Stories

    ಪವನ್ ಕಲ್ಯಾಣ್, ಅಲ್ಲು ಅರ್ಜುನ್ ಜೊತೆ ರಾಜಮೌಳಿ ಯಾಕೆ ಸಿನಿಮಾ ಮಾಡಿಲ್ಲ? ಕಾರಣ ಕೇಳಿದ್ರೆ ಆಶ್ಚರ್ಯಪಡ್ತೀರಾ!
    ನನಗೆ ಈಗಾಗಲೇ 120ಕ್ಕೂ ಹೆಚ್ಚು ಬಾರಿ ಮದುವೆಯಾಗಿದೆ; ನಟ ಸಿಂಬರಸನ್ ಉತ್ತರಕ್ಕೆ ಆಂಕರ್ ಏನಂದ್ರು?